AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 27 August: ಗಣೇಶ ಚತುರ್ಥಿಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ ಬುಧವಾರ ಆರ್ಥಿಕ ಹಿಂಜರಿಕೆ, ಉತ್ತಮ‌ ಯೋಜನೆ, ಅಪಖ್ಯಾತಿ, ಸಣ್ಣ ಸೇವೆ, ಮಾತಿನ ಉಳಿವಿಗೆ ಹಠ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Horoscope Today 27 August: ಗಣೇಶ ಚತುರ್ಥಿಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 27, 2025 | 4:55 AM

Share

ಬೆಂಗಳೂರು, ಆಗಸ್ಟ್ 27, ನಿತ್ಯಪಂಚಾಗ:​ ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ ನಿತ್ಯನಕ್ಷತ್ರ : ಚಿತ್ರಾ, ಯೋಗ : ಶಿವ, ಕರಣ : ವಣಿಜ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:34 – 14:07, ಗುಳಿಕ ಕಾಲ 11:01 – 12:34 ಯಮಗಂಡ ಕಾಲ 07:55 – 09:28

ಗಣೇಶ ಚತುರ್ಥಿ ಅತಿ ದೊಡ್ಡ ಹಬ್ಬ. ಜೀವನದಲ್ಲಿ ಬರುವ ಹಲವು ರೀತಿಯ ಸಂಕಟಗಳು ಹಲವು ಬಾರಿ ಬರುತ್ತವೆ. ಬಾರದೇ ಇರಲು ವಿಘ್ನನಾಶಕನೇ ಸರಿಯಾದ ದೈವ. ಅವನ ಆರಾಧನೆ ಒಳ್ಳೆಯ ಬುದ್ಧಿ ಹಾಗು ಕಾರ್ಯದ ಸಿದ್ಧಿಯನ್ನೂ ಮಾಡಿಸುವನು. ಬುಧವಾರ ಅವನಿಗೆ ಪ್ರಿಯವಾದ ವಾರವೂ ಹೌದು. ವಾಕ್ಚಾತುರ್ಯಕ್ಕೆ ಗಣಪತಿ ಅನುಗ್ರಹ ಇರಲಿದೆ. ಮಂಗಲಮೂರ್ತಿಯ ಅನುಗ್ರಹ ಸದಾ ಎಲ್ಲರ ಮೇಲೆ ಇರಲಿ.

ಮೇಷ ರಾಶಿ: ಏನೂ ತೊಂದರೆ ಇಲ್ಲದೇ ಇರುವುದೂ ಕೆಲವೊಮ್ಮ ಆತಂಕಕ್ಕೆ ದಾರಿ ಮಾಡುವುದು. ಮಹಾ ಅನಾಹುತವನ್ನೂ ನೀವು ಮನಸ್ಸಿನಲ್ಲಿ ಭಾವಿಸುವಿರಿ. ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ವಾದ ಮಾಡಿ ಗೆಲ್ಲುವುದಕ್ಕಿಂತ ವಾಸ್ತವವನ್ನು ಅರಿತು ಸುಮ್ಮನಾಗುವುದು ಉತ್ತಮ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ‌ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವುದು ಉತ್ತಮ. ಎಂದಿನಂತೆ ನಿಮ್ಮ ನಿರೀಕ್ಷೆಯು ಸತ್ಯವಾಗದೇ ಇರಬಹುದು. ಹಗುರಾದ ಮನಸ್ಸಿನಿಂದ ಉತ್ಸಾಹವು ಅಧಿಕವಾಗುವುದು. ಹಳೆಯ ನೋವಿನಿಂದ ಪುನಃ ದುಃಖಿಸುವಿರಿ. ಇಂದು ನೀವು ನಿಯಮಗಳನ್ನು ಪಾಲಿಸಲು ಕಷ್ಟಪಡಬೇಕಾದಿಕತು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳದ ತುತ್ತಾಗಬಹುದು. ನಿಮ್ಮಿಂದಾಗದ ಕಾರ್ಯವನ್ನು ಯಾರಿಂದಲಾದರೂ ಮಾಡಿಸುವಿರಿ. ವ್ಯಕ್ತಿಗಳ ಮೇಲೆ‌ನಂಬಿಕೆಯನ್ನು ನೀವು ಕಳೆದುಕೊಳ್ಳುವಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ.

