AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಮಂಗಳವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
TV9 Web
| Edited By: |

Updated on: Dec 20, 2022 | 6:00 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಮಂಗಳವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡ ಹೀಗೆ ಯಾರಿಗೆ ಯಾವುದನ್ನು ಬಳಸಿ ಕೆಲಸ ಮಾಡಿಸಿಕೊಳ್ಳಬೇಕೋ ಅದನ್ನು ಬಳಸಿ, ಕೆಲಸ ಪೂರ್ಣಗೊಳಿಸುವ ಬಗ್ಗೆ ಆಲೋಚಿಸಿ. ವಿವಾಹಿತರಿಗೆ ಅದರ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಮೂಡುವ ಸಾಧ್ಯತೆ ಇದೆ. ಇದರಿಂದ ಉಪದ್ರವ, ಅವಮಾನ ಎರಡೂ ಅನುಭವಿಸಬೇಕಾದೀತು, ಎಚ್ಚರ.

ಜನ್ಮಸಂಖ್ಯೆ 2

ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮ ಮಾತಿನ ಪ್ರಭಾವ ಇತರರ ಮೇಲೆ ಆಗಿ, ಜನಪ್ರಿಯರಾಗಲಿದ್ದೀರಿ. ನೀರು ಸೇವನೆ ಮಾಡುವಾಗ, ಅಂದರೆ ಮನೆಯಲ್ಲಾಗಲೀ ಅಥವಾ ಹೊರಗಡೆಯೇ ಆಗಲೀ ಶುದ್ಧತೆ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಿ. ಸ್ಥಳ ಬದಲಾವಣೆ ಮಾಡಿದ್ದರಂತೂ ಈ ಬಗ್ಗೆ ಇನ್ನೂ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಬೇಕು.

ಜನ್ಮಸಂಖ್ಯೆ 3

ಕಾಲಿನ ಪಾದದಲ್ಲಿ ಸಮಸ್ಯೆಗಳು ಕಾಣಿಸಬಹುದು. ನೀವು ಬಳಸುವ ಪಾದರಕ್ಷೆ ಬಗ್ಗೆ ಗಮನ ನೀಡಿ ಹಾಗೂ ಬರಿಗಾಲಲ್ಲಿ ನಡೆದಾಡುವ ಸನ್ನಿವೇಶಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳಿ. ನಿಶ್ಚಿತ ಆದಾಯವನ್ನು ತಂದುಕೊಳ್ಳುವ ಉದ್ದೇಶದಿಂದ ಪ್ರಯತ್ನಗಳನ್ನು ಮಾಡುತ್ತಿರುವವರಿಗೆ ಸರಿಯಾದ ದಾರಿ ಕಾಣಿಸಲಿದೆ.

ಜನ್ಮಸಂಖ್ಯೆ 4

ಬೇರೆಯವರ ಹಣಕಾಸಿನ ವಿಚಾರಕ್ಕೆ ನಿಮ್ಮ ಸಲಹೆ, ಸೂಚನೆಗಳನ್ನು ನೀಡಲು ಹೋಗದಿರಿ. ಒಂದೋ ಇದರಿಂದ ನಿಮ್ಮ ಮೇಲೆ ಅವರು ಆರ್ಥಿಕ ವಿಚಾರಕ್ಕೆ ಅವಲಂಬನೆ ಆಗುವಂತೆ ಸನ್ನಿವೇಶ ಸೃಷ್ಟಿ ಆಗುತ್ತದೆ ಅಥವಾ ನಿಮಗೆ ಯಾಕೆ ಬೇಕಿತ್ತು ಈ ಉಸಾಬರಿ ಎಂಬಂತೆ ಹೀಗಳಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ.

ಜನ್ಮಸಂಖ್ಯೆ 5

ನಿಧಾನವೇ ಪ್ರಧಾನ ಹಾಗೂ ಆಲಸ್ಯಂ ಅಮೃತಂ ವಿಷಂ ಇವೆರಡಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಿ. ಯಾವ ಕೆಲಸಕ್ಕೆ ಆಲೋಚನೆ ಹಾಗೂ ಸಮಯಾವಕಾಶದ ಅಗತ್ಯ ಇದೆಯೋ ಅದರ ಕಡೆಗೆ ಲಕ್ಷ್ಯ ಕೊಡಿ. ಏನು ಯಾವುದಕ್ಕೆ ಆ ಕೂಡಲೇ ಸ್ಪಂದಿಸುವ ಹಾಗೂ ಪ್ರತಿಕ್ರಿಯಿಸುವ ಅಗತ್ಯ ಇದೆಯೋ ಅದಕ್ಕೆ ತಕ್ಕಂತೆ ವರ್ತಿಸಿ.

ಜನ್ಮಸಂಖ್ಯೆ 6

ಸಂಬಂಧಿಕರು ಈ ದಿನ ನಿಮ್ಮಿಂದ ನೆರವು ಬಯಸುವಂಥ ಸಾಧ್ಯತೆ ಇದೆ. ನಿಮ್ಮಿಂದ ಇದು ಮಾಡುವುದಕ್ಕೆ ಸಾಧ್ಯವಿದ್ದಲ್ಲಿ ಖಂಡಿತಾ ನೆರವಾಗಿ. ದೃಢವಾಗಿ ನಿಶ್ಚಯಿಸಿ, ನೀವು ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಮನೆಯಿಂದ ಹೊರಡುವಾಗ ಸುಬ್ರಹ್ಮಣ್ಯ ಸ್ವಾಮಿಯನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಹೊರಡಿ. ‌ ಜನ್ಮಸಂಖ್ಯೆ 7

ಮಾತನಾಡುವಾಗ ಹೇಳಿದ್ದೇ ಹೇಳುತ್ತಿದ್ದೀರಾ ಎಂಬುದನ್ನು ಆಲೋಚಿಸಿ, ಮಾತನಾಡಿ. ತುಂಬ ಸಮಯದ ಒತ್ತಡದಲ್ಲಿ ಕೆಲಸ ಮಾಡುವವರಿಗೆ ನಿಮ್ಮೊಡನೆ ಮಾತು ಬೇಸರ ಆಗಿಬಿಟ್ಟರೆ ವ್ಯವಹಾರ, ಉದ್ಯೋಗ ಎಲ್ಲಕ್ಕೂ ಕಷ್ಟವಾದೀತು. ಇನ್ನು ಪಾರದರ್ಶಕವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 8

ನಿಮ್ಮ ಕೈಕೆಳಗೆ ಕೆಲಸ ಮಾಡುವವರ ವಿಚಾರದಲ್ಲಿ ಒಂದಿಷ್ಟು ಉದಾರಿಗಳಾಗಿ ಆಲೋಚನೆ ಮಾಡಿ. ಅದರಲ್ಲೂ ಬಾಸ್ ಆಗಿರುವವರು, ಯಜಮಾನರಾಗಿರುವವರು ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು. ಈ ದಿನ ಸಮಯಾವಕಾಶ ಆದಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 9

ಯಾರದೋ ತಪ್ಪಿಗೆ, ಆತುರದ ತೀರ್ಮಾನಕ್ಕೆ ನೀವು ತಲೆ ಕೊಡುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಮೊದಲಿಂದ ಎಲ್ಲವನ್ನೂ ಶುರು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ನಿಮ್ಮ ಏಕಾಗ್ರತೆ ಈ ದಿನ ಕಾಪಾಡಬೇಕಿದೆ. ಆದ್ದರಿಂದ ಎಲ್ಲಿ, ಏನು ಮಾತನಾಡಬೇಕು ಹಾಗೂ ಈ ಹಿಂದೆ ಏನೇನು ಮಾತನಾಡಿದ್ದೀರಿ ಎಲ್ಲವನ್ನೂ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