Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 2ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 2ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 2ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: google.com
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 02, 2023 | 6:31 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 2ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಆಗದಷ್ಟು ಒತ್ತಡ ಆಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರು ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಕೆಲವು ನಿರ್ಧಾರಗಳನ್ನು ನಿಂತ ನಿಲುವಿನಲ್ಲೇ ಹೇಳಬೇಕಾದ ಸಂದರ್ಭ ಬರಲಿದೆ. ಇತರರಿಂದ ಅತಿಯಾದ ನಿರೀಕ್ಷೆ ಮಾಡಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಈ ದಿನ ದೃಷ್ಟಿ ದೋಷ ತಗುಲುವ ಸಾಧ್ಯತೆ ಇದೆ. ಆಪ್ತರಲ್ಲಿಯೇ ಕೆಲವರು ನಿಮ್ಮ ಏಳಿಗೆ ಬಗ್ಗೆ ಈರ್ಷ್ಯೆ ಪಡಲಿದ್ದಾರೆ. ಐಟಿ- ಬಿಪಿಒದಂಥ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ನಿಮ್ಮಿಂದ ಸಾಧ್ಯವಾಗುವಂಥ ಕೆಲಸಗಳನ್ನು ಮಾತ್ರ ಒಪ್ಪಿಕೊಳ್ಳಿ. ಪ್ರೀತಿ- ಪ್ರೇಮದಲ್ಲಿ ಇರುವವರು ಪ್ರಮುಖವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ದೂಳಿನ ಅಲರ್ಜಿ ಇರುವವರಿಗೆ ಈ ದಿನ ಅನಾರೋಗ್ಯ ಕಾಡಬಹುದು. ಆದ್ದರಿಂದ ಸಾಧ್ಯವಾದಷ್ಟೂ ಇಂಥ ವಾತಾವರಣದಲ್ಲಿ ಅಡ್ಡಾಡದಂತೆ ಜಾಗ್ರತೆಯನ್ನು ವಹಿಸಿ. ಈ ಹಿಂದೆ ನೀವು ತೆಗೆದುಕೊಂಡಿದ್ದ ತೀರ್ಮಾನದ ಉತ್ತಮ ಫಲವನ್ನು ಈ ದಿನದಂದು ಕಾಣಲಿದ್ದೀರಿ. ನಿಮ್ಮ ಕುಟುಂಬದೊಳಗೆ ಹಣಕಾಸಿನ ತುರ್ತು ಕಂಡುಬರಲಿದೆ. ಮುಖ್ಯ ಸಂಗತಿಗಳು ಮರೆತು ಹೋಗದಂತೆ ಒಂದು ಕಡೆ ನೋಟ್ ಮಾಡಿಟ್ಟುಕೊಂಡು, ಆದ್ಯತೆ ಮೇಲೆ ಕೆಲಸ ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಪ್ರಮುಖವಾದ ಬೆಳವಣಿಗೆ ಕಂಡುಬರಲಿದೆ. ಸಂಬಂಧಿಕರು, ಸ್ನೇಹಿತರು ನಿಮಗೆ ನೆರವು ನೀಡುವ ಸಾಧ್ಯತೆಗಳಿವೆ. ಇತರರು ನಿಮ್ಮ ಬಳಿ ಗುಟ್ಟು ಎಂದು ಹೇಳಿದ್ದರ ರಹಸ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಚಿನ್ನಾಭರಣಗಳ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವಂಥ ಸನ್ನಿವೇಶ ಎದುರಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಫ್ಯಾಷನ್ ಡಿಸೈನಿಂಗ್, ಚಿನ್ನಾಭರಣಗಳು ಕುಸುರಿ ಕೆಲಸದಲ್ಲಿ ತೊಡಗಿಕೊಂಡವರಿಗೆ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ಯೂಟ್ಯೂಬರ್ ಗಳಾಗಿ ವೃತ್ತಿಯನ್ನು ಆರಿಸಿಕೊಂಡಿರುವವರಿಗೆ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಮಾಡಿಕೊಂಡು ಇರುವವರಿಗೆ ಹೆಚ್ಚಿನ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಸಂತಾನ ಅಪೇಕ್ಷಿತರಿಗೆ ಶುಭವಾದ ಬೆಳವಣಿಗೆಗಳು ಆಗಲಿವೆ, ಮನಸ್ಸಿಗೆ ನೆಮ್ಮದಿಯಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಬ್ಯಾಂಕರ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು, ಫೈನಾನ್ಷಿಯಲ್ ಅಡ್ವೈಸರ್ ಗಳಿಗೆ ಬಿಡುವಿಲ್ಲದ ದಿನ ಇದಾಗಿರುತ್ತದೆ. ದೊಡ್ಡ ಮೊತ್ತದ ಹೂಡಿಕೆ ಮಾಡುವುದರ ಬಗ್ಗೆ ಪ್ರಸ್ತಾವ ಬರಲಿದೆ. ನವ ದಂಪತಿ ಮಧ್ಯೆ ಸಣ್ಣ- ಪುಟ್ಟ ಮನಸ್ತಾಪ ಬರುವ ಸಾಧ್ಯತೆ ಇದೆ. ಕುಟುಂಬ ವ್ಯವಹಾರಗಳನ್ನು ನಡೆಸುತ್ತಾ ಬರುತ್ತಿರುವವರು ಹೊಸದಾದ ಉದ್ಯಮ ಅಥವಾ ವ್ಯಾಪಾರ ಶುರು ಮಾಡುವ ಬಗ್ಗೆ ಚಿಂತನೆಯನ್ನು ನಡೆಸಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಮಾತಿನ ತೂಕ, ಪ್ರಭಾವ ಹೆಚ್ಚಾಗುವ ಸೂಚನೆ ದೊರೆಯಲಿದೆ. ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ನೀವಾಡುವ ಮಾತಿನಲ್ಲಿ ಬಳಸುವ ಪ್ರತಿ ಪದಕ್ಕೂ ಮೌಲ್ಯ ಇದೆ ಎಂಬುದನ್ನು ಈ ದಿನ ಗಮನಿಸಿ. ದಿಢೀರನೇ ಹಳೇ ಸ್ನೇಹಿತರು, ಹತ್ತಿರದ ಸಂಬಂಧಿಕರು ಮನೆಗೆ ಬರುವಂಥ ಸಾಧ್ಯತೆ ಇದೆ. ವೃತ್ತಿನಿರತರು ವಿಸ್ತರಣೆ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಈ ದಿನ ಸಾಯಿ ಬಾಬ ಮಂದಿರದಲ್ಲಿ ದರ್ಶನ ಪಡೆಯಿರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಆಗಬೇಕಾದ ಕೆಲಸಗಳು ಕೊನೆ ಕ್ಷಣದ ತನಕ ಆತಂಕ ಸೃಷ್ಟಿಸಿ, ಮುಕ್ತಾಯ ಕಾಣುತ್ತವೆ. ಆದರೆ ಯಾವುದೇ ಕಾರಣಕ್ಕೂ ಉತ್ಸಾಹವನ್ನು ಕಳೆದುಕೊಳ್ಳಬೇಡಿ. ಎದುರಿಗಿರುವ ವ್ಯಕ್ತಿಯು ಆಡುವ ಮಾತು, ಬಳಸುವ ಪದಗಳ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಸಂವಹನ ಮಾಡುವಾಗ ಪೂರಕ ಪುರಾವೆಗಳು ಇಲ್ಲದಂತೆ ಯಾವುದೇ ಕೆಲಸವನ್ನು ಬರೀ ಮಾತಿನಲ್ಲಿ ಒಪ್ಪಿಕೊಳ್ಳದಿರಿ. ಸಾಲ ಬಾಧೆಯಿರುವವರಿಗೆ ಅದರಿಂದ ನಿರಾಳ ಆಗುವಂಥ ಮಾರ್ಗಗಳು ಗೋಚರ ಆಗುತ್ತವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಧೈರ್ಯ, ನಂಬಿಕೆ ಹಾಗೂ ಭರವಸೆ ಈ ದಿನ ಕೈ ಹಿಡಿಯಲಿವೆ. ಅಚಾನಕ್ ಆಗಿ ನಾನಾ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳಲಿವೆ. ಯಾರು ಇಷ್ಟು ಸಮಯ ನಿಮ್ಮ ಬಗ್ಗೆ ತಾತ್ಸಾರದಿಂದ ನೋಡುತ್ತಿದ್ದರೋ ಅವರಿಗೆ ಬೆರಗು ಮೂಡುವಂತೆ ಬೆಳವಣಿಗೆಯನ್ನು ಕಾಣಲಿದ್ದೀರಿ. ಕಾರು ಅಥವಾ ಸ್ಕೂಟರ್- ಬೈಕ್ ಖರೀದಿಗಾಗಿ ಮುಂಗಡ ಪಾವತಿಸುವ ಸಾಧ್ಯತೆ ಇದೆ. ಕೆಲವರು ಸೆಕೆಂಡ್ ಹ್ಯಾಂಡ್ ವಾಹನವನ್ನಾದರೂ ಖರೀದಿಸುವ ಅವಕಾಶಗಳಿವೆ.

ಲೇಖನ- ಎನ್‌.ಕೆ.ಸ್ವಾತಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