ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 23ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ವಿದ್ಯೆ, ಬುದ್ಧಿ, ಆಲೋಚನೆ, ತಿಳಿವಳಿಕೆ ಈ ಯಾವುದೂ ಈ ದಿನ ನಿಮಗೆ ಸಹಾಯಕ್ಕೆ ಬಾರದೇ ಇರಬಹುದು. ಏಕೆಂದರೆ ಈ ದಿನ ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವಂತಹ ಕೆಲವು ಬೆಳವಣಿಗೆಗಳು ಆಗಲಿವೆ. ನಿಮ್ಮ ಬಳಿ ಇರುವಂತಹ ಹಣ ಎಷ್ಟು? ಹಾಗೂ ಎಷ್ಟು ಮೊತ್ತವನ್ನು ನೀವು ಹೊಂದಿಸಬಲ್ಲಿರಿ ಎಂಬುದನ್ನು ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡು, ಆ ನಂತರ ಇತರರಿಗೆ ಮಾತು ಕೊಡಿ. ನವ ವಿವಾಹಿತರಿಗೆ ಮನಸ್ತಾಪ ಅಥವಾ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ಒಂದು ವೇಳೆ ಇಂಥ ಪರಿಸ್ಥಿತಿ ಎದುರಾದಲ್ಲಿ ಹಳೆಯ ಘಟನೆಗಳನ್ನು ಮತ್ತೆ ಎಳೆದು ತಂದು, ಇನ್ನಷ್ಟು ರಾಡಿ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.
ಈ ದಿನ ನಿಮ್ಮಲ್ಲಿ ಒಂದು ಬಗೆಯ ಅಸಹನೆ ಕಾಡಲಿದೆ. ಯಾವುದೇ ಕೆಲಸಗಳು ನಿರೀಕ್ಷಿತ ಮಟ್ಟಕ್ಕೆ ಆಗುತ್ತಿಲ್ಲ ಎಂಬುದು ನಿಮ್ಮ ಮನಸ್ಸಿನೊಳಗೆ ಗಟ್ಟಿಯಾಗಿ ಕೂತುಕೊಳ್ಳಲಿದೆ. ಇದೇ ಕಾರಣಕ್ಕೆ ಬಹಳ ಸಿಟ್ಟು ಸಹ ಬರುತ್ತದೆ. ಇಂಥದ್ದೇ ಸನ್ನಿವೇಶದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜೊತೆಗೆ ತೀರಾ ಕಟುವಾಗಿ ಮಾತನಾಡಿ, ನಿಮ್ಮ ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ. ಆದ್ದರಿಂದ ಈ ದಿನ ಸಾಧ್ಯವಾದಷ್ಟು ತಾಳ್ಮೆ, ಸಂಯಮದಿಂದ ಇದ್ದರೆ ಒಳ್ಳೆಯದು. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿರುವವರಿಗೆ ನಾನಾ ಬಗೆಯಲ್ಲಿ ಅಡ್ಡಿ ಆತಂಕಗಳು ಕಾಡಲಿವೆ. ಇಂಥ ಸನ್ನಿವೇಶ ಎದುರಾದಲ್ಲಿ ದುರ್ಗಾದೇವಿಯನ್ನು ಸ್ಮರಿಸಿ, ಆರಾಧಿಸಿ.
