AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Venus Transit: ಶುಕ್ರನ ಸ್ಥಾನ ಬದಲಾವಣೆ: ಯಾವ ರಾಶಿಯ ಜನರಿಗೆ ಏನು ತೊಂದರೆ, ಪರಿಹಾರವೇನು?

ಶುಕ್ರನು ಸಂತೋಷ, ಭೋಗವನ್ನು ಸೂಚಿಸುವ ಗ್ರಹ. ಜಾತಕದಲ್ಲಿ‌ ಶುಕ್ರನು ಬಲಶಾಲಿಯಾಗಿದ್ದರೆ ನಾನಾ ಸುಖವನ್ನು ಅನುಭವಿಸುತ್ತಾನೆ ಎಂದರ್ಥ. ಐಷಾರಾಮಿಯಾಗಿ ಬದುಕೇ ಯಾವಾಗಲು ಎಂದಲ್ಲ. ಗ್ರಹಗಳ ವಾರದಲ್ಲಿ ಅನುಕೂಲಸ್ಥಿತಿ‌ ಬಂದಾಗ ಸುಖಭೋಗಳನ್ನು ಅನುಭವಿಸುತ್ತಾರೆ.

Venus Transit: ಶುಕ್ರನ ಸ್ಥಾನ ಬದಲಾವಣೆ: ಯಾವ ರಾಶಿಯ ಜನರಿಗೆ ಏನು ತೊಂದರೆ, ಪರಿಹಾರವೇನು?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 21, 2024 | 12:28 PM

Share

ಶುಕ್ರನು ಇನ್ನು‌ ಕೆಲವು ದಿನಗಳಲ್ಲಿ ಕನ್ಯಾ ರಾಶಿಯನ್ನು ಪ್ರವೇಶಿಸುವನು. ಇದು ಬುಧನ ಆಧಿಪತ್ಯದ ರಾಶಿ. ಆದರೆ ಶುಕ್ರನಿಗೆ ದುರ್ಬಲ ರಾಶಿಯಾಗಿದೆ. ಕನ್ಯಾ ರಾಶಿಯ ಇಪ್ಪತ್ತೇಳನೇ ಅಂಶದಲ್ಲಿ ಶುಕ್ರನು ಅತ್ಯಂತ ಕ್ಷೀಣಬಲನಾಗಿರುವನು. ಈ‌ ಸಂದರ್ಭದಲ್ಲಿ ತಾನು ಕೊಡಬೇಕಾದ ಫಲವನ್ನು ಕೊಡಲು ವಿಫಲನಾಗುತ್ತಾನೆ.

ಕನ್ಯಾ ರಾಶಿ :

ಇದೇ ರಾಶಿಯನ್ನು ಶುಕ್ರನು ಪ್ರವೇಶಿಸುವ ಕಾರಣ ದೈಹಿಕ ಹಾಗು ಮಾನಸಿಕ ಸ್ವಾಸ್ಥ್ಯವು ಹಾಳಾಗುವುದು. ಕೇತುವೂ ಇದೇ ರಾಶಿಯಲ್ಲಿ‌ ಸ್ಥಿತನಾದುದರಿಂದ ಅಧೈರ್ಯವು ಹೆಚ್ಚು ಕಾಣುವುದು.

ತುಲಾ ರಾಶಿ :

ಈ ರಾಶಿಯವರಿಗೆ ಬರುವ ನಿಮ್ಮ ಸಂಪತ್ತು ಬಾರದೇ ಇರುವುದು. ನಿಮ್ಮ ಮಾತನ್ನು ಕೇಳಿಸುವುದು ಕಷ್ಟವಾಗುವುದು. ಇದಕ್ಕಾಗಿ ಅತಿಯಾಗಿ ಕೋಪಹೊಳ್ಳುವಿರಿ.

ಮೀನ ರಾಶಿ :

ಇದು ಶುಕ್ರನ ಉಚ್ಚರಾಶಿಯಾಗಿದೆ. ಈ ರಾಶಿಯ ಇಪ್ಪತ್ತೇಳನೇ ಅಂಶದಲ್ಲಿ ತನ್ನ ಪೂರ್ಣಫಲವನ್ನು ಈತ ಕೊಡುತ್ತಾನೆ. ಆದರೆ ಈಗ ನೀಚನಾದ ಕಾರಣ ಸಂಗಾತಿಯಿಂದ ತೊಂದರೆ. ಅನ್ಯ ಸ್ತ್ರೀಯರಿಂದ ಅಪಮಾನ, ಗುರು ಹಿರಿಯರಿಂದ ಸಲ್ಲದ ಮಾತುಗಳನ್ನು ಕೇಳಬೇಕಾಗುವುದು.

ಇದನ್ನೂ ಓದಿ: ಚಿನ್ನದ ಉಂಗುರವು ಈ 4 ರಾಶಿಯವರಿಗೆ ಭಾರೀ ಅದೃಷ್ಟವನ್ನು ತರುತ್ತದೆ!

ವೃಷಭ ರಾಶಿ :

ಈ ರಾಶಿಯು ಶುಕ್ರನ‌ ರಾಶಿ. ಶುಕ್ರನಿಂದ ನವಮಸ್ಥಾನದ ರಾಶಿಯಾದರೂ ಅಶುಭಫಲವನ್ನು ಪಡೆಯಬೇಕಾಗುವುದು. ಕರ್ಮದಲ್ಲಿ ಅನಾಸಕ್ತಿ, ಧಾರ್ಮಿಕ ಕಾರ್ಯದಲ್ಲಿ ಅಶ್ರದ್ಧೆ, ಹಿರಿಯರ ಮೇಲೆ ಗೌರವವಿರದು, ಕಲಾವಿದರು ಸ್ವಲ್ಪ ಕಾಲ ತಟಸ್ಥವಾಗಿರಬೇಕಾದೀತು.

ಹೀಗೆ ಪ್ರತಿಕೂಲವೇ ಹೆಚ್ಚಿರುವ ಸಂದರ್ಭದಲ್ಲಿ ಭೋಗಕ್ಕೆ ಬೇಕಾದ ವಸ್ತಿಗಳನ್ನು ಖರೀದಿ ಮಾಡುವುದು ಉಚಿಯವಲ್ಲ. ಅನಂತರ ನಷ್ಟವನ್ನೂ ಕಾಣಬೇಕಾದೀತು. ಅಥವಾ ಅದಕ್ಕೋಸ್ಕರ ಸಂಪತ್ತನ್ನು ಕಳೆಯಬೇಕಾಗಬಹುದು. ಆದಷ್ಟು ಜಾಗರೂಕತೆಯ ಹೆಜ್ಜೆ ಇಟ್ಟು ಬರುವ ಸಂಕಟವನ್ನು ದಾಟಿದರೆ ಅನಂತರ ನಿಶ್ಚಿಂತೆಯಿಂದ ಇರಲು ಸಾಧ್ಯ.

-ಲೋಹಿತ ಹೆಬ್ಬಾರ್ – 8762924271