
ಕುಂಭ ರಾಶಿಯು ರಾಹುವಿಗೆ ಅತ್ಯಂತ ಬಲವಾದ ಹಾಗೂ ಸ್ವಕ್ಷೇತ್ರಕ್ಕೆ ಸಮಾನವಾದ ರಾಶಿಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಇದರೊಂದಿಗೆ ರಾಹುವು ಶನಿಯ ದ್ರೇಕ್ಕಾಣ ಮತ್ತು ತ್ರಿಂಶಾಂಶ, ರವಿಯ ಹೋರೆ, ಗುರುವಿನ ನವಾಂಶ ಹಾಗೂ ಶುಕ್ರನ ದ್ವಾದಶಾಂಶದಲ್ಲಿದ್ದು ಮಿಶ್ರ ಫಲವನ್ನು ನೀಡುತ್ತಾನೆ.
ದ್ವಾದಶ ರಾಶಿಗಳ ಫಲವನ್ನು ತಿಳಿಯುವ ಮುನ್ನ ರಾಹುವಿನ ಈ ಷಡ್ವರ್ಗ ಸ್ಥಿತಿಯ ಆಂತರಿಕ ಬಲವನ್ನು ಅರ್ಥಮಾಡಿಕೊಳ್ಳಬೇಕು.
ರಾಹು ಶನಿಯ ಮನೆಯಲ್ಲಿದ್ದು, ಶನಿಯದೇ ದ್ರೇಕ್ಕಾಣ ಹಾಗೂ ತ್ರಿಂಶಾಂಶದಲ್ಲಿ ಇರುವುದರಿಂದ ಅತ್ಯಂತ ತೀಕ್ಷ್ಣವಾದ, ಗಂಭೀರವಾದ ಹಾಗೂ ಕರ್ಮಫಲಕ್ಕೆ ತಕ್ಕಂತೆ ಫಲ ನೀಡುವ ಶಕ್ತಿಯನ್ನು ಪಡೆಯುತ್ತಾನೆ. ಇದು ತಾಂತ್ರಿಕ ಜ್ಞಾನ, ಸಂಶೋಧನೆ ಮತ್ತು ಆಳವಾದ ಚಿಂತನೆಗೆ ಉತ್ತಮ.
ರಾಹು ಸೂರ್ಯನ ಹೋರೆಯಲ್ಲಿದ್ದಾಗ ಭೌತಿಕ ಸುಖ, ಅಧಿಕಾರ ಲಾಲಸೆ ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳುವ ಹಠವನ್ನು ಹೆಚ್ಚಿಸುತ್ತಾನೆ. ನವಾಂಶದಲ್ಲಿ ಗುರುವಿನ ಬಲವಿರುವುದರಿಂದ ರಾಹುವಿನ ತಾಮಸಿಕ ಗುಣಗಳು ಕಡಿಮೆಯಾಗಿ, ಧಾರ್ಮಿಕ ಪ್ರವೃತ್ತಿ, ನ್ಯಾಯಯುತ ಆಲೋಚನೆ ಮತ್ತು ಉನ್ನತ ಜ್ಞಾನ ಲಭಿಸುತ್ತದೆ. ಶುಕ್ರನ ಸಂಬಂಧದಿಂದಾಗಿ ಕಲಾತ್ಮಕತೆ, ಲೌಕಿಕವಾದ ಸುಖ-ಭೋಗಗಳ ಮೇಲಿನ ಆಕರ್ಷಣೆ ಹೆಚ್ಚುತ್ತದೆ.
ರಾಹು ದಶೆಯು ಒಟ್ಟು ೧೮ ವರ್ಷಗಳ ಕಾಲ ಇರುತ್ತದೆ. ಪ್ರಸ್ತುತ ರಾಹುವು ಶುಭ ಗ್ರಹಗಳಾದ ಗುರು ಮತ್ತು ಶುಕ್ರ ಹಾಗೂ ಕ್ರೂರ ಗ್ರಹಗಳಾದ ಶನಿ ಮತ್ತು ಸೂರ್ಯನ ಮಿಶ್ರ ಬಲವನ್ನು ಹೊಂದಿರುವುದರಿಂದ, ರಾಹು ದಶೆಯ ಫಲಗಳು ಅತ್ಯಂತ ರೋಚಕವಾಗಿರಲಿದೆ.
