Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮನೆಗೆ ಟೀವಿ, ಹೋಮ್ ಥಿಯೇಟರ್, ಮೈಕ್ರೋವೇವ್ ಓವನ್ ಈ ರೀತಿಯ ವಸ್ತುಗಳನ್ನು ಖರೀದಿಸಿ ತರುವಂಥ ಯೋಗ ನಿಮ್ಮ ಪಾಲಿಗೆ ಈ ದಿನ ಇದೆ. ಮಕ್ಕಳು ಇಷ್ಟಪಡುವಂಥ ಕೆಲವು ಕರ್ಟನ್ಸ್, ದಿಂಬಿಗೆ ಹಾಕುವಂಥ ಕವರ್ ಅಥವಾ ಹಾಸಿಗೆ ಮೇಲೆ ಹಾಸುವಂಥ ಬೆಡ್ ಸ್ಪ್ರೆಡ್ ಕೂಡ ಮನೆಗೆ ತರುವಂಥ ಯೋಗ ಇದೆ. ರೆಸ್ಟೋರೆಂಟ್, ಸಿನಿಮಾಗಳಿಗೆ ಕುಟುಂಬದ ಜತೆಗೆ ತೆರಳುವಂಥ ಸಾಧ್ಯತೆ ಕಾಣುತ್ತಿದ್ದು, ಇದರಿಂದ ಮನಸ್ಸಿಗೆ ಸಮಾಧಾನ ಇರುತ್ತದೆ. ಈಗಾಗಲೇ ಕುಟುಂಬದವರ ಜತೆಗೆ ದೂರದ ಪ್ರದೇಶಗಳಿಗೆ ರಜಾ ದಿನ ಕಳೆಯುವುದಕ್ಕೆ ತೆರಳಿದವರು ಇದ್ದಲ್ಲಿ ಈ ದಿನ ಒಂದಿಷ್ಟು ಹೆಚ್ಚಿಗೆ ಆಯಾಸ ಆಗಬಹುದು. ಆದರೆ ಮನಸ್ಸಿಗೆ ತೃಪ್ತಿ ಇರುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಉಮಕ್ಕಳ ಶಿಕ್ಷಣದ ವಿಚಾರ ಪ್ರಾಮುಖ್ಯ ಪಡೆಯಲಿದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸುವುದಕ್ಕೆ ಸಿದ್ಧತೆ ನಡೆಸಲಿದ್ದೀರಿ. ಅಥವಾ ಸ್ನೇಹಿತರು, ಸಂಬಂಧಿಕರ ಮನೆಗಾದರೂ ತೆರಳಿ, ಪೂಜೆಯಲ್ಲಿ ಭಾಗೀಯಾಗುವ ಯೋಗ ಇದೆ. ಸೋದರ ಸಂಬಂಧಿಗಳಿಗಾಗಿ ಹೊಸ ಬಟ್ಟೆಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಈಗಾಗಲೇ ಸೈಟ್ ಇದ್ದು, ಮನೆಯನ್ನು ಕಟ್ಟಬೇಕು ಎಂದು ಆಲೋಚಿಸುತ್ತಿರುವವರು ಆ ಬಗ್ಗೆ ಅಂತಿಮವಾದ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಕಾಂಟ್ರಾಕ್ಟರ್ ಅನ್ನು ಕರೆದು ಮಾತನಾಡುವ ಅವಕಾಶಗಳು ಸಹ ಇವೆ. ಆದರೆ ಈ ದಿನ ಊಟ-ತಿಂಡಿ ವಿಚಾರದಲ್ಲಿ ನಿಯಂತ್ರಣ ಇರಿಸಿಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂಬಂಧಿಕರು, ಸ್ನೇಹಿತರು ಮನೆಗೆ ಬರುವುದರಿಂದ ಸಂತಸದ ವಾತಾವರಣ ಇರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನಿರೀಕ್ಷಿತವಾದ ಒತ್ತಡ ಎದುರಾಗಬಹುದು. ಸಂಗಾತಿಯ ಕಡೆ ಸಂಬಂಧಿಕರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದರು ಎಂದು ಯಾರಾದರೂ ಮೂಲಕ ಗೊತ್ತಾಗಲಿದೆ. ಇದರಿಂದ ಮನಸ್ಸು ಕಹಿಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರ ಬಳಿ ಹೋಗಿ ಕೇಳಿಯೇ ಬಿಡಬೇಕು ಎಂದು ಸಹ ಅನಿಸಬಹುದು. ಆದರೆ ತಾಳ್ಮೆಯಿಂದ ಇರುವುದು ಒಳ್ಳೆಯದು. ದ್ವಿಚಕ್ರ ವಾಹನದಲ್ಲಿ ಲಾಂಗ್ ರೈಡ್ ಹೋಗುವಂಥ ಉದ್ದೇಶ ಇದ್ದಲ್ಲಿ ಈ ದಿನ ಯಾವುದೇ ಕಾರಣಕ್ಕೂ ಹೋಗಬೇಡಿ. ಇದು ಬಹಳ ಮುಖ್ಯವಾದ ಎಚ್ಚರಿಕೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವಂಥ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ದೊರೆಯಬಹುದಾದ ದೊಡ್ಡ ಜವಾಬ್ದಾರಿ ಬಗ್ಗೆ ಸುಳಿವು ದೊರೆಯಲಿದೆ. ಒಂದೋ ಮಾತಿನ ಮಧ್ಯೆ ಎಂಬಂತೆ ಹೇಳಬಹುದು ಅಥವಾ ನಿರ್ದಿಷ್ಟವಾಗಿ ಆ ಜವಾಬ್ದಾರಿಗೆ ಸಿದ್ಧವಾಗುವಂತೆ ಸೂಚಿಸಲೂಬಹುದು. ಇನ್ನೂ ಒಂದು ಬಗೆಯಲ್ಲಿ ಹೇಳಬೇಕೆಂದರೆ, ಈ ರೀತಿಯದೊಂದು ಚರ್ಚೆ ನಡೆಯುತ್ತಿದೆ ಎಂಬುದನ್ನು ನಿಮ್ಮ ಸ್ನೇಹಿತರು ಸಹ ಹೇಳಬಹುದು. ಪಾಸಿಟಿವ್ ಆದಂಥ ಆಲೋಚನೆಯನ್ನು ಮಾಡಿ. ಒಂದು ವೇಳೆ ದೇವತಾ ಕಾರ್ಯಗಳಿಗೆ ಅಥವಾ ಯಾವುದಾದರೂ ದೇವಸ್ಥಾನದ ಹುಂಡಿಗೆ ಕಾಣಿಕೆ ನೀಡಬೇಕು ಎಂದೇನಾದರೂ ಪ್ರೇರಣೆ ಸಿಕ್ಕಲ್ಲಿ ಅದನ್ನು ಮಾಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಒಂದು ರೀತಿಯ ವಿಚಿತ್ರ ಮರೆವು ನಿಮಗೆ ಕಾಡಬಹುದು. ಹೇಳಿದ ವಿಚಾರವನ್ನೇ ಪದೇಪದೇ ಹೇಳಬಹುದು. ಅಥವಾ ಈಗಾಗಲೇ ಆ ವ್ಯಕ್ತಿಗೆ ಹೇಳಿಯಾಗಿದೆ ಎಂದು ನಿಮಗೇ ನೀವೇ ಅಂದುಕೊಂಡು, ಮುಖ್ಯವಾದ ಸಂಗತಿಯನ್ನು ಹೇಳದೇ ಇದ್ದುಬಿಡಬಹುದು. ಆದ್ದರಿಂದ ಮುಖ್ಯ ಸಂಗತಿಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳುವುದು ಒಳ್ಳೆಯದು. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಂಥವರು ನಿಮ್ಮ ವಸ್ತುಗಳ ಕಡೆಗೆ ಹೆಚ್ಚಿನ ಲಕ್ಷ್ಯದಿಂದ ಇರಿ. ಇಲ್ಲದಿದ್ದಲ್ಲಿ ಅವುಗಳನ್ನು ಮರೆಯುವ ಅಥವಾ ಕಳೆಯುವ ಯೋಗ ಸಹ ಇದೆ. ಈ ಹಿಂದೆ ನಿಮಗೆ ಹಣ ನೀಡುವುದಾಗಿ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಅನ್ನಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮಕ್ಕಳ ಸಲುವಾಗಿ ಒಡವೆ ಖರೀದಿ ಮಾಡಬೇಕು ಅಥವಾ ದೊಡ್ಡ ಮೊತ್ತದ ಹೂಡಿಕೆ ಅಥವಾ ಉಳಿತಾಯ ಮಾಡಬೇಕು ಎಂದು ಸಂಗಾತಿಯ ಜತೆಗೆ ಸೇರಿ ನಿರ್ಧಾರವನ್ನು ಮಾಡಲಿದ್ದೀರಿ. ನಿಮ್ಮಲ್ಲಿ ಡಿಗ್ರಿ ಅಥವಾ ಅದಕ್ಕಿಂತ ಮೇಲ್ಮಟ್ಟದ ಶಿಕ್ಷಣ ಪಡೆಯುವಂಥ ಹೆಣ್ಣುಮಕ್ಕಳು ಇದ್ದಲ್ಲಿ ಅವರ ಸಲುವಾಗಿ ದ್ವಿಚಕ್ರ ವಾಹನಗಳ ಖರೀದಿಗೆ ಅಡ್ವಾನ್ಸ್ ನೀಡಲಿದ್ದೀರಿ. ದೂರದ ಊರು ಅಥವಾ ದೇಶದಿಂದ ಬಂದಂಥ ಸ್ನೇಹಿತರೊಬ್ಬರು ರಾತ್ರಿ ವೇಳೆಗೆ ಐಷಾರಾಮಿ ಹೋಟೆಲ್ ಗೆ ಊಟಕ್ಕೆ ಕರೆದೊಯ್ಯಬಹುದು. ಇನ್ನು ಯಾರು ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಸಂಗಕ್ಕಾಗಿ ಪ್ರಯತ್ನ ಮಾಡುತ್ತಿರುವಿರೋ ಅಂಥವರಿಗೆ ಮಹತ್ವದ ಮಾಹಿತಿ ಹಾಗೂ ನೆರವು ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮನ್ನು ಕಾಡುತ್ತಿರುವ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಸಂಗಾತಿಯ ಮಾತುಗಳಿಂದ ನಿಮಗೆ ಪ್ರೇರಣೆ ಸಹ ದೊರೆಯಲಿದೆ. ನೀವು ಅಂದುಕೊಳ್ಳದ ರೀತಿಯಲ್ಲಿ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ನಿಮ್ಮಲ್ಲಿ ಕೆಲವರು ವೃತ್ತಿಗೆ ಸಂಬಂಧಿಸಿದ ಸಲಕರಣೆ, ಗ್ಯಾಜೆಟ್ ಇಂಥದ್ದನ್ನು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಸ್ನೇಹಿತರಿಂದ ಸಲಹೆ ಹಾಗೂ ಹಣಕಾಸಿನ ಸಹಾಯ ಎರಡನ್ನೂ ಕೇಳಲಿದ್ದೀರಿ. ಈ ದಿನ ನಿಮಗೆ ಯಾವುದೇ ನಿರ್ಧಾರದ ಬಗ್ಗೆ ದ್ವಂದ್ವ ಕಾಡುತ್ತಿದ್ದಲ್ಲಿ ಸ್ವಲ್ಪ ದಿನದ ಮಟ್ಟಿಗೆ ಆ ಬಗ್ಗೆ ಆಲೋಚನೆ ಮಾಡುವುದನ್ನು ಸಹ ನಿಲ್ಲಿಸಿಬಿಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾರು ಸಹಾಯ ಮಾಡಿಯೇ ಮಾಡುತ್ತಾರೆ ಎಂದು ನೀವು ಬಹಳ ನಿರೀಕ್ಷೆ ಇಟ್ಟುಕೊಂಡು ದೊಡ್ಡ ವ್ಯವಹಾರಕ್ಕೆ ಕೈ ಹಾಕಿರುತ್ತೀರೋ ಅವರೇ ಸಂಕಷ್ಟಕ್ಕೆ ಸಿಲುಕಿಕೊಳ್ಳಬಹುದು. ಈಗಿನ ಸನ್ನಿವೇಶದಲ್ಲಿ ನಿಮಗೆ ನೆರವು ನೀಡುವುದಕ್ಕೆ ತನ್ನಿಂದ ಸಾಧ್ಯವಿಲ್ಲ ಅಂತಲೂ ಹೇಳಬಹುದು. ಇದು ಈ ದಿನದ ಪರಿಸ್ಥಿತಿಯಾಗಿರುತ್ತದೆ. ಇಂಥ ಮಾತುಗಳಿಂದ ಧೈರ್ಯಗೆಡಬೇಡಿ. ಅದೇ ಸಮಯಕ್ಕೆ ಈ ದಿನ ನಿಮಗೆ ವೃಥಾ ಪ್ರಯಾಣ ಇದೆ. ನಿಮಗೆ ಇಷ್ಟವಿಲ್ಲದಿದ್ದರೂ ಹೋಗಲೇಬೇಕು ಎಂಬಂಥ ಸ್ಥಿತಿ ಸೃಷ್ಟಿ ಆಗಬಹುದು. ಆತುರಾತುರವಾಗಿ ಹೊಟಿದ್ದೀರಿ ಅಂತಾದಲ್ಲಿ ಸಮಯಕ್ಕೆ ಸರಿಯಾಗಿ ಊಟ-ತಿಂಡಿ, ಒಂದು ವೇಳೆ ಔಷಧೋಪಚಾರದಲ್ಲಿ ಇದ್ದಲ್ಲಿ ಅದರ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು ಎಂದು ನಿಮ್ಮಲ್ಲಿ ಕೆಲವರಿಗೆ ಬಲವಾಗಿ ಅನಿಸಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸ್ವಂತ ವ್ಯವಹಾರವನ್ನು ಅಥವಾ ಉದ್ಯಮವನ್ನು ಆರಂಭಿಸುವ ಬಗ್ಗೆ ಅಂತಿಮವಾದ ತೀರ್ಮಾನವನ್ನೇ ತೆಗೆದುಕೊಂಡು ಬಿಡಬಹುದು. ಮುಖ್ಯ ಸಂಗತಿಯೊಂದನ್ನು ನೆನಪಿಟ್ಟುಕೊಳ್ಳಿ, ಪೂರ್ಣವಾಗಿ ಸಿದ್ಧತೆ ಮುಗಿದು, ಆತ್ಮವಿಶ್ವಾಸ ಮೂಡುವ ತನಕ ಯಾವುದೇ ಅತಿರೇಕದ ತೀರ್ಮಾನಗಳನ್ನು ಮಾಡಬೇಡಿ. ಇನ್ನು ಯಾರು ಟೂರಿಸ್ಟ್ ಬಸ್ ಗಳ ವ್ಯವಹಾರದಲ್ಲಿ ತೊಡಗಿಕೊಂಡಿರುತ್ತೀರೋ ಅಂಥವರು ಸ್ವಲ್ಪ ಭಾಗವನ್ನು ಮಾರಿಬಿಡುವ ಬಗ್ಗೆ ಚಿಂತಿಸಲಿದ್ದೀರಿ. ಅಥವಾ ಪಾರ್ಟನರ್ ಷಿಪ್ ಗೆ ಯಾರಾದರೂ ಮುಂದೆ ಬರಬಹುದಾ ಎಂಬುದನ್ನು ವಿಚಾರಿಸಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