Nitya Bhavishya: ಈ ರಾಶಿಯವರ ಬಹುಕಾಲ ವಿವಾದವೊಂದು ಬಗೆಹರಿಯುವುದು, ಆರ್ಥಿಕ ಪರಿಸ್ಥಿತಿ ಉತ್ತಮ
ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 28, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಜನವರಿ 29) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶೋಭನ, ಕರಣ: ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:46ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:37ರ ವರೆಗೆ.
ಮೇಷ ರಾಶಿ: ಇಂದು ನಿಮ್ಮ ಬಹುಕಾಲದಿಂದ ಬಾಕಿ ಉಳಿದಿದ್ದ ವಿವಾದ ಬಗೆಹರಿಯಲಿದೆ. ನಿಮ್ಮ ಹರ್ಷಚಿತ್ತದ ವ್ಯಕ್ತಿತ್ವದಿಂದಾಗಿ ಇತರ ಜನರು ನಿಮ್ಮೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಸಾಮಾಜಿಕ ಗೌರವದಿಂದ ನಿಮ್ಮ ನೈತಿಕವಾದ ಸ್ಥೈರ್ಯ ಹೆಚ್ಚುತ್ತದೆ. ನಿಮ್ಮ ಮನೆಗೆ ಇಂದು ಅತಿಥಿಗಳ ಅನಿರೀಕ್ಷಿತ ಆಗಮನವಾಗಬಹುದು. ವ್ಯಾಪಾರಸ್ಥರು ಯಾವುದಾರೂ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಹುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ವಿತಚರ್ವಣ ಮಾಡುವಿರಿ. ಗೊತ್ತಿಲ್ಲದ ಕೆಲಸವನ್ನು ಒಪ್ಪಿಕೊಂಡು ಸಂಕಷ್ಟದಲ್ಲಿ ಸಿಕ್ಕಿಕೊಳ್ಳುವಿರಿ. ಆಪ್ತರನ್ನು ನೀವು ದೂರ ಮಾಡಿಕೊಳ್ಳುವುದು ಕಷ್ಟವಾಗಬಹುದು.
ವೃಷಭ ರಾಶಿ: ಇಂದು ನಿಮ್ಮ ಬುದ್ಧಿವಂತಿಕೆಯ ಕಾರಣಕ್ಕೆ ನಿಮ್ಮ ಗೌರವವು ಹೆಚ್ಚಾಗುತ್ತದೆ. ನೀವು ಸೀಮಿತವಾಗಿ, ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಖರ್ಚು ಮಾಡಬೇಕು. ನೀವು ಕುಟುಂಬ ಸದಸ್ಯರಿಂದ ಒತ್ತಡವನ್ನು ಎದುರಿಸಬಹುದು. ಹಣದ ಬಗ್ಗೆ ವಾದಗಳು ಇರಬಹುದು. ನೀವು ಲೌಕಿಕ ಭೋಗಗಳಿಂದ ಮತ್ತು ಸೇವಕರಿಂದ ಎಲ್ಲ ರೀತಿಯ ಸಂತೋಷ ಮತ್ತು ಲಾಭವನ್ನು ಪಡೆಯುತ್ತೀರಿ. ಬೇಡವೆಂಬ ವಿಷಯಕ್ಕೆ ಮನಸ್ಸು ಮತ್ತೆ ಮತ್ತೆ ಹೋಗುವುದು. ಅನೇಕ ವಿಚಾರಗಳ ಬಗ್ಗೆ ಒಟ್ಟಿಗೇ ಚಿಂತಿಸುವುದು ಕಷ್ಟವಾದೀತು. ಬಂಧುಗಳ ಆಗಮನದಿಂದ ಹೆಚ್ಚು ಸಂತೋಷವು ಇರುವುದು. ಉತ್ತಮ ವಿದ್ಯೆಯ ಕಾರಣ ಉತ್ತಮ ಆದಾಯದ ಕೆಲಸವೂ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ನಿಮ್ಮ ಕೆಲಸವು ಕೇವಲ ಸುತ್ತಾಟದಲ್ಲಿಯೇ ಮುಕ್ತಾಯವಾಗುವುದು. ಅಪ್ರಯೋಜಕ ವಿಚಾರದ ಬಗ್ಗೆ ಚಿಂತೆ ಮಾಡುವಿರಿ.
ಮಿಥುನ ರಾಶಿ: ಇಂದು ಬೇಡವೆಂದರೂ ಮಾಡಬೇಕಾಗುವ ಅನಗತ್ಯ ಖರ್ಚುಗಳು ಮುನ್ನೆಲೆಗೆ ಬರುತ್ತವೆ. ನಿಮ್ಮ ಸಂಬಂಧಿಕರಿಂದ ನೀವು ಗೌರವವನ್ನು ಪಡೆಯುತ್ತೀರಿ. ನೀವು ಇಂದಿನ ವ್ಯಾಪಾರದಲ್ಲಿ ಲಾಭವನ್ನೂ ಪಡೆಯುತ್ತೀರಿ. ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಗೌರವ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ಪ್ರಯೋಜನಗಳಿವೆ. ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭಿಸುವ ನಿರ್ಧಾರಕ್ಕೆ ಬರಬಹುದು. ನಿಮ್ಮ ಬೆಳವಣಿಗೆಯು ನಿಮಗೆ ಸಮಾಧಾನ ತರದೇ ಇದ್ದೀತು. ಹಳೆಯ ವಿಚಾರವನ್ನು ಇಂದು ವಿರೋಧಿಗಳು ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ಮಾತನಾಡುವುದು ಬೇಡ.
ಕಟಕ ರಾಶಿ: ಇಂದು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಪರೋಪಕಾರದ ಬಗ್ಗೆ ಆಸಕ್ತಿಯು ಮೂಡಬಹುದು. ಧಾರ್ಮಿಕ ವಿಧಿವಿಧಾನಗಳಲ್ಲಿ ಆಸಕ್ತಿ ವಹಿಸಿ ಸಂಪೂರ್ಣ ಸಹಕಾರ ನೀಡುವಿರಿ. ಅದೃಷ್ಟದಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಜಾಗರೂಕರಾಗಿರಿ. ನಿಮ್ಮ ಆಹಾರದ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ವ್ಯಾಯಾಮವನ್ನು ಮಾಡಿ. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಮಾನಸಿಕ ನೋವನ್ನು ಸೂಕ್ತ ವ್ಯಕ್ತಿಯ ಬಳಿ ಪ್ರಕಟಪಡಿಸಿ.