AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ವಾಸಿಸುವವರು ಈ ರಾಶಿಯವರು, ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಾರಣ

ಈ ರಾಶಿಯವರು ಇವರ ವಾಸ ಬೇರೆ ದೇಶದಲ್ಲಿಯೂ ಆಗಬಹುದು ಅಥವಾ ತಾವು ಹುಟ್ಟಿದ ಮನೆಯಿಂದ ದೂರ ಪ್ರದೇಶದಲ್ಲಿ ವಾಸವನ್ನೂ ಮಾಡಬಹುದು. ಜನನವಾದ ಸ್ಥಾನದಲ್ಲಿ ಆಮರಣಾಂತ ಇರಲಾರರು. ಇವರಿಗೆ ಅಧಿಕ ಹಸಿವು. ಪಿತ್ತಪ್ರಕೃತಿಯಾದ ಕಾರಣ ಜಠರಾಗ್ನಿ ತುಂಬ ತೀಕ್ಷ್ಣವಾಗಿರುವುದು. ಆಹಾರವನ್ನು ಆಗಾಗ ಸೇವಿಸುತ್ತಿರಬೇಕು. ಆಹಾರದಲ್ಲಿ ರುಚಿಯ ಅವಶ್ಯಕತೆ ಇಲ್ಲದಿದ್ದರೂ ಏನಾದರೂ ಬೇಕು. ಇನ್ನು ಅನೇಕ ಗುಣಗಳನ್ನು ಈ ರಾಶಿಯವರು ಹೊಂದಿರುತ್ತಾರೆ. ಈ ಬಗ್ಗೆ ಇಲ್ಲಿದೆ ನೋಡಿ

ವಿದೇಶದಲ್ಲಿ ವಾಸಿಸುವವರು ಈ ರಾಶಿಯವರು, ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಾರಣ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 04, 2025 | 10:35 AM

Share

ಕ್ರಾಂತಿವೃತ್ತದ ಸಮೀಪದಲ್ಲಿ ಕಾಣಿಸುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಅನೂರಾಧಾ ನಕ್ಷತ್ರ ಹದಿನೇಳನೆಯದು. ಇದರ ದೇವತೆ ಮಿತ್ರ. ಸೂರ್ಯನ ಅಂಶದ ದೇವತೆಯಾಗಿದೆ. ಸರ್ಪದ ಆಕೃತಿಯಲ್ಲಿ ಕಾಣುವ ಏಳು ನಕ್ಷತ್ರಗಳ ಸಮೂಹ ಇದು. ವೃಶ್ಚಿಕ ರಾಶಿಯಲ್ಲಿ ಇದರ ಸ್ಥಾನ. ನಾಲ್ಕೂ ಪಾದಗಳುಯ ವೃಶ್ಚಿಕ ರಾಶಿಯಲ್ಲಿ ಇರಲಿದೆ. ಇದು ದೇವ ಗಣಕ್ಕೆ ಸೇರಿದ್ದಾಗಿದೆ. ಪಿತ್ತಪ್ರಕೃತಿ ಇದರ ಗುಣ. ನಕ್ಷತ್ರದ ಅಕ್ಷರಗಳು ನ ನಿ ನು ನ.

ಧನವಂತ :

ಈ ರಾಶಿಯವರು ಸಂಪತ್ತು ಅಥವಾ ಚರ ಹಾಗೂ ಸ್ಥಿರಾಸ್ತಿಯನ್ನು ಇಟ್ಟುಕೊಂಡಿರುವವರು. ಧನವು ಗುಪ್ತವಾಗಿ ಇರುತ್ತದೆ, ತೋರಿಸಿಕೊಳ್ಳಲಾರರು.

ವಿದೇಶವಾಸೀ :

ಇವರ ವಾಸ ಬೇರೆ ದೇಶದಲ್ಲಿಯೂ ಆಗಬಹುದು ಅಥವಾ ತಾವು ಹುಟ್ಟಿದ ಮನೆಯಿಂದ ದೂರ ಪ್ರದೇಶದಲ್ಲಿ ವಾಸವನ್ನೂ ಮಾಡಬಹುದು. ಜನನವಾದ ಸ್ಥಾನದಲ್ಲಿ ಆಮರಣಾಂತ ಇರಲಾರರು.

ಹಸಿವು ಹೆಚ್ಚು :

ಇವರಿಗೆ ಅಧಿಕ ಹಸಿವು. ಪಿತ್ತಪ್ರಕೃತಿಯಾದ ಕಾರಣ ಜಠರಾಗ್ನಿ ತುಂಬ ತೀಕ್ಷ್ಣವಾಗಿರುವುದು. ಆಹಾರವನ್ನು ಆಗಾಗ ಸೇವಿಸುತ್ತಿರಬೇಕು. ಆಹಾರದಲ್ಲಿ ರುಚಿಯ ಅವಶ್ಯಕತೆ ಇಲ್ಲದಿದ್ದರೂ ಏನಾದರೂ ಬೇಕು.

