Daily Horoscope: ಈ ರಾಶಿಯವರು ಸತ್ಯ ಹೇಳಲು ಯಾವತ್ತೂ ಹಿಂಜರಿಯಲ್ಲ

3 ಮಾರ್ಚ್​​​ 2025: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಸ್ನೇಹಿತರು ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಏನೇ ಬಂದರೂ ಇರುವ ಸತ್ಯವನ್ನು ಹೇಳಲು ಇಂದು ನೀವು ಹಿಂಜರಿಯಲಾರಿರಿ. ಮಾರ್ಚ್​​​ 3ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಸತ್ಯ ಹೇಳಲು ಯಾವತ್ತೂ ಹಿಂಜರಿಯಲ್ಲ
ಈ ರಾಶಿಯವರು ಸತ್ಯ ಹೇಳಲು ಯಾವತ್ತೂ ಹಿಂಜರಿಯಲ್ಲ
Edited By:

Updated on: Mar 03, 2025 | 12:10 AM

ಬೆಂಗಳೂರು, ಮಾರ್ಚ್​ 02: ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಶುಕ್ಲ / ಬ್ರಹ್ಮ, ಕರಣ : ವಣಿಜ, ಸೂರ್ಯೋದಯ – 06 – 49 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:18 – 09:47, ಯಮಘಂಡ ಕಾಲ 11:16 – 12:45, ಗುಳಿಕ ಕಾಲ 14:13 – 15:42.

ಮೇಷ ರಾಶಿ: ಮಕ್ಕಳನ್ನು ಉತ್ತಮ ಶಿಕ್ಷಣದ ಕಡೆಗೆ ಬರುವಂತೆ ಬುದ್ಧಿವಾದ ಹೇಳಬೇಕಾದೀತು. ಯಾರ ನಡುವೆಯೂ ವಾಗ್ವಾದಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಮಿತ್ರರ ಸಹಕಾರವನ್ನು ನೆನಪಿಸಿಕೊಳ್ಳುವಿರಿ. ಪ್ರಮಾಣಿಕತೆಯನ್ನು ಹಣಕಾಸಿನ ವ್ಯವಹಾರವನ್ನು ಕೊಡಬಹುದು. ನೀವು ಯಾರ ಪರವಿರೋಧವೂ ಇಲ್ಲದೇ ತಟಸ್ಥರಾಗಿ ಇರುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಜವಾಬ್ದಾರಿಯನ್ನು ಸಡಿಲಮಾಡಿಕೊಂಡು ತಪ್ಪಿಗೆ ದಾರಿ‌ಮಾಡಿಕೊಡುವಿರಿ. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು.

ವೃಷಭ ರಾಶಿ: ಸ್ಥಿರಾಸ್ತಿಯ ಮೇಲೆ ಹೂಡಿಕೆ ಮಾಡಿ ಅದರ ಕಡೆಗೆ ಹೆಚ್ಚು ಚಿಂತೆ ಇರಲಿದೆ. ನಿಮ್ಮ ಕಾರ್ಯದ ಒತ್ತಡದಿಂದ ನಿಮ್ಮ ಕುಟುಂಬದ ಅಗತ್ಯಗಳನ್ನು ನಿರ್ಲಕ್ಷಿಸಬೇಡಿ. ಉದ್ಯೋಗದಲ್ಲಿ ಶ್ರಮವಿದ್ದರೂ ಯಶಸ್ಸು ನಿಮ್ಮದಾಗದು. ಕೆಲವು ಸನ್ನಿವೇಶವನ್ನು ನೀವಾಗಿಯೇ ಸೃಷ್ಟಿಸಿಕೊಳ್ಳುವಿರಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವಿರಿ. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ಧಾರ್ಮಿಕ‌ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಇಂದಿನ ಅಗತ್ಯವೂ ಇದೆ. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಅಸಭ್ಯ ಮಾತುಗಳನ್ನು ಕಡಿಮೆ ಮಾಡಿ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು.

ಮಿಥುನ ರಾಶಿ: ಇಂದು ಕೆಲವು ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗುವುದು. ನೀರಿಗೆ ಬಿದ್ದಾದಮೇಲೆ ಈಜಿ ದಡ ಸೇರುವುದೊಂದೇ ಇರುವುದು. ನೀವು ಐಚ್ಛಿಕ ಫಲಿತಾಂಶವನ್ನು ಪಡೆಯಲು ಪ್ರಯತ್ನವು ಹೆಚ್ಚು ಬೇಕು. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ಕುಟುಂಬವೇ ನಿಮ್ಮ ಶಕ್ತಿ. ಸರಿಯಾದುದನ್ನು ಆಯ್ಕೆ ಮಾಡುವುದು ನಿಮ್ಮಿಂದಾಗದು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ವಿಚಾರಗಳೇ ನಿಮ್ಮ ಕಿವಿಗೆ ಬೀಳಬಹುದು.

