Richest Zodiac Signs: ಅತೀ ಹೆಚ್ಚು ಶ್ರೀಮಂತರು ಈ ರಾಶಿಯವರು, ನಿಮ್ಮ ರಾಶಿ ಇದೆಯಾ ನೋಡಿ

ಆ ಒಂದು ರಾಶಿಯನ್ನು ಬಿಟ್ಟು ಜ್ಯೋತಿಷದ ಪ್ರಕಾರ ಯಾವ ರಾಶಿಯವರು ತಮ್ಮ ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡುತ್ತಾರೆ ಗೊತ್ತಾ? ದುಡ್ಡನ್ನು ಮ್ಯಾನೇಜ್ ಮಾಡೋದು ಒಂದು ಕಲೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೂ ಅದೃಷ್ಟ ಇರಬೇಕು” ಅಂತ ನೀವು ಅಂದುಕೊಳ್ಳುತ್ತಿದ್ದಲ್ಲಿ ನಿಮಗಾಗಿಯೇ ಈ ಲೇಖನ. ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಶ್ರೀಮಂತಿಕೆ ಗಳಿಸುವುದರಲ್ಲಿ, ಅನುಭವಿಸುವುದರಲ್ಲಿ ಮುಂದೆ ಎನ್ನಲಾಗುತ್ತದೆ. ಹಾಗೆ ಹೇಳುವುದಕ್ಕೆ ಆ ರಾಶಿಯ ಜನರಲ್ಲಿ ಇರುವಂಥ ಗುಣ ಖಂಡಿತಾ ಕಾರಣ ಆಗಿರಬೇಕಲ್ಲವಾ?

Richest Zodiac Signs: ಅತೀ ಹೆಚ್ಚು ಶ್ರೀಮಂತರು ಈ ರಾಶಿಯವರು, ನಿಮ್ಮ ರಾಶಿ ಇದೆಯಾ ನೋಡಿ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 19, 2024 | 10:52 AM

ಆದರೆ, ಇದಂತೂ ಸತ್ಯ; ಈ ಐದು ರಾಶಿ ಜನರೇ ಹೆಚ್ಚೆಚ್ಚು ಶ್ರೀಮಂತರ ಸಾಲಿಗೆ ಸೇರುತ್ತಾರೆ ಅನ್ನೋದು ಕಂಡುಬರುತ್ತದೆ. ನಿಮಗೆ ತಿಳಿಸಬೇಕಾದ ಇನ್ನೊಂದು ಆಸಕ್ತಿಕರ ಸಂಗತಿ ಸಹ ಇದೆ. ಅದೇನೆಂದರೆ ಇದೇ ಲೇಖನದ ಕೊನೆಗೆ ಶ್ರೀಮಂತಿಕೆ ಹತ್ತಿರಕ್ಕೆ ಬರುವುದಕ್ಕೆ ಬಹಳ ಶ್ರಮಪಟ್ಟ ನಂತರವೂ ಹಿಂದೆ ಉಳಿಯುವ ರಾಶಿ ಯಾವುದು ಅನ್ನುವುದನ್ನು ಸಹ ತಿಳಿಸಲಾಗುತ್ತಿದೆ. ಈ ರಾಶಿಯವರನ್ನು ಗುಂಪಿಗೆ ಸೇರದವರು ಎಂದು ನೀವು ಅಂದುಕೊಳ್ಳಬಹುದು. ಆದರೆ ಅದು ಹಾಗಲ್ಲ. ಶ್ರೀಮಂತರ ಪಟ್ಟಿಯಲ್ಲಿ ಈ ರಾಶಿಯ ಜನರು ಇರುತ್ತಾರೆ; ಆದರೆ ಬಹಳ ಬಹಳ ಕಡಿಮೆ. ಹಾಗೆ ಆಗುವುದಕ್ಕೆ ಕಾರಣ ಏನು ಅನ್ನುವ ಮಾಹಿತಿ ಸಹ ಇಲ್ಲಿದೆ. ಆದ್ದರಿಂದ ಐದು ಪ್ಲಸ್ ಒಂದು ಯಾವುದು ಅಂತ ತಿಳಿದುಕೊಂಡು ಬಿಡಿ.

