AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರ ಇಂದ್ರನ ಲಕ್ಷಣವನ್ನು ತಿಳಿಸುತ್ತದೆ, ಈ ನಕ್ಷತ್ರ ಯಾವ ರಾಶಿಯಲ್ಲಿ ಬರುತ್ತದೆ? ಇಲ್ಲಿದೆ ನೋಡಿ

ಆಕಾಶದಲ್ಲಿ ಹಂದಿಯ ಹಲ್ಲಿನಂತೆ ಕಾಣುವುದು ಈ ನಕ್ಷತ್ರವು ಮೂರು ನಕ್ಷತ್ರ ಗಣವಾಗಿದೆ. ಇದು ಹದಿನೆಂಟನೇ ನಕ್ಷತ್ರ. ಅಷ್ಟೇ ಅಲ್ಲ ಇದರ ಅಧಿಪರಿ ಸಾಕ್ಷಾತ್ ಇಂದ್ರನೇ. ಇದು ರಾಕ್ಷಸ ಗಣಕ್ಕೆ ಸೇರಿದ್ದಾಗಿದೆ. ವಾತಪ್ರಕೃತಿಯ ನಕ್ಷತ್ರ ಇದು. ಅಷ್ಟಕ್ಕೂ ಈ ನಕ್ಷತ್ರ ಯಾವುದು? ಯಾವ ರಾಶಿಯಲ್ಲಿ ಈ ನಕ್ಷತ್ರ ಬರುತ್ತದೆ. ಇಲ್ಲಿದೆ ನೋಡಿ

ಈ ನಕ್ಷತ್ರ ಇಂದ್ರನ ಲಕ್ಷಣವನ್ನು ತಿಳಿಸುತ್ತದೆ, ಈ ನಕ್ಷತ್ರ ಯಾವ ರಾಶಿಯಲ್ಲಿ ಬರುತ್ತದೆ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 06, 2025 | 11:46 AM

Share

ಆಕಾಶದಲ್ಲಿ ಹಂದಿಯ ಹಲ್ಲಿನಂತೆ ಕಾಣುವುದು ಜ್ಯೇಷ್ಠಾ ನಕ್ಷತ್ರವು ಮೂರು ನಕ್ಷತ್ರ ಗಣವಾಗಿದೆ. ಇದು ಹದಿನೆಂಟನೇ ನಕ್ಷತ್ರ. ಅಷ್ಟೇ ಅಲ್ಲ ಇದರ ಅಧಿಪರಿ ಸಾಕ್ಷಾತ್ ಇಂದ್ರನೇ. ಇದು ರಾಕ್ಷಸ ಗಣಕ್ಕೆ ಸೇರಿದ್ದಾಗಿದೆ. ವಾತಪ್ರಕೃತಿಯ ನಕ್ಷತ್ರ ಇದು. ವೃಶ್ಚಿಕ ರಾಶಿಯಲ್ಲಿ ಪೂರ್ಣ ಅಂಶವನ್ನು ಇಟ್ಟಕೊಂಡಿದೆ. ಈ ನಕ್ಷತ್ರದಲ್ಲಿ ವರ್ಷದಲ್ಲಿ ಒಮ್ಮೆ ಪೂರ್ಣಚಂದ್ರನಿರುತ್ತಾನೆ. ಹಾಗಾಗಿ ಜ್ಯೇಷ್ಠ ಮಾಸವೂ ಪ್ರಸಿದ್ಧವಾಗಿದೆ. ಈ ನಕ್ಷತ್ರದ ಹಾಗೂ ಮಾಸದಲ್ಲಿ ಕೆಲವು ವಿಧಿ ಹಾಗೂ ನಿಷೇಧಗಳಿವೆ. ತ್ರಿಜ್ಯೇಷ್ಠಾ ಸೇರಿದರೆ ಅಪಾಯ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅದೇನೇ ಇದ್ದರೂ ಈ ರಾಶಿಯಲ್ಲಿ ಜನಿಸಿದವರ ಗುಣಾವಗುಣಗಳು ವಿಶೇಷವಾದುದು.

ಅನೇಕ ಮಿತ್ರರು :

ಇವರಿಗೆ ಮಿತ್ರರು ಹೆಚ್ಚು. ಹೋದಕಡೆಗೆಲ್ಲ ಇವರು ಹೊಸ ಮಿತ್ರರನ್ನು ಸಂಪಾದಿಸುವರು. ಇವರ ಕಾರ್ಯ ಹಾಗೂ ಮಾತಿಗೆ ಮಿತ್ರರಾಗುತ್ತಾರೆ.

ಸಂತುಷ್ಟ :

ನಿತ್ಯವೂ ಇವರು ಸಂತುಷ್ಟರು. ಎಲ್ಲ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡುವರು. ಅತಿಯಾದ ನಿರೀಕ್ಷೆ ಇರದು ಮತ್ತು ಕರ್ತವ್ಯ ಎಂದು ಮಾಡುವರು. ಹಾಗಾಗಿ ದುಃಖಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ
Image
30 ವರ್ಷಗಳ ನಂತರ, ಶನಿ-ರಾಹು ಸಂಯೋಗದಿಂದ ಪಿಶಾಚ ಯೋಗ
Image
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
Image
ವಿದೇಶದಲ್ಲಿ ವಾಸಿಸುವವರು ಈ ರಾಶಿಯವರು
Image
ಈ ರಾಶಿಯವರಿಗೆ ಇನ್ನು ಏಳು ವರ್ಷಗಳ ಕಾಲ ಸಾಡೇಸಾಥ್

ಧರ್ಮಜ್ಞ :

ಇವರು ಧರ್ಮಜ್ಞರು.‌ ಒಳ್ಳೆಯ ಕೆಲಸವನ್ನು ಯಾವುದಾದರೂ ಒಂದು ರೀತಿಯಲ್ಲಿ ಮಾಡುತ್ತಲೇ ಇರುವರು. ಸರಿ ತಪ್ಪುಗಳ ವಿವೇಚನೆ ಇರುವುದು.

ಅತಿಯಾದ ಕೋಪ :

ಇವರಿಗೆ ಬೇಗ ಕೋಪ ಬರುತ್ತದೆ. ಸಣ್ಣ ವಿಚಾರಕ್ಕೂ ತಾಳ್ಮೆ ಕಡಿಮೆ. ಸಿಟ್ಟು ಬಂದಾಗ ಏನು ಮಾಡುತ್ತಾರೆ ಎನ್ನುವುದೂ ಬಹಳ ಗಂಭೀರವಾಗಲಿದೆ. ಮತಿಯು ಸ್ತಿಮಿತ ಕಳೆದುಕೊಳ್ಳಬಹುದು.

ಇದನ್ನೂ ಓದಿ: 30 ವರ್ಷಗಳ ನಂತರ, ಶನಿ-ರಾಹು ಸಂಯೋಗದಿಂದ ಪಿಶಾಚ ಯೋಗ; ಯಾರಿಗೆ ಕಂಟಕ?

ಕೀರ್ತಿವಂತ ಮಕ್ಕಳು :

ಯಶಸ್ಸು ಗಳಿಸುವ ಮಕ್ಕಳಿರುವರು. ಒಂದಲ್ಲ ಒಂದು ರೀತಿಯಿಂದ ಕೀರ್ತಿ ನಿಮಗೆ ತಂದುಕೊಡುವರು. ಸಾಧಿಸಿದ ಮಕ್ಕಳ ತಂದೆ ಎಂಬ ಹೆಮ್ಮೆ ಇರುವುದು.

ಸ್ವಪ್ರತಿಷ್ಠೆ :

ಇವರಿರುವಲ್ಲಿ ಅವರ ಪ್ರತಿಷ್ಠೆಗೆ ಹೆಚ್ಚು ಮಹತ್ತ್ವವಿರಲಿದೆ. ತಾನು, ತನ್ನದು ಎಂಬ ಭಾವಕ್ಕೆ ಒತ್ತು ಹೆಚ್ಚು. ಅವರ ಮಾತು ಮನ್ನಣೆಯನ್ನು ಬಯಸುತ್ತದೆ. ಗೌರವಾದರಗಳು ಸಿಗದೇ ಇದ್ದರೆ ಬೇಸರವಾಗಬಹುದು. ಕೇಳಿ ಪಡೆದುಕೊಳ್ಳುವ ಸ್ವಭಾವ ಇವರಲ್ಲಿ ಇರಲಿದೆ.

ನಕ್ಷತ್ರದ ಅಧಿಪತಿ ಇಂದ್ರನಾದ ಕಾರಣ ದೇವರಾಜ ಇಂದ್ರನಿಗಿರುವ ಅನೇಕ ಗುಣಗಳು ಆ ನಕ್ಷತ್ರದಲ್ಲಿ ಹುಟ್ಟಿದವರಿಗೂ ಇರಲಿದೆ. ಸಾಮರ್ಥ್ಯ ಇಲ್ಲದಿದ್ದರೂ ಹಾಗೆಯೇ ವರ್ತಿಸುತ್ತಾರೆ. ಜ್ಯೇಷ್ಠ ಎಂದರೆ ಹಿರಿಯ ಎಂದರ್ಥ. ಅಲ್ಲಿಯೂ ಕೂಡ ಹಿರಿತನ ಯೋಗ ಹಾಗೂ ಯೋಗ್ಯತೆ ಮೇಲೆ ಬರಬಹುದು.

– ಲೋಹಿತ ಹೆಬ್ಬಾರ್ – 8762924271

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