Horoscope: ನಿತ್ಯ ಭವಿಷ್ಯ; ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ, ಯಾವುದೋ ವಿಚಾರಕ್ಕೆ ಕೊರಗುವಿರಿ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 14 ಏಪ್ರಿಲ್​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ, ಯಾವುದೋ ವಿಚಾರಕ್ಕೆ ಕೊರಗುವಿರಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 14, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:12 ರಿಂದ 06:45ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:33 ರಿಂದ 02:06 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ.

ಮೇಷ ರಾಶಿ: ಸಮಾಜ ಗುರುತಿಸುತ್ತಿಲ್ಲ‌ ಎಂಬ ಕೊರಗು ಇಂದು ಅತಿಯಾಗಿ ಕಾಡಬಹುದು. ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ಇರಲಿದೆ. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಇಂದು ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಉದ್ಯಮವನ್ನು ಮಿತಿಮೀರಿದ ನಿರೀಕ್ಷೆಯಲ್ಲಿ ಮುಂದುವರಿಯುವುದು ಬೇಡ. ಅನಂತರ ಕಷ್ಟವಾದೀತು. ಸಂಕೀರ್ಣ ಸ್ಥಿತಿಯನ್ನು ನೀವು ತಿಳಿಯಾಗಿಸುವಿರಿ. ವಿಶ್ವಾಸದಲ್ಲಿ‌ ಕೊರತೆ ಇರದು. ವ್ಯಾಪಾರದ ಕೆಲವು ನಿರ್ಧಾರಗಳಿಗೆ ಅಪರಿಚಿತರಿಂದ ಸಲಹೆಯು ಸಿಗುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲವನ್ನು ನೀವು ಮನಃಪೂರ್ವಕವಾಗಿಯೇ ಕಡೆಗಣಿಸುವಿರಿ.

ವೃಷಭ ರಾಶಿ: ಸಮಸ್ಯೆಗೆ ಪರಿಹಾರವೆಂದು ಇನ್ನಷ್ಟು ಸಮಸ್ಯೆಯನ್ನು ಮಾಡಬಹುದು. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಕಡಿಮೆ ಇರಲಿದೆ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ನೀವು ಯಾರನ್ನಾದರೂ ವೃಥಾ ಸಂಶಯಿಸುವಿರಿ. ವಾದಗಳಲ್ಲಿ ಸಮಯ ಮತ್ತು ಹಣ ಕಳೆದುಹೋಗುತ್ತದೆ. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ. ವಿವಾಹದ ಸಂಬಂಧವನ್ನು ನೀವು ತಳ್ಳಿಹಾಕುವಿರಿ. ಯಾರ ಮಾತುಗಳೂ ನಿಮಗೆ ಪಥ್ಯವಾದೀತು. ದ್ವಂದ್ವ ನಿಲುವನ್ನು ನೀವು ಸರಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು.

ಮಿಥುನ ರಾಶಿ: ಇನ್ನೊಬ್ಬರ ಗೋಜಿಗೆ ಹೋಗದೇ, ನಿಮ್ಮ ಗೋಜಿಗೆ ಬಂದವರನ್ನು ಸುಮ್ಮನೆ‌ ಬಿಡುವ ಛಾತಿ ನಿಮ್ಮದಾಗಿರದು. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ರಮಣೀಯ ಸ್ಥಳಗಳನ್ನು ನೋಡಲು ಬಯಸುವಿರಿ. ಯಾರೆದುರೂ ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ.

ಕರ್ಕ ರಾಶಿ: ಇಂದು ಪ್ರಯಾಣದ ಆಯಾಸವು ಆಲಸ್ಯಕ್ಕೆ ಕಾರಣವಾಗುವುದು. ಮಾತನ್ನು ಆಡುವಾಗ ಎಚ್ಚರವಿರಲಿ. ಬೇರೆಯವರ ನಾಶವನ್ನು ಮಾಡಲು ಹೋಗಿ ನಿಮ್ಮದೇ ಯಶಸ್ಸು ನಾಶವಾಗಬಹುದು. ಮಕ್ಕಳ ಅನಾರೋಗ್ಯದಿಂದ ನಿಮಗೂ ಸಮಾಧಾನವಿರದು. ನಿದ್ರೆಯು ಚೆನ್ನಾಗಿ ಆಗದು. ಸಮಾಧಾನದ ಮನಃಸ್ಥಿತಿಯು ಉಂಟಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ ಮತ್ತು ನೀವು ಜನರಿಂದ ಬೆಂಬಲವನ್ನು ಪಡೆಯುತ್ತೀರಿ. ಬಂಧುಗಳೂ ನಿಮ್ಮನ್ನು ಇಷ್ಟಪಡುವರು. ಕೈಯಲ್ಲಿ ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ. ಕೋಪಗೊಂಡು ಇಡೀ ದಿನವನ್ನು ಹಾಳುಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು.

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?