ವೃಷಭ ರಾಶಿ: ಬಂಧುಗಳಲ್ಲಿ ತರತಮ ಭಾವವನ್ನು ತೋರಿಸುವಿರಿ. ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು. ಆಕಸ್ಮಿಕ‌ ಪ್ರಯಾಣವು ಬಂದಿದ್ದು, ಇದರಿಂದ ನಿಮಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು. ಎಲ್ಲಿಗಾದರೂ ಪ್ರಯಾಣ ಮಾಡುವ ಉತ್ಸಾಹವಿರುವುದು. ಹಸಿದ ಹೊಟ್ಟೆಯನ್ನು ತಣಿಸಬಹುದು. ಅಸೂಯೆಯ ಹೊಟ್ಟೆಯನ್ನಲ್ಲ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರಿಸರವನ್ನು ಬದಲಿಸುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವಿಲ್ಲದೇ ಇಂದು ನಿಮ್ಮ ಕೆಲಸವು ಆಗಲಿದೆ. ದೂರುಗಳು ನಿಮ್ಮನ್ನು ಜಾಗರೂಕಮಾಡಬಹುದು. ಸ್ನೇಹಿತರ ಜೊತೆ ಮನೋರಂಜನೆಯಲ್ಲಿ‌ ಕಾಲವನ್ನು ಕಳೆಯುವಿರಿ. ನಿಮ್ಮ‌ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ನಿಮ್ಮದಲ್ಲದ್ದನ್ನು ಇಷ್ಟಪಡುವುದು ಬೇಡ. ಪರರ ಭಾವನೆಗೆ ಅನಾದರ ತೋರುವುದು ಬೇಡ. ತೆರೆಯಲ್ಲಿರುವುದನ್ನು ಕಾಣಲು ಕಾಲದ ಪರದೆ ಸರಿಯಬೇಕು.

ಮಿಥುನ ರಾಶಿ: ನೈತಿಕತೆ ಇದ್ದರೆ ಆತ್ಮ ವಿಶ್ವಾಸ ತಾನಾಗಿ ಪ್ರಕಟವಾಗಲಿದೆ. ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಲೆಕ್ಕ ಶೋಧಕರಿಗೆ ಒತ್ತಡ ಹೆಚ್ಚು. ನಿಮ್ಮ‌ ಪ್ರಯಾಣದಲ್ಲಿ ಕೆಲವು ತೊಂದರೆಗಳು ಆಗಬಹುದು. ನಿಮ್ಮವರ ಅನಾರೋಗ್ಯವನ್ನು ಸರಿಮಾಡಿಕೊಳ್ಳಲು ಓಡಾಟ ಮಾಡಬೇಕಾದೀತು. ಮಿತಿಯರಿತು ನೀವು ವ್ಯವಹರಿಸುವುದು ಮುಖ್ಯ. ಸಾಲ ಮಾಡವ ಸ್ಥಿತಿಯೂ ಬರಬಹುದು. ಶಿಸ್ತಿನ ಕೆಲಸಕ್ಕೆ ನಿಮ್ಮನ್ನು ಪ್ರಶಂಸಿಸಬಹುದು. ಜಾರಿ ಬೀಳುವಾಗ ನಿಮ್ಮನ್ನು ಕೈ ಹಿಡಿದು ತಡೆಯುವರು. ಅಧಿಕವೇತನವು ಸಿಗುವ ಕೆಲಸವನ್ನು ಅನ್ವೇಷಿಸುವಿರಿ. ಹಣದ ಹಿಂದೆ ಬಿದ್ದು, ನೀವು ಮಾಡಬಾರದ ಕೆಲಸಕ್ಕೆ ಕೈ ಹಾಕಬೇಕಾದೀತು. ಎಂದೋ ಆಡಿದ ಮಾತಿಗೆ ಇಂದು ಅನುಭವಿಸುವ ಸ್ಥಿತಿ ಬರಬಹುದು. ನಿಮ್ಮವರು ನಿಮ್ಮನ್ನು ನಿರ್ಲಕ್ಷಿಸಬಹುದು. ಯಾವುದೋ ಯೋಚನೆಯಲ್ಲಿ ನೀವು ಮಗ್ನರಾಗಿ ಚಿಂತೆಪಡುವ ಸಾಧ್ಯತೆ ಇದೆ. ಕೊಟ್ಟ ಹಣವನ್ನು ಹೊಂಪಡೆಯುವುದು ಕಷ್ಟ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು.