ತುಲಾ

ಶ್ರೀಮಂತರ ಸಾಲಿನಲ್ಲಿ ಹೆಚ್ಚು ಕಾಣುವಂಥವರು ತುಲಾ ರಾಶಿಯವರು. ನಿಮಗೆ ಗೊತ್ತಿರಲಿ, ಈ ರಾಶಿಯವರ ಅಧಿಪತಿ ಶುಕ್ರ. ಇನ್ನು ರಾಶಿಯ ಚಿಹ್ನೆ ತಕ್ಕಡಿ. ಲೆಕ್ಕಾಚಾರ, ಪೊಗದಸ್ತಾದ ಯೋಜನೆ ಹಾಕಿಕೊಳ್ಳದೆ ಕೆಲಸ ಮಾಡುವುದಕ್ಕೆ ಈ ರಾಶಿಯವರು ಇಳಿಯುವುದು ಅಪರೂಪ. ಆದರೆ ಇವರು ಏಣಿಯ ಮೇಲೆ ಸಾಗುವ ಹಾದಿಯಲ್ಲಿ ಎದುರಿಸುವ ಸವಾಲು ಇರುತ್ತದಲ್ಲಾ ಅದು ಭಯಾನಕ. ಮೇಲುನೋಟಕ್ಕೆ ಬಹಳ ಆರಾಮವಾಗಿ ಎಲ್ಲ ಸಾಧಿಸಿದಂತೆ ಕಾಣುವ ತುಲಾ ರಾಶಿಯವರು ಎದ್ದು, ಬಿದ್ದು, ಪ್ರಾಣ ಗಂಟಲಿನಲ್ಲಿ ಸಿಕ್ಕಿಕೊಳ್ಳುವಂಥ ಸನ್ನಿವೇಶಗಳನ್ನೆಲ್ಲ ದಾಟಿ ಉನ್ನತ ಸ್ಥಾನವನ್ನು ತಲುಪಿಕೊಂಡಿರುತ್ತಾರೆ. ಒಂದು ವೇಳೆ ವಂಶಪಾರಂಪರ್ಯವಾಗಿ ಬಂದ ಆಸ್ತಿಯೇ ಇದ್ದರೂ ಇವರು ವಿರಮಿಸುವವರಲ್ಲ. ತಮ್ಮ ಹಿರಿಯರು, ಪೂರ್ವಿಕರು ಮಾಡಿದಂಥ ಆಸ್ತಿಯನ್ನು ಹಲವು ಪಟ್ಟುಗಳು ಬೆಳೆಸುತ್ತಾರೆ. ಸಾಮಾನ್ಯವಾಗಿಯೇ ತುಲಾ ರಾಶಿಯವರಿಗೆ ಯಶಸ್ಸು ಬಹಳ ಕಿಕ್ ಕೊಡುತ್ತದೆ. ಅಧಿಕಾರವನ್ನು ಹಣವು ಅನುಸರಿಸುತ್ತದೆ ಎಂಬುದನ್ನು ತಮ್ಮ ಜೀವನದ ಆರಂಭದ ಹಂತದಲ್ಲಿಯೇ ಗುರುತಿಸುವ ಇವರು, ಅದರ ಕಡೆಗೆ ಅರ್ಜುನನ ಏಕಾಗ್ರತೆಯಲ್ಲಿ ಕೆಲಸ ಆರಂಭಿಸುತ್ತಾರೆ. ತಮ್ಮ ಗುರಿ ತಲುಪುವ ಹಾದಿಯಲ್ಲಿ ಏನನ್ನಾದರೂ ದಕ್ಕಿಸಿಕೊಳ್ಳುತ್ತಾರೆ. ಅಂದರೆ ತಮ್ಮ ಬಗೆಗಿನ ಅಪಪ್ರಚಾರ, ಕುಟುಂಬದಲ್ಲಿ ಹೀಯಾಳಿಕೆ, ಟ್ರೋಲ್, ಮೀಮ್ಸ್ ಉಹುಂ, ಇವರನ್ನು ಯಾವುದೂ ಡಿಸ್ಟರ್ಬ್ ಮಾಡಲ್ಲ.