ಕರ್ಕಾಟಕ ರಾಶಿ: ಹೊಸ ಉದ್ಯಮವನ್ನು ಆರಂಭಿಸುವ ಮೊದಲು ನಕಾರ‌ ಹಾಗೂ ಸಕಾರಾತ್ಮಕವಾಗಿ ಆಲೋಚಿಸಿ. ಸ್ನೇಹಿತರ ಜೊತೆ ಬೆರೆಯಲು ಮನೆಯಲ್ಲಿ ಒಪ್ಪಿಗೆ ಸಿಗದಿರಬಹುದು. ಸುಳ್ಳನ್ನು ಹೇಳಿ‌ ಸಿಕ್ಕಿಹಾಕಿಕೊಳ್ಳುವಿರಿ. ಹಣಕಾಸಿನ ಹಿನ್ನಡೆ ತಪ್ಪಿನ ಅರಿವಾಗುವುದು. ಸಾಧಿಸುವ ವಿಧಾನವವನ್ನು ಹೇಳಿಕೊಳ್ಳುವುದು ಬೇಡ. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಉದ್ಯಮವನ್ನು ಬಿಟ್ಟು ಬೇರೆಯ ಕಾರ್ಯವನ್ನು ಮಾಡಲು ಆಗದು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಪೆಟ್ಟಾಗುವ ಸಾಧ್ಯತೆ ಇದೆ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ನಿಂದನೆಯಾಗಬಹುದು. ಅವಿವಾಹಿತರಿಗೆ ವಿವಾಹದ ಬಗ್ಗೆ ಚಿಂತೆಯಾದೀತು.

ಸಿಂಹ ರಾಶಿ: ನೀವು ಎದುರಿಸುತ್ತಿರುವ ಮಾನಸಿಕ ಒತ್ತಡಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ವಿಶ್ರಾಂತಿ ಪಡೆಯಿರಿ. ವ್ಯವಹಾರದ ಲಾಭವನ್ನು ಹೆಚ್ಚಿಸುವ ಕುರಿತು ಸ್ನೇಹಿತರಿಂದ ಸಲಹೆ ಪಡೆಯಿರಿ. ಹಿತಶತ್ರುಗಳಿಂದ ನಿಮ್ಮ ವಿವಾಹವು ತಪ್ಪಬಹುದು. ಸ್ಥಗಿತಗೊಂಡಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ವಿರೋಧಿಗಳು ಸೋಲುತ್ತಾರೆ. ಪ್ರಯಾಣಕ್ಕೆ ತೊಂದರೆಯಾಗಬಹುದು. ತಾಳ್ಮೆ ಮತ್ತು ಸಂಯಮ ಮೇಲುಗೈ ಸಾಧಿಸುತ್ತದೆ. ಕಛೇರಿಯಿಂದ ನಿಮಗೆ ತಿಳಿಯಬೇಕಾದ ವಿಚಾರವು ತಿಳಿಯದೇಹೋಗಬಹುದು. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಮರಳಿಬಾರದ ಚಿಂತೆಯೂ ಇರುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಬೆನ್ನು ನೋವು ನಿಮ್ಮನ್ನು ಬಾಧಿಸೀತು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು.

ಕನ್ಯಾ ರಾಶಿ: ನೀವು ದಿನದ ಕಾರ್ಯದ ಯಾದಿಯನ್ನು ಮಾಡಿ ಅನಂತರ ಕಾರ್ಯವನ್ನು ಆರಂಭಿಸಿ. ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಮುಖ್ಯವಾದ ಕಾರ್ಯದ ಕಡೆ ಗಮನ ಕೊಡಬೇಕಾಗುವುದು. ಸ್ನೇಹಿತರು ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಏನೇ ಬಂದರೂ ಇರುವ ಸತ್ಯವನ್ನು ಹೇಳಲು ಇಂದು ನೀವು ಹಿಂಜರಿಯಲಾರಿರಿ. ತನ್ನಿಂದ ತನ್ನವರಿಗೆ ತೊಂದರೆಯಾಗುವುದೆಂಬ ಭಯವೂ ಕಾಡಬಹುದು. ಅಮೂಲ್ಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ಅಪರಿಚಿತರನ್ನು ನಂಬಿ ಅನಂತರ ಚಿಂತೆಗೆ ಬೀಳುವಿರಿ. ಪ್ರಯತ್ನಗಳಲ್ಲಿ ಸೋಮಾರಿತನ ಮತ್ತು ವಿಳಂಬ ಬೇಡ ಪ್ರಭಾವಿ ವ್ಯಕ್ತಿಗಳ ಸಹಾಯಕರಾಗಿ ಹೋಗುವ ಅವಕಾಶಗಳು ಸಿಗಬಹುದು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ಕಾಡಬಹುದು. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ.