Horoscope Today: ಈ ರಾಶಿಯವರು ತಮ್ಮನ್ನು ಇಷ್ಟಪಟ್ಟವರ ಜೊತೆ ಸಮಯ ಕಳೆಯುವರು
5 ಮಾರ್ಚ್ 2025ರ ದಿನಭವಿಷ್ಯ: ಬುಧವಾರ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಇಂದಿನ ದಿನಭವಿಷ್ಯದಲ್ಲಿ ತಿಳಿದುಕೊಳ್ಳಿ.

ನಿತ್ಯ ಪಂಚಾಗ: ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಕರಣ : ಬಾಲವ, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:44 – 14:13, ಯಮಘಂಡ ಕಾಲ 08:17 – 09:46, ಗುಳಿಕ ಕಾಲ11:15 – 12:44
ಮೇಷ ರಾಶಿ: :ನಿಮ್ಮ ಜವಾಬ್ದಾರಿಯ ಬಗ್ಗೆ ಹಲವು ವಿಧದಲ್ಲಿ ಯೋಚಿಸುವಿರಿ. ಏಕಾಗ್ರತೆಯನ್ನು ರೂಢಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಬೇಕಾಗುವುದು. ಧಾರ್ಮಿಕ ಕಾರ್ಯಕ್ಕೆ ಹೆಚ್ಚು ಒತ್ತು. ನಿಮ್ಮ ಕೋಪವನ್ನು ಮಾತಿನಿಂದ ಹೊರಹಾಕಲಾರಿರಿ. ಇಂದು ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ಕಷ್ಟದ ಸಮಯದಲ್ಲಿ ಆಪ್ತರು ನಿಮ್ಮನ್ನು ಬೆಂಬಲಿಸುತ್ತಾರೆ. ಕೆಲಸದ ಆರಂಭದಲ್ಲಿ ಅಡೆತಡೆಗಳು ಎದುರಾಗುತ್ತವೆ. ಗೌಪ್ಯತೆಯನ್ನು ಬಹಿರಂಗಪಡಿಸಿ, ಎಲ್ಲರ ಕೋಪಕ್ಕೆ ಗುರಿಯಾಗಬೇಕಾದೀತು. ಇಂದು ನಿಮ್ಮಲ್ಲಿ ಕ್ರೀಡಾ ಮನೋಭಾವವು ಇರಲಿದೆ. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ಹೊಸ ವಸ್ತುಗಳು ಖರೀದಿಯಿಂದ ತೃಪ್ತಿ ಸಿಗುವುದು. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು.
ವೃಷಭ ರಾಶಿ: :ಇಂದು ನಿಮ್ಮ ಕಲ್ಪನೆಯು ಯೋಜನೆಯನ್ನು ಬದಲಿಸುವಿರಿ. ಕನಸನ್ನು ನನಸು ಮಾಡಿಕೊಳ್ಳುವುದು ಆಗದು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗುವುದು. ನೀವು ಇಂದು ಮಾನಸಿಕವಾಗಿ ನಿಮ್ಮೊಳಗೇ ಅಳುಕು ಇರುವುದು. ಯಾರ ಸಮಾಧಾನವೂ ನಿಮಗೆ ಸಾಂತ್ವನವನ್ನು ನೀಡದು. ಹಿರಿಯರ ಮೂಲಕ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಹಿಂದೆ ಬಾಕಿ ಇರುವ ಹಣವನ್ನು ವಸೂಲಿ ಮಾಡಲಾಗುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ಆಹಾರದಿಂದ ತೊಂದರೆಯನ್ನು ಅನುಭವಿಸಬೇಕಾದೀತು. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಕಲಾವಿದರು ಸನ್ಮಾನಕ್ಕೆ ಭಾಜರಾಗುವರು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ನಿತ್ಯ ಕೆಲಸದಲ್ಲಿ ಎಲ್ಲವೂ ವ್ಯತ್ಯಾಸವಾಗಬಹುದು. ನೂತನ ಗೃಹ ನಿರ್ಮಾಣಕ್ಕೆ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವಿರಿ.