ಮೀನ

ಈ ರಾಶಿಯವರ ಸ್ವಭಾವ ಬಹಳ ನಿಗೂಢ. ಎಲ್ಲರ ಜತೆಗೆ ಸಾಮಾನ್ಯವಾಗಿ ಇರುವಂತೆ ಕಂಡರೂ ತಲೆಯೊಳಗೆ ಒಂದು ಲೆಕ್ಕಾಚಾರ ಓಡುತ್ತಲೇ ಇರುತ್ತದೆ. ಇವರ ಎಲ್ಲ ಬಂಡವಾಳ ನನಗೆ ಗೊತ್ತು ಅಂತ ಯಾರಾದರೂ ಹೇಳಿದರೆ ನಕ್ಕು ಸುಮ್ಮನಾಗುವುದು ಒಳಿತು. ಏಕೆಂದರೆ ಮೀನಿನ ಹೆಜ್ಜೆ ತಿಳಿಯುವುದು ಅಸಾಧ್ಯ. ಒಬ್ಬರ ಎಲ್ಲವನ್ನೂ ಹೇಳಿಕೊಂಡಂತೆ ಕಂಡರೂ ಯಾವುದನ್ನು ಹೇಳಬೇಕು ಹಾಗೂ ಯಾವುದನ್ನು ಹೇಳಬಾರದು ಎಂಬುದನ್ನು ಚೆನ್ನಾಗಿ ಲೆಕ್ಕ ಹಾಕಿಕೊಂಡೇ ಮಾತನಾಡಿರುತ್ತಾರೆ ಈ ಮೀನ ರಾಶಿಯವರು. ತಮ್ಮ ವ್ಯಾಪಾರ- ವ್ಯವಹಾರದ ಗುಟ್ಟನ್ನಾಗಲೀ ಹಾಗೂ ತಮ್ಮ ಮುಂದಿನ ಯೋಜನೆ ಬಗ್ಗೆಯಾಗಲೀ ಯಾರ ಬಳಿಯೂ ಪೂರ್ತಿಯಾಗಿ ಬಾಯಿ ಬಿಡುವ ಜನ ಇವರಲ್ಲ. ಅಂದ ಹಾಗೆ ಇವರಿಗೆ ಶಿಕ್ಷಣದ ಮಹತ್ವ ಉಳಿದೆಲ್ಲ ರಾಶಿಯವರಿಗಿಂತ ಚೆನ್ನಾಗಿ ಗೊತ್ತಾಗಿರುತ್ತದೆ. ಇಂಥದ್ದೇ ಸಂಸ್ಥೆಯಲ್ಲಿ ಓದಬೇಕು, ಇದೇ ಕೋರ್ಸ್ ಮಾಡಬೇಕು ಎಂದು ನಿಶ್ಚಿತವಾದ ಗುರಿಯೊಂದಿಗೆ ಮುನ್ನಡೆಯುತ್ತಾರೆ. ಯಾವಾಗಲೂ ಏನೋ ಕಳೆದುಕೊಂಡವರಂತೆ ಕಂಡುಬರುವ ಇವರಿಗೆ ಕಳೆದುಹೋಗುತ್ತಿದೆಯೋ ಸಮಯ ಆತಂಕ ಟಿಕ್ ಟಿಕ್ ಟಿಕ್ ಅಂತ ಓಡುತ್ತಲೇ ಇರುತ್ತದೆ. ಯಾವ ವರ್ಷದಲ್ಲಿ ಎಷ್ಟು ದುಡಿದಿರಬೇಕು, ಎಷ್ಟು ಶ್ರೀಮಂತಿಕೆ ಇರಬೇಕು ಎಂಬ ಬ್ಲ್ಯೂಪ್ರಿಂಟ್ ಬಹಳ ಚಿಕ್ಕ ವಯಸ್ಸಿಗೇ ಹಾಕಿಕೊಳ್ಳುವ ಇವರು ಗುರಿಗಿಂತ ಮುಂಚೆಯೇ ಅಲ್ಲಿಗೆ ತಲುಪಿಕೊಂಡು ಬಿಟ್ಟಿರುತ್ತಾರೆ.

