ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸುಂದರ ದೇಹವಿರುತ್ತದೆ..!
ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ.
ಇಪ್ಪತ್ತೇಳು ನಕ್ಷತ್ರಗಳಲ್ಲಿ ರೋಹಿಣೀ ಮೂರನೇ ನಕ್ಷತ್ರ. ಇದರ ದೇವತೆ ಬ್ರಹ್ಮಾ. ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ. ನಕ್ಷತ್ರ ಸಮೂಹಗಳಿಂದ ಕೂಡಿರುವ ನಕ್ಷತ್ರವಿದು. ಶ್ರೀಕೃಷ್ಣನ ನಕ್ಷತ್ರವೂ ಇದೇ ಆಗಿದೆ.
ಈ ನಕ್ಷತ್ರದಲ್ಲಿ ಜನಿಸಿದರು ಹೇಗಿರುತ್ತಾರೆ? ಯಾವ ಅಂಶಗಳನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ? ಇವುದು ಇಷ್ಟ? ಎನ್ನುವುದನ್ನು ನೋಡೋಣ.
ಧರ್ಮಕಾರ್ಯದಲ್ಲಿ ಕುಶಲ :
ಧಾರ್ಮಿಕ ಆಚರಣೆಯನ್ನು ಹೇಗೆ ಮಾಡಬೇಕು ಎನ್ನುವ ಕೌಶಲವು ಇವರಿಗೆ ತಿಳಿದಿದೆ. ದೇವರಿಗೆ ಹಿರಿಯರಿಗೆ ಪ್ರಿಯವಾದುದನ್ನು ಮಾಡಲು ಇವರು ತಿಳಿದಿರುತ್ತಾರೆ.
ಉತ್ತಮ ಕುಲದಲ್ಲಿ ಜನನ :
ಇವರು ಯಾವುದೋ ಸಾಮಾನ್ಯ ಕುಲದಲ್ಲಿ ಜನಿಸದೇ, ಇವರ ತಂದೆ, ತಾಯಿ, ಅಜ್ಜ ಅಥವಾ ಇವರ ತಲೆಮಾರಿನಲ್ಲಿ ಯಾರಾದರೂ ಶ್ರೇಷ್ಠರು ಜನಿಸಿದವರಾಗಿರುತ್ತಾರೆ. ಅಂತಹ ಗೌರವಯುತವಾದ ಕುಟುಂಬದಲ್ಲಿ ಜನಿಸುವರು.
ಸುಂದರದೇಹ :
ಇವರ ದೇಹವೂ ಆತ್ಯಂತ ಆಕರ್ಷಕವಾಗಿ ಇರುತ್ತದೆ. ದೊಡ್ಡದಾದ, ಕೃಶವೂ ಸ್ಥೂಲವೂ ಅಲ್ಲದ ಶರೀರ, ಕಾಂತಿಯಿಂದಲೂ ಕೂಡಿರುತ್ತದೆ. ನೃತ್ಯ, ನಾಟಕ ಮುಂತಾದ ಕಲೆಗಳಿಗೆ ಯೋಗ್ಯವಾದ ಕಡೆ ಹೆಚ್ಚು ಆಸಕ್ತಿ ಇರುತ್ತದೆ.
ಧನವಾನ್ :
ಇವರ ಬಳಿ ಅಧಿಕ ಧನವಿರುತ್ತದೆ. ಸ್ಥಿತಿವಂತರಾಗಿ ಬಾಳುವರು. ಧನ, ಆಸ್ತಿಗಳು, ವಿದ್ಯೆ ಇವುಗಳು ಸಂಪತ್ತೇ ಆಗಿರುತ್ತದೆ.
ಮಾನವಾನ್ :
ಇವರು ಎಲ್ಲ ಕಡೆಗಳಿಂದ, ಎಲ್ಲರಿಂದ ಗೌರವವನ್ನು ಪಡೆದುಕೊಳ್ಳುವರು. ಅಂತಹ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ.
ಪ್ರಿಯವಾದ ಮಾತು :
ಇವರು ಅಂತರಂಗದಲ್ಲಿ ಏನೇ ಇದ್ದರು ಅದನ್ನು ಹೊರಹಾಕದೇ ಎಲ್ಲರ ಜೊತೆಯೂ ಪ್ರೀತಿಯಿಂದ ಸಂತೋಷವಾಗುವಂತೆ ಮಾತನಾಡುತ್ತಾರೆ.
ಶುಚಿತ್ವ :
ಇವರ ಇನ್ನೊಂದು ಗುಣ ಶುಚಿಯಾಗಿರುವುದು. ಮನಸ್ಸಿಗೆ ಹಾಗೂ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವರು. ತಮ್ಮ ವಸ್ತುಗಳ ಬಗ್ಗೆಯೂ ಶುಚಿತ್ವವು ಇರುವುದು.
ಈ ನಕ್ಷತ್ರದ ಗುಣ ಹಾಗೂ ಶ್ರೀಕೃಷ್ಣನ ನಡೆವಳಿಕೆಗೆ ಎರಡಕ್ಕೂ ಕೂಡ ಹೆಚ್ಚು ಹೋಲಿಕೆ ಇದೆ. ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಅಲ್ಪ ಪ್ರಮಾಣದ ಲಕ್ಷಣಗಳು ಬಂದೇ ಬರುತ್ತವೆ.
– ಲೋಹಿತ ಹೆಬ್ಬಾರ್ – 8762924271