Nitya Bhavishya: ಕಲಾವಿದರಿಗೆ ಉತ್ತಮ ಅವಕಾಶ, ಯಾವುದನ್ನೂ ಅಲಕ್ಷಿಸಬೇಡಿ: ದುರ್ಗೆಯನ್ನು ಸ್ಮರಿಸಿ
2023 ಮಾರ್ಚ್ 3ರ ಶುಕ್ರವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 3ರ ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ 11:16 ರಿಂದ 12:45ರವರೆಗೆ, ಯಮಘಂಡ ಕಾಲ 03:42 ರಿಂದ 05:11ರವರೆಗೆ, ಗುಳಿಕ ಕಾಲ 08:18 ರಿಂದ ಮಧ್ಯಾಹ್ನ 09:47ರವರೆಗೆ.
ಮೇಷ: ನಿಮ್ಮವರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸಲಹೆಗಳು ಬರಬಹುದು. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ಪ್ರತ್ಯುತ್ತರವನ್ನು ಕೊಡುವ ಅವಶ್ಯಕತೆಯಿಲ್ಲ. ತಪ್ಪುಗಳು ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಶ್ಚಿಂತೆಯಿಂದ ಮುನ್ನಡೆಯಿರಿ. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಆಪ್ತರ ಭೇಟಿಯಾಗಬಹುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಕಲಹವೇರ್ಪಡಬಹುದು, ಜಾಗರೂಕರಾಗಿರಿ. ಆಪ್ತರ ಜೊತೆ ಸಮಾಲೋಚನೆ ನಡೆಯಲಿದೆ. ಅವರಿಂದ ಸಹಕಾರವೂ ನಿಮಗೆ ಸಿಗುವ ಸಾಧ್ಯತೆ ಇದೆ. ನಾಗದೇವರ ಪೂಜೆಯಿಂದ ನಿಮಗೆ ಹೆಚ್ಚಿನ ಅನುಕೂಲವಾಗಲಿದೆ.
ವೃಷಭ: ನಿಮ್ಮ ಕಾರ್ಯವನ್ನು ಕಂಡು ಕೆಲವು ಜವಾಬ್ದಾರಿಗಳು ಇಂದು ನಿಮಗೆ ಬರಬಹುದು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಆಲಸ್ಯವು ಒಳ್ಳೆಯದಲ್ಲ. ನಿಮ್ಮ ಗುರಿಯ ಸಾಧನೆಗೆ ಅಡ್ಡಿಯಾಗಬಹುದು. ನಿಮ್ಮನ್ನು ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಕಲಾವಿದರು ಉತ್ತಮವಾದ ಅವಕಾಶವನ್ನು ಪಡೆಯಲಿದ್ದಾರೆ. ಇದು ನಿಮ್ಮನ್ನು ಎತ್ತರಕ್ಕೆ ಒಯ್ಯಲಿದೆ. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಯಾವುದನ್ನೂ ಅಲಕ್ಷಿಸಬೇಡಿ. ಹಣಕಾಸಿನಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ಕಾರ್ಯದಲ್ಲಿ ಸಾವಧಾನತೆ ಇರಲಿದೆ. ದುರ್ಗೆಯನ್ನು ಸ್ಮರಿಸಿ.
ಮಿಥುನ: ಅತಿಯಾದ ಕಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿಯು ಬರಬಹುದು. ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ. ಆಹಾರದ ಅಭಾವವು ನಿಮಗೆ ಆಗಲಿದೆ. ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಮಟ್ಟ ಮೀರಂದಂತೆ ಉದ್ಯೋಗವನ್ನು ಮಾಡುವುದು ಒಳ್ಳೆಯದು. ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಭತ್ಯೆಯು ಸಿಗಬಹುದಾಗಿದೆ. ಯಾರಾದರೂ ಚುಚ್ಚಿ ಮಾತನಾಡಬಹುದು. ಅದನ್ನು ಮನಸ್ಸಿ ತೆಗದುಕೊಳ್ಳುವಿರಿ. ಸಲಹೆಯನ್ನು ಪಡೆದುಕೊಂಡು ಸ್ವಂತ ನಿರ್ಧಾರಕ್ಕೆ ಬನ್ನಿ. ಮಹಾವಿಷ್ಣುವನ್ನು ಆರಾಧಿಸಿದರೆ ಶುಭವಾಗಲಿದೆ.
ಕಟಕ: ಏಕತಾನತೆಯಿಂದ ಬೇಸರವಾಗಬಹುದು. ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಪಡುವಿರಿ. ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಆಸಕ್ತಿಯನ್ನು ಹೊಂದಿದ್ದೀರಿ. ಮಕ್ಕಳಿಂದ ನಿಮಗೆ ವಿದ್ಯಾಭಾಸದ ಕಾರಣಕ್ಕೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ಸಂತೋಷದ ವಾತಾವರಣ ಇರಲಿದೆ. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಅವರನ್ನು ಗೌರವಿಸಿ, ಪ್ರೀತಿಸಿ. ಮನಶ್ಚಾಂಚಲ್ಯಕ್ಕೆ ಯೋಗಾಭ್ಯಾಸವನ್ನು ಮಾಡಿ.
ಸಿಂಹ: ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ನಿಂತ ನೀರಾದರೆ ಕ್ರಿಮಿಗಳು ಏಳಬಹುದು. ನಿಂತ ಬುದ್ಧಿ ಹಾಗೂ ಮನಸ್ಸಿನಿಂದ ಕೆಟ್ಟ ಆಲೋಚನೆಗಳು ಬರಲಿವೆ. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ಮನೆಯವರೊಂದಿಗೆ ದಿನವನ್ನು ಕಳೆಯುವಿರಿ. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ. ಅನಾರೋಗ್ಯವು ನಿಮ್ಮ ಅಲಕ್ಷ್ಯದಿಂದ ಹೆಚ್ಚಾಗಲಿದೆ. ಸೂರ್ಯನು ನಿಮ್ಮ ಆರೋಗ್ಯವನ್ನು ಕಾಪಾಡುವನು. ಆದಿತ್ಯಹೃದಯವನ್ನು ಪಠಿಸಿ.
ಕನ್ಯಾ: ಹೊಸ ಕೆಲಸವನ್ನು ಮಾಡಲು ಹೋದಾಗ ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಏಳಬಹುದು. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ಶ್ರಮದ ಕೆಲಸವು ಆಯಾಸವನ್ನು ತರಲಿದೆ. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆಯನ್ನು ನೀವು ಹೊಂದುವಿರಿ. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ಸಮಾಧನಾದಿಂದ ಎದುರಿಸಬೇಕಾಗಬಹುದು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ಶ್ರೀರಾಮನ ಅಷ್ಟೋತ್ತರವನ್ನು ಜಪಿಸಿ.
ತುಲಾ: ಪ್ರಾಮಾಣಿಕರಾದ ನಿಮ್ಮ ಮೇಲೆ ಕಳ್ಳತನದ ಅಪವಾದವು ಬರಬಹುದು. ನಿರಪರಾಧಿಯಾಗಲು ಸಮಯವನ್ನೂ ತೆಗದೆಕೊಳ್ಳಬೇಕಾದೀತು. ನಿಮ್ಮ ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಳ್ಳಿ. ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ಉನ್ನತ ಹುದ್ದೆಗೆ ಹೋಗುವ ಅವಕಾಶವಿರಬಹುದು. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಡುವುದು ಒಳ್ಳೆಯದಲ್ಲ. ಆಂತರಿಕ ಕಲಹವು ಇಂದು ಜಗಜ್ಜಾಹಿರವು ಆಗಬಹುದು. ಒಳಗೇ ಅದನ್ನು ಸರಿಮಾಡಿಕೊಳ್ಳುವುದು ಒಳಿತು. ಇಂದಿನ ನಿಮ್ಮ ವಾಸಸ್ಥಾನವು ಮನೆಯಿಂದ ದೂರವಿರಲಿದೆ. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗಿರುತ್ತೀರಿ. ಗಣಪತಿಗೆ ಪ್ರಿಯವಾದ ದೂರ್ವಾಪತ್ರವನ್ನು ಸಮರ್ಪಿಸಿ. ಕಾರ್ಯವು ನಿರ್ವಿಘ್ನವಾಗಿ ಸಾಗುವುದು.
ವೃಶ್ಚಿಕ: ಹಲವು ದಿನಗಳಿಂದ ವಿವಾಹಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇಂದು ವಿವಾಹದ ಪ್ರಸ್ತಾಪಗಳು ಆಗಿಹೋಗಲಿದೆ. ವಿವಾಹವು ಯೋಜನೆಗೊಳ್ಳದೇ ಬೇಸರವಾಗಿ ಮನೆಯಲ್ಲಿ ಕಲಹಗಳು ಆಗಬಹುದು. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಲಿದೆ. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಬೇಡಿ. ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಇದರಿಂದ ಕುಟುಂಬವು ಬೇಸರಗೊಳ್ಳುವುದು. ಮನೆಯನ್ನು ಇಂದು ಬದಲಾಯಿಸುವಿರಿ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಸುಬ್ರಹ್ಮಣನು ನಿಮಗೆ ಇಷ್ಟಾರ್ಥವನ್ನು ನೀಡುವನು. ಶ್ರದ್ಧೆಯಿಂದ ಧ್ಯಾನಿಸಿ.
