Horoscope: ರಾಶಿಭವಿಷ್ಯ, ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಬೇಡ, ನಿಮ್ಮವರನ್ನು ಕಳೆದುಕೊಳ್ಳುವ ಭಯ
ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 18, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಜನವರಿ 18) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಪೂರ್ವಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸಿದ್ಧ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:33ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:03 ರಿಂದ 08:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:53 ರಿಂದ 11:18ರ ವರೆಗೆ.
ಮೇಷ ರಾಶಿ: ಇನ್ನೊಬ್ಬರ ಕೈಗೊಂಬೆಯಾಗಬೇಕಾದೀತು. ಸೌಂದರ್ಯದ ಬಗ್ಗೆ ಅಧಿಕ ಕಾಳಜಿ ಇರುವುದು. ನಿಮ್ಮ ಮಾತುಗಳನ್ನು ನೀವು ಪರೀಕ್ಷಿಸಿಕೊಳ್ಳುವುದು ಉತ್ತಮ. ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಸೇವೆ ಮಾಡಲು ನಾಯಕನೇ ಆಗಬೇಕಿಲ್ಲ. ಸೇವಕನಾದರೂ ಸಾಕು. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ನಿಮ್ಮ ಮೌನವು ಹಲವಾರ ಅನುಮಾನಕ್ಕೆ ಕಾರಣವಾಗಬಹುದು.
ವೃಷಭ ರಾಶಿ: ಆತುರ ಪಡದೇ ಸಮಾಧಾನ ಚಿತ್ತದಿಂದ ಕಾರ್ಯವನ್ನು ಮಾಡಲು ಪ್ರಯತ್ನಿಸಿ. ಮಕ್ಕಳಿಗೆ ನೀವು ಕೊಟ್ಟ ಸ್ವಾತಂತ್ರ್ಯ ಅತಿಯಾದೀತು. ನಿಮ್ಮ ವಿದ್ಯೆಯ ಬಗ್ಗೆ ನಿಮಗೇ ಅಸೂಯೆ ಉಂಟಾಗಬಹುದು. ದಾಯಾದಿಗಳು ನಿಮ್ಮ ಸಂಕಷ್ಟವನ್ನು ಎದುರು ನೋಡುತ್ತ ಇರಬಹುದು. ಸಲ್ಲದ ಮಾತುಗಳನ್ನಾಡಿ ಶತ್ರುಗಳನ್ನು ಪ್ರಬಲವಾಗಿಸುವಿರಿ. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಕಳೆದುಹೋದ ವ್ಯಕ್ತಿಗಳನ್ನು ಮತ್ತೆ ಪಡೆಯುವ ಪ್ರಯತ್ನ ಬೇಡ.
ಮಿಥುನ ರಾಶಿ: ಹಣದ ವ್ಯವಹಾರದಲ್ಲಿ ಒತ್ತಡವು ಅಧಿಕವಾಗಬಹುದು. ಮೇಲಧಿಕಾರಿಗಳ ಗುರಿಯನ್ನು ತಲುಪಲು ಶ್ರಮವು ಹೆಚ್ಚಾಗಬಹುದು. ಆಭರಣದ ಬಗ್ಗೆ ಮೋಹ ಉಂಟಾಗುವುದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ಕಲಾವಿದರಿಗೆ ಅನಿರೀಕ್ಷಿತ ಗೌರವವು ಪ್ರಾಪ್ತವಾಗಬಹುದು. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದೇಯಿರುವುದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಇಂದು ಹಣವನ್ನು ಹೊಂದಿಸುವುದು ಚಿಂತೆಯಾಗಬಹುದು.
ಕಟಕ ರಾಶಿ: ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಸರಿ ಕಾಣದು. ಸಂಗಾತಿಯ ಆಯ್ಕೆಯು ಗೊಂದಲವಾಗಿರುವುದು. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎನಿಸುವುದು.