Daily Horoscope 7 November 2024: ಈ ರಾಶಿಯವರು ಕೆಟ್ಟ ಸುದ್ದಿಯಿಂದ ವಿಚಲಿತರಾಗುವಿರಿ

Daily Horoscope 7 November 2024: ನವೆಂಬರ್ 07,​ 2024ರ ಗುರುವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 7 November 2024: ಈ ರಾಶಿಯವರು ಕೆಟ್ಟ ಸುದ್ದಿಯಿಂದ ವಿಚಲಿತರಾಗುವಿರಿ
ಈ ರಾಶಿಯವರು ಕೆಟ್ಟ ಸುದ್ದಿಯಿಂದ ವಿಚಲಿತರಾಗುವಿರಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶೂಲಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 31 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:43 ರಿಂದ 03:09ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:31 ರಿಂದ 07:58ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:24ರಿಂದ 10:50 ರವರೆಗೆ.

ಮೇಷ ರಾಶಿ: ಹಣಕಾಸಿನ ಮುಲಾಜಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಇನ್ಮೊಬ್ಬರ ಮಾತಿಗೆ ನೋವಿಗೆ ಸ್ಪಂದಿಸುವ ಗುಣ ಒಳ್ಳೆಯದು. ಗೆಳತಿಯೊಬ್ಬಳಿಂದ ನಿಮ್ಮಆಸಕ್ತಿಯ ಕ್ಷೇತ್ರವು ಬದಲಾಗುವುದು.‌ ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ಇನ್ನೊಬ್ಬರನ್ನು ಅನುಕರಣೆ ಮಾಡುವುದಿಕ್ಕಿಂತ ನಿಮ್ಮದಾದ ಮಾರ್ಗವೇ ಇರಲಿ. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಪರರ ಆಪತ್ತಿಗೆ ಸ್ವಲ್ಪವಾದರೂ ಸಹಾಯಮಾಡುವಿರಿ. ಸಂದರ್ಭಕ್ಕೆ ತಕ್ಕುದಾದ ಪಾಠವನ್ನು ನೀವು ಕಲಿಯುವಿರಿ. ನಿಮ್ಮ ಉತ್ತರವು ಸಮಾಧಾನಕರವಾಗಿರದು. ಆಸ್ತಿಯ ದಾಖಲೆಯನ್ನು ನೀವು ಊರ್ಜಿತಗೊಳಿಸಿ. ಹಂಚಿಕೆಯ ಬಗ್ಗೆಯೂ ಸರಿಯಾದ ಆಲೋಚನೆ ಮಾಡುವಿರಿ.

ವೃಷಭ ರಾಶಿ: ವೃತ್ತಿಯ ಸಂಕಟವನ್ನು ಹೇಳಲಾಗದು. ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳಬೇಕಾದೀತು. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಬಹಳ ಶ್ರಮದಿಂದ ಇಂದು ನ್ಯಾಯಾಲಯಸಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ನಿಶ್ಚಿಂತೆಯಿಂದ ಇರಬೇಕೆಂದುಕೊಂಡರೂ ಕೆಲಸಗಳು ಬರುವುದು. ಕಲಿಕೆಯ ಹಂಬಲ ದೂರಾಗುವುದು ಸಾಧ್ಯತೆ ಇದೆ. ಅತಿಯಾದ ಮರೆವು ಉಂಟಾಗಲಿದೆ ಇಂದು. ಪರಿಚಯವಿಲ್ಲದ ಜನರಿಂದ ನಿಮ್ಮನ್ನು ಸಮೀಪಿಸಬಹುದು. ನಿಮ್ಮ ಕಾರ್ಯಗಳಲ್ಲಿ ಸಾವಧಾನತೆ ಇರಲಿದೆ.