ಕುಂಭ

ಈ ರಾಶಿಯವರು ನಡೆದಾಡುವ ಕ್ಯಾಲ್ಕುಲೇಟರ್​​ಗಳು. ಯಾವ ಸಮಯಕ್ಕೆ ಯಾವ ವ್ಯಕ್ತಿ ಹತ್ತಿರ ಏನು ಕೇಳಬೇಕು, ಅವರಿಂದ ಹೂಂ ಎನಿಸಿಕೊಳ್ಳುವುದು ಹೇಗೆ ಎಂಬುದೆಲ್ಲ ಇವರಿಗೆ ಅಂಗೈ ಗೆರೆಯಷ್ಟೇ ಸಲೀಸಾಗಿ ಅರ್ಥವಾಗಿರುತ್ತದೆ. ಆದರೆ ಇವರೊಳಗೆ ಒಂದು ಲೆಕ್ಕಾಚಾರ ಮೈಂಡ್ ರೀಡಿಂಗ್ ಜತೆಗೆ ಓಡುತ್ತಲೇ ಇದೆ ಎಂಬ ಸಂಗತಿ ಎದುರಿಗೆ ಇರುವಂಥ ವ್ಯಕ್ತಿಗಳಿಗೆ ಗೊತ್ತಾಗುವುದಕ್ಕೆ ಇವರು ಎಂದಿಗೂ ಬಿಡುವುದಿಲ್ಲ. ಇವರ ಬಳಿ ಇರುವ ಹತ್ಯಾರಗಳನ್ನು ಗುರುತಿಸುವುದು ಅಸಾಧ್ಯವಾದ ಮಾತು. ಅದು ಹೇಗೆಂದರೆ, ಯಾರಿಗೂ ಇವರು ಕೆಟ್ಟವರಲ್ಲ. ಇತರರ ಅವಗುಣಗಳನ್ನು ಅಪ್ಪಿತಪ್ಪಿಯೂ ಆ ವ್ಯಕ್ತಿಯ ಎದುರಿಗೆ ಆಡುವುದೇ ಇಲ್ಲ. ಇವರ ತಪ್ಪನ್ನು ಅವರು ಎತ್ತಾಡಿದರೂ ಒಂದು ನಯಾಪೈಸೆಯಷ್ಟು ಬೇಸರವನ್ನು ಮುಖದ ಮೇಲೆ ತೋರಗೊಡುವುದಿಲ್ಲ. ಆದರೆ ಅದೇ ವ್ಯಕ್ತಿಯ ಬಾಯಲ್ಲಿ ಹತ್ತಾರು ಜನರ ಮುಂದೆ ಹೊಗಳಿಸಿಕೊಳ್ಳುವುದಕ್ಕೆ ಬೇಕಾದ ರಿಲೇಷನ್ ಷಿಪ್ ಮ್ಯಾನೇಜ್ ಮೆಂಟ್ ಚೆನ್ನಾಗಿ ಮಾಡುತ್ತಾರೆ. ಇವರು ತಮ್ಮ ಗಳಿಕೆಯ ಹಾದಿಯಲ್ಲಿ ಯಾರ ತಲೆ ಮೇಲೂ ಕಾಲಿಟ್ಟು ಸಾಗುವುದಿಲ್ಲ. ಬದಲಿಗೆ ಏಣಿಯ ಮೇಲೆ ಮೇಲೆ ಇರುವಂಥವರ ಕೈ ಹಿಡಿದು, ಕೈ ಹಿಡಿದು ಎಲ್ಲರನ್ನೂ ದಾಟಿಕೊಂಡು ಹೋಗುತ್ತಾರೆ. ಹಾಗಂತ ಇವರಲ್ಲಿ ಬುದ್ಧಿವಂತಿಕೆ ಇರಲ್ಲ ಅಂತಲ್ಲ. ಆದರೆ ಅದನ್ನು ಯಾವ ಹಂತದಲ್ಲಿ ಎಷ್ಟು ಹೆಚ್ಚು ಬೆಲೆಗೆ ಕ್ಯಾಶ್ ಮಾಡಿಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿರುತ್ತದೆ.

