Horoscope 29 Dec: ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2023 | 12:02 AM

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.

Horoscope 29 Dec: ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2023 ಡಿಸೆಂಬರ್​​​​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ವೈಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:10 ರಿಂದ 12:35 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:23 ರಿಂದ 04:47ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 08:22 ರಿಂದ 09:46ರ ವರೆಗೆ.

ಮೇಷ ರಾಶಿ: ಇಂದು ನಿಮ್ಮೊಳಗಿನ‌ ಆತ್ಮವಿಶ್ವಾಸವೇ ಆಗಬೇಕಾದ ಕಾರ್ಯಗಳನ್ನು ಮಾಡಿಸಿಕೊಳ್ಳುವುದು. ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿ ಉತ್ಸಾಹಿಗಳು ಎದ್ದು ಕಾಣಲಿವೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಹಿರಿಯರ ಭೇಟಿಯಿಂದ ಜೀವನಕ್ಕೆ ಹಲವು ಪ್ರಯೋಜನಗಳು ಆಗಲಿವೆ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಸಣ್ಣ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ.‌ ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಅಪರಿಚಿತರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲವು ಬರಬಹುದು.

ವೃಷಭ ರಾಶಿ: ನಿಮ್ಮ ಜವಾಬ್ದಾರಿಯ ಬಗ್ಗೆ ತಾತ್ಸಾರಭಾವವು ಬರಬಹುದು. ಕೆಲವನ್ನು ನೀವು ದೂರ ಇಟ್ಟುಕೊಳ್ಳುವುದೇ ಉತ್ತಮ. ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ. ಅಹಿತಕರ ಆಹಾರದಿಂದ ಆರೋಗ್ಯವು ಕೆಡಬಹುದು. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ.‌ ಇಬ್ಬಗೆಯ ಮಾನಸಿಕತೆಯು ಬೇಡ. ಭವಿಷ್ಯದ ಬಗ್ಗೆ ಚಿಂತನೆಯನ್ನು ನಡೆಸುವಿರಿ.

ಮಿಥುನ ರಾಶಿ: ನಿಮ್ಮ ವೈಯಕ್ತಿಕ ವಿಚಾರಗಳನ್ನು ಅಗತ್ಯವಿರುವವರಿಗೆ ತಿಳಿಸಿ.‌ ನಿಮ್ಮ ಕಾರ್ಯನಿರ್ವಹಣೆಯಿಂದ ಉತ್ತಮ ಫಲಿತಾಂಶವು ಸಿಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಸಿಗುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಮಾತಗಳಲ್ಲಿ ವಕ್ರತೆಯನ್ನು ಕಡಿಮೆ ಮಾಡಿ. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದುಕೊಳ್ಳುವಿರಿ.

ಕಟಕ ರಾಶಿ: ವಿವಾದವಿಲ್ಲದೇ ಇರಲಾರದಷ್ಟು ನಿಮ್ಮ ಮಾನಸಿಕ ಸ್ಥಿತಿ ಬದಲಾಗಿದೆ. ನಿಮ್ಮ ಸಕಾರಾತ್ಮಕ ಆಲೋಚನೆಗಳೂ ನಿಮಗೆ ಸಹಕಾರವನ್ನು ಕೊಡದು. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ‌ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೇ ವಹಿಸಿಕೊಂಡು ಯಾವುದನ್ನೂ ಮಾಡಲಾರಿರಿ.

ಸಿಂಹ ರಾಶಿ: ಆದಾಯದಲ್ಲಿ ಇತರರಿಗೆ ಸಮಾನವಾಗಿದ್ದರೂ ಖರ್ಚು ಹಾಗಿರುವುದಿಲ್ಲ. ಏನಾದರೊಂದು ಹುಟ್ಟಿಕೊಳ್ಳುತ್ತದೆ. ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು. ಬಂಧುವರ್ಗವು ನಿಮ್ಮನ್ನು ನಿರ್ಲಕ್ಷ್ಯ ಮಾಡೀತು. ಉನ್ನತ ವಿದ್ಯಾಭ್ಯಾಸದ ಕನಸು‌‌ ಬಂಧುಗಳ ಸಹಕಾರದಿಂದ ಆಗಲಿದೆ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಅವಸರವಸರವಾಗಿ ಇಂದಿನ ಕಾರ್ಯಗಳನ್ನು ಮಾಡುವಿರಿ. ಆದರೂ ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಲು ಆಗದು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡು ಕೈಸುಟ್ಟುಕೊಳ್ಳುವುದು ಬೇಡ.