ಮಿಥುನ ರಾಶಿ: ಆತ್ಮರಕ್ಷಣೆಯ ವಿಷಯದಲ್ಲಿ ಹಿನ್ನಡೆ ಆಗಬಹುದು. ಸ್ತ್ರೀಯರಿಗೆ ಈ ದಿನ ಒತ್ತಡ ಹೆಚ್ಚಾಗುವುದು. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ಅನಾರೋಗ್ಯದ ಭೀತಿಯಿಂದ ದಿನವನ್ನು ಕಳೆಯುವಿರಿ. ನಿಮ್ಮ ಇಂದಿನ ಕಾರ್ಯದಿಂದ‌ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ನಿಮ್ಮವರೇ ನಿಮ್ಮ‌ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಅಹಂಕಾರದಂತೆ ತೋರುವುದು. ನಿಮ್ಮ ಇಂದಿನ ಸ್ಥಾನವು ಬಹಳ ಪರಿಶ್ರಮದ ಫಲವಾಗಿದೆ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಅಧಿಕಾರದ ಮಾತುಗಳನ್ನು ಕಡಿಮೆ ಮಾಡಿ.

ಕರ್ಕಾಟಕ ರಾಶಿ: ಕಷ್ಟವಾದರೂ ಇಷ್ಟಪಡುವುದು ಅನಿವಾರ್ಯವಾಗುವುದು. ಸತತವಾದ ಸೋಲಿನಿಂದ ಉತ್ಸಾಹವೂ ಕುಗ್ಗಿದೆ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ನಿಮ್ಮ ಅನುಪಸ್ಥಿತಿಯು ಬೇರೆ ಸೂಚನೆಯನ್ನು ನೀಡಬಹುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಕರಗತವಾದ ವಿಷಯವನ್ನು ಮರೆಯುವ ಸಾಧ್ಯತೆ ಇದೆ. ಪ್ರತಿಯೊಬ್ಬರದ್ದೂ ಜೀವನವು ಭಿನ್ನವಾಗಿದ್ದು ಹೋಲಿಕೆ ಬೇಡ. ನಿಮಗೆ ಗೌರವ ಸಿಗದೆ ಕಡೆ ಹೋಗುವುದಿಲ್ಲ. ನೌಕರರ ವಿಚಾರದಲ್ಲಿ ಒಂದು ಕಣ್ಣಿರಲಿ. ತಾಳ್ಮೆ ಅವಶ್ಯಕ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಎಲ್ಲವುದನ್ನೂ ತಾನೇ ಮಾಡುವುದು ಎಂಬ ಮನೋಭಾವವಿರುವುದು.

ಸಿಂಹ ರಾಶಿ: ಪರರ ದೋಷವನ್ನು ಹೇಳುವ ಮೊದಲು ಗುಣಗಳ‌ನ್ನು ಹೇಳಿ. ಸಮಯ ಕಳೆದ ಅನಂತರ ಸಹವಾಸವು ದೋಷ ಎನಿಸಬಹುದು. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಷ್ಪಕ್ಷಪಾತದ ನಿರ್ಧಾರದಿಂದ ನೀವು ದೊಡ್ಡವರಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ನಿಮ್ಮನ್ನು ಕೆಲಸದಿಂದ ತೆಗೆಯುತ್ತಾರೆ ಎಂಬ ಭಯವು ಇರಲಿದೆ. ಸುಲಭದ ತುತ್ತನ್ನು ಕಷ್ಟದಿಂದ ನುಂಗಬೇಕಾಗುವುದು.. ಸ್ನೇಹಿತ ಭೇಟಿಯನ್ನು ನೀವು ಅಲ್ಲಗಳೆಯುವಿರಿ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನಿಮಗೆ ಯಾರದ್ದಾದರೂ ಮಾತು ಅಧಿಕಾರದಂತೆ ತೋರೀತು. ಅಚಾತುರ್ಯವನ್ನು ನೆನಪು‌ಮಾಡಿಕೊಂಡು ಮನಸ್ಸು ಕೆಡುವುದು.

