ಸಿಂಹವು ರಾಶಿ ಚಕ್ರದ ಐದನೇ ರಾಶಿ. ಈ ರಾಶಿಯ ಅಧಿಪತಿ ಸೂರ್ಯ. ವರ್ಷಾರಂಭದಲ್ಲಿ ಪಂಚಮದಲ್ಲಿ ಕುಜನ ಜೊತೆ ಇರುವನು. ಇವನ ಉಚ್ಚ ರಾಶಿ ಮೇಷವಾಗಿದ್ದು ನೀಚ ಸ್ಥಾನ ತುಲಾ ಆಗಿದೆ. ಉಚ್ಚಸ್ಥಾನಕ್ಕೆ ಬಂದಾಗ ಅನೇಕ ಲಾಭಗಳನ್ನು ಉಂಟುಮಾಡುವನು.
ಈ ರಾಶಿಯವರಿಗೆ ಮಧ್ಯದ ಸ್ಥಿತಿ ಇರಲಿದೆ. ಗುರುವು ವರ್ಷದ ಮಧ್ಯದಲ್ಲಿ ದಶಮಕ್ಕೆ ಇರಲಿದ್ದು ಇಷ್ಟು ದಿನಗಳ ಸಂತೋಷ, ನೆಮ್ಮದಿ, ಪ್ರೀತಿ ಎಲ್ಲವೂ ಕಡಿಮೆ ಆಗುವುದು. ಅಷ್ಟಮದಲ್ಲಿ ರಾಹುವಿರುವ ಕಾರಣ ಆರೋಗ್ಯದ ಬಗ್ಗೆ ಗಮನ, ಅನಾರೋಗ್ಯದಲ್ಲು ಕಾಳಜಿಯ ಅವಶ್ಯಕತೆ ಇರಲಿದೆ.
ದ್ವಿತೀಯದಲ್ಲಿ ಕೇತುವಿರುವ ಕಾರಣ ಸಂಪತ್ತಲ್ಲಿ ನಿಮಗೆ ಲಭಿಸುವುದು ಕಷ್ಟವಾದೀತು. ಅಧಿಕ ಸಂಪತ್ತಿನ ನಿರೀಕ್ಷೆಯನ್ನು ನೀವು ಮಾಡುವುದು ಬೇಡ. ದ್ವಿತೀಯಾಧಿಪತಿಯಾದ ಬುಧನು ದಶಮಸ್ಥಾನಕ್ಕೆ ಬಂದಾಗ ಧನವೃದ್ಧಿಯು ಇರುವುದು.
ಗುರುವು ನಿಮ್ಮ ದಶಮಸ್ಥಾನದಲ್ಲಿ ಇರವುದರಿಂದ ಗುರುಬಲವು ಪೂರ್ಣವಾಗಿ ಇರದು. ಪ್ರೇಮವು ಉಂಟಾಗಬಹುದು. ಅದು ತಾತ್ಕಾಲಿಕವಾಗಿ ಇರಬಹುದು. ವಿವಾಹವು ಬೇರೆ ಬೇರೆ ಕಾರಣಗಳಿಂದ ಮುಂದೆ ಹೋಗುವುದು.
ಚಿತ್ರಕಲೆಯಲ್ಲಿ ಆಸಕ್ತಿ ಇಟ್ಟುಕೊಂಡವರು, ಕಲಾವಿದರು ಉತ್ತಮ ಸ್ಥಾನವನ್ನು ಪಡೆದುಕೊಳ್ಳುವಿರಿ. ವಿಶೇಷವಾಗಿ ಇಂಜಿನಿಯರ್ ಗಳು ಹೆಚ್ಚಿನ ಆದಾಯ, ಹೊಸ ಯೋಜನೆಯನ್ನು ಪಡೆಯುವುದು, ಹಣದ ಹರಿವು ಅಧಿಕವಾಗುವುದು. ಕೃಷಿಯಲ್ಲಿಯೂ ಶ್ರಮಕ್ಕೆ ಯೋಗ್ಯವಾದ ಫಲವನ್ನು ಪಡೆಯುವಿರಿ.
ದ್ವಿತೀಯಾಧಿಪತಿಯಾದ ಬುಧನು ನಿಮ್ಮ ಆರೋಗ್ಯವನ್ನು ಕಾಪಾಡುವನು. ವರ್ಷದ ಮಧ್ಯಾವಧಿಯಲ್ಲಿ ಆರೋಗ್ಯದ ಮೇಲೆ ಗಮನ ಅವಶ್ಯಕ. ಯಾವುದಾದರೂ ರೋಗವು ಕಾಣಿಸಿಕೊಂಡೀತು. ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.
ಲೋಹಿತ ಹೆಬ್ಬಾರ್, ಇಡುವಾಣಿ