
ಮೇಷ ರಾಶಿ : ರಾಶಿ ಚಕ್ರದ ಪ್ರಥಮ ರಾಶಿಯವರಿಗೆ ಸಪ್ಟೆಂಬರ್ ತಿಂಗಳು ಶುಭ. ರಾಶಿಯ ಅಧಿಪತಿ ಕುಜನು ನಿಮ್ಮ ರಾಶಿಯನ್ನು ನೋಡುವ ಕಾರಣ ದೈಹಿಕ ಹಾಗೂ ಮಾನಸಿಕ ದೃಢತೆ ಚೆನ್ನಾಗಿಯೇ ಇರುವುದು. ಶುಕ್ರನ ಸ್ಥಾನವಾದ ಕಾರಣ ಯಾರೊಂದಿಗಾದರೂ ಪ್ರೇಮವು ಧೈರ್ಯ ಉತ್ಸಾಹಗಳು ಬರಲಿವೆ. ಒಳ್ಳೆಯ ಸ್ನೇಹಿತರು ನಿಮ್ಮ ಅಭಿವೃದ್ಧಿಗೆ ಕಾರಣರಾಗುವರು. ಆಲಂಕಾರಿಕ ಅಥವಾ ತಂತ್ರಜ್ಞರಿಗೆ ಒಳ್ಳೆಯ ಅವಕಾಶ. ವೇತನದಲ್ಲಿ ಬಡ್ತಿ ಪಡೆಯುವರು. ತಂದೆಯ ನಡುವೆ ವಿವಾದ ಕಾಣಿಸಿಕೊಳ್ಳಲಿದ್ದು ಸಹೋದರರ ಪ್ರವೇಶದಿಂದ ಶಾಂತವಾಗಲಿದೆ. ರಾಹು ದಶೆ ನಿಮಗೆ ಉತ್ತಮ ದಶೆಯಾಗಿದ್ದು ನೀವು ಏನು ಮಾಡುತ್ತಿದ್ದೀರಿ ಎಂಬ ಕಲ್ಪನೆ ಯಾರಿಗೂ ಸಿಗದು. ನಾಗ ಸನ್ನಿಧಿಯಲ್ಲಿ ಆಪತ್ತಿನ ನಿವಾರಣೆ ಪ್ರಾರ್ಥಿಸಿ.
ವೃಷಭ ರಾಶಿ :ರಾಶಿಯ ಅಧಿಪತಿ ಶುಕ್ರ ಚತುರ್ಥದಲ್ಲಿ ಕೇತುವಿನ ಜೊತೆ ಇರುವನು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಬ್ಬರ ನಡುಬೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಪಂಚಮದಲ್ಲಿ ಬುಧಾದಿತ್ಯ ಯೋಗ ವಿದ್ಯಾಭ್ಯಾಸಕ್ಕೆ ಹೆಚ್ಚು ಪೂರಕ. ವಿಜ್ಞಾನ, ಗಣಿತ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಸರಿಯಾದ ಹಿಡಿತ ಸಿಗಲಿದೆ. ಪ್ರೇಮದ ವಿಚಾರದಲ್ಲಿ ಶತ್ರುತ್ವ ಉಂಟಾಗುವುದು. ಬಹಳ ವಿನಮ್ರತೆಯಿಂದ ಖ್ಯಾತರಾಗುವಿರಿ. ಶನಿ ದಶೆ ನಿಮಗೆ ಉತ್ತಮವಾದ ಆರೋಗ್ಯ ಐಶ್ವರ್ಯವನ್ನು ತಂದುಕೊಡುವುದು. ದುರ್ಗಾದೇವಿಯ ಪ್ರಸನ್ನೆಯಿಂದ ಮಾನಸಿಕ ಕ್ಲೇಶಗಳು ದೂರಾಗುವುದು.
