AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ನಿಮ್ಮ ಹಿತ್ತಾಳೆ ಕಿವಿಯಿಂದ ಸಂಬಂಧಗಳು ಹಾಳಾಗಬಹುದು ಎಚ್ಚರ!

06 ಡಿಸೆಂಬರ್​​ 2024: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಯಾವುದೂ ನೀವು ಅಂದುಕೊಂಡಷ್ಟು ಸುಲಭದ ತುತ್ತಾಗದು. ಹಿತಶತ್ರುಗಳನ್ನು ಆಪ್ತತೆಯಿಂದ ನಿಮ್ಮವರನ್ನಾಗಿ ಮಾಡಿಕೊಳ್ಳುವಿರಿ. ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಹಾಗಾದರೆ ಡಿಸೆಂಬರ್ 06ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ನಿಮ್ಮ ಹಿತ್ತಾಳೆ ಕಿವಿಯಿಂದ ಸಂಬಂಧಗಳು ಹಾಳಾಗಬಹುದು ಎಚ್ಚರ!
ನಿಮ್ಮ ಹಿತ್ತಾಳೆ ಕಿವಿಯಿಂದ ಸಂಬಂಧಗಳು ಹಾಳಾಗಬಹುದು ಎಚ್ಚರ!
TV9 Web
| Edited By: |

Updated on: Dec 06, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಧ್ರುವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:24ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:13 ರಿಂದ 04:37 ರವರೆಗೆ, ಗುಳಿಕ ಕಾಲ ರಾತ್ರಿ 08:10ರಿಂದ 09:35 ರವರೆಗೆ.

ಮೇಷ ರಾಶಿ: ಹೊಸ ಅನ್ವೇಷಣೆಯ ಕಡೆ ಗಮನವಿರುವುದು. ಇಂದಿನ ವ್ಯವಹಾರವನ್ನು ತಾಳ್ಮೆಯಿಂದ ನಿರ್ವಹಿಸಬೇಕು. ಆಸ್ತಿಯ ಬಗ್ಗೆ ಕಾನೂನಾತ್ಮಕವಾಗಿ ಇರಬೇಕಾಗುವುದು. ಇಂದು ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ಬಹಳ ದಿನಗಳ ಅನಂತರ ನೀವು ಹುಡುಕಿದ್ದು ಸಿಗಬಹುದು. ಆದರೆ ಪ್ರಯೋಜನವಾಗದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ಹೊಸ ಉದ್ಯೋಗದಿಂದ ನೀವು ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಯೋಚನೆಗಳನ್ನು ವಿಸ್ತರಿಸಿದರೆ ಎಲ್ಲವೂ ಸುಂದರವೇ.

ವೃಷಭ ರಾಶಿ: ಎಲ್ಲದಕ್ಕೂ ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಸ್ವಂತ ಉದ್ಯಮ ಮಾಡುವವರಿಗೆ ಒಳ್ಳೆಯ ಸಮಯ. ಕಟ್ಟುಪಾಡುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಿರಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ನಿಮ್ಮ ದಿನದ ಆರಂಭವು ಸಾಮಾನ್ಯವಾಗಿರುತ್ತದೆ. ಹಣವನ್ನು ಬಹಳ ನೈಪುಣ್ಯದಿಂದ ಖರ್ಚು ಮಾಡುವಿರಿ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ. ಕೆಲಸದ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ. ಇಂದು ಸಂಘರ್ಷವು ನಿಮಗೆ ಪ್ರಯೋಜನಕಾರಿ ಆಗಿರುವುದಿಲ್ಲ. ಆಶ್ರಯ ಕೊಟ್ಟವರನ್ನು ಗೌರವಿಸಿ. ಧಾರ್ಮಿಕ ವಿಚಾರದಲ್ಲಿ ನಂಬಿಕೆ ಅಧಿಕವಾಗುವುದು.

ಮಿಥುನ ರಾಶಿ: ಇಂದು ಯಾವುದೇ ಕಾರಣಕ್ಕೂ ನಿಮ್ಮ ಕರ್ತವ್ಯದಲ್ಲಿ ಯಾವುದೇ ಲೋಪವು ಬಾರದಂತೆ ನೋಡಿಕೊಳ್ಳಿ. ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ಇಂದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಿಸಿ. ದೈಹಿಕವಾಗಿ ಸದೃಢವಾಗಿರಲು ನಿಮ್ಮ ಪ್ರಯತ್ನ ಅತಿ ಮುಖ್ಯ. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ಅಪಕ್ವ ಮನುಷ್ಯರು ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಮಹತ್ವದ ಕೆಲಸವು ಹಲವು ದಿನಗಳವರೆಗೆ ಬಾಕಿಯಿದ್ದರೆ, ಅವುಗಳನ್ನು ಮುಗಿಸಿ. ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ಯುವಕರು ಹೊಸ ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯಿದೆ. ಮನೆಯ ವೆಚ್ಚದಲ್ಲಿ ಇಳಿಕೆಯಾಗುವುದು. ಯಾರನ್ನಾದರೂ ನಿಮ್ಮ ವ್ಯವಹಾರದ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ.

ಕರ್ಕಾಟಕ ರಾಶಿ: ಮೌನದಿಂದ ಇಂದು ಇರುವುದು ಉತ್ತಮ. ನಿಮ್ಮ ಮಾತು ಕಿರಿಕಿರಿಯಾಗಬಹುದು. ಹಿರಿಯರ ಮಾತನ್ನು ಧಿಕ್ಕರಿಸಿ ಮುನ್ನಡೆಯುವುದು ಬೇಡ. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಪ್ರಾಪ್ತಿಯಾಗಲಿದೆ. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯುವುದು. ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗಿಕೊಳ್ಳುವುದು. ವಿವಾದಕ್ಕಾಗಿಯೇ ಮಾತನಾಡುವುದು ಬೇಡ. ಉದ್ಯೋಗದಲ್ಲಿ ಕೆಲವು ವಿಚಾರಗಳನ್ನು ನೀವು ಕಲಿಯಬೇಕಾಗುವುದು.

ಸಿಂಹ ರಾಶಿ: ಯೋಜನೆಯಲ್ಲಿ ನಿಮಗೆ ಸೋಲಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಹಿತ್ತಾಳೆ ಕಿವಿಯಿಂದ ಸಂಬಂಧವು ಹಾಳಾಗುವುದು. ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ‌ ಸೂಚನೆ ಬರಬಹುದು. ವೃತ್ತಿಪರ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನವು ನಿಮ್ಮ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ವಸ್ತುಗಳ ಖರೀದಿಯಲ್ಲಿ ಧಾವಂತ ಬೇಡ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ. ಸಂಜೆಯ ವೇಳೆಗೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದು. ಆದಾಯದ ಮೂಲವನ್ನು ನೀವು ಬದಲಿಸಿಕೊಳ್ಳುವಿರಿ. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು.

ಕನ್ಯಾ ರಾಶಿ: ಯಾವುದೂ ನೀವು ಅಂದುಕೊಂಡಷ್ಟು ಸುಲಭದ ತುತ್ತಾಗದು. ಹಿತಶತ್ರುಗಳನ್ನು ಆಪ್ತತೆಯಿಂದ ನಿಮ್ಮವರನ್ನಾಗಿ ಮಾಡಿಕೊಳ್ಳುವಿರಿ. ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಕಾರ್ಯದ ಕಾರಣದಿಂದ ದೂರದೂರಿಗೆ ಪ್ರಯಾಣ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಇಟ್ಟುಕೊಳ್ಳಿ. ವ್ಯವಹಾರದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಆದಾಯ ಚೆನ್ನಾಗಿರುತ್ತದೆ. ಕೆಲವರಿಗೆ ವಿದೇಶಕ್ಕೆ ಹೋಗುವ ಶುಭ ಸುದ್ದಿ ಸಿಗಬಹುದು. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ನೀವೇ ಬುದ್ಧಿಪೂರ್ವಕವಾಗಿ ರಾಜಕೀಯದಿಂದ ಹಿಂದೇಟು ಹಾಕುವಿರಿ. ಸಮಾರಂಭದಲ್ಲಿ ಭಾಗಿಯಾಗಲು ಹೋಗುವಿರಿ.