ಧನು: ಸಾಹಿತ್ಯಕ್ಷೇತ್ರದಲ್ಲಿ ಇದ್ದವರಿಗೆ ಅನೇಕ ಅವಕಾಶಗಳು ಸಿಗಲಿವೆ. ಗೌರವಗಳನ್ನು ಪಡೆಯಬಹುದಾಗಿದೆ. ಮೇಲಿನಿಂದ ಬಿದ್ದು ಪೆಟ್ಟುಮಾಡಿಕೊಳ್ಳುವಿರಿ. ನೀವಿಂದು ಪ್ರೀತಿಸಲು ಆರಂಭಿಸುವಿರಿ. ಅವಸರದಲ್ಲಿ ಅನಾಹುತವಾದೀತು. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಸಲಹೆಗಳನ್ನು ಕೊಡಲು ಬರಬಹುದು. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವ ಮನಸ್ಸು ಮಾಡುವರು. ಸಮಾಧಾನವಿರಲಿ. ಗುರುಸಮಾಧಿಗೆ ಪ್ರದಕ್ಷಿಣೆ ಬಂದು ತುಳಸಿ ಮಾಲೆಯನ್ನು ಅರ್ಪಿಸಿ.
ಮಕರ: ಬದಲಾವಣೆಯನ್ನು ಇಷ್ಟಪಡಲಿದ್ದೀರಿ ನೀವಿಂದು. ಪ್ರಸಿದ್ಧ ವ್ಯಕ್ತಿಗಳ ಸಹವಾಸವು ನಿಮಗೆ ಆಗಲಿದೆ. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಎಂದೋ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ಎಲ್ಲರ ಜೊತೆ ಬೆರೆತು ಬದುಕುವ ನಿಮ್ಮ ಗುಣವು ಮೆಚ್ಚುಗೆಯಾಗಲಿದೆ. ಆರ್ಥಿಕತೆಯನ್ನು ನಿಭಾಯಿಸುವುದನ್ನು ಕಲಿಯಿರಿ. ಹನುಮಾನ್ ಚಾಲೀಸ್ ಪಠಿಸಿ.
ಕುಂಭ: ಹಲವು ವರ್ಷಗಳ ಅನಂತರ ಆದ ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಾತಿಗೆ ಬೆಲೆಯು ಕಡಿಮೆಯಾದೀತು. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಪ್ರಯಾಣದ ಸುಖವೂ ಇರಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಸರಳತೆಯನ್ನು ರೂಢಿಸಿಕೊಳ್ಳುವಿರಿ. ಶಿವನಿಗೆ ಅಭಿಷೇಕ ಮಾಡಿ. ಶನಿಯು ನಿಮ್ಮನ್ನು ಉನ್ನತಕ್ಕೇರಿಸುವನು.
ಮೀನ: ನಿಮ್ಮ ವಿರುದ್ಧ ಮಾತನಾಡುವವರಿಗೆ ಯೋಗ್ಯವಾದ ಉತ್ತರವನ್ನು ಕೊಡುವ ಭರದಲ್ಲಿ ಅವಘಡಗಳು ಆಗಬಹುದು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಶಾಂತಚಿತ್ತರಾಗಿ ಯೋಚಿಸಿ. ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗಲಿವೆ. ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಯಾರ ಬಗ್ಗೆಯೂ ಪೂರ್ವಾಗ್ರಹಬುದ್ಧಿಯನ್ನು ಬಿಡುವುದು ಒಳ್ಳೆಯದು. ದ್ವಾದಶದಲ್ಲಿ ಶನಿಯು ಇದ್ದರೂ ನಿಮಗೆ ಮಂಗಳವನ್ನು ಉಂಟುಮಾಡುವ ಶುಕ್ರ ಹಾಗು ಗುರುವಿದ್ದಾರೆ. ಅಸಾಧ್ಯವೆಂದು ಕಂಡರೂ ಅದನ್ನು ಸಾಧ್ಯವಾಗಿಸಿಕೊಳ್ಳುವಿರಿ.
ಲೋಹಿತಶರ್ಮಾ, ಇಡುವಾಣಿ