AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಒತ್ತಡಗಳಿಂದ ಮುಕ್ತರಾಗುವಿರಿ, ದೂರ ಪ್ರಯಾಣ ಮಾಡುವಿರಿ

08 ಫೆಬ್ರವರಿ​ 2025: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಹೋಲಿಕೆ ಮಾಡಿಕೊಂಡು ಸಂಕಟಪಡುವಿರಿ. ಶ್ರದ್ಧೆಯೂ ನಿಮ್ಮಲ್ಲಿ ಅತಿಮುಖ್ಯವಾಗಿ ಕಾಣಿಸಿಕೊಳ್ಳುವುದು. ಹಾಗಾದರೆ ಫೆಬ್ರವರಿ 08 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಒತ್ತಡಗಳಿಂದ ಮುಕ್ತರಾಗುವಿರಿ, ದೂರ ಪ್ರಯಾಣ ಮಾಡುವಿರಿ
ಈ ರಾಶಿಯವರು ಒತ್ತಡಗಳಿಂದ ಮುಕ್ತರಾಗುವಿರಿ, ದೂರ ಪ್ರಯಾಣ ಮಾಡುವಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 08, 2025 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಐಂದ್ರ, ಕರಣ : ಗರಜ, ಸೂರ್ಯೋದಯ – 07 – 00 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:54 – 11:20, ಯಮಘಂಡ ಕಾಲ 14:14 – 15:40, ಗುಳಿಕ ಕಾಲ 07:00 – 08:27.

ಮೇಷ ರಾಶಿ: ಇಂದು ನೀವು ಅನೇಕ ಒತ್ತಡಗಳಿಂದ ಮುಕ್ತರಾಗಿ ಶಾಂತವಾಗಿ ಕಾಣಿಸುವಿರಿ. ನಿಮ್ಮ ಸುತ್ತಲಿನ ಶುದ್ಧತೆಯ ವಿಚಾರದಲ್ಲಿ ಇನ್ನಷ್ಟು ಕಾಳಜಿ ಅವಶ್ಯಕ. ಪಾಲುದಾರಿಕೆಗೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಲು ಇಂದು ಒಳ್ಳೆಯದು. ಕೂಡಿಟ್ಟ ಹಣದಿಂದ ನಿಮಗೆ ಕೆಲಸಕ್ಕೆ ಬರದಂತೆ ಆಗುವುದು. ಅನಿರೀಕ್ಷಿತ ಸುದ್ದಿಯು ನಿಮ್ಮ‌ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ‌ಇನ್ನೊಬ್ಬರನ್ನು ದೂರುತ್ತ ನಿಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಬಡ್ತಿಯಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು.‌ ಮಕ್ಕಳ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಶುಭಸಮಾರಂಭಗಳಿಗೆ ಭೇಟಿ ಕೊಡುವಿರಿ. ಯಾರದೋ ಒತ್ತಡದಿಂದ ದಿನಚರಿಯನ್ನು ವ್ಯತ್ಯಾಸ‌ ಮಾಡಿಕೊಳ್ಳುವಿರಿ. ಸ್ನೇಹವು ಗೊತ್ತಿಲ್ಲದಂತೆ ಪ್ರೀತಿಯಾಗಿ ಬದಲಾಗಬಹುದು. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷಿಸುವುದು ಬೇಡ. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸ್ತ್ರೀಯರ ಸಹವಾಸವು ಅಧಿಕವಾಗಿರುವುದು.

ವೃಷಭ ರಾಶಿ: ನಿಮ್ಮ ಗುರಿಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಮನಸ್ಸು ಕೆಲವು ವಿಚಾರಗಳಿಗೆ ದುರ್ಬಲವಾಗುವುದು. ವಾಹನ ಚಾಲನೆಯಲ್ಲಿ‌ ಮಿತಿಯಿರಲಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ಮಾತುಕತೆಗಳು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು. ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗದು. ವಿಷಯಾಸಕ್ತಿ ಅಧಿಕವಾಗಿದ್ದರೂ ಅದಕ್ಕೆ ಯೋಗ್ಯ ಜನರನ್ನು ಹುಡುಕುವಿರಿ. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ಅಧಿಕ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು.

ಮಿಥುನ ರಾಶಿ: ಇಂದು ಕೆಲಸವು ಪೂರ್ಣ ಮಾಡಿದ ತೃಪ್ತಿಯನ್ನು ಅನುಭವಿಸುವ ಜೊತೆಗೆ ಮತ್ತೊಂದು ನಿಮ್ಮ ಪಾಲಿಗೆ ಕಾತುತ್ತಿರುವುದು. ಈ ದಿನ ನೀವು ಅದೃಷ್ಟದ ಕಾರಣ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ಮಿತವಾದ ಆಹಾರಸೇವನೆಯನ್ನು ಇಟ್ಟುಕೊಳ್ಳಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಅಸ್ಪಷ್ಟ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಯಾರ‌ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಕಣ್ಣಿನ ತೊಂದರೆ ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ಕಿರಿಕಿರಿ ಎನಿಸಬಹುದು. ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ಹುಣ್ಣನ್ನು ಕೆರದು ಗಾಯ ಮಾಡಿಕೊಳ್ಳುವುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ಪ್ರಯತ್ನ ಮುಂದುವರಿಯಲಿ.

ಕರ್ಕಾಟಕ ರಾಶಿ: ಇಂದು ವಿರೋಧಿಗಳ ಎದರು ಅಹಂಕಾರವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಹಲವಾರು ದಿನದ ಸಂಕಟವನ್ನು ನೀವು ಮನೆಯವರ ಮುಂದೆ ಹೊರಹಾಕುವಿರಿ. ವೃತ್ತಿಪರ ಮತ್ತು ಸಾಮಾಜಿಕ ವಲಯಗಳಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ನಾನಾ ರೀತಿಯ ಸೌಲಭ್ಯಗಳು ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವನ್ನು ಅನ್ಯರು ಆಕ್ರಮಿಸಿಕೊಳ್ಳಬಹುದು. ಚೋರಭೀತಿಯು ನಿಮಗೆ ಆತಂಕಪಡುವಿರಿ. ಭೂಮಿಯ ವ್ಯವಹಾರದಿಂದ ಸಂಬಂಧಗಳು ಹಾಳಾಗುವುದು. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು.

ಸಿಂಹ ರಾಶಿ: ಹತ್ತಿರದವರೇ ಮಾಡಿದ ವಿಶ್ವಾಸಘಾತದಿಂದ ನೀವು ಮೌನವಹಿಸುವಿರಿ. ವಿದೇಶದ ಔದ್ಯೋಗಿಕ ವಲಯದಲ್ಲಿ ಇರುವವರು ಗೊಂದಲದಲ್ಲಿ ಇರಬಹುದು‌. ವ್ಯವಹಾರಗಳ ವಿಷಯದಲ್ಲಿ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಉದ್ವೇಗಕ್ಕೆ ಸಿಕ್ಕಿ ನಿಮ್ಮ ವರ್ತನೆಯಿಂದ ಎಲ್ಲರೂ ನಕ್ಕಾರು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ನೀವು ಜನಪ್ರಿಯತೆಯನ್ನು ಗಳಿಸುವಿರಿ. ಪ್ರೇಮಿಗಳಿಗೆ ಈ ಸಮಯವು ಶುಭವಲ್ಲ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸುವುದು.‌ ಯಾರನ್ನು ವಂಚಿಸಿದರೂ ಸಮಯವನ್ನು ವಂಚಿಸಲಾಗದು. ನಿಮ್ಮನ್ನು ಸ್ಥಾನದಿಂದ‌ ಕೆಳಗೆ ಹಾಕಲು ನೋಡಬಹುದು.

ಕನ್ಯಾ ರಾಶಿ: ನಿಮ್ಮ ಅಪ್ರಬುದ್ಧವಾದ ಮಾತಿನಿಂದ ವ್ಯವಸ್ಥೆ ನಿಮ್ಮನ್ನು ದೂರವಿಡುವುದು. ಮಹಿಳೆಯರ ಮೇಲೆ‌ ಅಪವಾದ ಬರುವ ಸಾಧ್ಯತೆ ಇದೆ. ಇಂದು ನೀವು ಏನೇ ಮಾಡಿದರೂ ಉತ್ಸಾಹದಿಂದ ಮಾಡುವಿರಿ. ಸಾಲದಿಂದ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವಿರಿ. ನಿಶ್ಚಿಂತೆಯಿಂದ ಸದ್ಯ ಇರುವಿರಿ. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನ ಬೇಕು. ಮಕ್ಕಳಿಗೆ ಮಾಡಿದ ಎಲ್ಲವ ಕರ್ತವ್ಯಗಳು ಫಲಿಸಿದ ಸಂತೋಷ ಸಿಗಲಿದೆ. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ವ್ಯಾಯಾಮದ ಮೂಲಕ ನಿಮ್ಮ ದುರ್ಬಲ ದೇಹವನ್ನು ಗಟ್ಟಿ ಮಾಡಿಕೊಳ್ಳುವಿರಿ. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಹೋಲಿಕೆ ಮಾಡಿಕೊಂಡು ಸಂಕಟಪಡುವಿರಿ. ಶ್ರದ್ಧೆಯೂ ನಿಮ್ಮಲ್ಲಿ ಅತಿಮುಖ್ಯವಾಗಿ ಕಾಣಿಸಿಕೊಳ್ಳುವುದು. ಚೆನ್ನಾಗಿ ಯೋಚಿಸಿದ ನಿರ್ಧಾರಗಳು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುವುದು.