ದಿನಭವಿಷ್ಯ: ಇಂದು ಈ ರಾಶಿಯವರು ವಸೂಲಾತಿ ಕೆಲಸದಲ್ಲಿ ಪ್ರವೃತ್ತರಾಗುವರು…
Horoscope Today 15 August : ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಶನಿವಾರದಂದು ಗೆಳೆತನದಲ್ಲಿ ಅನ್ಯರ ಪ್ರವೇಶ, ಪ್ರಾರ್ಥನೆ, ನಿಷ್ಠೆಯಿಂದ ಅನುಕೂಲ, ಕಾನೂನು ಕಾರ್ಯ, ಶತ್ರುಪೀಡೆ, ಸಮಾರಂಭದಲ್ಲಿ ಉಪಸ್ಥಿತಿ ಇವೆಲ್ಲ ಈ ದಿನದ ವಿಶೇಷ.

ಮೇಷ ರಾಶಿ:
ಮನೆಯವರು ನಿಮ್ಮ ಮಾತಿನಿಂದ ಕಟ್ಟಿಹಾಕಬಹುದು. ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ. ಕಲ್ಪಿಸಿಕೊಂಡ ವಿಚಾರವು ಹಾಗೆಯೇ ಆಗಲಿದ್ದು ನಿಮಗೆ ಆಶ್ಚರ್ಯ ಆಗಬಹುದು. ಕೈಲಾದ ಸಹಾಯವನ್ನು ಮಾತ್ರ ಒಪ್ಪಿಕೊಳ್ಳಿ. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ನೀವು ಕೊಡಲಿದ್ದೀರಿ. ಈ ದಿನ ಚೆನ್ನಾಗಿ ಇರಲಿ ಎಂದು ಪ್ರಾರ್ಥನೆ ಮಾಡುವುದೊಂದೇ ನಿಮ್ಮ ಕಡೆಯಿಂದ ಇಂದು ಆಗಬಹುದಾದ ದೊಡ್ಡ ಕೆಲಸ.
ವೃಷಭ ರಾಶಿ:
ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಬಂಧುಗಳ ಭೇಟಿಗಾಗಿ ನೀವು ದೂರಪ್ರಯಾಣ ಮಾಡುವಿರಿ. ನಿಮ್ಮ ಭವಿಷ್ಯದ ಕಲ್ಪನೆಗಳು ವಾಸ್ತವದಿಂದ ದೂರವಾಗುವುದು. ನಿಮ್ಮಲ್ಲಿ ಏನನ್ನೋ ಸಾಧಿಸಿದ ತೃಪ್ತಿ ಇರಲಿದೆ. ನೀವು ಮುಂಗಡವಾಗಿ ಕೊಟ್ಟ ಹಣವು ಬಾರದೇ ಪಶ್ಚಾತ್ತಾಪ ಆಗುವುದು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸಹೋದರರ ನಡುವೆ ರಹಸ್ಯ ಸಮಾಲೋಚನೆ ನಡೆಯಬಹುದು. ಯಾರ ಮೇಲೂ ಹಗುರಾದ ಮನೋಭಾವ ಬೇಡ.
ಮಿಥುನ ರಾಶಿ:
ಬೇಸರಪಡದೇ ಅದನ್ನು ಸರಿಮಾಡಿಕೊಳ್ಳುವ ವಿಧಾನವನ್ನು ಹುಡುಕಿ. ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಸಂಸ್ಥೆಯ ಮುಖ್ಯಸ್ಥರ ಜೊತೆ ಆತ್ಮಸ್ಥೈರ್ಯದಿಂದ ಮಾತನಾಡುವಿರಿ. ಸಮಾಧಾನ ಚಿತ್ತದಿಂದ ನೀವು ನಿಮ್ಮ ಅವಲೋಕನವನ್ನು ಮಾಡುವಿರಿ. ಅಸಭ್ಯ ಮಾತುಗಳಿಂದ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು.