ಕನ್ಯಾ ರಾಶಿ: ಜೀವನದ ಹೊಸ ಅಧ್ಯಾಯಕ್ಕೆ ಒಳ್ಳೆ ಹೆಜ್ಜೆ ಇರಲಿ. ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ನಿಮ್ಮ ಸ್ಥಿರಾಸ್ತಿಯನ್ನು ಮಾರಾಟಮಾಡುವಿರಿ. ಇಂದು ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸುವುದು. ಆತುರತೆಯು ನಿಮ್ಮ ಮನಸ್ಸನ್ನು ಕೆಡಿಸೀತು. ನಿಮ್ಮ ಸ್ವಂತ ಕೆಲಸಗಳಿಗೆ ಇನ್ನೊಬ್ಬರ ಸಹಾಯವನ್ನು ನೀವು ಬಯಸುವುದಿಲ್ಲ. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ. ನೀವಾಡುವ ಸತ್ಯವು ಮೃದುವಾಗಿರಲಿ.

ತುಲಾ ರಾಶಿ: ಹಳೆಯ ಘಟನೆಗಳನ್ನು ಸ್ಮರಿಸಿ ದುಃಖಿಸುವಿರಿ. ಬೇರೆಯವರು ತಪ್ಪು ಮಾಡಿದ್ದಾರೆ ಎಂದು ನೀವೂ ಮಾಡಲು ಹೋದರೆ ಸಿಕ್ಕಿಬೀಳುವಿರಿ. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವಿರಿ. ನಿಮ್ಮ ಸಂಕಟಕ್ಕೆ ಪರರನ್ನು ಜರಿದು ಪ್ರಯೋಜನವಾಗದು. ವಾಹನ ಓಡಾಡವು ಸುಖಕರವಲ್ಲ. ತಾಯಿಗೆ ಕೊಡುವ ಗೌರವವು ಕಡಿಮೆ ಆದೀತು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಇಂದು ವಾಸದ ಮನೆಯನ್ನು ಬದಲಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ನಿಮ್ಮ ಬಗ್ಗೆ ಸಹೋದ್ಯೋಗಿಗಳು ಆಡುಕೊಳ್ಳುವರು. ಅನಿಸಿದ್ದನ್ನು ಪಡೆಯುವವರೆಗೂ ಮರಳಿ ಯತ್ನವ ಮಾಡುವಿರಿ. ಮನಸ್ಸುನ್ನು ಅಚಲವಾಗಿಸಿಕೊಳ್ಳಿ. ಭವಿಷ್ಯವನ್ನು ಕಟ್ಟಿಕೊಳ್ಳುವ ಕುರಿತು ಚಿಂತೆ ಬರಬಹುದು. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಅನ್ಯರ ಹಂಗಿನಲ್ಲಿ ಇರುವಂತೆ ಭಾಸವಾಗಬಹುದು.

ವೃಶ್ಚಿಕ ರಾಶಿ: ದೈವಬಲದಿಂದ ಯಶಸ್ಸು ಸಿಗುವುದು. ಹೊಸ ಮನೆಯಲ್ಲಿ ನಿಮಗೆ ಬೇಕಾದ ಅನುಕೂಲತೆಗಳ ಮನೆಯವರಲ್ಲಿ ಹೇಳುವಿರಿ. ನೀವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದೀತು. ಹಣ ಕೊಟ್ಟರೂ ಸಿಗದ ಸಂಪತ್ತನ್ನು ಗಳಿಸುವಿರಿ. ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು. ಹಳೆಯ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಏಕಾಂತದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹಳೆಯ ನಿಮ್ಮ ಸ್ನೇಹಿತವು ದೂರಾಗುವುದು.‌ ಹೊಸ ಮನೆಯ ನಿರ್ಮಾಣದ ಬಗ್ಗೆ ದೊಡ್ಡ ಕನಸು ಕಾಣುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಯಾರೊಂದಿಗಾದರೂ ಸಲುಗೆಯು ಅತಿಯಾಗಬಹುದು. ಬೋಧನೆಗೆ ಇಂದು ಅವಕಾಶ ಸಿಗುವುದು.

ಧನು ರಾಶಿ: ಬೆಂಬಲಿಗರಿಗೆ ಸಂತೋಷವನ್ನು ಕೊಡುವಿರಿ. ಸರಳ ಎಂದುಕೊಂಡ ಕೆಲಸವೇ ಇಂದು ಕಷ್ಟವಾಗುವುದು. ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮ ಸಂಬಂಧಗಳ ಬಗ್ಗೆ ಇಂದು ಹೆಚ್ಚು ಆಲೋಚಿಸುವಿರಿ.‌ ಸದ್ಭಾವದಿಂದ‌ ಮಾಡುವ ಕಾರ್ಯವು ಸತ್ಫಲವನ್ನೇ ಕೊಡುವುದು. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ನಿಮ್ಮ ಸ್ವಭಾವದಂತೆ ಎಲ್ಲರನ್ನು ನಂಬುವಿರಿ. ಎಲ್ಲ ಜವಾಬ್ದಾರಿಯನ್ನೂ ಮಕ್ಕಳಿಗೆ ವಹಿಸಿ ನೀವು ನಿಶ್ಚಿಂತರಾಗುವಿರಿ. ನಿಮ್ಮ ಕೆಲಸವು ಪೂರ್ಣವಾಗದೇ ಹೇಳಿಸಿಕೊಳ್ಳುವಿರಿ. ನೆಮ್ಮದಿಯನ್ನು ಪಡೆಯಲು ನಿಮಗೆ ಸಮಯ ಬೇಕಾದೀತು. ನಿಗದಿತ ಸಮಯಕ್ಕೆ ನಿಮ್ಮ ಕಾರ್ಯವನ್ನು ಮುಗಿಸಿ. ಅಪ್ರಾಮಾಣಿಕರಂತೆ ನಿಮಗೇ ಅನ್ನಿಸಬಹುದು. ಕಟ್ಟಿಕೊಂಡ ಬುತ್ತಿ ಎಲ್ಲಿಯವರಗೆ ಬರಲು ಸಾಧ್ಯ? ಅತಿಯಾದ ವೇಗ ಬೇಡ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು.

ಮಕರ ರಾಶಿ: ವಿವಾಹದ ಮಾತುಕತೆಗೆ ನಿಮ್ಮ ಒಪ್ಪಿಗೆ ಇರದು. ನಾಚಿಕೆಯ ಸ್ವಭಾವವು ಯಸರ ಜೊತೆಯೂ ಬೆರೆಯಲಾಗದು. ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಕೆ ಆಗುವುದು. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ನಿಮ್ಮ ಗಮನ ಇರಲಿ. ನಿಮ್ಮ ಕೆಲಸವನ್ನು ಬೇರೆಯವರ ಮೂಲಕ ಮಾಡಿಸಿಕೊಳ್ಳುಬಿರಿ. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಸಹೋದರರು ನಿಮಗೆ ಧನ ಸಹಾಯವನ್ನು ಕೇಳಿದರೆ ಮಾಡಬಹುದು. ಉದ್ಯೋಗದಲ್ಲಿ ವೇತನವನ್ನು ಹೆಚ್ಚಿಸಿಕೊಳ್ಳಲು ಮೇಲಧಿಕಾರಿಗಳ ಜೊತೆ ಮಾತನಾಡುವಿರಿ. ನಿಮ್ಮ ಸಾಮರ್ಥ್ಯವನ್ನು ಇತರರಿಗೆ ನೀವೇ ತಿಳಿಸಬೇಕಾಗುವುದು. ಇಂದು ಅಲಂಕಾರಕ್ಕೆ ಹೆಚ್ಚು ಸಮಯವನ್ನು ತೆಗೆದಿಡುವಿರಿ. ಸಂದರ್ಭ ಬಂದಾಗ ಮಾತ್ರ ನಿಮ್ಮನ್ನು ನೆನೆಸುವರು. ನಿಮ್ಮ ಸಂತೋಷವನ್ನು ಕಸಿದುಕೊಳ್ಳಲು ಯಾರಾದರೂ ಇರುತ್ತಾರೆ. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು. ಮಾತು ಇಂದು ಹೆಚ್ಚಾದಂತೆ ಕಾಣಿಸುವುದು.