ಈ ರಾಶಿಗಳಿಗೆ ರಾಹು ದಶೆಯು ಅದೃಷ್ಟವನ್ನು ತರುತ್ತದೆ. ಆಕಸ್ಮಿಕ ಧನಲಾಭ, ಉನ್ನತ ಪದವಿ, ಸಮಾಜದಲ್ಲಿ ಗೌರವ ಹಾಗೂ ವಿದೇಶ ಪ್ರಯಾಣದ ಯೋಗಗಳು ಈ ದಶೆಯಲ್ಲಿ ಸಿದ್ಧಿಸಲಿವೆ. ಗುರುವಿನ ನವಾಂಶ ಬಲವು ಇವರನ್ನು ತಪ್ಪು ಹಾದಿಗೆ ಹೋಗದಂತೆ ತಡೆಯುತ್ತದೆ.
ವೃಷಭ, ಕನ್ಯಾ, ಮಕರ ವೃತ್ತಿ ಮತ್ತು ಆರ್ಥಿಕ ಯಶಸ್ಸು: ಶನಿಯ ವರ್ಗಗಳ ಪ್ರಭಾವದಿಂದಾಗಿ ಈ ರಾಶಿಗಳವರಿಗೆ ಕಠಿಣ ಪರಿಶ್ರಮದ ಅನಂತರ ಅಪಾರ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿ ವಿಸ್ತರಣೆ, ರಾಜಕೀಯ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಉನ್ನತಿ ಲಭಿಸಲಿದೆ. ಆದರೆ ಮಾನಸಿಕ ಒತ್ತಡ ಸಾಮಾನ್ಯ.
ಇದನ್ನೂ ಓದಿ: ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ
ಶುಕ್ರನ ದ್ವಾದಶಾಂಶ ಇರುವುದರಿಂದ ಈ ರಾಶಿಗಳಿಗೆ ಭೌತಿಕ ಸುಖ, ಪ್ರೇಮ ಸಂಬಂಧ ಹಾಗೂ ಕಲಾತ್ಮಕ ಯಶಸ್ಸು ಸಿಗುತ್ತದೆ. ಆದರೆ ಸೂರ್ಯ ಮತ್ತು ಶನಿಯ ವೈರತ್ವದ ಪ್ರಭಾವದಿಂದಾಗಿ ದಾಂಪತ್ಯದಲ್ಲಿ ಅಥವಾ ಪಾಲುದಾರಿಕೆಯಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.
ಈ ರಾಶಿಗಳಿಗೆ ರಾಹು ದಶೆಯು ಆರಂಭದಲ್ಲಿ ಸ್ವಲ್ಪ ಸಂಘರ್ಷಮಯವಾಗಿರಬಹುದು. ಆದರೆ ಗುರುವಿನ ನವಾಂಶದ ಬಲ ಇರುವುದರಿಂದ, ಇವರು ಜ್ಯೋತಿಷ್ಯ, ಮಂತ್ರ-ತಂತ್ರ, ಸಂಶೋಧನೆ ಅಥವಾ ಆಧ್ಯಾತ್ಮಿಕ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಲಿದ್ದಾರೆ. ಆರೋಗ್ಯ ಮತ್ತು ವೆಚ್ಚಗಳ ಮೇಲೆ ನಿಯಂತ್ರಣ ಅಗತ್ಯ.
ಈ ಸ್ಥಿತಿಯಯಲ್ಲಿ ರಾಹುವು ಭೌತಿಕವಾಗಿ ಯಶಸ್ಸನ್ನು ನೀಡಿದರೂ, ಆಂತರಿಕವಾಗಿ ಶನಿ ಮತ್ತು ರವಿಯ ಪ್ರಭಾವದಿಂದಾಗಿ ಸಂಘರ್ಷವನ್ನು ತಂದೊಡ್ಡಬಹುದು. ಆದರೆ ಗುರುವಿನ ನವಾಂಶ ಬಲವು ಇಡೀ ಜಾತಕಕ್ಕೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುವುದರಿಂದ, ರಾಹು ದಶೆಯಲ್ಲಿ ಅಂತಿಮವಾಗಿ ಶುಭ ಫಲಗಳೇ ಹೆಚ್ಚಾಗುತ್ತವೆ.
ರಾಹು ದಶೆಯ ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ದೇವಗುರು ಬೃಹಸ್ಪತಿಯ ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಹಾಗೂ ಶನಿವಾರದಂದು ದೀಪಾರಾಧನೆ ಮಾಡುವುದು ಶ್ರೇಯಸ್ಕರ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Mon, 25 May 26