ಮಿಥುನ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ನಿಮಗೆ ಶುಭವಿದೆ. ರಾಶಿಯ ಅಧಿಪತಿ ಚತುರ್ಥದಲ್ಲಿ ಇದ್ದು ಉಚ್ಚನಾಗಿದ್ದಾನೆ. ಸೂರ್ಯನೂ ಅಲ್ಲಿಯೇ ಇದ್ದ ಕಾರಣ ಮನೆಯನ್ನೋ ಸಂಸ್ಥೆಯನ್ನೋ ಮುನ್ನಡೆಸುವ ಜವಾಬ್ದಾರಿ ಬರುವುದು. ಕುಜನು ಶುಕ್ರನ ಸ್ಥಾನದಲ್ಲಿ ಇದ್ದು ಸಂತಾನಾಪೇಕ್ಷೆಯನ್ನು ಹೆಚ್ಚಿಸುವನು. ಗುರುವು ಸ್ವರಾಶಿಯಲ್ಲಿದ್ದು ಸಕಾರಾತ್ಮಕ ಆಲೋಚನೆ, ಭಕ್ತಿ, ದೇವರ ಆರಾಧನೆಗೆ ಸಮಯವನ್ನು ಕೊಡುವಿರಿ. ಉದ್ಯೋಗ ಮಾಡುತ್ತಿದ್ದರೆ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಬೇಕಾಗುವುದು. ತಾಳ್ಮೆಯಿಂದ ಎಲ್ಲವನ್ನೂ ಮಾಡಲಿದ್ದೀರಿ. ಸಂಗಾತಿಯು ನಿಮ್ಮ ಮನಸ್ಸಿಗೆ ಅನುಪಳಾದವಳು ಸಿಗುವಳು. ಮಾಡುತ್ತಿರುವ ದೈವೋಪಾಸನೆಯನ್ನು ಏಕಭಕ್ತಿಯಿಂದ ಮಾಡಿ.
ಕರ್ಕಾಟಕ ರಾಶಿ :ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ತಿಂಗಳು ಅಶುಭ. ದ್ವಾದಶದಲ್ಲಿ ಗುರುವಿದ್ದು ನಿಮಗೆ ಅನುಕೂಲತೆಯನ್ನು ಬಗೆಹರಿಸಲಾರನು. ದ್ವಿತೀಯದಲ್ಲಿ ಶುಕ್ರ ಹಾಗು ಕೇತುಗಳು ನಿಮ್ಮ ಮನಸ್ಸನ್ನು ಚಂಚಲಗೊಳಿಸುವರು. ಮನೆಯ ನಿರ್ಮಾಣ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಹೇಳುವಿರಿ. ಸೇವಾವೃತ್ತಿಯಲ್ಲಿ ಇರುವವರಿಗೆ ಗೌರವ ಲಭ್ಯವಾಗುವುದು. ಮನೆಯಲ್ಲಿ ಕುಳಿತು ಕೆಲಸ ಮಾಡು ಉದ್ಯೋವನ್ನು ಆಯ್ದುಕೊಳ್ಳುವಿರಿ ಅಥವಾ ನಿಮಗೆ ಅಂತಹ ಅವಕಾಶವನ್ನು ಕಂಪನಿಯು ಕಲ್ಪಿಸಿಕೊಡುವುದು. ಪ್ರತಿಭೆಗಳನ್ನು ಸರಿಯಾದ ಕಡೆಯಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಡೆಯುವಿರಿ. ಕುಜ ದಶೆ ನಿಮಗೆ ಉತ್ತಮ. ತ್ರಿಗುಣಾತ್ಮಿಕೆಯರನ್ನು ಪೂಜಿಸಿ.
ಸಿಂಹ ರಾಶಿ :ರವಿಯ ಆಧಿಪತ್ಯದ ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳು ಮಿಶ್ರ ಫಲ. ರವಿ ತುಲಾ ನೀಚಸ್ಥಾನವಾದ ಕಾರಣ ನೀಚಗಾಮಿಯಾಗಿ ದುರ್ಬಲನಾಗುವನು. ಚಂದ್ರನ ನಕ್ಷತ್ರದಲ್ಲಿ ಸಂಚಾರ ಮಾಡುವ ಕಾರಣ ದಾಂಪತ್ಯ ಚೆನ್ನಾಗಿರುವುದು. ಗುರು ದಶೆ ನಿಮಗೆ ಅತ್ಯಂತ ಶುಭಪ್ರದ. ಒಳ್ಳೆಯದಾದ ಅಲ್ಪ ಪ್ರಯತ್ನಕ್ಕೆ ಅನಿರೀಕ್ಷಿತ ಫಲ ಸಿಗಲಿದೆ. ನಿಮಗೆ ಫಲ ದೊರೆತಿದೆ ಎಂದಾದರೆ ಶುಭ ಕಾರ್ಯವನ್ನೇ ಮಾಡಿದ್ದೀರಿ ಎಂಬುದು ನಿಶ್ಚಿತ. ಹೀಗಿದ್ದರೂ ನಿಮ್ಮ ಬಗ್ಗೆಯೇ ಸಲ್ಲದ ಕಲ್ಪನೆಗಳು ಹೆಚ್ಚಾಗುವುದು. ನಿಮ್ಮನ್ನು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳುವ ಆಸೆ ಇರುವುದು. ನಿಮ್ಮ ತಿಳಿವಳಿಕೆಗೆ ಎಲ್ಲರೂ ಅಚ್ಚರಿಗೊಳ್ಳುವರು. ಸುಬ್ರಹ್ಮಣ್ಯನ ಉಪಾಸನೆ ಮಾಡಿ.
