Weekly Horoscope in Kannada: ವಾರ ಭವಿಷ್ಯ: ಡಿ 01 ರಿಂದ 07 ರವರೆಗೆ ವಾರ ಭವಿಷ್ಯ

ಇದು ಡಿಸೆಂಬರ್ ತಿಂಗಳ ಮೊದಲ ವಾರವಿದಾಗಿದೆ. 01-12-2024 ರಿಂದ 07-12-2024ರವರೆಗೆ ಇರಲಿದೆ. ಶುಕ್ರನು ಮಿತ್ರನ‌ ರಾಶಿಗೆ ಬರುವ ಕಾರಣ ಉತ್ತಮ‌ ಫಲವನ್ನೇ ಕೊಟ್ಟರೂ ಸ್ಥಾನಗಳ ಆಧಾರದ ಮೇಲೆ ಅಶುಭವೂ ಉಂಟಾಗುತ್ತದೆ. ಹಾಗಾಗಿ ಯೋಚಿಸಿ ಮುನ್ನಡೆಯುವುದು ಸುಖಕರ.

Weekly Horoscope in Kannada: ವಾರ ಭವಿಷ್ಯ: ಡಿ 01 ರಿಂದ 07 ರವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಡಿ 01 ರಿಂದ 07 ರವರೆಗೆ ವಾರ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2024 | 12:02 AM

ಇದು ಡಿಸೆಂಬರ್ ತಿಂಗಳ ಮೊದಲ ವಾರವಿದಾಗಿದೆ. 01-12-2024 ರಿಂದ 07-12-2024ರವರೆಗೆ ಇರಲಿದೆ. ಶುಕ್ರನು ಮಿತ್ರನ‌ ರಾಶಿಗೆ ಬರುವ ಕಾರಣ ಉತ್ತಮ‌ ಫಲವನ್ನೇ ಕೊಟ್ಟರೂ ಸ್ಥಾನಗಳ ಆಧಾರದ ಮೇಲೆ ಅಶುಭವೂ ಉಂಟಾಗುತ್ತದೆ. ಹಾಗಾಗಿ ಯೋಚಿಸಿ ಮುನ್ನಡೆಯುವುದು ಸುಖಕರ.

ಮೇಷ ರಾಶಿ: ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಶುಭ. ಓಡಾಟದ ದಣಿವು ಕಾರ್ಯಗಳಲ್ಲಿ ಆಲಸ್ಯವನ್ನು ತರಲಿದೆ. ಅಮೂಲ್ಯವಸ್ತುಗಳು ಕೈ ತಪ್ಪುವ ಸಾಧ್ಯತೆ ಇದೆ. ಶುಕ್ರನ ಬದಲಾಬಣೆಯಿಂದ ಉದ್ಯೋಗದಲ್ಲಿ ಕಲಾತ್ಮಕತೆಯನ್ನು ತೋರಿಸುವಿರಿ. ಆಲೋಚಿಸದೇ ಯಾವುದೇ ಸಾಹಸದ ಕಾರ್ಯವನ್ನು, ಕೆಲಸವನ್ನು ಮಾಡಬೇಡಿ. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ವೃತ್ತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಬೇಸರಬಾಗಬಹುದು. ಯಾರನ್ನಾದರೂ ನಂಬುವಾಗ ಎಚ್ಚರಿಕೆಯಿರಲಿ. ಹಣದ ವಿಷಯದಲ್ಲಿ ಮೋಸ ಹೋಗುವ ಸಂದರ್ಭವಿದೆ. ಕಾರ್ತಿಕೇಯನಿಗೆ ಯಾವುದಾದರೂ ಸೇವೆಯನ್ನು ಮಾಡಿಸಿ.

ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಡಿಸೆಂಬರ್ ನ ಮೊದಲ ವಾರ ಶುಭ. ಹೂಡಿಕೆಯನ್ನು ಹಿಂದೆ ಮಾಡಿದ್ದರೆ ಈಗ ಅದರ ಫಲವನ್ನು ಕಾಣಬಹುದಾಗಿದೆ. ಶುಕ್ರನು ನವಮ ಸ್ಥಾನಕ್ಕೆ ಬಂದು ನಿಮ್ಮ ಗೌರವವನ್ನು ಹೆಚ್ಚಿಸುವರು. ಆರ್ಥಿಕವಾದ ಅಭಿವೃದ್ಧಿಯು ಆಗಲಿದೆ‌. ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಅಪರೂಪದ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ ಇದೆ. ವೃತ್ತಿಗೆ ಸಂಬಂಧಿಸಿದಂತೆ ಶುಭದಿನವಾಗಿದೆ. ಇನ್ನೊಬ್ಬರನ್ನು ನೋಡಿ ನಿಮ್ಮ ಅಸೂಯೆಪಡಬೇಡಿ. ದೂರದ ಪ್ರಯಾಣವನ್ನು ಮಾಡಲಿದ್ದೀರಿ. ಒಂಟಿತನವು ಕಾಡಬಹುದು.

ಮಿಥುನ ರಾಶಿ: ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಅಶುಭ. ನಿಮ್ಮ ಅನುಭವವು ಅನೇಕ ಕೆಲಸಗಳಿಗೆ ಉಪಕಾರಿಯಾಗಲಿದೆ. ಸಂಗಾತಿಗೆ ಸಂತೋಷವನ್ನು ನೀಡಲು ಪ್ರಯತ್ನಿಸುವಿರಿ. ಮನಸ್ಸಿದ್ದತೆ ಮಾರ್ಗವೆನ್ನುವ ಸತ್ಯವು ಮನವರಿಕೆಯಾದೀತು. ಶುಕ್ರನ ಸ್ಥಾನ ಬದಲಾವಣೆಯಿಂದ ವಾಹನ ಸವಾರರು ಎಚ್ಚರವಿಟ್ಟು ಚಾಲಿಸಬೇಕು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಭವಿಷ್ಯದ ಯೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಉತ್ತಮ ಆಹಾರವನ್ನು ನೀವಿಂದು ಸೇವಿಸುವಿರಿ. ಸಮಾರಂಭಗಳಿಗೆ ಭೇಟಿಕೊಡಬಹುದು. ಸೀತಾರಾಮರ ಭಜನೆಯಿಂದ ಮನಸ್ಸಿಗೆ ಹಿತ.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಶುಭ. ನಿಮ್ಮನ್ನು ಕಂಡು ಅಸೂಯೆ ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ಅವರನ್ನು ನಗಣ್ಯ ಮಾಡಬೇಡಿ. ನಿಮ್ಮ ಮೇಲೆ ಸಲ್ಲದ ಪಿತೂರಿಗಳನ್ನು ಮಾಡಿಯಾರು.‌ಅವರ ಮೇಲೆ ಒಂದು ಕಣ್ಣಿರಲಿ. ಶುಕ್ರನ ಬದಲಾಬಣೆಯಿಂದ ಸಂಗಾತಿಯ ಬಗ್ಗೆ ಇರುವ ಮನೋಭಾವ ಬದಲಾಗುವುದು. ಸ್ನೇಹಿತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. ಸಿಕ್ಕಿರುವ ಉದ್ಯೋಗಾವಕಾಶವನ್ನು ಸರಿಯಾಗಿ ಬಳಸಿ, ಬೆಳೆಸಿಕೊಳ್ಳಿ. ನಿಮ್ಮ ಮುಂದಿನ ಮಾರ್ಗವು ನಿರ್ವಿಘ್ನವಾಗುವುದು‌. ಸಸ್ಯಗಳನ್ನು ನೆಡುವ, ಪೋಷಿಸುವ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರುವಿರಿ. ಈ ವಾರ ಒಂದು ಶುಭಸಮಾಚಾರ ನಿಮಗೆ ಗೊತ್ತಾಗಲಿದೆ. ದುರ್ಗಾದೇವಿಯು ನಿಮ್ಮನ್ನು ಪೊರೆವಳು.

ಸಿಂಹ ರಾಶಿ: ಈ ವಾರ ನಿಮಗೆ ಅಶುಭ. ನಿಮ್ಮ‌ ಮನಸ್ಸನ್ನು ಕಲಕಲೆಂದೇ ಕೆಲವರು ಹೊಂಚುಹಾಕುವ ಸಾಧ್ಯತೆ ಇದೆ. ಅವುಗಳಿಗೆ ಕಿವಿಗೊಡಬೇಡಿ. ಆರ್ಥಿಕವಾಗಿ ಇಂದು ಸಬಲರಾಗುವಿರಿ.‌ ಶುಕ್ರನು ಷಷ್ಠದಲ್ಲಿ ಇರುವುದರಿಂದ ಬಲಾಢ್ಯ ಶತ್ರುಗಳನ್ನು ಎದುರಿಸಬೇಕಾದೀತು. ಸ್ತ್ರೀಯರೂ ನಿಮ್ಮ ಬಗ್ಗೆ ದ್ವೇಷ ಸಾಧಿಸುವರು. ಪ್ರೀತಿಪಾತ್ರರಾದವರ ಭೇಟಿಯು ಸಂತೋಷವನ್ನು ಹೆಚ್ಚಿಸೀತು. ಹಿರಿಯರ ಮಾತುಗಳು ನಿಮ್ಮ ಮನಸ್ಸಿಗೆ ನಾಟಿ ಇಲ್ಲಿಯವರೆಗಿನ ಕಾರ್ಯಕ್ಕೆ ಪಾಶ್ಚಾತ್ತಾಪವನ್ನು ಅನುಭವಿಸುವಿರಿ. ತಾಯಿಯಿಂದ‌ ನಿಮ್ಮ ಕಾರ್ಯಕ್ಕೆ ಅನುಕೂಲವು ಒದಗಿಬರುವುದು. ಈ ವಾರ ಚಾಲಕರು ಸ್ವಲ್ಪ ಎಚ್ಚರಿಕೆಯಿಂದ ಚಲಾಯಿಸಿ. ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗಿ.

ಕನ್ಯಾ ರಾಶಿ: ಆರನೇ ರಾಶಿಯವರಿಗೆ ಈ ವಾರ ಶುಭಾಶುಭಫಲ.‌ ಅನಿರೀಕ್ಷಿತವಾಗಿ ಹಣದ ಮುಗ್ಗಟ್ಟು ಮುಂದಾಗಿ ಬರಬಹುದು. ಮನೆಯವರೊಂದಿಗೆ ಆದ ಮನಸ್ತಾಪವನ್ನು ದೀರ್ಘವಾಗಿ ಮಾಡಿಕೊಳ್ಳುವುದು ಬೇಡ. ಶುಕ್ರನ ಪರಿವರ್ತನೆ ಪಂಚಮ‌ರಾಶಿಗೆ ಆಗಿದೆ. ಹೆಣ್ಣು ಮಕ್ಕಳ ವಿಚಾರಕ್ಕೆ ಹೆಚ್ಚು ಗಮನ ಬೇಕು. ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಸಂಕಟಪಡಬಹುದು. ವಿವಾಹಯೋಗವು ನಿಮಗಿದೆ. ಯಾವುದಾದರೂ ಉಪಯೋಗಕ್ಕೆ ಬರುವ ಕೆಲಸಕ್ಕೆ ಕೈ ಹಾಕಿ.‌‌ ನಿಮ್ಮ ಮುಂದಿನ ಮಾರ್ಗಕ್ಕೆ ಉತ್ತಮ ಸಹಾಯಕನಾದೀತು. ಮೊಬೈಲ್ ನಿಮ್ಮ ಸಂಪೂರ್ಣವಾದ ಸಮಯವನ್ನು ಬಳಸಿಕೊಂಡು ನಿಮ್ಮನ್ನು ನಿಷ್ಕ್ರಿಯರನ್ನಾಗಿ ಮಾಡಲಿದೆ. ರಾಮರಕ್ಷಾ ಸ್ತೋತ್ರ ಪಠಿಸಿ.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಅಲ್ಪ ಶುಭ. ಮನೆಗೆ ಯಾರನ್ನಾದರೂ ಕರೆದು ಸುಗ್ರಾಸ ಭೋಜನವನ್ನು ನೀಡಿ. ರಾಶಿಯ ಅಧಿಪತಿ ಶುಕ್ರನು ಚತುರ್ಥದಲ್ಲಿ ಇರುವಕಾರಣ ಕೌಟುಂಬಿಕವಾಗಿ ಮನಸ್ತಾಪವಿರದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ವಾರ್ತರಯನ್ನು ಕೇಳಬಹುದು. ಉನ್ನತಸ್ಥಾನದ ಪ್ರಸ್ತಾಪವೂ ಆಗಬಹುದು. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ವಾತರೋಗದಿಂದ ಬಳಲುವ ಸಾಧ್ಯತಯಿದೆ. ದಂಪತಿಗಳ ನಡುವೆ ನಡೆದ ಕಲಹವು ಕೋರ್ಟ್ ಮೆಟ್ಟಲನ್ನೂ ಏರಬಹುದು. ಮನೆಯಲ್ಲಿಯೇ ಉಂಟಾದ ಜಗಳವನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ. ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸಿ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಈ ತಿಂಗಳ ಮೊದಲ ವಾರದಲ್ಲಿ ಮಿಶ್ರಫಲ. ವಿವಾಹಕ್ಕೆ ಸಂಬಂಧಿಸಿದ ಮಾತುಕತೆಗಳು ನಡೆದರೂ ಪ್ರಯೋಜನವಾಗದು. ತೃತೀಯದಲ್ಲಿ ಶುಕ್ರನ ಬದಲಾವಣೆಯಿಂದ ಸಹೋದರ್ಯದ ಮನಸ್ತಾಪ ಕಳೆದು ಹೊಂದಾಣಿಕೆ ಮಾಡಿಕೊಳ್ಳಬಹುದು. ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ಈ ವಾರ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ಸಾಲವನ್ನು ಕೊಟ್ಟರೆ ವಾಪಸು ಬರುತ್ತದೆ ಎಂಬ ನಿರೀಕ್ಷೆ ಬೇಡ. ಬಂದರೂ ಬರಬಹುದು. ನಿಮ್ಮ ಸರ್ವಬಲವನ್ನೂ ಹಾಕಿ ಕೆಲಸ ಮಾಡಿದರೆ ಸಫಲತೆಯಾಗುವ ಸಾಧ್ಯತೆ ಇದೆ. ಕಾಳಿಯ ಅನುಗ್ರಹ ಪಡೆಯಿರಿ.

ಧನು ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ. ಪ್ರಭವೀ ವ್ಯಕ್ತಿಗಳ ಸಹವಾಸ, ಗೆಳೆತನ ಸಿಗಲಿದೆ‌. ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವಿರಿ. ವಾಹನದಿಂದ‌ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ. ದ್ವಿತೀಯದಲ್ಲಿ ಶುಕ್ರನು ಶನಿಯ ಸ್ಥಾನದಲ್ಲಿ ಇರುವ ಕಾರಣ ಸಂಪತ್ತನ್ನು ಕಷ್ಟದಿಂದ ಪಡೆಯಬೇಕು. ಮಾತನ್ನು ಸರಿಯಾಗಿ ಆಡಿ. ಇಲ್ಲವಾದರೆ ಅನೇಕ ಶುಭಕಾರ್ಯಗಳಿಂದ, ಉತ್ತಮ ಕಾರ್ಯಗಳಿಂದ ವಂಚಿತರಾಗುವಿರಿ. ಮಕ್ಕಳ ವಿಚಾರವಾಗಿ ದಂಪತಿಗಳ ಮಧ್ಯದಲ್ಲಿ ವೈಮನಸ್ಯವು ಉಂಟಾಗಬಹುದು. ಈ ವಾರ ಮಾತಿನ‌ ಚಕಮಕಿಯಲ್ಲಿ ಕೂಸು ಬಡವಾದೀತು ಎನ್ನುವಂತೆ ಆಗುವುದು. ಗುರುಚರಿತ್ರೆಯನ್ನು ಏಕಾಗ್ರದಿಂದ ಪಾರಾಯಣ ಮಾಡಿ.

ಮಕರ ರಾಶಿ: ಈ ತಿಂಗಳ ಮೊದಲನೇ ರಾಶಿಯವರಿಗೆ ಮಿಶ್ರಫಲ. ಚಿಂತೆಯಿಂದ ಯಾವ ಪ್ರಯೋಜನವಾಗದು. ಶುಕ್ರನು ಇದೇ ರಾಶಿಯಲ್ಲಿ ಇರುವುದರಿಂದ ದುರಭ್ಯಾಸದ ಹೆಚ್ಚಾಗುವುದು. ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ವಿವಾಹದ ಮಾತುಕತೆಗಳು ಆರಂಭವಾಗಿವೆ. ಅಪರೂಪದ ಸ್ನೇಹಿತನ‌ ಜೊತೆ ಸುತ್ತಾಟ. ವ್ಯರ್ಥವೆನಿಸಿದರೂ ನಿಮಗೆ ಬೇಕಾದ ಅಂಶಗಳು ಅವನಿಂದ ಸಿಗಲಿದೆ. ಭೋಗವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಗೊಂದಲಗಳಿಗೆ ತೆರೆ ಬೀಳಲಿದೆ. ಸುಂದರವಾದ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯಿರಿ. ನೀವೂ ದೈವಕ್ಕೆ ಶರಣಾಗಲೇ ಬೇಕು. ಕಪ್ಪು ವಸ್ತ್ರವನ್ನು ದಾನಮಾಡಿ.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಅಶುಭ. ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈಮೀರಿ ಹೊಗುವ ಸಂದರ್ಭವೇ ಇರುವುದರಿಂದ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ದ್ವಾದಶದಲ್ಲಿ ಶುಕ್ರನಿದ್ದು ವೈಭವ ಜೀವನದಲ್ಲಿ ಆಸಕ್ತಿ ಮೂಡಿಸಿ ದುಃಖ ಕೊಡುವನು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಆರೋಗ್ಯದ ಮೇಲೆ ಸ್ವಲ್ಪ ಜಾಗರೂಕರಾಗಿರಿ. ಬಂಧುಗಳ ಜೊತೆ ವಾದ-ವಿವಾದಗಳು ಉಂಟಾಗಬಹುದು. ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹೋಗಬೇಡಿ.‌ ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿದಿದ್ದರೂ ಅನ್ಯ ಮಾರ್ಗವಿಲ್ಲದೇ ಇರಬೇಕಾದೀತು. ಮಹಾಲಕ್ಷ್ಮಿಯಲ್ಲಿ ಸ್ಥಿರತ್ವವನ್ನು ಬೇಡಿ.

ಮೀನ ರಾಶಿ: ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಶುಭ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಸಾಲವನ್ನು ಮರುಪಾವತಿಸಲು ಮುಂದಾಗುವಿರಿ. ಏಕಾದಶದಲ್ಲಿ ಶುಕ್ರನಿದ್ದು ಸುಖವನ್ನು ಕೊಡಿಸುವನು. ‌ಬರಬೇಕಾದ ಹಣವಿದ್ದರೆ ಈಗಲೇ ಪಡೆಯಲು ಸಮಯ. ದೀರ್ಘಕಾಲದಿಂದ ಮಾಡುತ್ತಿದ್ದ ಕೆಲಸಗಳು ಮುಕ್ತಾಯವಾಗುವುವು. ಸಂಬಂಧಿಕರ ಸಹವಾಸ, ಸಹಾಯಗಳು ಸಿಗಲಿವೆ. ನಿಮ್ಮ ಅಂತಸ್ಸತ್ತ್ವ ಗಟ್ಟಿ ಇರುವುರಿಂದ ಯಾರ ಮಾತಿಗೂ ಕಿವಿಗೊಡದೆ ನೀವು ನಿರ್ಧರಿಸಿದ ಕೆಲಸದಲ್ಲಿ ಮುಂದುವರಿಯುತ್ತೀರಿ. ಅಪರೂಪದ ಹಳೆಯ ಮೌಲ್ಯಯುತವಾದ ಪಿತ್ರಾರ್ಜಿತ ವಸ್ತುವೊಂದು ಸಿಗಲಿದೆ. ಒಂಟಿಯಾಗಿ ಬಾಳಬೇಕೆನ್ನುವ ಮನಸ್ಸಿದ್ದರೂ ನಿಮಗೆ ಅದು ಅಸಾಧ್ಯವಾಗಿರುತ್ತದೆ.

ಲೋಹಿತ ಹೆಬ್ಬಾರ್-8762924271 (what’s app only)

ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್