Horoscope: ರಾಶಿಭವಿಷ್ಯ, ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು ಎಚ್ಚರ!

ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Nov 25, 2023 | 12:10 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:29 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:45 ರಿಂದ 03:10ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:39 ರಿಂದ 08:04ರ ವರೆಗೆ.

ಮೇಷ ರಾಶಿ: ಕಛೇರಿಯಲ್ಲಿ ನಿಮಗೆ ಆದ ಅಸಮಾಧಾನವನ್ನು ಹೊರಹಾಕುವಿರಿ. ಎಲ್ಲರ‌ ಮಾತುಗಳನ್ನು ನೀವು ನಕಾರಾತ್ಮಕವಾಗಿಯೇ ಸ್ವೀಕರಿಸುವಿರಿ. ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವು ಬರಬಹುದು. ಹಳೆಯ ಪ್ರೀತಿಯು ನಿಮ್ಮನ್ನು ಕಾಡಬಹುದು. ಕೋಪಗೊಳ್ಳುವ ಸಂದರ್ಭದಲ್ಲಿ ನೀವು ನಿಯಂತ್ರಣವನ್ನು ಕಳೆದುಕೊಳ್ಳುವಿರಿ. ನಿಮ್ಮವರನ್ನು ನೀವು ಬಿಡುವಿರಿ.‌ ಸಂಗಾತಿಯನ್ನು ನೀವೇ ಬೇಡದ ಮಾತುಗಳಿಂದ ಬೇಸರಿಸಿ ಅನಂತರ ಬೆಣ್ಣೆ ಸವರುವಿರಿ. ಇಂದು ನಿದ್ರೆಯನ್ನು ಅಧಿಕವಾಗುವುದು. ಸಹೋದರರ ಜೊತೆಗಿನ ಮಾತುಕತೆ ಸಂತಸವನ್ನು ಕೊಡಬಹುದು. ನೌಕರರಿಂದ ನಿಮ್ಮ ಕೆಲಸವು ಅನಾಯಾಸವಾಗಿ ಮುಗಿಯುವುದು. ದೂರದ ಗೆಳೆಯರು ನಿಮಗೆ ಸಹಾಯ ಮಾಡರು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ಸ್ನೇಹಿತರ‌ ಜೊತೆ ಸುತ್ತಾಟ ಮಾಡುವಿರಿ.

ವೃಷಭ ರಾಶಿ: ಹಲವು ದಿನಗಳ ಬೇಡಿಕೆಯು ಈಡೇರಬಹುದು. ಪ್ರತ್ಯಕ್ಷವಾಗಿ ಕಂಡರೂ ನಂಬಿಕೆ ಬಾರದು. ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ನಿಮ್ಮದಲ್ಲದ್ದನ್ನು ಬಯಸುವಿರಿ. ಅತಿಯಾದ ಮೋಹದಿಂದ ತಪ್ಪು ಗ್ರಹಿಕೆ ಬರುವುದು. ಸಂಗಾತಿಗೆ ಹೇಳಬೇಕಾದುದನ್ನು ಹೇಳಲಾಗದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ವಿಜಯ ಪ್ರಾಪ್ತಿ. ಚಿತ್ತವನ್ನು ದೃಢವಾಗಿ ಇಟ್ಟುಕೊಳ್ಳಬೇಕಾಗುವುದು. ಹಳೆಯ ಖಾಯಿಲೆಯಿಂದ ಮತ್ತೆ ಸಂಕಟವಾಗಲಿದೆ. ಹೊಸಬರ ಪರಿಚಯವು ನಿಮ್ಮಲ್ಲಿ ಪರಿವರ್ತನೆ ಮಾಡಿಸುವುದು. ಮುಖ್ಯಸ್ಥರಾಗಿದ್ದು ಯಾರ ವಿಚಾರದಲ್ಲಿಯೂ ಪಕ್ಷಪಾತವನ್ನು ಮಾಡುವುದು ಯೋಗ್ಯವಲ್ಲ. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕೆನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಬರುವ ಹಣದ ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳುವಿರಿ.

ಮಿಥುನ ರಾಶಿ: ನಿಮ್ಮ ಪ್ರತಿಯೊಂದು ಕಾರ್ಯಕ್ಕೂ ಕಾರಣ ಬೇಕಾದೀತು.‌ ಕಳ್ಳರ ಭೀತಿಯು ಕಾಡಬಹುದು. ಅಧಿಕಾರಿಗಳಿಂದ ನಿಮಗೆ ಒತ್ತಡವು ಬಂದು ಯಾವ ಕೆಲಸವನ್ನೂ ಪೂರ್ಣ ಮಾಡಲಾಗದು. ಕಛೇರಿಯ ಕಾರ್ಯವು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳನ್ನು ನೀವು ಮರೆಯುವಿರಿ. ನಿಮ್ಮವರೇ ಆದರೂ ಕಳೆದುಕೊಂಡ ನಂಬಿಕೆಯನ್ನು ಮತ್ತೆ ತೋರಿಸಲಾರಿರಿ. ಹೊಸತನ್ನು ಕಲಿಯುವ ಆಸೆಯು ಇಲ್ಲವಾಗುವುದು. ಮಾತನ್ನು ಮಿತವಾಗಿ ಆಡಿ. ನಿಮ್ಮದೇ ಚಿಂತನೆಯನ್ನು ಕಾರ್ಯದಲ್ಲಿ ಪ್ರಯೋಗಿಸುವಿರಿ. ಯಾರ ಮಾತನ್ನೂ ಕೇಳುವ ಸಹನೆಯು ಬೇಕಾದೀತು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬಾರದಿರುವುದು ಹಠದವನ್ನು ಉಂಟುಮಾಡೀತು. ನಿಮ್ಮ ಹುದ್ದೆಯು ಏರುವ ಸಾಧ್ಯತೆ ಇದೆ.

ಕಟಕ ರಾಶಿ: ಹಿರಿಯರಿಂದ ನಿಮಗೆ ಕೆಲವು ಮಾತುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೂ ಒತ್ತಾಯಕ್ಕೆ ಮಾಡಬೇಕಾದೀತು. ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು. ಇಂದು ನಿಮಗೆ ಬಿಚ್ಚು ಮನಸ್ಸಿನಿಂದ ಮಾತನಾಡಲು ಇಷ್ಟವಾಗದು. ನಂಬಿಕೆಯನ್ನು ನೀವು ಕಳೆದುಕೊಳ್ಳಬೇಕಾಗುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ‌ ಮೌನವಾಗಿ ಇರುವಿರಿ. ವಿವಾಹಕ್ಕಾಗಿ ಬಹಳ ಶ್ರಮವಹಿಸಬೇಕಾದೀತು. ರೈತರು ಲಾಭದಾಯಕ ಕಾರ್ಯದಲ್ಲಿ ಮಗ್ನರಾಗುವರು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧವಾದ ಪ್ರಯತ್ನವನ್ನು ಮಾಡುವಿರಿ. ಸಕಾರಾತ್ಮಕ ಚಿಂತನೆಯನ್ನು ಮಾಡಲು ಕಷ್ಟವಾದೀತು.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್