ತಿರುಗಾಟ :

ನಿಂತಲ್ಲಿ ನಿಲ್ಲುವುದು ಇವರಿಗೆ ಆಗದು. ರಜೋಗುಣ ಇವರಲ್ಲಿ ಇರುವ ಕಾರಣ ಏಕಾಗ್ರತೆ, ಸಾವಧಾನತೆಗಳು ಕಡಿಮೆ. ಯೋಚಿಸದೇ ಕಾರ್ಯ ಮಾಡುವರು. ಏನಾದರೂ ಚಟುವಟಿಕೆಗಳನ್ನು ಮಾಡುತ್ತಲೇ ಇರುವವರು.

ಸುಕೀರ್ತಿ :

ಒಳ್ಳೆಯ ಕಾರ್ಯದಿಂದ ಒಳ್ಳೆಯ ಯಶಸ್ಸನ್ನು ಇವರು ಸಂಪಾದಿಸುವರು. ಸದಾ ಕಾಂತಿಯಿಂದ ಕಂಗೊಳಿಸುವರು. ಯಶಃಕಾಯವಾಗಿ ಜಗತ್ತಿನಲ್ಲಿ ಉಳಿಯುವರು.

ಸದಾ ಉತ್ಸವ :

ಏನೇ ಆದರೂ ನಿತ್ಯವೂ ಸಂತೋಷದಿಂದ ಕಾಲ ಕಳೆಯುವವರು. ಇವರು ತಮ್ಮ ಜೀವನದಲ್ಲಿ ನಕಾರಾತ್ಮಕ ಅಂಶಗಳಿಗೆ ಪ್ರಮುಖ ಸ್ಥಾನವನ್ನು ಕೊಡಲಾರು. ಒಮ್ಮೆ ಕೊಟ್ಟರೂ ಎಲ್ಲವನ್ನೂ ಪಕ್ಕಕ್ಕೆ ಸರಿಸಿ ಎದ್ದುಬರಬಲ್ಲರು. ಕ್ಷಣಿಕ ದುಃಖಕ್ಕೆ ವ್ಯಥೆಪಡುವುದಿಲ್ಲ.

ಕಲಾಪ್ರವೀಣ :

ಅನೇಕ ಲಲಿತಕಲೆಗಳಲ್ಲಿ ಆಸಕ್ತಿ ಹೆಚ್ಚು. ಯಾವುದಾದರೂ ಒಂದು ಅಥವಾ ಅನೇಕ ಕಲೆಗಳನ್ನು ತಮ್ಮದಾಗಿಸಿಕೊಳ್ಳುವರು. ಹೆಸರಾಂತ ಕಲಾವಿದರೂ ಆಗುವರು. ಕಲೆಯ ಸಂರಕ್ಷಕರೂ ಆಗುವರು.

ಪ್ರಾಚೀನರ ವಿಜ್ಞಾ‌ನದ ಆಳ ಅಗಲಗಳು ಸಾಮಾನ್ಯರ ಬುದ್ಧಿಗೆ ಸಿಲುಕದ್ದಾಗಿದೆ. ಭೂಮಿಯಲ್ಲಿ ನಿಂತು ಆಕಾಶಕಾಯಗಳ ಬಗ್ಗೆ ಮಾತಾನಾಡಲು ಅವರ ಬಳಿ ಯಾವ ಸಾಧನವಿತ್ತು ಎಂದು ಹುಬ್ಬೇರಿಸಬಹುದು. ಆದರೆ ಇಂತಹ ಮಹತ್ತ್ವದ ವಿಚಾರಗಳೂ ಅಂದಿಗೂ ಇಂದಿಗೂ ಮುಂದೆಯೂ ಸತ್ಯವಾಗಿ ಉಳಿಯುವುದಾಗಿದೆ. ಇದನ್ನು ವಿಜ್ಞಾ‌ನ ಎನ್ನಬೇಕೆ, ಕಾಲಕಾಲಕ್ಕೆ ಬದಲಾಗುವ ಆಧುನಿಕ ಶೋಧನೆಯನ್ನು ವಿಜ್ಞಾ‌ನ ಎಂದು ಕರೆಯಬೇಕೇ? ದೂರದರ್ಶಕ ಯಂತ್ರಗಳಿಲ್ಲದೇ ನಕ್ಷತ್ರ ಹಾಗು ರಾಶಿಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾದುದ್ದು ಹೇಗೆ? ಇಂತಹ ಮಹೋನ್ನತ ಶೋಧನೆಗಳ ಬಗ್ಗೆ ಕಣ್ಣಾಡಿಸಿದರೆ ಪ್ರಾಚೀನ ವಿಜ್ಞಾನಿಗಳು ಕೊಡುಗೆ ಎಂಥದ್ದು ಎನ್ನುವುದು ಗೊತ್ತಾಗುತ್ತದೆ.

– ಲೋಹಿತ ಹೆಬ್ಬಾರ್ – 8762924271

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು