ಖಗೋಳದಲ್ಲಿ ಕಾಣುವ ಅತಿ ವಿಶಿಷ್ಟ ನಕ್ಷತ್ರ ಇದು. ಎಂಟನೇ ನಕ್ಷತ್ರವಾಗಿರುವ ಇದು ಮೂರು ನಕ್ಷತ್ರಗಳ ಸಮೂಹ. ಅಷ್ಟಾಗಿ ಅಲ್ಲ ಬಾಣದ ಆಕಾರದಲ್ಲಿ ಆಕಾಶದಲ್ಲಿ ಕಾಣಿಸುತ್ತವೆ ಎನ್ನುತ್ತದೆ ಪ್ರಾಚೀನ ಗ್ರಂಥಗಳು. ಈ ನಕ್ಷತ್ರದ ದೇವತೆ ದೇವಗುರು ಬೃಹಸ್ಪತಿ. ಈ ನಕ್ಷತ್ರವನ್ನು ತಿಷ್ಯ ಎಂದೂ ಕರೆಯುವ ರೂಢಿ ಇದೆ. ಎಲ್ಲ ಕಾರ್ಯಗಳನ್ನು ಪಾವನಗೊಳಿಸುತ್ತದೆ ಎಂದು ಇದಕ್ಕೆ ಈ ಹೆಸರು.
ಈ ನಕ್ಷತ್ರದಲ್ಲಿ ಜನಿಸಿದವರು ತ್ರೇತಾಯುಗದಲ್ಲಿ ಜನಿಸಿದ ಭರತನೂ ಹೌದು. ಅವನ ಜೀವನವನ್ನು ಅವಲೋಕನ ಮಾಡಿದರೂ ಸಾಮಾನ್ಯ ಪರಿಚಯ ಆಗುತ್ತದೆ. ಅದರ ವಿಶೇಷತೆ ಏನು ಎನ್ನುವುದನ್ನು ನೋಡಬೇಕು.
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಎತ್ತರ ಹಾಗೂ ಸುಂದರವಾಗಿ ಕಾಣಿಸುವ ಆಕರ್ಷಕ ದೇಹವಿರಲಿದೆ. ಅಂಗಾಂಗಗಳ ಹೃಷ್ಟಪುಷ್ಟವಾಗಿ ಕಾಣಿಸುವುದು.
ಇವರನ್ನು ಕಂಡರೆ ತಂದೆ ತಾಯಿಯರಿಗೂ ಇಷ್ಟ, ಇವರಿಗೂ ಪಾಲಕ, ಪೋಷಕರ ಮೇಲೆ ಪ್ರೀತಿ ಇರುತ್ತದೆ. ಅವರ ಸೇವೆಯನ್ನು ಮಾಡುವ ಮನೋಭಾವವನ್ನು ಹೊಂದಿರುತ್ತಾರೆ.
ತನ್ನ ಕರ್ತವ್ಯಗಳನ್ನು ಮಾಡದೇ ಬೇರೆ ಕಾರ್ಯಗಳನ್ನು ಮಾಡಲಾರರು. ತಮ್ಮ ಧರ್ಮದಲ್ಲಿ ಇವರಿಗೆ ಆಸಕ್ತಿ ಹೆಚ್ಚು. ಧರ್ಮಾಚರಣೆಯನ್ನು ಇವರು ಬಿಡಲಾರರು.
ಹಿರಿಯರ ಕಂಡರೆ ಗೌರವ. ಅವರ ಸೇವೆಯನ್ನು ಮಾಡುವ, ಅವರಿಗೆ ವಿನಯವಾಗಿ ಇರುತ್ತಾರೆ. ಕಿರಿಯರ ಜೊತೆ ಸೌಹಾರ್ದ, ಸಂತೋಷ, ಪ್ರೀತಿಯಿಂದಲೂ ವರ್ತಿಸುತ್ತಾರೆ.
ತಮ್ಮ ಗೌರವಕ್ಕೆ ತೊಂದರೆ ಬರುವುದನ್ನು ಸಹಿಸಲಾರರು. ತಮಗೂ ಗೌರವ ಇನ್ನೊಬ್ಬರಿಗೂ ಗೌರವವನ್ನು ಕೊಟ್ಟು ಜೀವಿಸುತ್ತಾರೆ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 6ರ ದಿನಭವಿಷ್ಯ
ಆಭರಣಗಳನ್ನು ಇಷ್ಟಪಡುತ್ತಾರೆ. ವಾಹನ ಖರೀದಿಗೆ ಯಾವಾಗಲೂ ಯೋಚಿಸುವರು. ವಾಹನಗಳ ಬಗ್ಗೆ ಮಾಹಿತಿಸಂಗ್ರಹ, ಮಾತಾನಾಡುವುದನ್ನು ಮಾಡುತ್ತಿರುತ್ತಾರೆ.
ಇವರು ಭಾಗ್ಯವಂತರು. ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವರು ಅಥವಾ ಪುಣ್ಯ ಮಾಡಿದ ವಂಶದಲ್ಲಿ ಇವರ ಜನನ ಆಗಿರುತ್ತದೆ.
ಒಳ್ಳೆಯ ಕಾರ್ಯಗಳಿಂದ ಧನಸಂಪಾದನೆಯನ್ನು ಮಾಡುತ್ತಾರೆ. ಅಂತಹ ಉದ್ಯೋಗಗಳು ಅವರಿಗೆ ಪ್ರಾಪ್ತವಾಗುತ್ತವೆ. ಅಥವಾ ಅಂತಹ ಉದ್ಯಮವನ್ನಾದರೂ ಮಾಡುತ್ತಾರೆ.
ಹೆಚ್ಚು ತಿಳಿವಳಿಕೆ ಇವರಲ್ಲಿ ಇರುತ್ತದೆ. ನಕ್ಷತ್ರದ ದೇವರೆಯೂ ಬೃಹಸ್ಪತಿ ಆದ ಕಾರಣ ನಿರಂತರ ಅರಿಯುವಿಕೆಯಲ್ಲಿ ತೊಡಗಿರುತ್ತಾರೆ.
ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತರೀತಿಯಿಂದ ಎಲ್ಲರ ಜೊತೆ ವ್ಯವಹಾರವನ್ನು ಮಾಡುತ್ತಾರೆ. ಅವರೂ ಉದ್ವೇಗದ ಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುವುದಿಲ್ಲ.
ಇವರಿಗೆ ಪ್ರಾಣಿಗಳೆಂದರೆ ಪ್ರಿಯ. ಪ್ರಾಣಿಗಳ ಒಡನಾಟ ಹೆಚ್ಚು. ಸಾಕುವ ಅವಕಾಶವಿದ್ದರೆ ಯಾವುದಾದರೂ ಜೀವಿಯನ್ನು ಸಾಕಲು ಇಷ್ಟಪಡುವರು.
– ಲೋಹಿತ ಹೆಬ್ಬಾರ್ – 8762924271
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 am, Wed, 6 November 24