Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 20ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 20 ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 20ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚಾಗಲಿದ್ದು, ಅದಕ್ಕಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಪ್ರೀತಿಪಾತ್ರರ ಜತೆಗೆ ಸಮಯವನ್ನು ಕಳೆಯಲಿದ್ದೀರಿ. ಈಗಾಗಲೇ ಆರಂಭಿಸಿ ಅರ್ಧದಷ್ಟು ಮುಗಿದ ಕೆಲಸವನ್ನು ಮೊದಲಿಂದ ಆರಂಭ ಮಾಡಬೇಕಾಗಬಹುದು. ಸೋದರಮಾವನ ಆರೋಗ್ಯದ ಕಡೆಗೆ ಜಾಗ್ರತೆಯನ್ನು ವಹಿಸಿ. ನೀವಾಗಿಯೇ ತೆಗೆದುಕೊಂಡ ಜವಾಬ್ದಾರಿಯನ್ನು ಗಡುವಿನೊಳಗೆ ಮುಗಿಸುವುದಕ್ಕೆ ಪ್ರಯತ್ನಿಸಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಆರ್ಥಿಕ ಬೆಳವಣಿಗೆಯಿಂದಾಗಿ ನಿಮ್ಮೊಳಗೆ ಒಂದು ಆತ್ಮವಿಶ್ವಾಸ ಬೆಳೆಯಲಿದೆ. ಏಕೆಂದರೆ ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ವಿವಾಹ ವಯಸ್ಕರಾಗಿದ್ದಲ್ಲಿ ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆ ದಿನ ಇದು. ಹೊಸ ಗ್ಯಾಜೆಟ್, ಲ್ಯಾಪ್‌ಟಾಪ್, ಟೀವಿ ಇಂಥದ್ದನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚಾಗುವ ಯೋಗ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹಣಕಾಸಿನ ವಿಚಾರಗಳ ಜತೆಗೆ ಭಾವನಾತ್ಮಕ ಸಂಗತಿಗಳು ಕೂಡ ತಳುಕು ಹಾಕಿಕೊಳ್ಳಲಿವೆ. ಆದ್ದರಿಂದ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಬೇಕು. ಇನ್ನು ವಿದೇಶದಲ್ಲಿ ಉದ್ಯೋಗ, ವ್ಯಾಸಂಗಕ್ಕೆ ಅಥವಾ ಅಲ್ಲೇ ನೆಲೆಸುವುದಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಈ ದಿನ ಮಹತ್ವವಾದ ಮಾಹಿತಿಯು ದೊರೆಯಲಿದೆ. ಇತರರ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಜತೆಗೆ ಕೆಲಸ ಮಾಡುವವರ ಮೇಲೆ ಯಾವುದೇ ಕಾರಣಕ್ಕೂ ರೇಗಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸ್ತ್ರೀಯರಾಗಿದ್ದಲ್ಲಿ ಪುರುಷರ ವಿಚಾರವಾಗಿ, ಪುರುಷರಾಗಿದ್ದಲ್ಲಿ ಸ್ತ್ರೀಯರ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ನಿಮ್ಮ ಮಾತು, ಬಾಡಿ ಲಾಂಗ್ವೇಜ್ ಅನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಅಥವಾ ಬೇಕೆಂತಲೆ ಅಪಪ್ರಚಾರವನ್ನು ಮಾಡಬಹುದು. ಮದ್ಯಪಾನದ ಅಭ್ಯಾಸ ಇರುವವರು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ. ನಿಮ್ಮದೇ ತಪ್ಪಿದ್ದಾಗಲೂ ವಾದ ಮಾಡುತ್ತಾ ನಿಲ್ಲದಿರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಎಲ್ಲವನ್ನೂ ಮೊದಲಿಂದ ಶುರು ಮಾಡಬೇಕಾಗುತ್ತದೆ. ಅದು ಸ್ನೇಹ, ಸಂಬಂಧ, ಈಗಾಗಲೇ ಅರ್ಧವಾದರೂ ಮಾಡಿ ಮುಗಿಸಿದ ಕೆಲಸ ಹೀಗೆ ಎಲ್ಲವನ್ನೂ ಆರಂಭದಿಂದ ಪ್ರಾರಂಭಿಸಬೇಕಾಗುತ್ತದೆ. ಹೋಟೆಲ್ ಉದ್ಯಮದವರು ಸರ್ಕಾರದಿಂದ ಇರುವ ನಿಯಮಗಳನ್ನು ಪಾಲಿಸುತ್ತಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನಿಮಗೆ ಈ ವರೆಗೆ ಸಿಕ್ಕ ಸ್ಥಾನ- ಮಾನ, ಗೌರವ, ಅಧಿಕಾರಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಟೂರ್ ಆಪರೇಟರ್‌ಗಳಿಗೆ ಅಲೆದಾಟ ಇರುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳನ್ನು ಮುಗಿಸುವ ಸಲುವಾಗಿ ಹೊಸ ಹೊಸ ಜನರನ್ನು ಭೇಟಿ ಆಗಲಿದ್ದೀರಿ. ಮನೆಯಲ್ಲಿ ನಿಮಗೆ ಗೌರವ ಕಡಿಮೆ ಆಗಿದೆ ಎಂಬ ಭಾವನೆ ಮೂಡಲಿದೆ. ಈ ಹಿಂದೆ ನೀವು ಸಾಲ ಕೊಟ್ಟಿದ್ದರ ಪೈಕಿ ಸಣ್ಣ ಮೊತ್ತವಾದರೂ ಇನ್ನು ವಾಪಸ್ ಬರಲಿಕ್ಕಿಲ್ಲ ಎಂದೆನಿಸುತ್ತದೆ. ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ ಅನ್ನುವ ಹಾಗೆ ಯಾರದೋ ಮೇಲಿನ ಸಿಟ್ಟು ಮತ್ತ್ಯಾರ ಮೇಲೋ ತೋರಿಸದಿರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಇನ್ನೇನು ಎಲ್ಲ ಕೆಲಸ ಆಗಿಹೋಗಿದೆ, ಹಣ ಬರುವುದಷ್ಟೇ ಬಾಕಿ ಎಂದುಕೊಂಡಿದ್ದ ಕೆಲಸದಲ್ಲಿ ಸವಾಲು ಎದುರಾಗಲಿದೆ. ಭರವಸೆ ಇಟ್ಟುಕೊಂಡು ಶುರು ಮಾಡಿದ್ದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ವರ್ಚಸ್ಸು, ಹಣಕ್ಕೆ ಹಾನಿ ಆಗಬಹುದು. ಹೊಸಬರ ಪರಿಚಯ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕಣ್ಣಿನ ಅಲರ್ಜಿ ಕಾಡಬಹುದು. ಹೊಸ ವಾಹನ ಖರೀದಿಸಬೇಕು ಎಂದಿರುವವರು ಸ್ವಲ್ಪ ಸಮಯ ನಿರ್ಧಾರವನ್ನು ಮುಂದೂಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ರಾಜಕಾರಣದ ಬಗ್ಗೆ ಮಹತ್ವಾಕಾಂಕ್ಷೆ ಇರುವವರಿಗೆ ಇದು ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕಕಕ್ಕೆ ಬರಲಿದ್ದೀರಿ. ವೃತ್ತಿನಿರತರಿಗೆ ಭವಿಷ್ಯದ ಸವಾಲಿನ ಬಗ್ಗೆ ಸೂಚನೆ ದೊರೆಯಲಿದೆ. ಉದ್ಯೋಗದಲ್ಲಿ ಇರುವವರು ಕೆಲವು ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಸಮಾನ ಮನಸ್ಕರು, ಸ್ನೇಹಿತರ ಜತೆಯಲ್ಲಿ ಚರ್ಚಿಸುವ ಅವಕಾಶಗಳಿವೆ. ಸೋಷಿಯಲ್ ಮೀಡಿಯಾ ಬಳಸುವವರು ಬಹಳ ಎಚ್ಚರಿಕೆಯಿಂದ ಇರಬೇಕು. ವಾಗ್ವಾದ- ಭಿನ್ನಾಭಿಪ್ರಾಯ ಇಲ್ಲದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಏನನ್ನಾದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ವಿಪರೀತ ಚಂಚಲತೆ ಇರುತ್ತದೆ. ಎಲ್ಲವೂ ಬೇಕು, ಬೇಕು ಎಂಬ ಧೋರಣೆ ಸರಿಯಲ್ಲ. ನಿಮ್ಮ ಅಗತ್ಯಗಳನ್ನು ಅರಿತುಕೊಂಡು, ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿಸಿ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಬಹಳ ಎಚ್ಚರಿಕೆ ಅಗತ್ಯ. ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಹಣ ಅಥವಾ ವಸ್ತು ತೆಗೆದುಕೊಳ್ಳಬೇಡಿ. ಮುಖ್ಯ ವಸ್ತುಗಳ ಕಡೆಗೆ ಹೆಚ್ಚಿನ ಲಕ್ಷ್ಯ ಇರಲಿ.
ಲೇಖನ- ಎನ್.ಕೆ.ಸ್ವಾತಿ
Published On - 5:38 am, Mon, 20 February 23