ವ್ಯವಹಾರ ಜಗತ್ತು ಸುಮ್ಮನೆ ಅಲ್ಲ. ಅಲ್ಲಿ ಯಾವುದೋ ರಾತ್ರೋ ರಾತ್ರಿ ಎದ್ದು ನಿಂತು ಬಿಡೋದಿಲ್ಲ. ಹಗಲು-ರಾತ್ರಿಗಳನ್ನು ಒಗ್ಗೂಡಿಸಿ, ತನ್ನೆಲ್ಲ ಬುದ್ಧಿಶಕ್ತಿಯ ತೈಲವನ್ನೆಲ್ಲ ಧಾರೆ ಎರೆದು, ಶ್ರಮ ಪಟ್ಟ ಮೇಲೆ ಒಂದಿಷ್ಟು ಅದೃಷ್ಟವೂ ಜತೆಯಾಗಿ ಯಶಸ್ಸು ದೊರೆಯಬಹುದು. ಅದು ಕೂಡ ಖಾತ್ರಿ ಏನಿಲ್ಲ. ಸಿಕ್ಕರೂ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಈ ಲೇಖನದಲ್ಲಿ ಆಸಕ್ತಿಕರವಾದ ಸಂಗತಿಯನ್ನು ತಿಳಿಸಲಾಗುತ್ತದೆ. ದೊಡ್ಡ ದೊಡ್ಡ ಉದ್ಯಮ ಸಾಮ್ರಾಜ್ಯಗಳನ್ನು ಕಟ್ಟಬಲ್ಲಂಥ ಸಾಮರ್ಥ್ಯ ಇರುವವರು ಇವರೇ ಎನ್ನುತ್ತದೆ ಜ್ಯೋತಿಷ್ಯ. ಯಾರು ಆ ನಾಲ್ಕು ರಾಶಿಯವರು? ಉಳಿದೆಲ್ಲರಿಗಿಂತ ಇವರು ಹೇಗೆ ಭಿನ್ನ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಧನುಸ್ಸು
ಎಂಥ ಸವಾಲನ್ನಾದರೂ ಎದುರಿಸುವಲ್ಲಿ ಈ ರಾಶಿಯವರು ಗಟ್ಟಿಗರು. ಯಾವುದೇ ಕಾರಣಕ್ಕೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ಹೊಸದೇನನ್ನಾದರೂ ಕಲಿಯುತ್ತಲೇ ಇರುವ ಜನರಿವರು. ಇನ್ನು ಎಂಥ ಸಣ್ಣ ಉದ್ಯಮ, ವ್ಯಾಪಾರವನ್ನಾದರೂ ದೊಡ್ಡ ಮಟ್ಟದಲ್ಲಿ ಕಟ್ಟಿ ನಿಲ್ಲಿಸುವಂಥ ಕನಸು, ತಾಕತ್ತು ಇರುತ್ತದೆ. ತುಂಬ ಚಿಕ್ಕ ವಯಸ್ಸಿಗೇ ವ್ಯವಹಾರ, ವ್ಯಾಪಾರ ಎಂದಿಳಿಯುವ ಇವರಿಗೆ ಓದು ಕೂಡ ಬಹಳ ಮುಖ್ಯವಾದ ವಿಚಾರ ಆಗಿರುತ್ತದೆ. ಇವರು ಅದ್ಭುತವಾದ ಮೈಂಡ್ ರೀಡರ್ ಕೂಡ ಹೌದು. ಯಾರು, ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ಬಹಳ ಬೇಗ ಹಾಗೂ ಸುಲಭವಾಗಿ ಪತ್ತೆ ಮಾಡಿ, ಒಲಿಸಿಕೊಳ್ಳುತ್ತಾರೆ. ಆ ನಂತರ ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇವರ ಶಕ್ತಿ ಯಾವ ಪ್ರಮಾಣದ್ದು ಎಂದು ಅಂದಾಜಿಸುವುದೇ ಕಷ್ಟ.
ಕನ್ಯಾ
ಬೆರಳು ತೋರಿಸಿದರೆ ಹಸ್ತವನ್ನೇ ನುಂಗುತ್ತಾರೆ ಅನ್ನುತ್ತಾರಲ್ಲ, ಆ ರೀತಿಯ ಜಾಯಮಾನದವರು ಇವರು. ತಾವಿರುವ ಕ್ಷೇತ್ರದಲ್ಲಿ ಇನ್ಯಾವುದಕ್ಕೂ ಉಳಿಗಾಲವಿಲ್ಲ ಎಂಬಂಥ ಸ್ಥಿತಿ ತಂದುಬಿಡುತ್ತಾರೆ. ತಮಗೆ ಆಗಲ್ಲ ಎಂಬ ಸಂಗತಿ ಇವರ ಬಳಿ ಯಾವುದೂ ಇರುವುದಿಲ್ಲ. ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡು ಮಾಡಿ ಮುಗಿಸುತ್ತಾರೆ. ಆದರೆ ಇವರ ಬುದ್ಧಿಯೇ ಕೆಲವು ಬಾರಿ ಶತ್ರುವಾಗಿ ಬಿಡುತ್ತದೆ. ಅತಿಯಾದ ಬುದ್ಧಿವಂತರಾದ ಕನ್ಯಾ ರಾಶಿಯವರಿಗೆ ಅದೇ ಮಾರಕ ಆಗುತ್ತದೆ. ಬಾಯಿ ಸುಮ್ಮನಿರದೆ ಕೆಲವು ಅನಾಹುತಗಳನ್ನು ತಂದಿಟ್ಟುಕೊಳ್ಳುತ್ತಾರೆ. ಆದರೂ ಎಂಥ ಸವಾಲನ್ನಾದರೂ ಆರಾಮಾಗಿ ದಾಟಿಕೊಂಡು ಬಿಡುತ್ತಾರೆ. ಇನ್ನೂ ಕೆಲವು ಸಲ ಅದನ್ನೇ ಅವಕಾಶವನ್ನಾಗಿ ರೂಪಿಸಿಕೊಳ್ಳುತ್ತಾರೆ. ಇವರನ್ನು ಕೆಣಕಿದಷ್ಟೂ ಮತ್ತಷ್ಟು ಮಗದಷ್ಟು ಎತ್ತರಕ್ಕೆ ಏರುತ್ತಾರೆ.
ಮೀನ
ಇವರ ಬಹುತೇಕ ಗುರಿಗಳು ಹಣಕಾಸಿನ ಜತೆಗೆ ಹೆಸರನ್ನೂ ಸಂಪಾದಿಸಬೇಕು ಎಂಬುದರ ಕಡೆಗೆ ಇರುತ್ತದೆ. ಇತರರ ಅಭಿಪ್ರಾಯಗಳನ್ನು ಭಾರೀ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಾರೆ ಎಂಬ ಭಾವನೆ ಮೇಲ್ನೋಟಕ್ಕೆ ಮೂಡುವಂತೆ ತೋರಿಸಿಕೊಳ್ಳುವ ಮೀನ ರಾಶಿಯವರು ಅಂತರಂಗದಿಂದ ಯಾರ ಮಾತನ್ನೂ ಕೇಳದವರು. ಪ್ರತಿ ಯಶಸ್ಸು ಇವರ ಪಾಲಿಗೆ ಕಿಕ್ ನೀಡುತ್ತದೆ. ಅಪರೂಪದ ವಸ್ತು, ವಿಷಯಗಳು ಇವರ ಆಸಕ್ತಿಯನ್ನು ಜಾಸ್ತಿ ಮಾಡುತ್ತವೆ. ಉಳಿದವರು ಯಾರೂ ತುಳಿಯದ ಹಾದಿಯಲ್ಲಿ ಸಾಗುವ ಇವರು, ತಮ್ಮ ಹೆಸರನ್ನು ಚಿರಸ್ಥಾಯಿ ಆಗಿಸುವಂಥ ಕೆಲಸಗಳನ್ನು ಮಾಡುತ್ತಾರೆ.
ವೃಶ್ಚಿಕ
ಯಾರಿಗೂ ಹೊಳೆಯದ ಸಂಗತಿ, ವ್ಯವಹಾರ, ಉದ್ಯಮ ಒಬ್ಬ ವ್ಯಕ್ತಿ ಮಾಡುತ್ತಿದ್ದರೆ ಆತ ಅಥವಾ ಆಕೆ ವೃಶ್ಚಿಕ ರಾಶಿಯವರೇ ಆಗಿರುತ್ತಾರೆ. ಇವರ ಬುದ್ಧಿ ಸದಾ ಭವಿಷ್ಯದಲ್ಲೇ ಸುಳಿದಾಡುತ್ತಿರುತ್ತದೆ. ಮತ್ತೆ ಕೆಲವು ಸಲ ಇವರನ್ನು ಎದುರು ಹಾಕಿಕೊಂಡವರ ಹೇಳ ಹೆಸರಿಲ್ಲದಂತೆ ಮಾಡುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡುತ್ತಿರುತ್ತದೆ. ಈ ಎಲ್ಲದರ ಮಧ್ಯೆಯೂ ವ್ಯಾಪಾರ- ವ್ಯವಹಾರದಲ್ಲಿ ವೃಶ್ಚಿಕ ರಾಶಿಯವರು ತಲುಪುವ ಎತ್ತರ ಹಾಗೂ ಮಾಡುವ ಸಾಧನೆ ಇದೆಯಲ್ಲಾ ಅದು ಅಪಾರ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಕ್ರಾಂತಿಗೆ ಮುನ್ನುಡಿ ಬರೆಯುವಂತಹ ಆಧುನಿಕ ಮನಸ್ಥಿತಿಯವರು ಇವರು.
ಇದನ್ನೂ ಓದಿ: Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ
ಇದನ್ನೂ ಓದಿ: These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ
(These 4 Zodiac Sign People Will Build Big Business Empire)