ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ ಮಂಗಳವಾರ ಗೌರವಕ್ಕೆ ಧಕ್ಕೆ, ಧಾರ್ಮಿಕ ಆಚರಣೆ, ಪ್ರಲೋಭನೆ, ವಸ್ತುಸ್ಥಿತಿಯ ಅವಲೋಕನ, ಅಕಾರಣ ವಿವಾದ, ನಿರುದ್ಯೋಗದಿಂದ ಮನಸ್ತಾಪ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಭಾದ್ರಪದ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಮಂಗಳ, ಪಕ್ಷ: ಕೃಷ್ಣ, ತಿಥಿ: ತೃತೀಯಾ ನಿತ್ಯನಕ್ಷತ್ರ: ಹಸ್ತಾ, ಯೋಗ: ಪರಿಘ, ಕರಣ: ತೈತಿಲ, ಸೂರ್ಯೋದಯ – 06 : 21 am, ಸೂರ್ಯಾಸ್ತ – 06 : 47 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:41 – 17:14, ಗುಳಿಕ ಕಾಲ 12:34 – 14:08 ಯಮಗಂಡ ಕಾಲ 09:28 – 11:01
ಸ್ವರ್ಣಗೌರೀ ತದಿಗೆ ಇಂದಿನ ಹಬ್ಬ. ಗಣೇಶ ಚತುರ್ಥಿಯ ಹಿಂದಿನ ದಿನ ಅವನ ಜನನಿಯ ಹಬ್ಬ. ಸ್ತ್ರೀಯರಿಗೆ ವಿಶೇಷ ವ್ರತದ ದಿನ. ದೀರ್ಘಸುಮಂಗಲಿಯಾಗಿರಲು ಈ ವ್ರತವನ್ನು ಕೆಲವರು ಮಾಡುತ್ತಾರೆ. ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಮುತ್ತೈದೆಯರಿಗೆ ಬಾಗಿನವನ್ನ ಕೊಟ್ಟು ಆಶೀರ್ವಾದವನ್ನು ಪಡೆಯುತ್ತಾರೆ. ಜಗಜ್ಜನನೀ ಪಾರ್ವತೀ ಸಕಲರಿಗೂ ಶುಭವನ್ನೇ ಮಾಡಲಿ.
ಮೇಷ ರಾಶಿ: ಹೊಣೆಗಾರಿಕೆಯ ಸ್ಥಾನವನ್ನು ನೀವೇ ಪಡೆಯಬೇಕಾಗುವುದು. ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ. ನಿಮ್ಮ ಉತ್ಸಾಹವೇ ಸಮಸ್ಯೆಗಳಿಗೆ ರಾಮಬಾಣ. ನಿಮಗೆ ಸ್ವಂತ ಉದ್ಯೋಗದ ಮೇಲೆ ಇರಬೇಕಾದ ಕಾಳಜಿಯು ಅನ್ಯ ಕಾರಣದಿಂದ ಕಡಿಮೆಯಾಗಿ ನಷ್ಟವನ್ನು ಅನುಭವಿಸಬೇಕಾದೀತು. ಬಂದಿದ್ದನ್ನು ಎದುರಿಸುವ ಮನೋಬಲ ಹಾಗೂ ದೇಹಬಲ ಚೆನ್ನಾಗಿರುವುದು. ಹೂಡಿಕೆಯ ವಿಚಾರದಲ್ಲಿ ಆತುರ ಬೇಡ. ಸರಿಯಾಗಿ ಗಮನಿಸಿ ಮುಂದಿನ ಹೆಜ್ಜೆ ಇಡಿ. ನೀವು ವೃತ್ತಿಪರರಾಗಿದ್ದರೆ ಕಛೇರಿಯಲ್ಲಿ ನಿಮಗೆ ಇಂದು ಅಶುಭವಾರ್ತೆಯು ಬರಲಿದ್ದು. ಧೈರ್ಯವನ್ನು ತಂದುಕೊಳ್ಳುವುದು ಮುಖ್ಯ. ಕಳೆದುಕೊಂಡ ಸಂಗಾತಿಯ ನೆನಪು ನಿಮಗೆ ಅತಿಯಾಗಿ ಕಾಡಬಹುದು. ಪುಣ್ಯಕ್ಷೇತ್ರ ನಿಮ್ಮ ಪುಣ್ಯಸಂಗ್ರಹಕ್ಕೆ ಅನುಕೂಲಕರ. ಯಾರೋ ಕೆಲವರಿಗಾಗಿ ನೀವು ಬದಲಾಗುವುದು ಬೇಡ. ಅಪರೂಪದ ಸ್ನೇಹಿತರನ್ನು ಮನೆಗೆ ಕರೆದು ಸಂತೋಷಪಡುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ.