ಕನ್ಯಾ ರಾಶಿ :ಬುಧಾಧಿಪತಿಯ ಈ ರಾಶಿಯವರಿಗೆ ಈ ತಿಂಗಳಲ್ಲಿ ಬುಧಾದಿತ್ಯ ಯೋಗವು ಸಂಭವಿಸಲಿದೆ. ಸಂಶೋಧನೆ, ಸೃಜನಾತ್ಮಕತೆ ಇವರಲ್ಲಿ ಹೆಚ್ಚು ಕಾಣಿಸುವುದು. ಉದ್ಯೋಗದಲ್ಲಿ ನಿಮ್ಮ ಸ್ಮಾರ್ಟ್ ನೆಸ್ ತೋರಿಸಲು ಅವಕಾಶ ಒದಗುವುದು. ವೈವಾಹಿಕ ಸುಲಭವಾಗಿ ಕೂಡಿಬರದು. ಅನೇಕರ ಜೊತೆ ಚರ್ಚೋಪಚರ್ಚೆಯನ್ನು ಮಾಡಿ ಅನಂತರ ತೀರ್ಮಾನಕ್ಕೆ ಬರುವುದು. ಬುಧ ದಶೆ ನಿಮಗೆ ಉತ್ತಮವಾಗಿದೆ. ಸ್ವರಾಶಿ ಮತ್ತು ಉಚ್ಚಸ್ಥಾನದಲ್ಲಿ ಇರುವ ಕಾರಣ ಪಾಂಡಿತ್ಯ, ಜ್ಞಾನ ಪ್ರಸರಣ ಕಾರ್ಯಗಳನ್ನು ಎಲ್ಲರ ಮೆಚ್ಚುಗೆ ಗಳಿಸುವಂತೆ ಮಾಡುವಿರಿ. ಮಾತು ಹರಿತವಾಗಿದ್ದರೂ ಅದನ್ನು ಬಹಳ ಲಾಲಿತ್ಯದಿಂದ ಹೇಳುವಿರಿ. ಗೋವಿನ ಸೇವೆಯನ್ನು ಆಗಾಗ ಮಾಡಿ.
ತುಲಾ ರಾಶಿ :ಏಳನೇ ರಾಶಿಯವರಿಗೆ ಈ ತಿಂಗಳಲ್ಲಿ ಮಿಶ್ರ ಫಲ. ರಾಶಿ ಅಧಿಪತಿ ಏಕಾದಶದಲ್ಲಿ ಇದ್ದೂ ತನ್ನ ಶತ್ರುವಿನ ರಾಶಿಯಲ್ಲಿ ಇರುವನು. ನಿಮ್ಮ ಸ್ಟೇಟಸ್ ನಿಮಗೇ ಖುಷಿಕೊಡದು. ಆದಾಯ ಬರುತ್ತದೆ ಎಂದುಕೊಳ್ಳುವಷ್ಟರಲ್ಲಿ ಮತ್ತೇನೋ ಆಗಿ ಕೈ ತಪ್ಪುವುದು. ಕೇತುವೂ ರಾಶಿಯಲ್ಲಿ ಇದ್ದು ಪ್ರೀತಿಯ ಅಧ್ಯಾಯ ಮುಕ್ತಾಯವಾಗಲಿದೆ. ಶುಕ್ರದಶೆ ಈ ರಾಶಿಯವರಿಗೆ ವಿವಾಹ, ಪ್ರೇಮ, ಬಾಂಧವ್ಯ, ಭೋಗಗಳಿಗೆ ಶುಭವಲ್ಲ. ಗುರುಬಲವು ಚೆನ್ನಾಗಿದೆ. ಸಾಮಾಜಿಕ ಕಾರ್ಯಗಳಿಗೆ ಅವಕಾಶ. ಧರ್ಮದಲ್ಲಿ ಶ್ರದ್ಧೆ ಇರಲಿದೆ. ಗುರುವಿನ ದೃಷ್ಟಿ ನಿಮ್ಮ ರಾಶಿಗೆ ಇದ್ದು, ಎಲ್ಲವೂ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಮತ್ತೇನೋ ಗೊತ್ತಾಗುವುದು. ಅದೇ ನಿಮ್ಮನ್ನು ನಡೆಸುವುದು. ನಿಮ್ಮದಾದ ಸಾಧನೆಯೂ ಗಣನೀಯವಾಗಿರಲಿದೆ. ಉನ್ನತ ಪದವಿ ಸಿಗುವುದು. ಮಹಾಗಣಪತಿಯನ್ನು ಉಪಾಸಿಸಿ.
ವೃಶ್ಚಿಕ ರಾಶಿ :ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳು ಶುಭವಾದುದಲ್ಲ. ರಾಶಿಯ ಅಧಿಪತಿ ದ್ವಾದಶ ಸ್ಥಾನಕ್ಕೆ ಬಂದು ರಾಹುವಿನ ಸ್ವಾತಿ ನಕ್ಷತ್ರದಲ್ಲಿ ಇರುವನು. ಗುಪ್ತವಾಗಿ ಪ್ರೇಮವಿರುವುದು. ಯಾರಲ್ಲಿಯೂ ಹೇಳಿ ಕೊಳ್ಳಲಾರಿರಿ. ಶತ್ರುಗಳ ಬಗ್ಗೆ ನಿರ್ಲಕ್ಷ್ಯ ಇದ್ದರೂ ಜಾಗರೂಕತೆಯಂತೂ ಬೇಕು. ಉದ್ಯೋಗದ ನಿಮಿತ್ತ ವಿದೇಶ ಪ್ರವಾಸ ಮಾಡುವಿರಿ. ವಿವಾಹಕ್ಕೆ ಯೋಗ್ಯವಾದ ಕಾಲವಲ್ಲ. ವಿವಾಹ ಕಾರಕ ಶುಕ್ರನು ಶತ್ರುವಿನ ರಾಶಿಯಲ್ಲಿ ತನ್ನದೇ ನಕ್ಷತ್ರದಲ್ಲಿ ಇದ್ದು ವಿರೋಧಗಳು ಬರಲಿವೆ. ಉದ್ಯೋಗದಲ್ಲಿ ಮಾನಸಿಕ ತಿಕ್ಕಾಟ ಹೆಚ್ಚುವುದು. ಕುಜ ದಶೆ ಉತ್ತಮವಲ್ಲದ ಕಾರಣ ವಾಹನದಿಂದ ನೋವು, ಗಾಯಗಳನ್ನು ಮಾಡಿಕೊಳ್ಳುವಿರಿ. ಪ್ರಸಿದ್ಧ ಸುಬ್ರಹ್ಮಣ್ಯನ ಕ್ಷೇತ್ರದಲ್ಲಿ ಪ್ರಿಯವಾದ ಸೇವೆಯನ್ನು ಮಾಡಿಸಿ, ಗೋಪೂಜೆಯನ್ನು ಮಾಡಿ.
ಧನು ರಾಶಿ :ಸಪ್ಟೆಂಬರ್ ತಿಂಗಳುಗಳ ನಿಮ್ಮ ರಾಶಿಯ ಅಧಿಪತಿ ಗುರು ಸಪ್ತಮ ಸ್ಥಾನದ ಮಿಥುನ ರಾಶಿಯಲ್ಲಿ ಪುನರ್ವಸು ನಕ್ಷತ್ರದಲ್ಲಿ ಇರುವನು. ವಿವಾಹಕ್ಕೆ ಯೋಗ್ಯವಾದ ಕಾಲವಿದಾಗಿದ್ದು ಉತ್ತಮ ವಂಶದ ಸಂಗಾತಿಯನ್ನು ವರಿಸುವಿರಿ. ಬೌದ್ಧಿಕತೆ ವಿಚಾರದಲ್ಲಿ ಪ್ರಗತಿ ಇರಲಿದೆ. ಗುರು ದೆಶೆಯವರಿಗೆ ಈ ಸಂದರ್ಬದಲ್ಲಿ ಗೌರವ, ನೆಮ್ಮದಿ, ಆರ್ಥಿಕ ಸುಧಾರಣೆ ಎಲ್ಲವೂ ಲಭಿಸುವುದು. ಇನ್ನು ಉದ್ಯೋಗ ವಿಚಾರಕ್ಕೆ ಬಂದರೆ ಬುಧನು ಕುಜನ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು ದ್ರವ ವಸ್ತುಗಳ ಉದ್ಯಮ, ವ್ಯಾಪಾರದಲ್ಲಿ ಪೈಪೋಟಿ, ಕಲಹ, ಅಶಾಂತಿ ಉಂಟಾಗಲಿದೆ. ದೇಶ ಪರ್ಯಟನೆಗಾಗಿ ವಿದೇಶ ಸುತ್ತುವಿರಿ. ಪ್ರೌಢಾವಸ್ಥೆಯಲ್ಲಿ ಇರುವವರು ನಗರದ ಸೌಂದರ್ಯಕ್ಕಿಂತ ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮಹತ್ತ್ವ ಕೊಡುವಿರಿ. ಎಲ್ಲ ಅನುಕೂಲತೆಗಳಿದ್ದರೂ ಆಡಂಬರದ ಧಾರ್ಮಿಕ ಭಾವವನ್ನು ಬಿಟ್ಟು, ಶುದ್ಧಮನಸ್ಸಿನಿಂದ ಇಷ್ಟದೇವರನ್ನು ಭಜಿಸಿ.
ಮಕರ ರಾಶಿ :ಈ ತಿಂಗಳಲ್ಲಿ ರಾಶಿ ಅಧಿಪತಿ ಶನಿ ತನಗೆ ಸಮನಾದ ಗುರುವಿನ ಸ್ಥಾನದಲ್ಲಿ ತನ್ನದೇ ನಕ್ಷತ್ರಾಧಿಪತ್ಯದಲ್ಲಿ ಇದ್ದಾನೆ. ಯಾವ ಕಾರ್ಯವನ್ನು ಮಾಡಿದೂ ಧೈರ್ಯದಿಂದ ಮಾಡುವಿರಿ. ಕಾರ್ಯದ ನಿಮಿತ್ತ ಸುತ್ತಾಟಗಳು ಹೆಚ್ಚಾಗಿರುವುದು. ಸಹೋದರ ನಡುವೆ ಸಮಾನತೆ ಉಂಟಾಗಿ ಬಾಂಧವ್ಯ ಬೆಳೆಯುವುದು. ವೃತ್ತಿಯ ಸ್ಥಳದಲ್ಲಿ ಕೋಪ ಅಧಿಕವಾಗಿ ಬರಲಿದೆ. ವಿವಾಹ ವಿಳಂಬಕ್ಕೆ ಬೇಸರವಾಗಲಿದ್ದು ನಿಮ್ಮೊಳಗೇ ಮುಚ್ಚಿಡುವಿರಿ. ಗುರುಬಲವೂ ಇಲ್ಲದ ಕಾರಣ ಯಾವುದೇ ನಿರೀಕ್ಷಿತ ಫಲವನ್ನು ಪೂರ್ಣವಾಗಿ ಪಡೆಯಲಾಗದು. ಶನಿ ದಶೆ ನಿಮಗೆ ಉತ್ತಮವಾದ ಫಲವನ್ನೇ ಕೊಡಲಿದೆ. ನಿಮ್ಮ ಸಂಪತ್ತಿನ ರಕ್ಷಣೆಗೆ ಹೋರಾಟದ ರೀತಿಯಲ್ಲಿ ಕಾರ್ಯ ಮಾಡಬೇಕಾಗುವುದು. ಶನೈಶ್ಚರನಿಗೆ ತೈಲ ದೀಪವನ್ನು ದೋಷ ಪರಿಹಾರದ ಸಂಕಲ್ಪದೊಂದಿಗೆ ಬೆಳಗಿ.