ಕರ್ಕಾಟಕ ರಾಶಿ:
ಇಂದು ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ನಿಮ್ಮ ಸ್ಥಾನವನ್ನು ಬಿಟ್ಟುಕೊಡಲು ನೀವು ಒಪ್ಪುವುದಿಲ್ಲ. ದ್ವೇಷವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ನಿಮ್ಮನ್ನು ಅಪ್ರಾಮಾಣಿಕರೆಂದು ಹೀಗಳೆಯಬಹುದು. ಪ್ರೇಮವು ಕಾಮವಾಗಿ ಪರಿವರ್ತನೆ ಆಗಬಹುದು. ಇಂದಿನ ನಿಮ್ಮ ಕಾರ್ಯದಿಂದ ಪ್ರೀತಿಯನ್ನು ಗಳಿಸುವಿರಿ. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು.
ಸಿಂಹ ರಾಶಿ:
ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಕಷ್ಟವಾಗುವುದು. ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಶೀಘ್ರವಾಗಿ ಬಂದ ಲಾಭದಿಂದ ಅಪಾಯವಿರಲಿದೆ. ಕಛೇರಿಯಲ್ಲಿ ಒತ್ತಡದ ವಾತಾವರಣವಿರಲಿದೆ. ಒಳ್ಳೆಯ ಸುದ್ದಿಗಳು ನಿಮಗೆ ಸಂತೋಷವನ್ನು ನೀಡಬಹುದು. ದುರಭ್ಯಾಸಗಳಿಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ನಕಾರಾತ್ಮಕ ಸುದ್ದಿಗಳು ಗಮನ ಸೆಳೆಯುವುದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ.
ಕನ್ಯಾ ರಾಶಿ:
ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಹೊಸ ಕಛೇರಿಯಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡುವಿರಿ. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಓಡಾಡಬೇಕಾಗಬಹುದು. ಮಕ್ಕಳಿಗೆ ಉತ್ತೇಜನ ನೀಡುವ ಅವಶ್ಯಕತೆ ಇದೆ. ಪರಿಚಿತ ವ್ಯಕ್ತಿಗಳಿಂದಲೇ ನಿಮಗೆ ಮೋಸವಾಗಬಹುದು. ಆದಾಯದ ಮೂಲವನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು.
ತುಲಾ ರಾಶಿ:
ನಿಮ್ಮ ಇಂದಿನ ಕೆಲವು ನಡೆಗಳು ವ್ಯವಹಾರದ ಪ್ರಗತಿಗೆ ಮಾರಕವಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆವಿರಲಿದೆ. ನೀವು ಕೊಟ್ಟ ಹಣವು ವಾಪಾಸು ಬರುವುದು ಕಷ್ಟ. ಹಿರಿಯರ ಮಧ್ಯಸ್ತಿಕೆಯಿಂದ ಸಮಸ್ಯೆಗಳು ಪರಿಹಾರವಾಗಬಹುದು. ಸಣ್ಣ ನೋವು ಇಂದು ದೊಡ್ಡದಾಗಿ ಅದನ್ನು ತಡೆಯಲು ಕಷ್ಟವಾದೀತು. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ.
ವೃಶ್ಚಿಕ ರಾಶಿ:
ಸಮಯಕ್ಕೆ ಗೌರವ ಕೊಡುವುದನ್ನು ನೀವು ಕಲಿಯಬೇಕಾದೀತು. ಏನಾದರೂ ಹೊಸತನವನ್ನು ಹುಟ್ಟಿಸಿಕೊಳ್ಳಬಹುದು. ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಾನೂನನಲ್ಲಿ ನಿಮಗೆ ಮುನ್ನಡೆಯಿಂದ ಸಂತೃಪ್ತಿ ಇರುವುದು. ಅಧಿಕಾರಿ ವರ್ಗದಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಕೆಲಸದ ಸಮಯವನ್ನು ಅದಕ್ಕಾಗಿ ಮಾತ್ರ ಮೀಸಲಿಡಿ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು.
ಧನು ರಾಶಿ:
ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ಸಾಮಾಜಿಕ ಕಾರ್ಯವು ನಿಮ್ಮ ಯಶಸ್ಸನ್ನು ತಂದುಕೊಡಬಹುದು. ಹೊರಗಿನ ಆಹಾರ ವಸ್ತುವಿನಿಂದ ಆರೋಗ್ಯ ಕೆಡುವುದು. ಆ ವಿಷಯದ ಸರಿಯಾದ ಆಯ್ಕೆ ಮಾಡಲು ನಿಮಗೆ ಕಷ್ಟವಾದೀತು. ಹಿಂಬಾಲಕರು ಸ್ವತಂತ್ರರಾದರೆ ಅಪಾಯ ಕಟ್ಟಿಟ್ಟಿದ್ದೇ. ಯಾರ ವಿರೋಧವನ್ನೂ ಕಟ್ಟಿಕೊಳ್ಳುವುದು ಬೇಡ. ಅಲ್ಪಾವಧಿಯಲ್ಲಿ ಲಾಭವನ್ನು ಗಳಿಸಲು ಹೋಗಿ ಮುಗ್ಗರಿಸುವಿರಿ. ಸಣ್ಣ ಅಪಮಾನವೂ ನಿಮಗೆ ದೊಡ್ಡದಾಗಿ ತೋರುವುದು.
ಮಕರ ರಾಶಿ:
ನಿಮ್ಮ ನಕಾರಾತ್ಮಕ ಆಲೋಚನೆಗಳು ಅನ್ಯರ ಇಷ್ಟವಾಗದು. ಇಂದು ಮನೆಯ ಅನೇಕ ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಹೆಚ್ಚು ಒತ್ತಡ ಇರಲಿದೆ. ಸಹೋದ್ಯೋಗಿಗಳ ಸಹಾಯವನ್ನೂ ನೀವು ಪಡೆಯಬಹುದಾಗಿದೆ. ವೈವಾಹಿಕ ಜೀವನವು ನಿಮ್ಮ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ತೊಡಕು ಕೊಡುವುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ.
ಕುಂಭ ರಾಶಿ:
ನೀವು ಅಗತ್ಯದ ಖರ್ಚುಗಳನ್ನೂ ನಿಯಂತ್ರಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಸ್ಚಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಎಲ್ಲ ಸಮಯದಲ್ಲಿಯೂ ನಿಮಗೆ ನಿಮ್ಮವರು ಬೇಕು ಎನಿಸಬಹುದು. ಹೂಡಿಕೆಯನ್ನು ಕೇವಲ ಅಂದಾಜಿಗೆ ಮಾಡಿ, ಹಣವನ್ನು ಕಳೆದುಕೊಳ್ಳುವಿರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಮೀನ ರಾಶಿ:
ಯಾರಾದರೂ ಸಾಲವನ್ನು ಕೇಳಿ ಬರಬಹುದು. ನಿಮ್ಮದಾದ ಕೆಲವು ನಿಲುವುಗಳಿಗೆ ನೀವು ಬದ್ಧರಾಗಿರಿ. ಲೆಕ್ಕಾಚಾರದ ವಿಚಾರದಲ್ಲಿ ನಿಮಗೆ ಅಪಮಾನದ ರೀತಿ ಎನಿಸಬಹುದು. ನಿಮಗೆ ಸಿಗುವ ಬಿಡುವಿನ ಸಮಯದಲ್ಲಿಯೇ ಧಾರ್ಮಿಕ ಶ್ರದ್ಧೆಯನ್ನು ತೋರುವಿರಿ. ನೆಮ್ಮದಿಯನ್ನು ನೀವು ಪಡೆಯಲು ಪ್ರಯತ್ನಿಸುವಿರಿ. ಇಂದು ಒಂದೇ ಕಡೆ ಸುಮ್ಮನೆ ಕುಳಿತಿರುವುದು ಕಷ್ಟದ ಸಂಗತಿಯಾಗಲಿದೆ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:50, ಯಮಗಂಡ ಕಾಲ 13:58 – 15:32, ಗುಳಿಕ ಕಾಲ 06:09 – 07:42
-ಲೋಹಿತ್ ಹೆಬ್ಬಾರ್ -8762924271 (what’s app only)
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:27 am, Sat, 15 August 26