ವೃಷಭ ರಾಶಿ: ವ್ಯವಹಾರದಲ್ಲಿ ಲಾಭ ನಷ್ಟಗಳು ಸಹಜವಾದರೂ ಅದನ್ನು ಗಂಭೀರವಾಗಿ ಕಾಣುವಿರಿ. ಇಂದು ದುರಭ್ಯಾಸದಿಂದ ಸಿಗುವ ಉನ್ನತ ಸ್ಥಾನವು ತಪ್ಪಬಹುದು. ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಹೋಗುವಿರಿ. ಇಂದು ನೀವು ನಿಮಗೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗುವಿರಿ. ಆಸಕ್ತಿ ಇದ್ದರೂ ಅನಿವಾರ್ಯ ಕಾರಣದಿಂದ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ಸ್ವೇಚ್ಛಾಚಾರದ ವರ್ತನೆಯು ನಿಮ್ಮವರಿಗೆ ಇಷ್ಟವಾಗದು. ನಿಮ್ಮ ಕಾರ್ಯಕ್ಕೆ ಸಹಾಯಕರಾಗಿ ಉತ್ತಮರೇ ಸಿಗುತ್ತಾರೆ ಎಂಬ ಆಸೆ ಬೇಡ. ಕಛೇರಿಯ ಕೆಲಸದ ಕಾರಣ ನೀವು ಓಡಾಟ ಮಾಡಬೇಕಾದೀತು. ಪ್ರಯೋಜನವಾಗದೇ ಬೇಸರವಾದೀತು. ದೈಹಿಕವಾಗಿ ಶ್ರಮಿಸುವವರಿಗೆ ಲಾಭವಿದೆ. ಗೌರವ ಕಡಿಮೆಯಾಗದಂತೆ ನಡೆದುಕೊಳ್ಳಿ. ಗೊತ್ತಿದ್ದರೂ ಏನನ್ನೂ ಹೇಳದೇ ಮೌನದಿಂದ ಇರಲು ಪ್ರಯತ್ನಿಸುವಿರಿ. ಸ್ತ್ರೀಯರಿಂದ ತೊಂದರೆಯಾಗಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ.
ಮಿಥುನ ರಾಶಿ: ನಿಮ್ಮ ವಸ್ತುಗಳ ಮೇಲೆ ಸಾಲವನ್ನು ಪಡೆಯುವಿರಿ. ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ನಿಮಗೆ ಗೊತ್ತಿಲ್ಲದ ಕಾರ್ಯವನ್ನೂ ನೀವು ಒಪ್ಪಿಕೊಳ್ಳುವಿರಿ. ಮಕ್ಕಳಿಗೆ ಇಂದು ಸ್ವಲ್ಪ ಹಣವನ್ನು ಖರ್ಚುಮಾಡಬೇಕಾದೀತು. ಓಡಾಟಕ್ಕೆ ವಾಹನದ ಅವಶ್ಯಕತೆ ಬೇಕೆನಿಸಬಹುದು. ಸುಳ್ಳು ಹೇಳಿ ಸ್ವಾರ್ಥವನ್ನು ಸಾಧಿಸಿಕೊಳ್ಳುವಿರಿ. ಎದುರಾಳಿಗಳ ಬಲವನ್ನು ತಿಳಿದು ವ್ಯವಹರಿಸಿ. ಹೆಚ್ಚು ಮಾತನಾಡಲು ನಿಮಗೆ ಸಮಯದ ಅಭಾವ ಇರುವುದು. ಕೃಷಿಯಲ್ಲಿ ಲಾಭ ಗಳಿಸುವ ಉಪಾಯವನ್ನು ಮಾಡುವಿರಿ. ನಿಮ್ಮ ಹಳೆಯ ಸಂಬಂಧವು ಮತ್ತೆ ಚಿಗುರೊಡೆಯಬಹುದು. ಹಿಂದಿನ ಶ್ರಮವು ಸಾರ್ಥಕವಾದೀತು. ಆಸ್ತಿಯ ಖರೀದಿಯನ್ನು ಮುಂದಕ್ಕೆ ಹಾಕಿ. ಕಡಿಮೆ ಹಣಕ್ಕೆ ಪಡೆಯುವುದನ್ನು ಹೆಚ್ಚು ಹಣ ಕೊಟ್ಟು ಪಡೆಯುವಿರಿ. ನಿಮ್ಮ ಆತುರವು ಇನ್ನೊಬ್ಬರಿಗೆ ಪರಿಹಾಸವಾದೀತು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟ.
ಕರ್ಕಾಟಕ ರಾಶಿ: ಹಲವು ದಿನಗಳಿಂದ ಯೋಚಿಸುತ್ತಿದ್ದ ಕೆಲಸ, ವಿಶೇಷ ವ್ಯಕ್ತಿಯಿಂದ ಪೂರ್ಣಗೊಳ್ಳುತ್ತದೆ. ನೀವು ಎಂತಹ ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ವ್ಯಾಪಾರದ ಸ್ಥಳದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಸಮಯವನ್ನು ನೋಡಿ ನೀವು ಮಾತನಾಡುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿ ನಿಮಗೆ ಗೌರವವು ಸಿಗುತ್ತದೆ ಎಂದು ನಂಬ ಬೇಡಿ. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಬಹಳ ಶ್ರಮಪಡುವಿರಿ. ನಿಮ್ಮ ದೃಷ್ಟಿಯಲ್ಲಿ ಯಾವುದೂ ಸರಿಯಾಗದು. ಆದಾಯದ ಮೂಲವು ಬದಲಾಗಬಹುದು. ಹೆಚ್ಚಾದ ದೇಹದ ತೂಕವನ್ನು ಹೇಗಾದರೂ ಮಾಡಿ ತಗ್ಗಿಸಿಕೊಳ್ಳುವಿರಿ. ನಿತ್ಯದ ಕೆಲಸದಲ್ಲಿ ವ್ಯತ್ಯಾಸವನ್ನು ಕಾಣುವಿರಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಬರಬಹುದು. ಸಮಯದಲ್ಲಿ ಮುಗಿಸುವ ಕೆಲಸವನ್ನೂ ಮುಗಸಿ ಮುಂದಿನ ಆಲೋಚನೆಯನ್ನು ಮಾಡಿ. ನೀವು ಅನುಸರಿಸುವ ಕ್ರಮದಲ್ಲಿ ವ್ಯತ್ಯಾಸ ಇರಬಹುದು. ವಿವಾಹಕ್ಕೆ ಬರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಮಾತುಗಳಿಂದ ನೋವಾಗಲಿದೆ.
