Daily Horoscope: ಈ ರಾಶಿಯವರು ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ

01 ಡಿಸೆಂಬರ್​​ 2024: ಭಾನುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಇಂದು ನೀವು ಕುಟುಂಬಕ್ಕೆ ಯಾವುದೇ ಕೊರತೆ ಆಗದಂತೆ ನೀವು ನೋಡಿಕೊಳ್ಳಬೇಕಾಗುವುದು. ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದು. ಪ್ರೇಮಜೀವನಕ್ಕೆ ನಿಮಗೆ ಒಗ್ಗದು. ನಿಮಗೆ ಇಂದು ಸ್ವತಂತ್ರವಾಗಿ ಇರಲಾಗದೇ ಬಂಧನದಂತೆ ಅನ್ನಿಸಬಹುದು. ಹಾಗಾದರೆ ಡಿಸೆಂಬರ್ 01ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ
ಈ ರಾಶಿಯವರು ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸುಕರ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಸಂಜೆ 04:36 ರಿಂದ 06:01ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 ರಿಂದ 01:47 ರವರೆಗೆ, ಗುಳಿಕ ಕಾಲ ಮಧ್ಯಾಹ್ನ03:11 ರಿಂದ 04:36 ರವರೆಗೆ.

ಮೇಷ ರಾಶಿ: ಮಿತಿಯನ್ನು ಅರಿತು ವ್ಯವಹರಿಸುವಿರಿ. ನೀವು ಆಡಿದ ಮಾತುಗಳು ಎಲ್ಲವೂ ಸತ್ಯವಾಗುವಂತೆ ನಿಮಗೆ ಅನ್ನಿಸುವುದು.‌ ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ‌ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಂದು ನೀವು ಕುಟುಂಬಕ್ಕೆ ಯಾವುದೇ ಕೊರತೆ ಆಗದಂತೆ ನೀವು ನೋಡಿಕೊಳ್ಳಬೇಕಾಗುವುದು. ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದು. ಪ್ರೇಮಜೀವನಕ್ಕೆ ನಿಮಗೆ ಒಗ್ಗದು. ನಿಮಗೆ ಇಂದು ಸ್ವತಂತ್ರವಾಗಿ ಇರಲಾಗದೇ ಬಂಧನದಂತೆ ಅನ್ನಿಸಬಹುದು. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಸಂತೋಷವಾಗುವಂತೆ ಇರುವಿರಿ. ಬೇಕಾದ ವಸ್ತುವನ್ನು ಕೇಳಿ ಪಡೆಯಿರಿ. ಗೆಳೆತನವು ನಿಮಗೆ ಮತ್ತಷ್ಟು ಸುಖವನ್ನು ಕೊಡುವುದು. ನೆನಪಿನ ಶಕ್ತಿಯು ಕಡಿಮೆ ಆದಂತೆ ಅನ್ನಿಸಬಹುದು. ನೆನಪಿನ ಶಕ್ತಿಯು ಕಡಿಮೆ ಆಗಲಿದೆ. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಉತ್ತಮ.

ವೃಷಭ ರಾಶಿ: ನಿಮ್ಮ ಬಳಿ ಆಗದಿದ್ದರೂ ಸಮರ್ಥಿಸಿಕೊಳ್ಳಲು ಹಿಂಜರಿಯಲಾರಿರಿ. ಒಮ್ಮೊಮ್ಮೆ ನಿಮಗೇ ದಾರಿ ತಪ್ಪಿದಹಾಗೆ ಅನ್ನಿಸುವುದು. ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮ್ಮ ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಿಮಗೆ ಶ್ರದ್ಧೆಯು ಅಧಿಕವಾಗಿ ಇರುವುದು. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವದೇ ನಿರ್ಬಂಧವಿಲ್ಲದೇ ಮಾಡುವಿರಿ. ಅನಾರೋಗ್ಯದ ಕಾರಣಕ್ಕಡ ಹಣವನ್ನು ಖರ್ಚು ಮಾಡಬೇಕಾಗುವುದು. ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯವನ್ನು ಮಾಡಲು ಯಾರಾದರೂ ಸಿಗುವರು. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು.

ಮಿಥುನ ರಾಶಿ: ನಿಮಗೆ ಹಳೆಯ ವಸ್ತುಗಳ ಖರೀದಿಯಿಂದ ಮೋಸವಾಗಲಿದೆ. ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸುವಿರಿ. ಇಂದು ಇನ್ನೊಬ್ಬರ ಮಾತು ನಿಮಗೆ ಸಮಾಧಾನ ತರಿಸದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಕಹಿ ವಿಚಾರಗಳನ್ನು ಮತ್ತೆ ಮತ್ತೆ ತಂದುಕೊಳ್ಳುವಿರಿ. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು. ಸಿಕ್ಕ ಅವಕಾಶದಿಂದ ವಂಚಿತರಾಗಿ ನೋಯುವಿರಿ. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಕಷ್ಟವಾದೀತು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ವಿಳಂಬವಾಗುವುದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಬರಬಹುದು.