ಕುಂಭ ರಾಶಿ: ನಿಮ್ಮ ಸಾಹಸಕ್ಕೆ ಮೆಚ್ಚುಗೆ ಸಿಗಬಹುದು. ಬಂಧುಗಳ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಬರದು. ಇಂದು ನಿಮಗೆ ಆತ್ಮೀಯರ‌ ಒಡನಾಡ ಅಧಿಕವಾಗಲಿದೆ. ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು. ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಹಣವನ್ನು ನೀಡಬೇಕಾಗುವುದು. ಇನ್ನೊಬ್ಬರ ಮಾತುಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ.‌ ಹೊಸ ಉದ್ಯೋಗದಲ್ಲಿ ಉತ್ಸಾಹವು ಇರಲಿದೆ. ಆತ್ಮವಿಶ್ವಾಸದ ಕೊರತೆಯನ್ನು ನಿಮ್ಮ ಪ್ರಾಮಾಣಿಕ ಪ್ರಯತ್ನವು ಸಾಧಿಸಬಹುದು. ಒಂಟಿ ಜನರು ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ಸರಿಯಾದುದನ್ನು ಸರಿ ಎನ್ನಲು ಹಿಂದೇಟು ಬೇಡ. ಇಂದು ತಿಳಿವಳಿಕೆಯನ್ನು ತೋರ್ಪಡಿಸುವಿರಿ. ಸಾಮಾಜಿಕ ಕಳಕಳಿಯನ್ನು ತೋರಿಸುವಿರಿ. ವೃತ್ತಿಯಲ್ಲಿ ಸರಳತೆಯನ್ನು ಹುಡುಕುವಿರಿ. ಆಪ್ತರ ಮೇಲೆ‌ ಕಿಡಿಕಾರುವುದು ಬೇಡ.

ಮೀನ ರಾಶಿ: ನಿಮ್ಮನ್ನು ಎಲ್ಲ ಕಡೆಯಿಂದ ನಿಯಂತ್ರಿಸುವ ಕಾರ್ಯವನ್ನು ಮಾಡುವರು. ಸೋಲು ಗೆಲುವನ್ನು ನೀವು ಸಮಾನವಾಗಿ ಸ್ವೀಕರಿಸುವುದು ಮುಖ್ಯ. ಸಾಮಾಜಿಕ ಜಾಲತಾಣದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ಕೆಡಕು ಮಾಡುವ ಮನಸ್ಸು ನಿಮಗೆ ಶೋಭೆಯಲ್ಕ. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯ ಬೇಡ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ. ಯಾರ ಮಾತನ್ನೂ ಅಲ್ಲಗಳೆಯಲು ಹೋಗಲಾರಿರಿ. ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆಯಾಗಬಹುದು. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮ್ಮ ನಡವಳಿಕೆಯಿಂದ ಅನುಮಾನ ಬರಬಹುದು. ಹಳೆಯ ವಸ್ತುಗಳ ಮಾರಾಟದಿಂದ ಲಾಭವಿದೆ. ಏರುದನಿಯಲ್ಲಿ ಮಾತನಾಡುವುದು ಬೇಡ. ಆದಾಯದ ಮೂಲವನ್ನು ಸರಿಯಾಗಿ ಇಟ್ಟುಕೊಳ್ಳಿ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ.

ಲೋಹಿತ ಹೆಬ್ಬಾರ್-8762924271 (what’s app only)

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್