Horoscope: ರಾಶಿಭವಿಷ್ಯ, ಕೆಲವನ್ನು ಅನವಶ್ಯಕವಾಗಿ ತಂದುಕೊಳ್ಳುವಿರಿ, ನಿಂದಕರಿಗೆ ಉತ್ತರವನ್ನು ಕೊಡುವಿರಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಕೆಲವನ್ನು ಅನವಶ್ಯಕವಾಗಿ ತಂದುಕೊಳ್ಳುವಿರಿ, ನಿಂದಕರಿಗೆ ಉತ್ತರವನ್ನು ಕೊಡುವಿರಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Nov 14, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 14 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 03:08 ರಿಂದ 04:34ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:25 ರಿಂದ 10:51ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 13:43ರ ವರೆಗೆ.

ಮೇಷ ರಾಶಿ: ಮನೆಯ ಕೆಲಸದಲ್ಲಿ ಒತ್ತಡವಿರಲಿದ್ದು, ಒಂದೊಂದಾಗಿಯೇ ಪೂರೈಸುವಿರಿ. ಬಂಧುಗಳ ಆಗಮನವಾಗಲಿದೆ. ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳಬೇಕಾಗುವುದು. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ‌ ಮನೋಗತವನ್ನು ಅರಿತುಕೊಳ್ಳುವಿರಿ. ಯಾರದೋ ಒತ್ತಾಯಕ್ಕೆ ಮಣಿದು ಬೇಸರಪಡುವಿರಿ. ಇಂದು ನಿಮ್ಮ ಬೆಂಬಲಕ್ಕೆ ಬರುವವರನ್ನು ಅತಿಯಾಗಿ ನಂಬುವಿರಿ.

ವೃಷಭ ರಾಶಿ: ಭೂಮಿಯಿಂದ ಅನಿರೀಕ್ಷಿತ ಲಾಭವು ಸಿಗಲಿದೆ. ಕೆಲವರ ತೆಗಳಿಕೆಯಿಂದ ನೀವು ಸಿಟ್ಟಾಗಬಹುದು. ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಮಿತ್ರರ ಸಹಾನುಭೂತಿಯು ನಿಮಗೆ ಉತ್ಸಾಹವನ್ನು ಕೊಡುವುದು. ಉತ್ತಮವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ನಿಮ್ಮವರ ಮಾತು ನಿಮಗೆ ಅಸಮಾಧಾನವನ್ನು ಉಂಟುಮಾಡುವುದು. ಹೇಳಬೇಕಾದ ಮಾತನ್ನು ನೀವು ಹಿಡಿದಿಟ್ಟುಕೊಳ್ಳುವಿರಿ.

ಮಿಥುನ ರಾಶಿ: ಎಲ್ಲವನ್ನೂ ನಿಮ್ಮ ಅನುಭವದ ಮೂಲಕವೇ ತಿಳಿದುಕೊಳ್ಳಬೇಕೆಂದಿಲ್ಲ. ಇತರ ಅನುಭವವೂ ನಿಮಗೆ ಪಾಠವಾಗುವುದು. ಹಠದ ಸ್ವಭಾವದಿಂದ ಹೊರಬನ್ನಿ. ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ಅತಿ ಲೋಭದಿಂದ ಧನಾರ್ಜನೆಯನ್ನು ಮಾಡುವಿರಿ. ನಿಮ್ಮಿಂದಾಗಿ ಕುಟುಂಬದ ಒತ್ತಡವು ಕಡಿಮೆ ಆಗುವುದು. ಅವಸರ ಮಾಡದೇ ಕೆಲಸವನ್ನು ಮಾಡಿ.

ಕರ್ಕ ರಾಶಿ: ಕಾರ್ಯಗಳಿಂದ ಅಧಿಕ ಶ್ರಮವಿರುವುದು. ಕೆಲವನ್ನು ಅನವಶ್ಯಕವಾಗಿ ತಂದುಕೊಳ್ಳುವಿರಿ. ನಿಂದಕರಿಗೆ ಉತ್ತರವನ್ನು ಕೊಡುವಿರಿ. ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮೇಲೆ ಸಹಾನುಭೂತಿ ಇರಬಹುದು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ನಮ್ಮದೇ ಸರಿ ಎನ್ನುವ ವಾದವು ಸರಿಯಾಗದು. ನೀವು ಇಂದು ಯಾರ ಜೊತೆಯೂ ಬೆರೆಯಲು ಇಷ್ಟಪಡುವುದಿಲ್ಲ. ಬಂಧುಗಳ ಒಡನಾಟವು ನಿಮ್ಮ ಆಲೋಚನೆಯ‌ ಕ್ರಮವನ್ನು ಬದಲಿಸುವುದು. ಪ್ರಶಾಂತವಾದ ಚಿತ್ತದಿಂದ ಅನೇಕ ಸಕಾರಾತ್ಮಕ ಅಂಶಗಳನ್ನು ಕಾಣುವಿರಿ.

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