ಮೇಷ

ಸಾಧ್ಯವೇ ಇಲ್ಲದ ಗುರಿ ಕೊಟ್ಟಾಗಲೂ ಯಾರನ್ನೂ ಶಪಿಸದೆ, ನಿಂದಿಸದೆ, ಇತರರ ಬಳಿ ದೂರು ಹೇಳದೆ ತಲೆ ಬಗ್ಗಿಸಿ ಕೆಲಸ ಮಾಡುತ್ತಾ ಸಾಗುವ ಜನರನ್ನು ನೋಡಬೇಕು ಅಂದರೆ ಮೇಷ ರಾಶಿಯವರನ್ನು ನೋಡಬೇಕು. ತಮ್ಮಿಂದ ಅದು ಸಾಧ್ಯವಿಲ್ಲ ಎಂಬ ಆಲೋಚನೆ ಇವರಿಗೆ ಬರುವುದೇ ಇಲ್ಲ. ಅಸಲಿಗೆ ‘ಇಲ್ಲ’ ಅಂತ ಇವರಿಂದ ಉತ್ತರ ಹೇಳಿಸುವುದೇ ಅಸಾಧ್ಯದ ಮಾತು. ಆ ಕಾರಣಕ್ಕಾಗಿಯೇ ಮೇಷ ರಾಶಿಯವರು ಟಾಪ್ ಮ್ಯಾನೇಜ್ ಮೆಂಟ್ ಪಾಲಿಗೆ ಡಾರ್ಲಿಂಗ್ ಇದ್ದ ಹಾಗೆ. ಅದೆಂಥ ಅಸಾಧ್ಯದ ಕೆಲಸ ಹೇಳಿದರೂ ಹೂಂ ಅಂತ ತಲೆ ಅಲ್ಲಾಡಿಸಿ ಬರುತ್ತಾರೆ. ಕನಿಷ್ಠ ಅದರ ಹತ್ತಿರಕ್ಕಾದರೂ ಹೋಗುವುದಕ್ಕೆ ಪ್ರಯತ್ನ ಮಾಡೋಣ. ಹಾಗೆ ಮಾಡಿದರೆ ಕೆಲಸ ಒಪ್ಪಿಸಿದವರಿಗಾದರೂ ಒಂದು ಖುಷಿ ಇರುತ್ತದೆ. ಎಲ್ಲರೂ ಇಲ್ಲ ಎಂದಾಗಲೂ ಈ ಮನುಷ್ಯ ಒಪ್ಪಿಕೊಂಡು ಮಾಡಿದನಲ್ಲಾ ಎಂಬ ಸಾಫ್ಟ್ ಕಾರ್ನರ್ ಅದು ಎಂಬುದನ್ನು ಮೇಷ, ಅಂದರೆ ಟಗರು ಚೆನ್ನಾಗಿ ತಿಳಿದಿರುತ್ತದೆ. ಈ ರಾಶಿಯ ಬಾಸ್ ಇದ್ದರಂತೂ ಜನ ಇವರನ್ನು ಬೈದಾಡಿಕೊಂಡು ಓಡಾಡ್ತಾ ಇರುತ್ತಾರೆ. ಆದರೆ ಎಲ್ಲರನ್ನೂ ಒಂದು ಅಭದ್ರತೆಯಲ್ಲಿ ಕೆಡವಿ, ಎದ್ದುಬಿದ್ದು ಕೆಲಸ ಮಾಡುವಂತೆ ರೊಚ್ಚಿಗೆ ಎಬ್ಬಿಸುವುದರಲ್ಲಿ ಈ ಮೇಷ ರಾಶಿಯವರು ಪ್ರಳಯಾಂತಕರು. ಪೀಪಲ್ ಮ್ಯಾನೇಜ್ ಮೆಂಟ್ ನಲ್ಲಿ ಗೆಲ್ಲುವ ಇವರು ಅದರ ಮೂಲಕವೇ ಏಣಿಯ ಒಂದೊಂದು ಮೆಟ್ಟಿಲೇರಿ ಶ್ರೀಮಂತರಾಗಿ ನಿಂತು ಬಿಡುತ್ತಾರೆ.

ಇದನ್ನೂ ಓದಿ:Zodiac Signs: ಮಕ್ಕಳಂತೆ ಆಡುವ 4 ರಾಶಿಯವರು

ಕರ್ಕಾಟಕ

ಎಮೋಷನಲಿ, ಅಂದರೆ ಭಾವನಾತ್ಮಕವಾಗಿ ಯಾರನ್ನಾದರೂ ಆಕರ್ಷಿಸಬಲ್ಲ ಶಕ್ತಿ ಇದ್ದರೆ ಅದು ಕರ್ಕಾಟಕ ರಾಶಿಯವರಿಗೆ ಹೆಚ್ಚು. ಸಂಬಂಧ- ಸ್ನೇಹವನ್ನು ಚೆನ್ನಾಗಿ ನಿರ್ವಹಿಸಬಲ್ಲರು. ಇವರು ಮ್ಯಾಗ್ನೆಟ್ ಇದ್ದಂತೆ. ಇವರ ಜತೆಗೆ ಕೆಲಸ ಮಾಡುವುದು ಒಂದು ಬಗೆಯ ಸಂತೋಷ ಇದ್ದಂತೆ. ಅದು ಎಷ್ಟು ಸಣ್ಣ ಮಟ್ಟದ ಕೆಲಸಗಾರರಾದರೂ ಅಥವಾ ತನ್ನ ಗ್ರಾಹಕರೇ ಆದರೂ ಅಥವಾ ತಮಗೆ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರೇ ಆದರೂ ಅವರ ಬರ್ತ್ ಡೇ, ವೆಡ್ಡಿಂಗ್ ಆನಿವರ್ಸರಿ, ಸಣ್ಣ ಪುಟ್ಟ ಯಶಸ್ಸು ಎಲ್ಲವನ್ನೂ ಈ ಕರ್ಕಾಟಕ ರಾಶಿಯವರು ತಮ್ಮದೇ ಎಂಬಂತೆ ಸೆಲಬ್ರೇಟ್ ಮಾಡುತ್ತಾರೆ. ಒಂದು ವೇಳೆ ಮರೆತಿದ್ದರೂ ಅದು ಗೊತ್ತೇ ಆಗದಂತೆ ಚೆನ್ನಾಗಿ ಮ್ಯಾನೇಜ್ ಮಾಡಿ, ಉದ್ದೇಶಪೂರ್ವಕವಾಗಿ ಹಾಗೆ ಮಾಡಿದೆ, ಎಲ್ಲ ಸಿದ್ಧತೆ ಆಗಿಹೋಗಿತ್ತು. ನಿಮ್ಮ ರಿಯಾಕ್ಷನ್ ಹೇಗಿರುತ್ತೆ ಅಂತ ನೋಡುವುದಕ್ಕೆ ಹಾಗೆ ಮಾಡಿದೆ ಅಂತ ಸೊಗಸಾದ ಸುಳ್ಳನ್ನೂ ಹೇಳುತ್ತಾರೆ. ಒಟ್ಟಿನಲ್ಲಿ ಇವರ ಉದ್ದೇಶ ಏನೆಂದರೆ, ಪ್ರತಿಯೊಬ್ಬರಿಗೂ ಅನಿಸಬೇಕು; ಈ ಮನುಷ್ಯ ನನ್ನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದಾರೆ, ಆ ನಂಬಿಕೆ ಉಳಿಸಬೇಕು ಅಂತ. ಹಾಗಂತ ಬರೀ ಮೇಲುನೋಟದ ಎಮೋಷನ್ ಅಂದುಕೊಳ್ಳಬೇಡಿ. ಅದು ನಿಜವಾಗಿಯೂ ಇರುತ್ತದೆ. ಇನ್ನು ಕರ್ಕಾಟಕ ರಾಶಿಯವರು ಕಸ ಗುಡಿಸಿದರೂ ಅದನ್ನು ಅದ್ಭುತವಾಗಿ ಮಾಡ್ತಾರೆ, ಜತೆಗೆ ಜಗತ್ತಿನಲ್ಲಿ ಹೀಗೆ ಇವರು ಮಾತ್ರ ಮಾಡುವುದಕ್ಕೆ ಸಾಧ್ಯ ಎನಿಸುವಂತೆ ಮಾಡುತ್ತಾರೆ. ಹಾಗೆ ಯೋಚಿಸುತ್ತಾ, ಜನರ ಗಳಿಸುತ್ತಾ, ಕೆಲಸ ಮಾಡುತ್ತಾ ಶ್ರೀಮಂತರಾಗುತ್ತಾರೆ.

ಮಕರ

ಆರಂಭದಲ್ಲೇ ಹೇಳಿದ ಹಾಗೆ ಶ್ರೀಮಂತರ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಾಣುವ ರಾಶಿ ಮಕರ. ಇವರ ಶಕ್ತಿ ಹಾಗೂ ದೌರ್ಬಲ್ಯ ಎರಡೂ ಏನು ಗೊತ್ತಾ? ಅದಾಗಲೇ ಸಾಬೀತಾಗಿ, ಯಶಸ್ಸಿಗೆ ಇದೇ ಮಾರ್ಗ ಎನ್ನುವ ಹಾದಿಯನ್ನು ಈ ಜನರು ಹೋಗಲ್ಲ. ಪ್ರತಿ ಸಲ ತಮ್ಮದೊಂದು ಸಿಗ್ನೇಚರ್ ಇರಲಿ ಅಂತ ಬಯಸುತ್ತಾರೆ. ಇವರ ಅನುಭವವನ್ನು ವಿವರಿಸುವುದಕ್ಕೆ ನಿಂತರೆ ಎಂಥವರು ಸಹ ವಾವ್ ಎನ್ನಬೇಕು. ಯಾರಾದರೂ ಇವರ ಹತ್ತಿರ “ಡಿಸ್ಟ್ರಿಬ್ಯೂಷನ್” ಬಗ್ಗೆ ವಿವರಿಸ್ತೀರಾ ಅಂತ ಕೇಳಿದರೆ, ಉತ್ಪಾದನೆಯಿಂದ ಅದರ ವಿಲೇವಾರಿ ತನಕ ಬೇರೆ ಯಾರಿಂದಲೂ ವಿವರಿಸಲಾಗದಷ್ಟು ಸೊಗಸಾಗಿ, ಸರಿಯಾಗಿ, ವಿವರವಾಗಿ ಹೇಳುತ್ತಾರೆ. ಅದೇ ಇವರ ಸಮಸ್ಯೆ ಕೂಡ. ಎಲ್ಲವನ್ನೂ ಪೂರ್ತಿ ತಿಳಿದುಕೊಂಡು ಮಾಡುವ ಉತ್ಸಾಹದಲ್ಲಿ ಕಾಲ, ಡೆಡ್ ಲೈನ್, ಗುರಿ ಎಲ್ಲವನ್ನೂ ಮರೆತು ಹೋಗಿರುತ್ತಾರೆ. ಮೈ ತುಂಬ ಗಾಯವಾದ, ಸಿಕ್ಕಾಪಟ್ಟೆ ಅನುಭವ ಇರುವ, ತನಗಾಗಿರುವ ವಯಸ್ಸಿಗಿಂತ ಹೆಚ್ಚಾಗಿ ವಯಸ್ಸಾದಂತೆ ಕಾಣುವ ಸೈನಿಕನಂತೆ ಮಕರ ರಾಶಿಯವರು. ಹೇಳಿಕೊಳ್ಳುವುದಕ್ಕೆ ಅನುಭವ ಇದೆ, ಆಲೋಚಿಸುವುದಕ್ಕೆ ಜ್ಞಾನ ಇದೆ, ತಾಳ್ಮೆ ಇದೆ- ಸಂಯಮ ಇದೆ, ಶಿಸ್ತಿದೆ. ಹಾಗಿದ್ದರೆ ಮಿಸ್ ಹೊಡೆದಿದ್ದು ಎಲ್ಲಿ? ಇವರಿಗೆ ಯಾವುದು ಎಷ್ಟಿದ್ದರೆ ಸಾಕು ಅನ್ನೋದು ಗೊತ್ತಿಲ್ಲ. ಎಲ್ಲವನ್ನೂ ತಾನೇ ಮಾಡುವುದಕ್ಕೆ ನಿಲ್ಲುತ್ತಾರೆ. ತಾನೇ ಕಲಿಯುವುದಕ್ಕೆ ಪ್ರಯತ್ನಿಸುತ್ತಾರೆ. ಈ ಮಧ್ಯೆ ತಮಗಾಗುತ್ತಿರುವ ವಯಸ್ಸು, ಕಳೆದುಕೊಳ್ಳುವ ಆರೋಗ್ಯ, ಕಸುವು ಇವ್ಯಾವೂ ಗೊತ್ತಾಗಲ್ಲ. ಆದ್ದರಿಂದಲೇ ಈ ರಾಶಿಯವರಲ್ಲಿ ಹಣ ಮಾಡುವವರು ಕಡಿಮೆ. “ನಿಮಗೆ ಊರಲ್ಲೆಲ್ಲಾ ಹೆಸರು, ಆದರೆ ಏನು ಪ್ರಯೋಜನ?” ಅಂತ ಯಾರಾದರೂ ಕುಟುಂಬ ಸದಸ್ಯರಿಂದ ಸ್ವಾಟೆ ತಿರುವಿಸಿಕೊಳ್ಳುತ್ತಿದ್ದರೆ ಅದು ಮಕರ ರಾಶಿಯವರು ಆಗಿರುವ ಸಾಧ್ಯತೆ ಜಾಸ್ತಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?