ಈ ನಕ್ಷತ್ರದವರಿಗೆ ಇಷ್ಟವಾದುದು ನಷ್ಟವಾದರೆ, ಕಷ್ಟವಾಗುತ್ತದೆ.. ನಷ್ಟವಾದುದನ್ನು ಹುಡುಕುವ ಸ್ಪಷ್ಟದಾರಿ ಇದು
ಅಭಿಜಿತ್ ಪ್ರತಿನಿತ್ಯ ಸೂರ್ಯೋದಯದಿಂದ ಎಂಟನೇ ಮುಹೂರ್ತಕ್ಕೆ ಅಂದರೆ ಸುಮಾರು ಮಧ್ಯಾಹ್ನದಲ್ಲಿ ಉದಿಸುವ ನಕ್ಷತ್ರ. ಶ್ರವಣಾ ಹಾಗೂ ಪೂರ್ವಾಭಾದ್ರಾದ ನಾಲ್ಕು ಅಂಶಗಳನ್ನು ಪಡೆದುಕೊಳ್ಳುವ ನಕ್ಷತ್ರದ ಈ ಸಮಯದಲ್ಲಿ ನಷ್ಟವಾದ ವಸ್ತುವಿಗೆ ಮೇಲೆ ಸೂಚಿಸಿದ ಫಲ. ಅಭಿಜಿತ್ ನಕ್ಷತ್ರದವರಿಗೆ ಎಲ್ಲವೂ ಸುಲಭವಿಲ್ಲ, ಇಷ್ಟಪಟ್ಟದನ್ನು ಕಷ್ಟಪಡುಬೇಕು. ಅದಕ್ಕಾಗಿ ನೀವು ಈ ಕೆಲಸ ಮಾಡಲೇಬೇಕು|

ಪ್ರಾಚಿನ ಜ್ಯೋತಿರ್ವಿಜ್ಞಾನ ತನ್ನ ಕೈಗಳನ್ನು ಎಲ್ಲಿಯವರೆಗೆ ಚಾಚಿದೆ ಎನ್ನಲಾಗದು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಷ್ಟು ಇದರ ವ್ಯಾಪ್ತಿಯನ್ನು ಬೇರೆ ಬೇರೆ ಹಂತಗಳಲ್ಲಿ ಕಾಣಬಹುದು. ಕಳೆದ ವಸ್ತು ಅಥವಾ ವ್ಯಕ್ತಿಗಳನ್ನು ಹುಡುಕುವ ವಿಧಾನವನ್ನು ಪ್ರಾಚೀನರು ನಕ್ಷತ್ರದ ಆಧಾರದ ಮೇಲೆ ಅರಿತುಕೊಂಡಿದ್ದರು. ಕಳೆದ ವಸ್ತು ಸಿಗುತ್ತದೆ ಅಥವಾ ಇಲ್ಲ ಎನ್ನುವುದು ಕೇವಲ ದಿನದಲ್ಲಿ ಬದಲಾಗುವ ನಕ್ಷತ್ರಗಳೇ ಸೂಚಿಸುತ್ತಿದ್ದವು.
ನಕ್ಷತ್ರಗಳಿಗೆ ಅಂಧಸಂಜ್ಞೆಯನ್ನು ನೀಡಿ, ಆ ನಕ್ಷತ್ರದದಲ್ಲಿ ನಷ್ಟವಾದ ವಸ್ತುಗಳು ಪ್ರಾಪ್ತಾವಗುತ್ತವೋ ಇಲ್ಲವೋ, ಯಾವಾಗ ಆಗುತ್ತವೆ ಎನ್ನುವುದನ್ನು ಹೇಳಬಹದು.
ಅಂಧಾಕ್ಷ, ಮಂದಾಕ್ಷ, ಮಧ್ಯಾಕ್ಷ, ಸುಲೋಚನ ಎಂಬ ಹೆಸರುಗಳಿವೆ.
ಅಂಧಾಕ್ಷ : ಈ ನಕ್ಷತ್ರದಲ್ಲಿ ವಸ್ತುವು ನಷ್ಟವಾದರೆ, ಅದು ಬೇಗ ಸಿಗುತ್ತದೆ ಎಂದು ತಿಳಿಯಬೇಕು.
ಮಂದಾಕ್ಷ : ನಷ್ಟವಾದ ವಸ್ತುವುದು ಈ ನಕ್ಷತ್ರದಲ್ಲಿ ನಷ್ಟವಾದರೆ ಪ್ರಯತ್ನಿಸಿದರೆ ಸಿಗುತ್ತದೆ.
ಮಧ್ಯಾಕ್ಷ : ನಷ್ಟವಾದ ವಸ್ತುವು ಸಿಗದೇ ಇದ್ದರೂ ದೂರದಲ್ಲಿ ಎಲ್ಲೋ ಇರುವ ಸುಳಿವು ನಿಮಗೆ ಸಿಗಲಿದ.
ಸುಲೋಚನ : ಈ ನಕ್ಷತ್ರದಲ್ಲಿ ನಷ್ಟವಾದ ವಸ್ತುವೂ ಸಿಗದು ಮತ್ತು ಅದರ ಅಸ್ತಿತ್ವವನ್ನು ಅರಿಯಲಾಗದು.
ಹೀಗೆ ಈ ನಾಲ್ಕು ಅವಸ್ಥೆಗಳನ್ನು ನಕ್ಷತ್ರದ ಮೂಲಕ ತಿಳಿಯಬಹದು.
ಯಾವುವು ಈ ನಕ್ಷತ್ರಗಳು?
ಇದರ ಗಣನೆಯನ್ನು ರೋಹಿಣಿಯಿಂದ ಮಾಡಬೇಕು. ಪ್ರತಿ ನಾಲ್ಕು ನಕ್ಷತ್ರಗಳಿಗೆ ಗಣಗಳು ಬದಲಾಗುವುದು.
ಅಂಧಾಕ್ಷ : ರೋಹಿಣೀ, ಪುನರ್ವಸು, ಉತ್ತರಾಫಲ್ಗುಣೀ, ವಿಶಾಖಾ, ಪೂರ್ವಾಷಾಢಾ, ಧನಿಷ್ಠಾ, ರೇವತೀ
ಮಂದಾಕ್ಷ : ಮೃಗಶಿರಾ, ಆರ್ದ್ರಾ, ಹಸ್ತಾ, ಅನುರಾಧಾ, ಉತ್ತರಾಷಾಢಾ, ಶತಭಿಷಾ, ಅಶ್ವಿನೀ
ಮಧ್ಯಾಕ್ಷ : ಆರ್ದ್ರಾ, ಮಘಾ, ಚಿತ್ರಾ, ಜ್ಯೇಷ್ಠಾ, ಅಭಿಜಿತ್, ಪೂರ್ವಾಭಾದ್ರ, ಭರಣೀ
ಸುಲೋಚನ : ಪುನರ್ವಸು, ಪೂರ್ವಾಫಲ್ಗುಣೀ, ಸ್ವಾತೀ, ಮೂಲಾ, ಶ್ರವಣಾ, ಉತ್ತರಾಭಾದ್ರ, ಕೃತ್ತಿಕಾ
ಅಂದರೆ ರೋಹಿಣೀ, ಮೃಗಶಿರಾ, ಆರ್ದ್ರಾ, ಪುನರ್ವಸು ಈ ನಾಲ್ಕು ನಕ್ಷತ್ರಗಳಿಗೆ ಅಂಧಾಕ್ಷ, ಮಂದಾಕ್ಷ, ಮಧ್ಯಾಕ್ಷ, ಸುಲೋಚನ ಎಂದು ಹೆಸರು. ಇದೇ ಕ್ರಮದಲ್ಲಿ ಮುಂದಿನ ಎಲ್ಲ ನಕ್ಷತ್ರಗಳಿಗೂ ಯೋಜಿಸುತ್ತ ಹೇಳಬೇಕು.
ಇವುಗಳೇ ವಸ್ತುಗಳ ಅನ್ವೇಷಣೆಗೆ ಸಹಾಯ ಮಾಡುವವಾಗಿವೆ. ಇದರಲ್ಲಿ ಅಭಿಜಿತ್ ನಕ್ಷತ್ರವೂ ಇದೆ. ಇದು ಇಪ್ಪತ್ತೇಳು ನಕ್ಷತ್ರಗಳಲ್ಲಿ ಬರುವುದಲ್ಲ. ಅಭಿಜಿತ್ ಪ್ರತಿನಿತ್ಯ ಸೂರ್ಯೋದಯದಿಂದ ಎಂಟನೇ ಮುಹೂರ್ತಕ್ಕೆ ಅಂದರೆ ಸುಮಾರು ಮಧ್ಯಾಹ್ನದಲ್ಲಿ ಉದಿಸುವ ನಕ್ಷತ್ರ. ಶ್ರವಣಾ ಹಾಗೂ ಪೂರ್ವಾಭಾದ್ರಾದ ನಾಲ್ಕು ಅಂಶಗಳನ್ನು ಪಡೆದುಕೊಳ್ಳುವ ನಕ್ಷತ್ರದ ಈ ಸಮಯದಲ್ಲಿ ನಷ್ಟವಾದ ವಸ್ತುವಿಗೆ ಮೇಲೆ ಸೂಚಿಸಿದ ಫಲ.
ಹೀಗೆ ನಷ್ಟವಾದ ವಸ್ತು ಹಾಗೂ ವಸ್ತುಗಳನ್ನು ಈ ಕ್ರಮದಲ್ಲಿ ಹುಡುಕಿ, ನಮ್ಮದಾಗಿಸಿಕೊಳ್ಳುತ್ತಿದ್ದರು.
– ಲೋಹಿತ ಹೆಬ್ಬಾರ್ – 8762924271