ಮಿಥುನ ರಾಶಿ: :ನಿಮ್ಮ ಬಳಿ ಕೇಳದೇ ಇರುವ ಯಾವ ವಿಷಯಕ್ಕೂ ಮಧ್ಯಪ್ರವೇಶ ಮಾಡುವುದು ಬೇಡ. ನಿಮ್ಮವರ ಮಾತುಗಳು ನಿಮಗೆ ಸಹಜದಂತೆ ತೋರಬಹುದು. ಮಕ್ಕಳ ತಪ್ಪಿಗೆ ದಂಡವನ್ನು ಕೊಡಬೇಕಾಗುವುದು. ಹೂಡಿಕೆಗಳತ್ತ ಸರಿಯಾಗಿ ಗಮನ ಹರಿಸಿ. ಆರ್ಥಿಕ ನೆರವು ಸಾಕಾಗುವುದಿಲ್ಲ. ನಿಮ್ಮ ಆದ್ಯತೆಗಳನ್ನು ಮೃದುವಾಗಿ ವ್ಯಕ್ತಪಡಿಸಿ. ಕೆಲಸಗಳು ಆತುರದಿಂದ ನಡೆಯುತ್ತಿವೆ. ಸಂಗತಿಯನ್ನು ಹಣಕ್ಕಾಗಿ ಪೀಡಿಸುವಿರಿ.ಇಷ್ಟವಿಲ್ಲದ ಕಡೆ ಬಲವಂತವಾಗಿ ಹೋಗುವಿರಿ. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ. ತಲೆಯ ನೋವಿಗೆ ಯೋಗ್ಯ ಚಿಕಿತ್ಸೆಯನ್ನು ಮಾಡಿಕೊಳ್ಳಿ. ಅತಿಥಿಗಳ ಆಗಮನದಿಂದ ಸಂತೋಷವಾಗುವುದು. ನಿಮ್ಮ ಬಲದ ಪ್ರದರ್ಶನವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ವಿಚಾರಕ್ಕೂ ಕಲಹ ಮಾಡಿಕೊಳ್ಳುವಿರಿ. ಹೂಡಿಕೆಯ ಬಗ್ಗೆ ಸರಿಯಾದ ನಿರ್ಧಾರವಿರಲಿ. ನಿಮ್ಮ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು.
ಕರ್ಕಾಟಕ ರಾಶಿ: :ಇಂದು ನಿಮ್ಮ ವೈಯಕ್ತಿಕ ಕಾರ್ಯಗಳ ಕಡೆ ಗಮನವಿರುವುದು. ಆಯಾಸದಿಂದ ಬುದ್ಧಿಯು ಹೆಚ್ಚಿನದಾದುದನ್ನು ಸೂಚಿಸದು. ನಿಮ್ಮ ಮಿತಿಯನ್ನು ಮೀರಿ ಮಾತನಾಡುವುದು ಹಾಸ್ಯಾಸ್ಪದವಾದೀತು. ಹೊಸ ಸಾಧ್ಯತೆಗಳನ್ನು ನೀವು ಹುಡುಕುವಿರಿ. ನಿರೀಕ್ಷೆಗಳು ನಿಜವಾಗುತ್ತವೆ. ಕೆಲಸಗಳು ಸ್ಥಿರವಾಗಿ ಪೂರ್ಣಗೊಳ್ಳುತ್ತವೆ. ದಾಖಲೆಗಳಲ್ಲಿನ ಬದಲಾವಣೆಗಳು ಅನುಕೂಲಕರವಾಗಿರುತ್ತವೆ. ಎಲ್ಲರೊಂದಿಗೆ ಮಿತವಾಗಿ ಮಾತನಾಡಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಕತ್ತಲೆಯನ್ನು ಶಪಿಸುವುದಕ್ಕಿಂತ ಬೆಳಕನ್ನು ಹುಡುಕುವುದು ಉತ್ತಮ. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ನಿಮ್ಮ ಮೌನವು ಅಸಹಾಯಕತೆಯನ್ನು ತೋರಿಸಬಹುದು. ನಿಮ್ಮ ಕಾರ್ಯದಲ್ಲಿ ಉದ್ದೇಶವು ಸ್ಪಷ್ಟವಾಗಿ ಇರಲಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಆಹಾರವು ನಿಮ್ಮ ಆರೋಗ್ಯವನ್ನು ಕೆಡಿಸೀತು.
ಸಿಂಹ ರಾಶಿ: :ನ್ಯಾಯಾಲಯದಲ್ಲಿ ನಿಮ್ಮದಾದ ಕೆಲಸಗಳು ಅಪೂರ್ಣವಾಗಲಿದೆ. ನಿಮ್ಮದಲ್ಲದ ತಪ್ಪಿದ್ದರೂ ಅದನ್ನು ಒಪ್ಪಿಕೊಂಡು ಮುಂದುರಿಯುವಿರಿ. ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸುವಿರಿ. ಸುಲಭದ ತುತ್ತನ್ನೂ ಜೀರ್ಣಿಸಿಕೊಳ್ಳಲಾಗದೆ ಸ್ಥಿತಿ ಬರಬಬಹುದು. ಆದಾಯಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುತ್ತೀರಿ. ಪ್ರೀತಿಪಾತ್ರರ ಆಗಮನವು ಸಂತೋಷವನ್ನು ತರುತ್ತದೆ. ಅವಕಾಶಗಳನ್ನು ತಕ್ಷಣವೇ ಬಳಸಿಕೊಳ್ಳಿ. ನಿಮ್ಮ ಮಾತನ್ನು ನಿಯಂತ್ರಿಸಿ. ಅಸಹಜ ವರ್ತನೆಯ ಬಗ್ಗೆ ನೀವು ಏನನ್ನೂ ಹೇಳುವುದು ಬೇಡ. ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗುವುದು. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಉತ್ತಮ ಭೋಜನವನ್ನು ಮಾಡುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನೀವು ಇಂದು ವಿದ್ಯುತ್ ಉಪಕರಣದ ಮಾರಟಗಾರರಾಇದ್ದರೆ ಅಧಿಕ ಲಾಭವು ಸಿಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಬೆಳವಣಿಗೆಗೆ ಅವಕಾಶಗಳು ಸಿಕ್ಕರೂ ಅದು ನಿಮಗೆ ಸರಿಯಾಗದು.
ಕನ್ಯಾ ರಾಶಿ: :ಹಣದ ಕೊರತೆ ಇದ್ದರೂ ಅದನ್ನು ತೋರಿಸಿಕೊಳ್ಳಲು ಹೋಗದೇ ಎಲ್ಲರಂತೆ ಇರುವಿರಿ. ಪ್ರಭಾವಿ ವ್ಯಕ್ತಿಗಳ ಜೊತೆ ಕೆಲಸ ಮಾಡುವ ಅವಕಾಶವನ್ನು ಹೇಗೋ ಪಡೆಯುವಿರಿ. ಕುಟುಂಬದವರ ವಿರೋಧದ ನಡುವೆ ಸಾಮಾಜಿಕ ಕೆಲಸಕ್ಕೆ ತೆರಳುವಿರಿ. ನೀವು ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತೀರಿ. ಕೈಗೊಂಡ ಕೆಲಸಗಳು ಸಕ್ರಿಯವಾಗಿ ಮುಂದುವರಿಯುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರ ಭೇಟಿ ಸಾಧ್ಯತೆ. ನಿಮ್ಮ ಬಗ್ಗೆ ಯಾವುದನ್ನೂ ಹೇಳಿಕೊಳ್ಳದೇ ಮಾಡುವ ಕಾರ್ತದ ಕಡೆ ಗಮನ ಇರಲಿ. ಯಾರಿಗೂ ಹೇಳಿಕೊಳ್ಳದೇ ನೀವೊಬ್ಬರೇ ರೋಗವನ್ನು ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ.