ನೀವು ವಿಪರೀತ ಶ್ರದ್ಧೆ ಇಟ್ಟು, ಸಮಯ ಕೊಟ್ಟು ಮಾಡಿದಂತಹ ಕೆಲಸದ ಶ್ರೇಯ ಯಾರದೋ ಪಾಲಾಗಲಿದೆ. ಕುಟುಂಬದೊಳಗೆ ತಲೆಯೆತ್ತುವಂತಹ ಖರ್ಚುಗಳನ್ನು ನಿಭಾಯಿಸುವುದಕ್ಕೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಮೇಲುನೋಟಕ್ಕೆ ಬಹಳ ಸಲೀಸು, ಕೊನೆ ಕ್ಷಣದಲ್ಲಿ ಅಥವಾ ಅಲ್ಪ ಸಮಯದಲ್ಲೇ ಇದನ್ನು ಮುಗಿಸಬಹುದು ಎಂದು ನೀವು ಅಂದುಕೊಂಡಿದ್ದು ಉಲ್ಟಾ ಆಗಬಹುದು. ಆದ್ದರಿಂದ ಯಾವುದೇ ಕೆಲಸವನ್ನು ಕೊನೆ ಕ್ಷಣದ ತನಕ ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಸ್ನೇಹಿತರು ನಿಮ್ಮ ಬಳಿ ಸಾಲ ಕೇಳಿಕೊಂಡು ಬರಬಹುದು. ಅವರಿಗೆ ಕೊಡುವುದೋ ಅಥವಾ ಇಲ್ಲ ಎಂದು ಹೇಳುವುದೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಗೊಂದಲ ಏರ್ಪಡಲಿದೆ.
ಸಂತಾನದ ನಿರೀಕ್ಷೆಯಲ್ಲಿ ಇರುವಂತಹವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಸ್ನೇಹಿತರ ಮೂಲಕ ಸಹಾಯ ದೊರೆಯಲಿದೆ. ಇತರರ ಮೇಲೆ ಸವಾಲು ಹಾಕಿ ನೀವು ತೆಗೆದುಕೊಂಡಂತಹ ಕೆಲಸ ಕಾರ್ಯಗಳಲ್ಲಿ ಅದ್ಭುತವಾದ ಯಶಸ್ಸನ್ನು ಪಡೆಯಲಿದ್ದೀರಿ. ವಿದೇಶಗಳಲ್ಲಿ ವಾಸ್ತವ್ಯ ಹೂಡಲು ಪ್ರಯತ್ನ ಮಾಡುತ್ತಿರುವವರಿಗೆ ಹಲವು ಬಗೆಯಲ್ಲಿ ಅನುಕೂಲ ಒದಗಿ ಬರಲಿದೆ. ನೀವು ಈಗಾಗಲೇ ಕೆಲಸ ಮಾಡಿಕೊಟ್ಟಾಗಿದೆ ಅದರಿಂದ ಇನ್ನೂ ಹಣ ಬಂದಿಲ್ಲ ಎಂದಾದಲ್ಲಿ ಈ ದಿನ ಪ್ರಯತ್ನ ಪಡಿ, ಹೀಗೆ ಮಾಡುವುದರಿಂದ ಹಣ ವಸೂಲಿ ಆಗುವ ಸಾಧ್ಯತೆಗಳು ಹೆಚ್ಚಿವೆ.
ಪೊಲೀಸ್, ಕೋರ್ಟ್- ಕಚೇರಿ ವಿಚಾರಗಳಿಗೆ ಸ್ವಲ್ಪ ಒತ್ತಡದ ಸನ್ನಿವೇಶ ಇರುತ್ತದೆ. ಸ್ವಲ್ಪ ಮಟ್ಟಿಗೂ ಹಣ ಸಹ ಕೈ ಬಿಟ್ಟು ಹೋಗಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ಇನ್ನು ತಲೆ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಅದು ಮತ್ತೂ ಹೆಚ್ಚಾಗಬಹುದು. ಅದೇ ರೀತಿ ಕಾಲು ಅಥವಾ ಕೈ ಚರ್ಮದ ಬಣ್ಣ ಬದಲಾಗಬಹುದು ಅಥವಾ ಅಲರ್ಜಿ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ನಾನಾ ವಿಧದ ಸವಾಲಿನ ಸನ್ನಿವೇಶಗಳನ್ನು ಎದುರಿಸಲಿದ್ದೀರಿ. ನಿಮಗೆ ಕೆಲಸ ವಹಿಸಿದವರ ಧೋರಣೆಯಿಂದ ಮನಸ್ಸಿಗೆ ಬೇಸರವಾದರೂ ಗಡುವಿನೊಳಗೆ ಅದನ್ನು ಮುಗಿಸುವುದಕ್ಕೆ ಪ್ರಾಮುಖ್ಯ ನೀಡುವುದು ಉತ್ತಮ. ಏನೇನೋ ಕಾರಣ ನೀಡಿ, ಕೆಲಸಗಳನ್ನು ಮುಂದಕ್ಕೆ ಹಾಕಬೇಡಿ.
