Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ

Daily Horoscope Mach 16: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 16ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ
Numerologys
Image Credit source: worldnumerology
Edited By:

Updated on: Mar 16, 2026 | 1:02 AM

ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ಇರುವವರು “ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ನಮಃ” ಮಂತ್ರವನ್ನು ಸ್ಮರಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಲವು ವಿಚಾರ- ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ವೇದಿಕೆ ಸಿಗಲಿದೆ. ಈ ಹಿಂದೆ ಸಿಟ್ಟಿನಲ್ಲಿ ನೀವು ಆಡಿದ್ದ ಮಾತಿನಿಂದ ಆದ ಬೇಸರವನ್ನು ಕಡಿಮೆ ಮಾಡುವುದಕ್ಕೆ ಸರಿಯಾದ ದಿನ ಇದಾಗಿರುತ್ತದೆ. ಖರ್ಚಿನ ವಿಚಾರದಲ್ಲಿಯೂ ಉದಾರವಾಗಿ ವರ್ತಿಸಲಿದ್ದೀರಿ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಯೋಗ ಸಹ ಇದೆ. ರೆಸಾರ್ಟ್, ರೆಸ್ಟೋರೆಂಟ್, ಸಿನಿಮಾ ಹೀಗೆ ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಪ್ರೇಮಿಗಳಿಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕೆಲಸ ಬದಲಾವಣೆ ಮಾಡುವುದಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಗುರುತಿಸಿ, ಉಡುಗೊರೆಗಳನ್ನು ನೀಡಬಹುದು. ಚಿನ್ನ- ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿದ್ದಲ್ಲಿ ದಿನದ ಮಟ್ಟಿಗೆ ನಿರ್ಧಾರವನ್ನು ಮುಂದೆ ಹಾಕುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ಯಾರ ಜತೆಗೆ ಭಾವನಾತ್ಮಕವಾಗಿ ಬಹಳ ಹತ್ತಿರ ಆಗಿರುತ್ತೀರಿ ಅವರ ಬದುಕಿನಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಕುಗ್ಗಿಹೋಗುವ ಸಾಧ್ಯತೆಗಳಿವೆ. ಮತ್ತು ಇದೇ ದಿನ ತಂದೆ- ತಾಯಿಯ ಆರೋಗ್ಯ ವಿಚಾರ ಚಿಂತೆಗೆ ಕಾರಣ ಆಗಲಿದೆ. ನೀವು ಯಾರನ್ನು ಭೇಟಿ ಆಗಬಾರದು, ಮಾತನಾಡಬಾರದು ಅಂದುಕೊಂಡಿರುತ್ತೀರೋ ಅಂಥ ವ್ಯಕ್ತಿ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಎದುರಾಗಿ, ಆ ವ್ಯಕ್ತಿಯ ಮುಖಾಮುಖಿಯಿಂದಾಗಿ ಮುಜುಗರ, ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.

Follow Us