ಕರ್ಕಾಟಕ ರಾಶಿ: ಧಾರ್ಮಿಕ ಮುಖಂಡರಿಗೆ ಆದಾಯದ ಮೂಲ ಹೆಚ್ಚಾಗುವುದು. ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಸಂಪೂರ್ಣ ವಿಶ್ವಾಸ ಬರಬಹುದು. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ತಪ್ಪಿಗೆ ಪಶ್ಚಾತ್ತಾಪವು ಸಣ್ಣ ಪ್ರಾಯಶ್ಚಿತ್ತವಾಗುವುದು. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ನಿಮಗೆ ಕಷ್ಟವಾದ ವಿಚಾರಗಳನ್ನು ನೀವು ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮನ್ನು ನೀವು ಅಲ್ಪರೆಂದು ಭಾವಿಸುವಿರಿ. ಮನಸ್ಸು ಭಾರವಾಗಿದ್ದು ಎಲ್ಲದರಿಂದ ದೂರವಿರಲು ಇಚ್ಛಿಸುವಿರಿ. ಎಲ್ಲದಕ್ಕೂ ಭಯವಾಗಲಿದೆ. ನಿಮ್ಮ ಮಾತುಗಳಿಗೆ ಅಪಾರ್ಥವು ಬಂದು ಅಪವಾದವೂ ಕೇಳಿ ಬರಬಲಿದೆ. ಅನಿರೀಕ್ಷಿತ ವಾರ್ತೆಯನ್ನು ನೀವು ಕೇಳುವಿರಿ. ನಿಮ್ಮ ಆತಂಕವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಕಾರ್ಯದ ಒತ್ತಡದಿಂದ ಮನಸ್ಸು ಭಾರವಾಗಲಿದೆ. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಿಸಬಹುದು.

ಸಿಂಹ ರಾಶಿ: ನಿಮ್ಮ ಕಾರ್ಯಕ್ರಮಕ್ಕೆ ಅನ್ಯರ ಸಹಯೋಗವನ್ನು ಅಪೇಕ್ಷಿಸುವಿರಿ. ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ದೊಡ್ಡ ಸ್ಥಾನದಲ್ಲಿದ್ದು ಸಣ್ಣ ಮನಸ್ಸು ಮಾಡುವುದು ಬೇಡ. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಎನಿಸಬಹುದು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಅವರ ಜೊತೆ ಕಲಹವಾಡಿ ಬರುವಿರಿ. ನೀವು ಇಷ್ಟ ಬಂದಕಡೆ ತೆರಳುವಿರಿ. ಉದ್ಯಮದ ಆರಂಭದಲ್ಲಿ ಕೆಲವು ನಷ್ಟಗಳು ಸಹಜ. ಅಲ್ಲಿಂದ ಪಾಠವೇ ಸಿಗುವುದು, ಹಣವಲ್ಲ. ದೇವಾಲಯದಲ್ಲಿ ಸ್ವಲ್ಪ ಕಾಲ ಕಳೆದು ಬರುವ ಮನಸ್ಸಾಗಲಿದೆ. ವಿದ್ಯಾರ್ಥಿಗಳು ಒಮ್ಮನಸ್ಸಿನಿಂದ ಓದಲು ಕುಳಿತುಕೊಳ್ಳುವುದು ಅವಶ್ಯಕ. ಹಳೆಯ ಸ್ನೇಹಿತರು ಅಕಸ್ಮಾತ್ ಸಿಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಉದ್ವೇಗ ಬೇಡ.

