ಹೊಸ ವರ್ಷ ಆರಂಭವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ವರ್ಷದಲ್ಲಿ ವೃಷಭ ರಾಶಿಯವರಿಗೆ ಶುಭಾಶುಭಗಳ ಮಿಶ್ರಣವಿರಲಿದೆ. ಗುರುಬಲವು ಈ ವರ್ಷದ ಮಧ್ಯಾವಧಿಯಿಂದ ಆರಂಭವಾಗಲಿದೆ. ಶನಿಯು ನಿಮ್ಮ ಏಕಾದಶ ಸ್ಥಾನಕ್ಕೆ ಬರಲಿದ್ದಾನೆ. ರಾಹು ಹಾಗೂ ಕೇತುಗಳು ದಶಮ ಹಾಗೂ ಚತುರ್ಥ ಸ್ಥಾನಕ್ಕೆ ಬದಲಾಗಲಿದೆ. ಜಾತಕದಲ್ಲಿ ಶನಿಯು ಉಚ್ಚನಾಗಿದ್ದ, ಮಿತ್ರಕ್ಷೇತ್ರದಲ್ಲಿ, ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಶನಿಯ ದಶಾ ಕಾಲವಾಗಿದ್ದರೆ ಅವರಿಗೆ ಶುಭ. ಎಲ್ಲ ಕ್ಷೇತ್ರದಲ್ಲಿಯೂ ಜಯ ಸಿಗಲಿದೆ. ಗುರುದಶೆ ನಡೆಯುತ್ತಿದ್ದವರಿಗೂ ಈ ವರ್ಷ ಶುಭವೇ.
ಆರೋಗ್ಯವೇ ಭಾಗ್ಯವಾದ ಕಾರಣ ವರ್ಷದ ಮಧ್ಯದ ವರೆಗೆ ಉತ್ತಮ ಆರೋಗ್ಯವಿದ್ದರೂ ಅನಂತರ ಕಿರಿಕಿರಿ ಇರುವುದು. ಆಗಾಗ ಶಾರೀರಿಕ ಪೀಡಿಯು ಕಾಣಿಸಿಕೊಳ್ಳುವುದು. ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯ. ಆದರೆ ಮೊದಲೇ ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುವುದು ಮುಖ್ಯ. ನಿಷ್ಕಾಳಜಿ ಮಾಡುವುದು ಬೇಡ.
ವಿವಾಹದ ಆಕಾಂಕ್ಷೆ ಇದ್ದರೆ ನಿಮಗೆ ಈ ವರ್ಷ ಶುಭ. ಜೂನ್ ಅನಂತರ ವಿವಾಹಕ್ಕೆ ಶುಭಕರವಾದ ದಿನವನ್ನು ನೋಡಿ ವಿವಾಹವಾಗಿ. ಪ್ರೀತಿಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತೆ ಆಗುವುದು. ಜುಲೈನಲ್ಲಿ ಉಂಟಾದ ಪ್ರೇಮವು ಉಳಿಯಲಿದೆ.
ಜೀವನದ ಮುಖ್ಯಭಾಗವಾದ ಇದು ಈ ವರ್ಷ ನಿಮಗೆ ತಂತ್ರಜ್ಞರಿಗೆ ಸುಕಾಲ. ರಾಹು ದಶೆಯಲ್ಲಿ ಇರುವವರಿಗೆ ಉದ್ಯಮವೂ ಲಾಭದಾಯಕವಾಗಲಿದೆ. ಮಾರ್ಚ್ ನ ಅನಂತರ ರಾಹುವಿನ ಬದಲಾವಣೆಯ ಅನಂತರ ಇದನ್ನು ಕಾಣಬಹುದು.
ಕುಟುಂಬವನ್ನು ನಡೆಸುವಾಗ ಆರಂಭದಲ್ಲಿ ಮಕ್ಕಳ ಜೊತೆ ಕಲಹವಾಗಲಿದೆ. ಅನಂತರ ಯಾವುದನ್ನೂ ಗಂಭೀರವಾಗಿ ಪರಿಗಣಿಸದೇ ಜಾಣತನದಿಂದ ಅದನ್ನು ಸರಿಮಾಡಿಕೊಳ್ಳಬೇಕು. ಕೇತುವು ಚತುರ್ಥ ಸ್ಥಾನಕ್ಕೆ ಬರುವುದರಿಂದ
ನಿಮ್ಮವರೇ ನಿಮಗೆ ಶತ್ರುಗಳಾಗಿ ಸಂಕಷ್ಟವಾಗಲಿದೆ. ಹಿತಶತ್ರುಗಳನ್ನು ನಿಯಂತ್ರಿಸುವಲ್ಲಿ ಸೋಲುವಿರಿ. ಸ್ತ್ರೀಯರಿಂದ ವೈರವನ್ನು ಕಟ್ಟಿಕೊಳ್ಳುವುರು. ಇದು ವರ್ಷಾರಂಭದಲ್ಲಿ ಇದು ಗೊತ್ತಾಗದೇ ಅನಂತರ ತಿಳಿಯುವುದು.
ನವಮಾಧಿಪತಿ ಶನಿ ಏಕಾದಶ ಸ್ಥಾನಕ್ಕೆ ಬರಲಿದ್ದಾನೆ. ಶನಿ ದಶೆ ನಡೆಯುತ್ತಿದ್ದವರಿಗೆ ಇದು ಉತ್ತಮ ಕಾಲ. ಗೌರವಾದರಗಳು ನಿಮ್ಮನ್ನು ಹುಡಕಿಕೊಂಡು ಬರಲಿವೆ. ಅದನ್ನು ಸರಿದೂಗಿಸಿಕೊಳ್ಳ ಚಾಣಾಕ್ಷತನ ಬೇಕು. ಆದರೆ ಇದು ಶನಿಯ ರಾಶಿ ಬದಲಾವಣೆಯ ಅನಂತರ ಆಗಲಿದೆ.
ರಾಹುವು ದಶಮದಲ್ಲಿ ಇರುವ ಕಾರಣ ಉದ್ಯೋಗದಲ್ಲಿ ತೊಂದರೆ ಉಂಟಾಗಿ ಸ್ಥಾನಭ್ರಷ್ಟವಾಗಬಹುದು. ಆದ ಕಾರಣ ಸುಬ್ರಹ್ಮಣ್ಯನ ಆರಾಧನೆಯಿಂದ ಶುಭವಾಗುವುದು. ಔನ್ನತ್ಯವನ್ನು ಬಯಸುವವರು ನಾಗಾರಾಧನೆಯನ್ನು ಮಾಡುವುದು ಅನಿವಾರ್ಯವಾಗಿದೆ. ಪುಣ್ಯಕ್ಷೇತ್ರಗಳಿಗೆ ಆಗಾಗ ಹೋಗುತ್ತಿರಿ. ನಾಗಸಂಬಂಧಿ ದೋಷನಿವಾರಣೆಯ ಸಂಕಲ್ಪ ಮಾಡಿಸಿ ಪರಿಹಾರ ಮಾಡಿಕೊಳ್ಳಿ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: