Qದಿಂದ Z ತನಕ ಹೆಸರಿನ ಮೊದಲ ಅಕ್ಷರದಿಂದ ತಿಳಿದುಬರುವ ಗುಣ- ಸ್ವಭಾವಗಳೇನು?

ಇಲ್ಲಿಯ ತನಕ A ಅಕ್ಷರದಿಂದ P ತನಕ ಆಗಿತ್ತು. ಇಂದಿನ ಲೇಖನದಲ್ಲಿ Qದಿಂದ Z ತನಕ ಹೆಸರಿನ ಮೊದಲ ಅಕ್ಷರದಿಂದ ಗುಣ- ಸ್ವಭಾವ ತಿಳಿದುಕೊಳ್ಳುವ ಮಾಹಿತಿ ಇದೆ.

Qದಿಂದ Z ತನಕ ಹೆಸರಿನ ಮೊದಲ ಅಕ್ಷರದಿಂದ ತಿಳಿದುಬರುವ ಗುಣ- ಸ್ವಭಾವಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 15, 2021 | 6:44 AM

ಹೆಸರಿನ ಮೊದಲ ಅಕ್ಷರದಿಂದ ಗುಣ- ಸ್ವಭಾವ ತಿಳಿದುಕೊಳ್ಳುವ ಲೇಖನ ಸರಣಿಯ ಕೊನೆ ಕಂತು ಇದು. ಇಲ್ಲಿಯ ತನಕ A ಅಕ್ಷರದಿಂದ P ತನಕ ಆಗಿತ್ತು. ಇಂದಿನ ಲೇಖನದಲ್ಲಿ Qದಿಂದ Z ತನಕ ಇದೆ. ಇಲ್ಲಿಗೆ ಮೂರು ಕಂತಿನ ಈ ಸರಣಿಯು ಮುಕ್ತಾಯ ಆಗುತ್ತದೆ. ಅಂದ ಹಾಗೆ ನಿಮ್ಮ ಹೆಸರಿನ ಮೊದಲ ಅಕ್ಷರ ಯಾವುದು? ಅದರ ಪ್ರಕಾರವಾಗಿ ಈ ಲೇಖನ ಸರಣಿಯಲ್ಲಿ ಬಂದಿದ್ದು ತಾಳೆ ಆಗುತ್ತಿದೆಯಾ? ಒಂದು ವೇಳೆ ಆಗುತ್ತಿದ್ದಲ್ಲಿ ಅದು ಯಾವ ಪ್ರಮಾಣದಲ್ಲಿ ಎಂಬುದನ್ನು ಒಮ್ಮೆ ಆಲೋಚಿಸಿ.

Q Q ಅಕ್ಷರದಿಂದ ಹೆಸರು ಆರಂಭ ಆಗುವವರ ಸುತ್ತಲೂ ಸಕಾರಾತ್ಮಕವಾದ ಪ್ರಭಾವಳಿ ಇರುತ್ತದೆ. ಇವರು ಟ್ರೆಂಡ್‌ಗಳನ್ನು ಅನುಸರಿಸುವುದಿಲ್ಲ, ಬದಲಿಗೆ ಇತರರು ಇವರನ್ನು ಅನುಸರಿಸಲು ಬೆಂಚ್​ಮಾರ್ಕ್​ ಅನ್ನು ಸೃಷ್ಟಿಸುತ್ತಾರೆ. ನಿಷ್ಠಾವಂತ ಮತ್ತು ಪ್ರಾಮಾಣಿಕರಾದ ಇವರನ್ನು ಸಾಮಾನ್ಯವಾಗಿ ಉತ್ತಮ ಸ್ನೇಹಿತರು ಮತ್ತು ಸಲಹೆಗಾರರನ್ನಾಗಿ ಮಾಡುತ್ತದೆ. ಇವರು ತಮ್ಮ ಗುರಿಗಳನ್ನು ತಲುಪಲು ಬಹಳ ಶ್ರಮಿಸುತ್ತಾರೆ ಮತ್ತು ಯಾವುದೇ ವಿಷಯವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ! ಆದರೆ ಕೆಲವೊಮ್ಮೆ ತಮಗೆ ತಾವೇ ಸಮಸ್ಯೆ ಮಾಡಿಕೊಳ್ಳುತ್ತಾರೆ.

R ಹೆಸರು Rನೊಂದಿಗೆ ಪ್ರಾರಂಭವಾದರೆ ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಅಂತಃಪ್ರಜ್ಞೆಯಿಂದ ತುಂಬಿರುತ್ತಾರೆ. ಜನ್ಮತಃ ಇತರರನ್ನು ಸಂತೈಸುವ ಸ್ವಭಾವ ಹೊಂದಿರುತ್ತಾರೆ. ಪ್ರೀತಿಪಾತ್ರರಿಗೆ ಸಹಾಯ ಮಾಡಲು ಏನು ಬೇಕಾದರೂ ಮಾಡುತ್ತಾರೆ. ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಳ್ಳುವಂಥ ವ್ಯಕ್ತಿತ್ವ ಮತ್ತು ಶಾಂತಿ ಪ್ರಿಯ ಸ್ವಭಾವವು ಉತ್ತಮ ಮಿತ್ರರನ್ನಾಗಿ ಮಾಡುತ್ತದೆ. ಈ ಅಕ್ಷರದಿಂದ ಹೆಸರು ಆರಂಭವಾಗುವವರು ಉತ್ತಮರು. ಆದರೆ ಬಹಳ ಬೇಗ ಸಿಟ್ಟಿಗೇಳುತ್ತಾರೆ.

S ಈ ಅಕ್ಷರದಿಂದ ಹೆಸರು ಶುರುವಾಗುವವರು ನಿಷ್ಠಾವಂತರು. ಆದರೆ ವಿಶೇಷವಾಗಿ ರೋಮ್ಯಾಂಟಿಕ್ ಸ್ವಭಾವದವರಲ್ಲ. ಉತ್ತಮ ನಾಯಕತ್ವ ಕೌಶಲ ಇರುವ ಇವರನ್ನು ಚರಿಷ್ಮಾ ಮತ್ತು ಪ್ರಭಾವ ಸೇರಿ ಎಲ್ಲೇ ಹೋದರೂ ಆಕರ್ಷಣೆಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ. ಇವರು ಯಾವಾಗಲೂ ತಮಗಾಗಿ ಉನ್ನತ ಮಾನದಂಡಗಳನ್ನು ನಿಗದಿಪಡಿಸುತ್ತಾರೆ. ಇನ್ನು ಶ್ರೀಮಂತರಾಗಿರುವುದು ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಎಂದು ಬಲವಾಗಿ ನಂಬಿರುತ್ತಾರೆ. ಈ ಹೆಸರಿನವರಿಗೆ ಇತರರ ಬಗ್ಗೆ ಪ್ರಾಮಾಣಿಕವಾದ ಸಹಾನುಭೂತಿ ಇರುತ್ತದೆ.

T ಈ ಅಕ್ಷರದಿಂದ ಹೆಸರು ಶುರುವಾಗುವವರಿಗೆ ಅತ್ಯುತ್ತಮ ರಾಜತಾಂತ್ರಿಕ ಸಾಮರ್ಥ್ಯ ಇರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಇವರು ಶಾಂತಿ ಒಪ್ಪಂದಗಳು ಆಗುವಂತೆ ಮಾಡಬಲ್ಲರು. ಇವರು ಅದೃಷ್ಟಕ್ಕಿಂತ ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇವರ ಮುಗ್ಧ ಮತ್ತು ಇತರರಿಗೆ ಸಹಾಯ ಮಾಡುವ ಸ್ವಭಾವವು ಎಲ್ಲಿಗೆ ಹೋದರೂ ಇವರನ್ನು ಜನಪ್ರಿಯಗೊಳಿಸುತ್ತದೆ. ಯಾವುದೇ ವಿಷಯ, ವಿಚಾರಗಳು ಕ್ರಮಬದ್ಧವಾಗಿ ಮಾಡದಿದ್ದರೆ/ಇರಿಸದಿದ್ದರೆ T ಅಕ್ಷರ ಹೆಸರಿನವರು ಅಸಮಾಧಾನಗೊಳ್ಳುತ್ತಾರೆ.

U ಈ ಅಕ್ಷರದಿಂದ ಹೆಸರು ಆರಂಭ ಆಗುವಂಥವರು ಜೀವನದಿಂದ ಉತ್ತಮವಾದದ್ದನ್ನು ಬಯಸುತ್ತಾರೆ. ಮತ್ತು ಆರಾಮದಾಯಕ ಮತ್ತು ಐಷಾರಾಮಿ ಜೀವನಶೈಲಿಗಾಗಿ ನಿಜವಾಗಿಯೂ ಶ್ರಮಿಸುತ್ತಾರೆ. ಬಲವಾದ ಸುಪ್ತಪ್ರಜ್ಞೆ ಜಾಗೃತವಾಗಿ ಇರುವ ಜತೆಗೆ ಅತೀಂದ್ರಿಯ ಶಕ್ತಿಗಳನ್ನು ಜೀವನದ ಒಂದು ಹಂತದಲ್ಲಿ ಪಡೆಯುವ ಅವಕಾಶ ಇರುತ್ತದೆ. ಆದರೆ ಇವರು ಯಾವುದನ್ನೂ ಒಪ್ಪ- ಓರಣವಾಗಿ ಮಾಡಿ, ರೂಢಿ ಇಲ್ಲದಂಥವರು. ಯಾವಾಗಲೂ ಹೊಸ ಆಲೋಚನೆಗಳ ಬಗ್ಗೆಯೇ ಕೆಲಸ ಮಾಡುತ್ತಿರುತ್ತಾರೆ. ಏಣಿಯ ಏರುವ ಧಾವಂತದಲ್ಲಿ ಕೆಲವೊಮ್ಮೆ ತಮ್ಮ ಪ್ರೀತಿಪಾತ್ರರನ್ನೂ ನಿರ್ಲಕ್ಷಿಸುತ್ತಾರೆ.

V ಈ ಅಕ್ಷರದಿಂದ ಹೆಸರು ಆರಂಭ ಆಗುವವರು ನಿಷ್ಠಾವಂತರು ಮತ್ತು ಎಲ್ಲರನ್ನೂ ಪ್ರೀತಿಯಿಂದ ನೋಡುವವರು. ಇವರ ನೆನಪು ಅಗಾಧವಾದದ್ದು. ಎಲ್ಲವನ್ನೂ ದೀರ್ಘಕಾಲ ನೆನಪಿಟ್ಟುಕೊಳ್ಳುವಂಥವರು. ಸಂಬಂಧಗಳ ವಿಚಾರ ಬಂದಾಗ ತುಂಬ ಪೊಸೆಸಿವ್ ಮತ್ತು ಬಹಳ ಸೀಮಿತ ವಲಯದಲ್ಲಿ ಆಲೋಚಿಸುವಂಥವರು. ಯಾವುದಾದರೂ ಕೆಲಸ ಆಗಬೇಕು ಅಂದುಕೊಂಡಾಗ ಅದಕ್ಕಾಗಿ ಬಹಳ ಶ್ರಮ ಹಾಕುತ್ತಾರೆ. ಆಗಾಗ ಮೋಜು, ಗಾಸಿಪ್‌ಗಳಲ್ಲಿ ತೊಡಗಿಕೊಳ್ಳುತ್ತಾರೆ. ಇವರು ತಮ್ಮ ಕೆಲಸಕ್ಕೆ ಬದ್ಧರಾಗಿರುತ್ತಾರೆ.