ಸಿಂಹ ರಾಶಿ: ಸ್ವಾಭಿಮಾನದಿಂದ ನೀವೇ ಕೆಲವನ್ನು ಕಳೆದುಕೊಳ್ಳುವಿರಿ. ಇಂದು ನಿಮ್ಮ ಗೃಹ ನಿರ್ಮಾಣದ ಕಡೆಗೆ ಗಮನಕೊಡಬೇಕಾಗುವುದು. ಉದ್ಯೋಗಕ್ಕೆ ವಿರಾಮ ಹೇಳಿದ ನಿಮಗೆ ದಿಗ್ಭ್ರಾಂತಿಯಾಗಬಹುದು. ನೀವು ಇಂದು ಮನೆಗಾಗಿ ಏನನ್ನಾದರೂ ಕೊಡಲಿದ್ದೀರಿ. ಒಳ್ಳೆಯ ವ್ಯಕ್ತಿಯನ್ನು ನೀವು ದೂರಮಾಡಿಕೊಳ್ಳುವಿರಿ. ನಿಮ್ಮಕೆಲಸಗಳು ಕೆಲವು ನಿಷ್ಪ್ರಯೋಜಕವೂ ಆಗಬಹುದು. ಯಾರದೋ ಮಾತಿಗೆ ಬೇಸರಿಸಿಕೊಳ್ಳುವುದು ಸರಿಯಲ್ಲ. ಪರರ ವಸ್ತುವನ್ನು ಇಟ್ಟುಕೊಂಯಾರದೋ ಮೇಲಿನ ಸಿಟ್ಟನ್ನು ನೀವು ತೀರಿಸಿಕೊಳ್ಳುವ ಭರದಲ್ಲಿ ನಿಮಗೆ ಸರಿ ತಪ್ಪುಗಳ ನಿರ್ಣಯ ಕಷ್ಟವಾದೀತು. ನೀವಿಂದು ಯಾರನ್ನಾದರೂ ಅನುಸರಣ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವಿರಿ. ದೇಹದ ಅಸ್ವಾಸ್ಥ್ಯವನ್ನು ಯೋಗದ ಮೂಲಕ ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ನಿಮ್ಮ ನೋವಿಗೆ ನೀವೇ ಔಷಧ ಮಾಡಿಕೊಳ್ಳಬೇಕು. ಯಾರೋ ಬರುತ್ತಾರೆ ಎಂದು ಕಾಯುವುದು ಬೇಡ. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು.
ಕನ್ಯಾ ರಾಶಿ: ಮುಂಗಡ ಹಣ ಪಡೆಯುವುದು ಅಪಾಯ. ಎಂತಹ ವ್ಯಕ್ತಿಗಳು ಅನ್ನುವುದರ ಮೇಲೆ ಅದು ನಿರ್ಧಾರವಾಗಲಿದೆ. ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಬದ್ಧತೆಯಿಂದ ಮಾಡಿದ ಕಾರ್ಯಕ್ಕೆ ಶ್ರೇಯಸ್ಸು ನಿಮ್ಮದೇ. ಅಕಾರಣವಾದ ವಿವಾದಗಳಿಂದ ಸಮಯವು ಹಾಳಾಗಬಹುದು. ಆಕಸ್ಮಿಕವಾಗಿ ಬರುವ ಸುದ್ದಿಯಿಂದ ನಿಮಗೆ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರೆ ನಿಮಗರ ಸಿಗಬಹುದು. ರಾತ್ರಿಯಲ್ಲಿ ಒಂಟಿಯಾಗಿ ಸಂಚಾರ ಮಾಡುವುದು ಬೇಡ. ಭಯದಿಂದ ಅರೋಗ್ಯ ಕೆಡಲಿದೆ. ವ್ಯಾವಹಾರಿಕ ಗೌಪ್ಯತೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ವಿದ್ಯಾಭ್ಯಾಸವನ್ನು ಬಹಳ ಆಸಕ್ತಿಯಿಂದ ವಿದ್ಯಾರ್ಥಿಗಳು ಮಾಡುವರು. ಬಂಧುಗಳ ಸಲಹೆಯನ್ನು ನೀವು ಸ್ವೀಕರಿಸಿ ಬಿಡುವಿರಿ. ಸಂಗಾತಿಯ ನಡತೆಯು ನಿಮಗೆ ಅನುಮಾನವನ್ನು ತರಿಸಬಹುದು. ದಂಪತಿಗಳು ಜೊತೆಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ. ನಿಮಗೆ ಸಾಧಿಸುವ ಛಲವು ಬರಬಹುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು.