ಕುಂಭ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ನಿಮಗೆ ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವನು. ಮೀನವು ಮಿತ್ರನ ರಾಶಿಯಾಗಿ ಶನಿಯ ನಕ್ಷತ್ರದಲ್ಲಿಯೇ ಇರುವ ಕಾರಣ ಆರ್ಥಿಕತೆ ಸ್ವಲ್ಪ ಅಹಿತಕರವಾಗಿರಲಿದೆ. ಬರಬೇಕಾದ ಹಣವನ್ನು ಬೇಗ ಪಡೆಯಲಾಗದು. ಎಷ್ಟೇ ಒತ್ತಡವಿದ್ದರೂ ನೀವು ಮತ್ತೇನೋ ವ್ಯವಸ್ಥೆ ಮಾಡಿಕೊಳ್ಳಬೇಕು. ಶನಿ ದಶೆ ಉತ್ತಮವೇ ಆಗಿದ್ದು, ಅದರ ಫಲ ನಿಮಗೆ ಕೂಡಲೇ ಸಿಗದು. ನಿಮ್ಮ ರಾಶಿಯಲ್ಲಿ ರಾಹುವಿದ್ದು ಗುರುವಿನ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಮಾನಸಿಕ ದೈಹಿಕ ಕ್ಲೇಶಗಳು ಬಂದರೂ ಸಕಾರಾತ್ಮಕವಾಗಿ ಇರುವರು. ಇದೊಂದು ಅವರಿಗೆ ಇರುವ ಹೆಚ್ಚುಗಾರಿಕೆ. ಸಂಗಾತಿ ಅಥವಾ ಸ್ತ್ರೀಯರ ಒಡನಾಟ ಅಧಿಕವಾಗಲಿದೆ. ಜಾಗರೂಕತೆ ಇದ್ದರೆ ಒಳ್ಳೆಯದು. ಕೇತುವಿನ ಜೊತೆ ಇರುವ ಕಾರಣ ನಿಮ್ಮ ದಾರಿಯನ್ನು ತಪ್ಪಿಸುವನು. ಆಶ್ಲೇಷಾ ನಕ್ಷತ್ರದಲ್ಲಿ ಅಥವಾ ಮಂಗಳವಾರದಂದು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿಮ್ಮದಾದ ಸೇವೆಯನ್ನು ಮಾಡಿಸಿ.
ಮೀನ ರಾಶಿ :ರಾಶಿಯ ಅಧಿಪತಿ ಗುರುವು ಬುಧನ ರಾಶಿಯಾದ ಮಿಥನದಲ್ಲಿ ಇದ್ದು ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಿರುವನು. ಪುನರ್ವಸು ಗುರು ಆಧಿಪತ್ಯ ನಕ್ಷತ್ರ. ಸುಖ ಸಂತೋಷವನ್ನು ಬಯಸಿ ಮಾಡಿದರೆ ಅದು ಸಿದ್ಧಿಸುತ್ತದೆ. ತಾಯಿ ವಿಚಾರದಲ್ಲಿ ತೃಪ್ತಿ ಇರುವುದು. ನಿಮ್ಮ ರಾಶಿಯಲ್ಲಿ ಶನಿಯು ಇದ್ದು ಉತ್ತರಾಭಾದ್ರ ನಕ್ಷತ್ರದಲ್ಲಿಯೇ ಇರುವನು. ಶನಿಯ ಆಧಿಪತ್ಯ ನಕ್ಷತ್ರವೇ ಆಗಿದೆ. ಗುರು ಹಾಗೂ ಶನಿ ದಶೆ ನಿಮಗೆ ಸದ್ಯದಲ್ಲಿ ಉತ್ತಮವಾದುದಾಗಿದೆ. ವಿವಾಹಕ್ಕೆ ಪೂರ್ಣ ಬಲವಿಲ್ಲದೇ ಇದ್ದರೂ ಅಲ್ಪ ಬಲವಿರುವ ಕಾರಣ ನಿಶ್ಚಯಕ್ಕೆ ಬರಬಹುದು. ಶುಕ್ರನು ನಿಚಗಾಮಿಯಾಗಿ ಶತ್ರುವಿನ ಮನೆಯಲ್ಲಿ ಕೇತುವಿನ ಜೊತೆ ಇರುವ ಕಾರಣ ಭೋಗ ಜೀವನ ಅಸ್ತವ್ಯಸ್ತವಾಗುವುದು. ಶತ್ರುಗಳಿಂದ ಕೆಳಮಟ್ಟದ ಕಾರ್ಯವೂ ಆಗಲಿದೆ. ಸುದರ್ಶನ ಮಂತ್ರವನ್ನು ಪಠಿಸಿ.
– ಲೋಹಿತ ಹೆಬ್ಬಾರ್ – 8762924271 (what’s app only)