W W ಅಕ್ಷರದಿಂದ ಹೆಸರು ಆರಂಭ ಆಗುವಂಥವರು ದಿಢೀರ್ ನಿರ್ಧಾರಗಳನ್ನು ಕೈಗೊಳ್ಳುವಂಥವರು. ಯಾವುದಾದರೂ ಒಲ್ಲದ ಸಂಬಂಧಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂಬ ಆತಂಕ ಸದಾ ಕಾಡುತ್ತಿರುತ್ತದೆ. ಯಾವುದೇ ವಿಚಾರ, ಸ್ಥಳ, ವ್ಯಕ್ತಿಗಳಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಒಂದೇ ಬಗೆಯ ದೈನಂದಿನ ಚಟುವಟಿಕೆಗಳನ್ನು ಇಷ್ಟಪಡದ ಜನರು ಇವರು. ಡೆಡ್​ಲೈನ್​ನಲ್ಲಿ ಕೆಲಸ ಮಾಡುವುದು ಇವರಿಗೆ ಬಹಳ ಬೇಸರದ ಸಂಗತಿಯಾಗಿರುತ್ತದೆ.

X X ಅಕ್ಷರದೊಂದಿಗೆ ಹೆಸರು ಪ್ರಾರಂಭವಾಗುವ ಜನರು ಯಾವುದೋ ಬದ್ಧತೆಯಿಂದ ಕಟ್ಟಿಬೀಳಲು ಇಷ್ಟಪಡುವುದಿಲ್ಲ. ಇವರು ಕೆಲವೊಮ್ಮೆ ದುರಾಸೆಗೆ ಒಳಗಾಗುತ್ತಾರೆ ಮತ್ತು ಜೀವನದಲ್ಲಿ ಶಿಸ್ತು ಇರುವುದಿಲ್ಲ. ಆದರೂ ಇವರು ಉತ್ತಮ ಶಿಕ್ಷಕರು ಮತ್ತು ತರಬೇತುದಾರರಾಗ ಬಲ್ಲರು.

Y ಆರಂಭಿಕ ಅಕ್ಷರ Y ಹೊಂದಿರುವ ಜನರು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಈ ಜನರ ಪೈಕಿ ಅನೇಕರು ತಮಗಿಂತ ಸಿರಿವಂತರನ್ನು ಮದುವೆಯಾಗುತ್ತಾರೆ. ಇವರಿಗೆ ತಮ್ಮದೇ ಪರ್ಸನಲ್ ಸ್ಪೇಸ್ ಇರಬೇಕು. ಆದನ್ನು ಇವರು ಬಹಳವಾಗಿ ಇಷ್ಟಪಡುತ್ತಾರೆ. ಮತ್ತು ಆಗಾಗ ಇವರಿಗೆ ಇತರರೊಂದಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.

Z ಈ ಅಕ್ಷರದಿಂದ ಹೆಸರು ಆರಂಭವಾಗುವವರು ಉತ್ತಮ ತ್ರಾಣ ಮತ್ತು ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಗುರಿ-ಆಧಾರಿತ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ, ಅತ್ಯುತ್ತಮ ವ್ಯವಸ್ಥಾಪಕರು ಮತ್ತು ಮೇಲಧಿಕಾರಿಗಳಾಗಬಲ್ಲವರು ಇವರು. ಸ್ವಭಾವತಃ ಆಶಾವಾದಿಗಳು. ರಾಜತಾಂತ್ರಿಕ ನಿಪುಣರು. ಇತರರಿಂದ ಹೇಗೆ ತಮ್ಮ ಕೆಲಸವನ್ನು ಮಾಡಿಸಬೇಕೆಂದು ಇವರಿಗೆ ತಿಳಿದಿರುತ್ತದೆ.

(ಮುಗಿಯಿತು)

ಇದನ್ನೂ ಓದಿ: ಹೆಸರಿನ ಮೊದಲ ಇಂಗ್ಲಿಷ್ ಅಕ್ಷರದ ಪ್ರಕಾರ ನಿಮ್ಮ ವ್ಯಕ್ತಿತ್ವ ಹೇಳಬಹುದು ಗೊತ್ತೆ?

ಇದನ್ನೂ ಓದಿ: ಹೆಸರಿನ ಮೊದಲ ಅಕ್ಷರ I ದಿಂದ P ತನಕ ನಿಮ್ಮ ಸ್ವಭಾವವನ್ನು ತಿಳಿಸಿಕೊಡುವುದು ಏನು ಗೊತ್ತಾ?

(Nature of the person explained on the basis of his or her name first letter. Here Q to Z letter people character explained)

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?