ಕರ್ಕಾಟಕ ರಾಶಿ: ನಿಮ್ಮನ್ನು ಗುರುತಿಸಬೇಕೆಂಬ ಹಂಬಲ ಅಧಿಕವಾಗುವುದು. ಅಂದುಕೊಂಡಷ್ಟು ಸಫಲತೆಯನ್ನು ಇಂದು ಸಾಧಿಸಲಿದ್ದೀರಿ. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಕಾಣುವುದು. ಇಂದಿನ ಪ್ರಯಾಣವು ನಿಮಗೆ ಸಮಾಧಾನ ನೀಡದು. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲಿದ್ದು ನಿಮಗೆ ಸಹಿಸಲಾಗದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆ ಇರುವುದು. ನಿಮಗೆ ಶೋಧನೆಯ ಕಾರ್ಯವು ಹೆಚ್ಚಿನ‌ ಇಷ್ಟವಾಗುವುದು. ಕೆಲವರು ನಿಮ್ಮ ನಂಬಿಕೆಯನ್ನು ಘಾಸಿಗೊಳಿಸಬಹುದು. ನಿಮಗೆ ನಿಜವಾದ ಮಿತ್ರರ ಅರಿವಾಗುವುದು. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸವು ನಿಮಗೆ ಗೊತ್ತಿಲ್ಲದೇ ಆಗುತ್ತದೆ.

ಸಿಂಹ ರಾಶಿ: ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾರ್ಗವು ಸಿಗದೇಹೋಗಬಹುದು. ರಾಜಕೀಯ ತಂತ್ರದಿಂದ ನಿಮ್ಮ ಉದ್ಯಮಕ್ಕೆ ತೊಂದರೆಯಾಗುವುದು. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ. ಉದ್ಯೋಗಕ್ಕೆ ಸಂಬಂಧಿಸದಂತೆ ಶುಭವಾರ್ತೆಯೂ ನಿಮ್ಮ ಸಂತೋಷಕ್ಕೆ ಮತ್ತಷ್ಟು ಪುಷ್ಟಿಯನ್ನು ಕೊಡುವುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ಸಣ್ಣದನ್ನೂ ದ್ವೇಷವಾಗಿ ಮಾಡಿಕೊಳ್ಳುವುದು ಬೇಡ. ನಿಮ್ಮ ಸುಳಿವು ಸಿಗದೇ ಮನೆಯಲ್ಲಿ ಆತಂಕವಾಹಬಹುದು. ಸಾಮರಸ್ಯವನ್ನು ಎಲ್ಲರ ಜೊತೆ ಇಟ್ಟುಕೊಳ್ಳಿ. ಮಧುರವಾದ ಸಂಬಂಧಗಳಲ್ಲಿ ಒಡಕು ಬರಬಹುದು. ನಿಮ್ಮ ನೋವನ್ನು ಯಾರ ಬಳಿಯಾದರೂ ಹಂಚಿಕೊಂಡು ಸಮಾಧನ ತಂದುಕೊಳ್ಳಿ. ನಿಮ್ಮ ಮನಸ್ಸು ಎಂದಿಗಿಂತ ಹಗುರಾದಂತೆ ಅನ್ನಿಸುವುದು. ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಬರುವುದು. ಸಂಗಾತಿಯಾಗುವವರ ಜೊತೆ ಮುಕ್ತವಾಗಿ ಮಾತನಾಡಿಕೊಳ್ಳಿ. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ.

ಕನ್ಯಾ ರಾಶಿ: ಅವಕಾಶವು ನಿಮ್ಮ ಕೈತಪ್ಪಬಹುದು. ಬೇಸರಿಸದೇ ಮುಂದುವರಿಯುವುದು ಸೂಕ್ತ. ವಿಳಂಬವಾಗುವ ಕಾರ್ಯಕ್ಕೆ ಹಣವನ್ನು ಕೊಟ್ಟು ವೇಗವರ್ಧನೆಯನ್ನು ಮಾಡುವಿರಿ. ವಿರಾಮದ ದಿನವೂ ನಿಮಗೆ ನೆಮ್ಮದಿಯಿಂದ ಇರಲು ಕೊಡರು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳುವಿರಿ. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ಸಂಗಾತಿಗಾಗಿ ಹಣವನ್ನು ವ್ಯಯಿಸುವಿರಿ. ರಾಜಕಾರಣಿಗಳ ಭೇಟಿಯಾಗಿ ನಿಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಸಿಕೊಳ್ಳುವಿರಿ. ನಿಮ್ಮ‌ ಸಹಜತೆಯು ಇಂದು ನಾಟಕೀಯದಂತೆ ಕಾಣಿಸುವುದು. ಮನೆಯಲ್ಲಿ ಒಟ್ಟಿಗೇ ಹತ್ತಾರು ಕಾರ್ಯಗಳಲ್ಲಿ ನೀವು ಮಗ್ನರಾಗಿರುವಿರಿ. ಉದ್ಯೋಗವನ್ನು ಅನಿವಾರ್ಯಕ್ಕಾಗಿ ಮೆಚ್ಚಿಕೊಳ್ಳುವಿರಿ.

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