ಕನ್ಯಾ ರಾಶಿ: ಸಮಾಜಿಕವಾಗಿ ಹೆಚ್ಚು ಸಮಯವನ್ನು ಕೊಡುವಿರಿ. ಅನಾರೋಗ್ಯದ ಚಿಂತೆಯು ನಿಮ್ಮನ್ನು ಕಾಡಬಹುದು. ನಿಮ್ಮ ವ್ಯಕ್ತಿತ್ವವು ಸಕಾರಾತ್ಮಕವಾಗಿ ಬೆಳೆಯುತ್ತಿರುವುದು ನಿಮಗೂ ಇತರರಿಗೂ ಸಂತೋಷದ ಸಂಗತಿಯಾಗಿದೆ. ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ. ಸಾಮಾಜಿಕ‌ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು.‌ ನೌಕರರ ಅಪೇಕ್ಷೆಯನ್ನು ಪೂರೈಸುವುದು ನಿಮಗೆ ಅನಿವಾರ್ಯವಾದೀತು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಸಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು.

ತುಲಾ ರಾಶಿ: ಇಂದು ನಿಮ್ಮ ಭವಿಷ್ಯದ ಗುರಿಯನ್ನು ನಿರ್ಧಾರ ಮಾಡಿಕೊಳ್ಳುವುದು ಉತ್ತಮ. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ಪ್ರಾಯೋಗಿಕ ವಿಭಾಗದಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ.
ಹತ್ತಿರದ ಬಂಧುಗಳ ಒಡನಾಟವು ಹೆಚ್ಚಿರಲಿದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಕೆಟ್ಟವರ ಸಹವಾಸದಿಂದ ಅಪಕೀರ್ತಿ ಬರಬಹುದು. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡುವಿರಿ. ಅವಕಾಶಗಳನ್ನು ಕಳೆದುಕೊಂಡು ಮನಸ್ಸಿನಲ್ಲಿಯೇ ದುಃಖಿಸುವಿರಿ. ಕೋಪವನ್ನು ತಾನಾಗಿಯೇ ಕಡಿಮೆ ಆಗಿದ್ದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ‌ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದು ಬೇಡ.

ವೃಶ್ಚಿಕ ರಾಶಿ: ನಿಮ್ಮ ಆರ್ಥಿಕ ಯೋಜನೆಗಳು ದಾರಿ ತಪ್ಪಿ ಹೋಗಬಹುದು. ಕುಟುಂಬದ ಜೊತೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮನಸ್ಸಾಗುವುದು.‌ ಕಾರ್ಯಗಳಿಂದ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಇಂದಿನ ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು‌ ಮಾನಸಿಕ ಹಿಂಸೆಯಾದೀತು. ಮನೆಯಲ್ಲಿ ಜಗಳವಾಡಿ ನೀವು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಸ್ಥಳದಲ್ಲಿ ಉದ್ಯೋಗವು ಸಿಗದು. ಮಕ್ಕಳ ತಪ್ಪನ್ನು ನೀವು ಸಮರ್ಥಿಸಿಕೊಳ್ಳಬೇಕಾದೀತು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಇಂದು ಸಾಧ್ಯವಾಗದು.

ಧನು ರಾಶಿ: ನಿಮ್ಮವರು ನಿಮ್ಮ ಗೌರವ ಮತ್ತು ವ್ಯಕ್ತಿತ್ವವನ್ನು ಕಂಡು ಹುಬ್ಬೇರಿಸಿಯಾರು. ಉದ್ಯೋಗಕ್ಕೆ ಸೇರಲು ಬಹಳ ಶ್ರಮಪಡಬೇಕಾದೀತು. ವಿದ್ಯಾಭ್ಯಾಸಕ್ಕೆ ಅತಿಯಾದ ಹಣಕಾಸಿನ ಖರ್ಚು ಬರಲಿದ್ದು, ನಿಮಗೆ ಕಷ್ಟವಾಗುವುದು. ನಿರೀಕ್ಷಿತ ಸಂದರ್ಭವು ಇಂದು ಬರಲಿದ್ದು ಅದನ್ನು ಬಳಸಿಕೊಳ್ಳುವಿರಿ. ಅಸೂಯೆಯಿಂದಾಗಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು. ಜಾಣ್ಮಯಿಂದ ನಿಮ್ಮ ಕಾರ್ಯವನ್ನು ಸಾಧಿಸಿ. ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ಇಂದು ನೀವಾಡವ ಮಾತು ತೂಕದ್ದಾಗಿರಲಿದೆ. ನಿಮ್ಮ ಕೆಲಸಗಳನ್ನು ಮೇಲಧಿಕಾರಿಗಳು ಪರಿಶೀಲಿಸುವರು.

ಮಕರ ರಾಶಿ: ಇಂದು ನಿಮಗೆ ರಾಜಕೀಯ ವ್ಯಕ್ತಿಗಳ ಭೇಟಿಯಾಗುವುದು. ನಿಮ್ಮ ಸಾರ್ವಜನಿಕ ಸಂಪರ್ಕದ ವ್ಯಾಪ್ತಿಯೂ ವಿಶಾಲವಾಗುವುದು. ಮಾರುಕಟ್ಟೆಗೆ ಸಂಬಂಧಿತ ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಕೆಲವು ಕಠಿಣ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಪ್ರಯೋಜನವಾದೀತು. ಉನ್ನತ ಅಧಿಕಾರಿಗಳೂ  ಬೆಂಬಲಿಸುತ್ತಾರೆ. ಅಪರಿಚಿತರ ಸಹಾಯದಿಂದ ಪೂರ್ಣ ನಂಬಿಕೆ ಬರದು. ಹೊಸಬರನ್ನು ಸಾಮಾಜಿಕ ತಾಣದಲ್ಲಿ ಪರಿಚಯ ಮಾಡಿಕೊಳ್ಳುವಿರಿ. ತಂದೆಯ ಮಾತನ್ನು ಉಳಿಸಿಕೊಳ್ಳಲು ನಿಮ್ಮ ಶ್ರಮವು ಬಳಕೆಯಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಸ್ವಂತ ಶ್ರಮದಿಂದ ಗಳಿಸಿದ್ದು ನಿಮಗೆ ಆಪ್ತವೆನಿಸಲಿದೆ. ಮಾಡಬೇಕೆಂದುಕೊಂಡ ಕಾರ್ಯಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸುವಿರಿ. ಆದಾಯದ ಹೆಚ್ಚಿಸಿಕೊಳ್ಳು ವಿಚಾರದಲ್ಲಿ ನೀವು ಬಹಳ ಹಿಂದೆ.

ಕುಂಭ ರಾಶಿ: ಇಂದು ನೀವು ಕೈ ಹಾಕುವ ಕೆಲಸವನ್ನು ಸರಾಗವಾಗಿ ಮಾಡಿ ಮುಗಿಸುವಿರಿ. ಉತ್ಪಾದನೆಯ ಕ್ಷೇತ್ರದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಏನಾದರೂ ಅನಾಹುತಗಳು ನಡೆಯಬಹುದು. ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯವು ಇರಲಿದೆ. ಮಕ್ಕಳ‌ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಕಾರ್ಯದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ.‌ ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ. ನಿಮ್ಮ ಒರಟಾದ ಮಾತು ನೌಕರರು ಸಿಟ್ಟಾಗುವಂತೆ ಮಾಡುವುದಹ. ನಿಮ್ಮ ಅವಕಾಶಗಳನ್ನು ಅನ್ಯರು ಬಳಸಿಕೊಂಡಾರು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹ ಭಂಗವನ್ನು ಮಾಡೀತು.

ಮೀನ ರಾಶಿ: ಇಂದು ನಿಮ್ಮ ಪೂರ್ಣ ಶಕ್ತಿಯ ಜೊತೆ ನೀವು ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದುವರಿಯಿರಿ. ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಕಛೇರಿಯಲ್ಲಿ ಹೆಚ್ಚಿನ ಕೆಲಸದ ಕಾರಣ ಹೆಚ್ಚುವರಿ ಸಮಯವನ್ನು ನೀಡಬೇಕಾಗಬಹುದು. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಸಾಮಾಜಿಕ‌ ಕಾರ್ಯದಿಂದ ಸಮ್ಮಾನವನ್ನು ನಿರೀಕ್ಷಿಸುವಿರಿ. ಎಲ್ಲರನ್ನೂ ತೃಪ್ತಿಪಡಿಸುವ ಸಂಕಲ್ಪವು ಸುಮ್ಮನೇ ವ್ಯರ್ಥವಾಗಬಹುದು. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವನ್ನು ನೀಡುತ್ತಾನೆ. ನಿಮ್ಮ ಮೇಲೆ‌ ಹಿತಶತ್ರುಗಳು‌ ಬೇಕಂತಲೇ ಆರೋಪವನ್ನು ಮಾಡಬಹುದು. ನಿಮ್ಮ ತಿಳಿವಳಿಕೆಯನ್ನು ಇನ್ನೊಬ್ಬರ‌ ಮುಂದೆ ತೋರಿಸಿಕೊಳ್ಳುವುದಿಲ್ಲ.

ಲೋಹಿತ ಹೆಬ್ಬಾರ್ – 8762924271 (what’s app only)