ನೀವು ಇತರರಿಗೆ ಅನುಕೂಲ ಮಾಡಿದರೂ ನಿಮ್ಮ ಮೇಲೆ ಏಕೆ ದ್ವೇಷ ಸಾಧಿಸುವುದಕ್ಕೆ ಯತ್ನಿಸುತ್ತಾರೆ ಎಂದು ಮನಸ್ಸಿನಲ್ಲಿ ಬಹಳ ಕಾಡುತ್ತದೆ. ಅದೇ ರೀತಿ ನೀವು ಸಹಾಯ ಮಾಡಿದ ಹಳೇ ನೆನಪುಗಳು ವಿಪರೀತವಾಗಿ ಕಾಡಲಿದೆ. ಹಣಕಾಸು ತೀರ್ಮಾನ ಅಥವಾ ಸಂಬಂಧಗಳ ಬಗೆಗಿನ ವಿಚಾರ ಎಂದಾದಲ್ಲಿ ಧೈರ್ಯದಿಂದ ಕೆಲವು ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ನೀವು ಬಹಳ ಭರವಸೆ ಇಟ್ಟುಕೊಂಡು, ಇತರರ ಸಲಹೆಯನ್ನು ಕೇಳಿಕೊಂಡು ಮಾಡಿದ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟವಾಗುವಂಥ ಸಾಧ್ಯತೆ ಇದೆ. ಇತರರ ವೈಯಕ್ತಿಕ ವಿಚಾರಗಳಿಗೆ, ಅದರಲ್ಲೂ ಮದುವೆಯ ವಿಚಾರಗಳಿಗೆ ಮೂಗು ತೂರಿಸಬೇಡಿ. ಪರಿಚಿತರು ಮತ್ತು ಕರೆದರು ಎಂದು ಅವರ ಜತೆಗೆ ಹೋದಲ್ಲಿ ಅವಮಾನಗಳನ್ನು ಎದುರಿಸಬೇಕಾದೀತು.
ನಿಮ್ಮ ಎದುರು ನಿಂತು ಮಾತನಾಡುವವರ ಉದ್ದೇಶ ಏನಿದೆ ಎಂಬುದನ್ನು ಬಹಳ ಬೇಗ ಗ್ರಹಿಸಲಿದ್ದೀರಿ. ಇದರಿಂದಾಗಿ ನಿಮ್ಮನ್ನು ದಾರಿ ತಪ್ಪಿಸುವುದಕ್ಕೋ ಅಥವಾ ತಮಗೆ ಬೇಕಾದಂತೆ ಲಾಭ ಮಾಡಿಕೊಳ್ಳುವುದಕ್ಕೋ ಇತರರಿಗೆ ಸಾಧ್ಯವಾಗುವುದಿಲ್ಲ. ಇಷ್ಟು ಸಮಯ ನಿಮ್ಮ ಜೊತೆಯಲ್ಲಿ ಇದ್ದುಕೊಂಡು, ಚೆನ್ನಾಗಿಯೇ ಮಾತನಾಡುತ್ತಾ ನಿಮಗೆ ಕೇಡನ್ನು ಬಯಸುತ್ತಾ ಇದ್ದವರು ಯಾರು ಎಂಬುದು ಈ ದಿನ ನಿಮಗೆ ತಿಳಿದು ಬರಲಿದೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಾ ಇರುವಂತಹವರಿಗೆ ತುಂಬಾ ಹೆಚ್ಚಿನ ಮಟ್ಟದ ಲಾಭ ಪಡೆಯುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಯಾರು ಅಡುಗೆ ಕಾಂಟ್ರಾಕ್ಟ್ ಗಳನ್ನು ಮಾಡಿಸುತ್ತಿದ್ದೀರೋ ಅಂಥವರು ಇದರ ಜೊತೆಗೆ ಹೊಸ ವ್ಯವಹಾರವನ್ನು ಶುರು ಮಾಡುವ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದೀರಿ.
ಕಡಿಮೆ ಮೊತ್ತಕ್ಕೆ ಯಾವುದಾದರೂ ಭೂಮಿ, ವಾಹನ ಅಥವಾ ಇನ್ಯಾವುದೇ ವಸ್ತು ಸಿಗುತ್ತದೆ ಎಂಬ ಕಾರಣಕ್ಕಾಗಿ ಆಸೆಗೆ ಬಿದ್ದು, ಸಾಲ ಮಾಡಿಯಾದರೂ ಹಣ ಹೋಗುವುದಕ್ಕೆ ಮುಂದಾಗಬೇಡಿ. ನೀವು ಯಾರ ಜೊತೆಗೆ ವ್ಯವಹಾರ ಮಾಡುತ್ತಿರುವಿರೋ ಅವರು ಮೇಲುನೋಟಕ್ಕೆ ಕಾಣುವಷ್ಟು ನಂಬಿಕೆಗೆ ಅರ್ಹವಾದ ವ್ಯಕ್ತಿ ಆಗಿರುವುದಿಲ್ಲ. ಅಂಥವರನ್ನು ನಂಬಿಕೊಂಡು ಸಾಲ ಕೊಡಿಸುವುದಕ್ಕೆ ಜಾಮೀನಾಗಿ ನಿಲ್ಲುವುದಕ್ಕಂತೂ ಹೋಗಲೇಬೇಡಿ. ತಂದೆ- ತಾಯಿ ಅಥವಾ ಸಂಗಾತಿ ನೀಡುವಂತಹ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಡುವ ಮುನ್ನ ಶಿವನನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳಿ.
ಈ ದಿನ ನೀವು ಆಕ್ರಮಣಕಾರಿಯಾದಂತಹ ಆಲೋಚನೆಯೊಂದಿಗೆ ಇತರರ ಜೊತೆ ವರ್ತಿಸಲಿದ್ದೀರಿ. ಈ ಹಿಂದೆ ನಡೆದ ಘಟನೆಗಳನ್ನು ಇಂದಿನ ಪರಿಸ್ಥಿತಿಯೊಂದಿಗೆ ಹೋಲಿಸಿ ಕೊಳ್ಳುವುದರಿಂದ ಇಂತಹದ್ದೊಂದು ವರ್ತನೆ ನಿಮ್ಮಲ್ಲಿ ಕಾಣಿಸಿಕೊಳ್ಳಲಿದೆ. ಯಾವುದೇ ವ್ಯವಹಾರ, ವಿಚಾರ, ವಿಷಯಗಳಲ್ಲಿ ಆತುರ ಮಾಡುವುದಕ್ಕೆ ಹೋಗಬೇಡಿ. ಭವಿಷ್ಯಕ್ಕೆ ಸಂಬಂಧಿಸಿದಂತೆ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕು ಎಂಬ ಪರಿಸ್ಥಿತಿ ಇದ್ದರೂ ಈ ದಿನದ ಮಟ್ಟಿಗೆ ಮುಂದಕ್ಕೆ ಹಾಕುವುದು ಉತ್ತಮ. ತೀರಾ ಅನಿವಾರ್ಯ ಎಂದಾದಲ್ಲಿ ನಿಮ್ಮ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಆ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಲೇಖನ- ಎನ್.ಕೆ.ಸ್ವಾತಿ