ಕನ್ಯಾ ರಾಶಿ: ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸದ ಐಡಿಯಾಗಳನ್ನು ಪಡೆದು ಉದ್ಯಮದಲ್ಲಿ ತರಲು ನೋಡುವಿರಿ. ನೌಕರರಿಗೂ ಅದನ್ನು ಹೇಳುವಿರಿ. ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಗ್ರಾಹಕರ ಬೇಡಿಕೆಯನ್ನು ಈಡೇರಿಸುವಿರಿ. ನಿಮ್ಮ ಪ್ರಯತ್ನಕ್ಕೆ ಪ್ರತಿಫಲವು ಸಿಗಬೇಕೆಂದು ನೀವು ಅಂದುಕೊಳ್ಳುವುದು ಸರಿಯಾಗದು. ನಿಮ್ಮವರಲ್ಲದವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುವುದು ಬೇಡ. ಯಾರಿಂದಲಾದರೂ ನಿಮಗೆ ಜಟಿಲ ಸಮಸ್ಯೆಗೆ ಪರಿಹಾರ ಲಭ್ಯವಾಗುವುದು. ನಿಮ್ಮ ಇಂದಿನ ಮಾತಿನಿಂದ ಕುಟುಂಬದಲ್ಲಿ ಉಂಟಾಗುವ ಕಲಹವನ್ನು ತಪ್ಪಿಸಬಹುದು. ಆಪ್ತರನ್ನು ಕಳೆದುಕೊಂಡ ಸುದ್ದಿಯು ನಿಮಗೆ ದುಃಖವನ್ನು ತರಬಹುದು.‌ ಗೌರವವನ್ನು ಪಡೆಯುವುದಕ್ಕಿಂತ ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಏರು ದನಿ ಹಲವು ಮಾನಸಿಕ ಒಡಕುಗಳನ್ನು ಮುಚ್ಚಿಹಾಕುವುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ.

ತುಲಾ ರಾಶಿ: ಇಂದು ಕಾರ್ಯದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಅಪಖ್ಯಾತಿ, ಕಳಂಕ, ವಿರೋಧಗಳು ಬರಬಹುದು. ಕುರುಡ ಕತ್ತವನ್ನು ಹೊಸೆದಂತೆ ಆಗಬಹುದು. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಯಥೇಚ್ಛ ಸುತ್ತಾಟವು ನಿಮಗೆ ಆಯಾಸವನ್ನು ತಂದೀತು.‌ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡುವಿರಿ. ಇಂದು ಗುಂಪಿನಲ್ಲಿ ಕೆಲಸ‌ಮಾಡುವುದು ನಿಮಗೆ ಕಿರಿಕಿರಿಯಾದೀತು. ಹಿರಿಯರ ಆಶೀರ್ವಾದ ಪ್ರಾಪ್ತವಾಗುವುದು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸೂಚನೆ ಸಿಗುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ತಲೆಹಾಕುವುದನ್ನು ನಿಲ್ಲಿಸಿ. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನೂತನವಾಗಿ ಖರೀದಿಸಿದ ಯಂತ್ರವು ಕೈ ಕೊಡಬಹುದು. ನಿಮ್ಮ ಮನಸ್ಸನ್ನು ಬದಲಿಸಲು ಬಹಳ ಪ್ರಯತ್ನ ನಡೆಯುವುದು.‌ ಹಿಂದಿನ ಘಟನೆಯೇ ಪುನರಾವರ್ತನೆ ಆಗುವುದು. ನಿಮ್ಮನ್ನು ದ್ವೇಷಿಸುವವರನ್ನು ನಿರ್ಲಕ್ಷಿಸಿ ಮುನ್ನಡೆಯುವಿರಿ.

ವೃಶ್ಚಿಕ ರಾಶಿ: ನಿಮ್ಮನ್ನು ಚೆನ್ನಾಗಿ ಮಾರ್ಕೆಟಿಂಗ್ ಮಾಡಿಕೊಳ್ಳುವಿರಿ. ಇಂದು ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡಿ ಮುಂದುವರಿಯುವಿರಿ. ಬೇಡದ ಸಲಹೆಗಳು ನಿಮ್ಮ ಮನಸ್ಸನ್ನು ಹಾಳುಮಾಡುವುದು. ಇಂದು ನೀವು ಅಧಿಕವಾಗಿ ಮಾತನಾಡದೇ ಸುಮ್ಮನಿರುವುದು ಉತ್ತಮ. ತಂಪಾದ ಪರಿಸರ ನಿಮಗೆ ಹಿತವನ್ನು ನೀಡುವುದು. ಕಾಲಹರಣಕ್ಕೆ ನಿಮಗೆ ಇನ್ನೊಬ್ಬರ ವಿಚಾರವನ್ನು ಆಡಿಕೊಳ್ಳುವಿರಿ. ಕಛೇರಿಯಲ್ಲಿ ನೀವು ಪಕ್ಷಪಾತ ಮಾಡುವಂತೆ ಕೋರುವುದು. ಸಂಗಾತಿಯ ಮನಸ್ಸನ್ನು ನೋಯಿಸಿ ಅದನ್ನು ಸರಿಪಡಿಸುವಿರಿ.‌ ಹಳೆಯ ಸ್ನೇಹಿತರ ಜೊತೆ ದೂರಪ್ರಯಾಣವನ್ನು ಮಾಡುವಿರಿ. ತಂದೆಯನ್ನು ನೋಡುವ ಹಂಬಲ ಅಧಿಕವಾಗುದು. ನಿಮ್ಮ‌ ಲೆಕ್ಕಾಚಾರವು ಬುಡಮೇಲಾದೀತು. ಭೂವ್ಯವಹಾರವು ಸುಖಾಂತ್ಯ ಮಾಡಿಕೊಳ್ಳಿ. ನಿಮ್ಮ ಒಳ್ಳೆಯ‌ ಸ್ವಭಾವದ ಬಗ್ಗೆ ಮಾತನಾಡುವರು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ವೇಗದಲ್ಲಿ ಸಿಗುವ ಯಶಸ್ಸು ಶಾಶ್ವತವಲ್ಲ.

ಧನು ರಾಶಿ: ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಅಮೂಲ್ಯ ವಸ್ತುಗಳು ಹಾಳಾದೀತು. ನಿಮ್ಮ ಅಪೂರ್ಣ ಕಾರ್ಯಗಳಿಗೆ ಅಂತ್ಯವನ್ನು ಕಾಣಿಸುವಿರಿ. ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಟವಾದೀತು.‌ ಏನೇನೋ ಯೋಚನೆಗಳು ಬರಬಹುದು. ಮನೆಯಿಂದ ದೂರದಲ್ಲಿ ನೀವು ವಾಸಮಾಡುವ ಸಂದರ್ಭವು ಬರಬಹುದು.‌ ನಿಮ್ಮ ಕೋಪ ಮತ್ತು ಉದ್ವೇಗವನ್ನು ಕೆಲವು ಕಾಲಗಳವರೆಗೆ ನಿಯಂತ್ರಣದಲ್ಲಿ ಇರಿಸಬೇಕಾಗುವುದು. ದಾಂಪತ್ಯ ಬಾಂಧವ್ಯವನ್ನು ಹಿರಿಯರೆದುರು ತೋರಿಸುವಿರಿ. ಇಂದಿನ‌ ಕೆಲಸವನ್ನು ಸರಿಯಾಗಿ ಮಾಡಲು ಕಷ್ಟಪಡುವಿರಿ. ತಾಯಿಯ ಮಾತನ್ನೂ ನೀವು ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ಸಾಹಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ಅದೃಷ್ಟದಿಂದ ನಿಮ್ಮ ಕಾರ್ಯ ಸಾಧ್ಯ. ದೇಹಕ್ಕೆ ಪೆಟ್ಟುಮಾಡಿಕೊಳ್ಳಲು ನೀವು ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳಬಹುದು. ನಿಮ್ಮ‌ ನೈಪುಣ್ಯತೆಯನ್ನು ಕೆಲಸದಲ್ಲಿ ತೋರಿಸಿ. ಉತ್ತಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ. ವಾಗ್ವಾದಕ್ಕೆ ಹೋಗಿ‌ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ.

ಮಕರ ರಾಶಿ: ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಕಾನೂನಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ ಇದೆ. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ನಿಮ್ಮ ಆಸ್ತಿಯ ಬಗ್ಗೆ ನಿಮಗೇ ಸಂಪೂರ್ಣವಾದ ಮಾಹಿತಿ ಕೊರತೆಯಾಗುವುದು.‌ ಅಧಿಕಾರದಿಂದ ನಿಮ್ಮ ಆಸೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಮನಸ್ಸಿನಲ್ಲಿ ಇರುವುದನ್ನು ಯಾರ ಜೊತೆಗಾದರೂ ಹೇಳಿಕೊಳ್ಳುವಿರಿ. ನಿಮ್ಮ‌ ನೋವಿಗೆ‌ ಸ್ಪಂದಿಸಲು ಯಾರಾದರೂ ಸಿಕ್ಕಾರು. ನಿಮ್ಮ‌ ಒಳ್ಳೆಯ ಚಿಂತನೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ನಿಮಗೆ ಇಷ್ಟವಾದುದನ್ನು ನೀವು ಪಡೆಯುವಿರಿ. ಸ್ವಾಭಿಮಾನವು ನಿಮ್ಮನ್ನು ಕಟ್ಟಿಹಾಕಬಹುದು. ಇಂದಿನ ವಾಯು ವಿಹಾರವು ನಿಮಗೆ ಹಿತವೆನಿಸುವುದು. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ‌ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ.

