AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 21ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 21ರ ಬುಧವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 21ರ ದಿನಭವಿಷ್ಯ
ದಿನಭವಿಷ್ಯ
TV9 Web
| Updated By: Digi Tech Desk|

Updated on:Dec 26, 2022 | 10:23 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 21ರ ಬುಧವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಸ್ವಂತ ವ್ಯವಹಾರಗಳನ್ನು ಮಾಡುತ್ತಿರುವವರು ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವವರಿದ್ದಲ್ಲಿ ಈ ದಿನ ಅನುಕೂಲ ಆಗಲಿದೆ. ಅದರಲ್ಲೂ ವ್ಯಾಪಾರದ ಸಲುವಾಗಿ ಸಾಲದ ರೂಪದಲ್ಲಿ ಬಂಡವಾಳಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಒದಗಿಬರಲಿದೆ. ಹಳದಿ ಬಣ್ಣದ ಬಟ್ಟೆ ಧರಿಸಿದಲ್ಲಿ ಯತ್ನ ಕಾರ್ಯದಲ್ಲಿ ಇನ್ನಷ್ಟು ಸಹಕಾರ- ಬೆಂಬಲ ದೊರೆಯಲಿದೆ.

ಜನ್ಮಸಂಖ್ಯೆ 2

ಈ ದಿನ ಯಾವುದೇ ವಿಚಾರದಲ್ಲೂ ಹಿಂಜರಿಕೆ, ಗೊಂದಲ ಇರುತ್ತದೆ. ಮನಸ್ಸಿನಲ್ಲಿ ಏನೇನೋ ಯೋಚನೆಗಳು ಓಡುತ್ತವೆ. ಅನುಮಾನ ಮೂಡಿದಲ್ಲಿ ಹೊಸದಾದ ಯಾವುದೇ ಹೂಡಿಕೆಗೆ ಹೂಂ ಎನ್ನದಿರಿ. ಷೇರು ವ್ಯವಹಾರದಲ್ಲಿ ಹಣ ತೊಡಗಿಸಿರುವವರು ಹಿರಿಯರು, ಅನುಭವಿಗಳಿಂದ ಮಾರ್ಗದರ್ಶನ ಪಡೆದು ಮುಂದಕ್ಕೆ ಹೆಜ್ಜೆ ಇಡಿ.

ಜನ್ಮಸಂಖ್ಯೆ 3

ನಾನು ಮಾಡಿದ್ದೇ ಸರಿ ಎಂಬ ಧೋರಣೆ ನಿಮ್ಮನ್ನು ಬೆನ್ನಟ್ಟಲಿದೆ. ಇದು ತಲೆಗೆ ಏರದಂತೆ ಜಾಗ್ರತೆ ವಹಿಸಿ. ವಾಹನ ಖರೀದಿಗಾಗಿ ಹಣಕಾಸು ಸಾಲಕ್ಕೆ ಪ್ರಯತ್ನಿಸುತ್ತಿರುವವರಿಗೆ ಯತ್ನ ಕಾರ್ಯದಲ್ಲಿ ಅನುಕೂಲ ಇದೆ. ಯೂಟ್ಯೂಬ್ ಕ್ರಿಯೇಟರ್‌ಗಳು ಹೊಸ ಹೊಸ ಸಲಕರಣೆಗಳನ್ನು ಖರೀದಿ ಮಾಡಲು ಮನಸ್ಸು ಮಾಡಲಿದ್ದಾರೆ.

ಜನ್ಮಸಂಖ್ಯೆ 4

ದೇಹ ತೂಕದ ಸಮಸ್ಯೆ ಇರುವಂಥವರು ಸೂಕ್ತ ವೈದ್ಯರ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳುವುದು ಮುಖ್ಯ. ಇನ್ನು ಮಾರ್ಕೆಟಿಂಗ್, ಸೇಲ್ಸ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಟಾರ್ಗೆಟ್ ತಲುಪುವುದು ಕಷ್ಟ ಆಗಲಿದೆ. ಅಡುಗೆ ಕಾಂಟ್ರ್ಯಾಕ್ಟರ್‌ಗಳಿಗೆ ಸಾಲದ ಒತ್ತಡ ಹೆಚ್ಚಾಗಲಿದೆ.

ಜನ್ಮಸಂಖ್ಯೆ 5

ಪ್ರೇಮಿಗಳು ಬಹಳ ಸಂತೋಷವಾಗಿ ಒಟ್ಟಿಗೆ ಸಮಯ ಕಳೆಯುವಂಥ ದಿನ ಇದು. ಪತ್ರಕರ್ತರು, ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಇರುವವರಿಗೆ ಕೆಲಸ ಬಿಡುವಂಥ ಆಲೋಚನೆ ಮೂಡಬಹುದು. ಒಂದೋ ಹೊಸ ವೆಂಚರ್ ಶುರು ಮಾಡಲಿದ್ದೀರಿ ಅಥವಾ ಬೇರೆ ಕಡೆಗೆ ಕೆಲಸಕ್ಕೆ ಸೇರುವಂಥ ಸಾಧ್ಯತೆ ಇದೆ.

ಜನ್ಮಸಂಖ್ಯೆ 6

ಡಿಜಿಟಲ್ ಸ್ವತ್ತುಗಳಾದ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದವರು ಅದನ್ನು ಹಿಂಪಡೆಯುವುದಕ್ಕೆ ಆಲೋಚನೆ ಮಾಡಬಹುದು. ಕಮಿಷನ್ ವೃತ್ತಿಯನ್ನು ಮಾಡುವವರಿಗೆ ಹೊಸ ಹೊಸ ಜನರ ಪರಿಚಯ ಆಗಲಿದೆ. ಸಾಕು ಪ್ರಾಣಿಗಳಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ‌ ಜನ್ಮಸಂಖ್ಯೆ 7

ಉದ್ಯೋಗ ಸ್ಥಳದಲ್ಲಿ ಅನಿರೀಕ್ಷಿತವಾದ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ರೈಲಿನಲ್ಲಿ ಪ್ರಯಾಣ ಮಾಡುವಂಥವರು ಆ ಬಗ್ಗೆ ಜಾಗ್ರತೆಯಿಂದ ಇರಬೇಕು. ಇತರರ ಪ್ರೀತಿ- ಪ್ರೇಮ ವಿಚಾರಗಳಿಗೆ ತಲೆ ಹಾಕಬೇಡಿ.

ಜನ್ಮಸಂಖ್ಯೆ 8

ಶುಭ ಕಾರ್ಯಗಳಿಗಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆದಾಯ ಜಾಸ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಕೆಲಸ ಅಥವಾ ಪ್ರಾಜೆಕ್ಟ್‌ಗಳನ್ನು ವಹಿಸಿಕೊಳ್ಳಲಿದ್ದೀರಿ. ನರ್ಸರಿ ನಡೆಸುತ್ತಿರುವವರಿಗೆ ದೊಡ್ಡ ಪ್ರಮಾಣದ ಆರ್ಡರ್ ಬರುವಂಥ ಸಾಧ್ಯತೆ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲ ಸಮಯವಾದರೂ ಬೇರೆಡೆ ಕೆಲಸ ಮಾಡಬೇಕಾಗಬಹುದು.

ಜನ್ಮಸಂಖ್ಯೆ 9

ಇತರರನ್ನು ನಂಬಿಕೊಂಡು ಯಾವುದೇ ಕೆಲಸಕ್ಕೆ ತೊಡಗಿಕೊಳ್ಳಬೇಡಿ. ಸಣ್ಣ- ಪುಟ್ಟ ಕೆಲಸಗಳು ಅಂತ ನೀವು ಈ ಹಿಂದೆ ವಹಿಸಿಕೊಂಡಿದ್ದ ಕಾಂಟ್ಯಾಕ್ಟ್‌ಗಳ ಮೂಲಕವೇ ದೊಡ್ಡ ಆರ್ಡರ್‌ವೊಂದು ಬರುವ ಸಾಧ್ಯತೆಗಳಿವೆ.ತೀರ್ಥಕ್ಷೇತ್ರಗಳಿಗೆ ತೆರಳುವುದಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

Published On - 6:00 am, Wed, 21 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