ಕುಂಭ ರಾಶಿ: ಅಪಾಯ ಬರುತ್ತದೆ ಎಂಬ ಸೂಚನೆ ಸಿಗಲಿದ್ದು, ಅಂತಹ ಕಾರ್ಯಗಳಿಂದ ದೂರವಿರಿ. ಒತ್ತಾಯಿಸಿದರೂ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಿ‌. ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ವ್ಯಾಪಾರದ ಸಂಚು ನಿಮಗೆ ಗೊತ್ತಾಗದೇ ಹೋಗಬಹುದು. ಇಂದಿನ‌ ನಿಮ್ಮ ಆರಂಭವು ಬಹಳ ಸಂತೋಷದಿಂದ‌ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ಯಾವುದನ್ನೂ ಮಾಡಲಾರಿರಿ. ಕೋಪವನ್ನು ಸ್ವಲ್ಪ ಕಡಿಮೆ‌ ಮಾಡಿಕೊಳ್ಳುವುದು ಉತ್ತಮ.‌ ಇಂದಿನ ತುರ್ತು ಕಾರ್ಯಗಳ ನಡುವೆ ನಿಮಗೆ ಸಮಯ ಹೊಂದಾಣಿಕೆ ಕಷ್ಟವಾಗಬಹುದು. ನಿಮ್ಮ‌ ಅಮೂಲ್ಯ ವಸ್ತುಗಳನ್ನು ಜಾಗರೂಕತೆಯಿಂದ‌ ಇಟ್ಟುಕೊಳ್ಳಿ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸುವಿರಿ. ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಇರುವುದು‌. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ಸಾಗಿದ ದಾರಿಯನ್ನು ನೀವು ನೆನಪಿಸಿಕೊಳ್ಳುವಿರಿ. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು.

ಮೀನ ರಾಶಿ: ಇಂದು ಪಕ್ಕದವರಿಂದಲೇ ದ್ರೋಹಕ್ಕೆ ಒಳಗಾಗುವ ಸಾಧ್ಯತೆಯಿದೆ. ವ್ಯಾಪಾರ ಚಟುವಟಿಕೆಗಳು ಇಂದು ಕಲಹ ಪೈಪೋಟಿಯ ಜೊತೆ ಇರುತ್ತವೆ. ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ಉತ್ಸಾಹಕ್ಕೆ ದೃಷ್ಟಿ ಬೀಳಬಹುದು. ನೀವು‌ ಇಟ್ಟ ನಂಬಿಕೆಗೆ ಮೋಸವಾಗುವ ಸಾಧ್ಯತೆ ಇದೆ. ಹಣಕಾಸಿನ ಮೌಲ್ಯವನ್ನು ನೀವು ಇಂದು ತಿಳಿದುಕೊಳ್ಳುವಿರಿ. ಇಂದು ನಿಮ್ಮ‌ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ನಿಮಗೆ ಆಗದ ವಿಚಾರವನ್ನು ಮತ್ತೆ ಮತ್ತೆ ಸಹೋದ್ಯೋಗಿಗಳು ನೆನಪಿಸುವರು. ಸಮಯದ ಹೊಂದಾಣಿಕೆ ಮಾಡಿಕೊಳ್ಳಲಾಗದು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ನಿಮ್ಮ‌ ಖರ್ಚಿನಿಂದ‌ ಸ್ನೇಹಿತರಿಗೆ ಭೋಜನ ಹಾಕಿಸುವಿರಿ. ಸ್ನೇಹಿತರ ಸಂತೋಷದಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ‌ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ.

ಲೋಹಿತ ಹೆಬ್ಬಾರ್ – 8762924271 (what’s app only)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