Weekly Horoscope: ಏಪ್ರಿಲ್‌ 23 ರಿಂದ ಏ. 29ವರೆಗೆ ವಾರ ಭವಿಷ್ಯ, ಯಾವ ರಾಶಿಗೆ ಏನು ಫಲ?

2023ರ ಏಪ್ರಿಲ್​ 23 ರಿಂದ ಏಪ್ರಿಲ್ 29ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ಏಪ್ರಿಲ್‌ 23 ರಿಂದ ಏ. 29ವರೆಗೆ ವಾರ ಭವಿಷ್ಯ, ಯಾವ ರಾಶಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 23, 2023 | 5:00 AM

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ (Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಏಪ್ರಿಲ್​ 23 ರಿಂದ ಏಪ್ರಿಲ್ 29ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ತೃತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಸೌಭಾಗ್ಯ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:38 ರಿಂದ 05:12ರ ವರೆಗೆ.

ಮೇಷ: ಏಪ್ರಿಲ್ ತಿಂಗಳ ಕೊನೆಯ ವಾರವು ಆಂದರೆ ನಾಲ್ಕನೆಯ ವಾರವು ಇದಾಗಿದೆ. ಎರಡು ಶುಭಗ್ರಹಗಳು ಸ್ಥಾನವನ್ನು ಬದಲಿಸಿವೆ. ಗುರು ಮತ್ತು ರವಿ ಗ್ರಹರು ಈ ರಾಶಿಯನ್ನು ಅಂದರೆ ಮೇಷರಾಶಿಯನ್ನು ಪ್ರವೇಶಿಸಲಿದ್ದಾರೆ. ಬುಧ ಹಾಗೂ ರಾಹು ಇವರಿಬ್ಬರ ಜೊತೆ ರವಿ ಹಾಗೂ ಗುರುವೂ ಸೇರಿದ್ದಾರೆ. ಸೂರ್ಯನ‌ ಸ್ಥಾನವಾಗಿರುವುದರಿಂದ ನಿಮಗೆ ಸರ್ಕಾರಿ ಉದ್ಯೋಗ ಅಥವಾ ಸರ್ಕಾರಕ್ಕೆ ಸಂಬಂಧಪಟ್ಟಂತಹ ಕೆಲಸಗಳನ್ನು ಮಾಡಿಕೊಳ್ಳುವಿರಿ. ರಾಜನಿಗೆ ಸಮಾನವಾದ ಮರ್ಯಾದೆಯೂ ಸಿಗಲಿದೆ. ತಂದೆಯ ಅಥವಾ ಗುರು-ಹಿರಿಯರಲ್ಲಿ ಉಚಿತ ವರ್ತನೆ ಇರಲಿ. ಏಕಾದಶದ ಶನಿಯು ನಿಮಗೆ ಎಲ್ಲ ರೀತಿಯ ಅನುಕೂಲವನ್ನೂ ಮಾಡುವನು. ಶತ್ರುಗಳ ಬಗ್ಗೆ ನಿಮಗೆ ತಿಳಿವಳಿಕೆ ಬರಲಿದೆ‌.

ವೃಷಭ: ಈ ತಿಂಗಳ ನಾಲ್ಕನೆಯ ವಾರದಲ್ಲಿ ಅಶುಭ ವಾರವಾಗಿದೆ. ಏಕಾದಶ ಸ್ಥಾನವನ್ನು ಬಿಟ್ಟು ಗುರು ಹಾಗೂ ಸೂರ್ಯರು ದ್ವಾದಶಸ್ಥಾನಕ್ಕೆ ಬಂದಾಗಿದೆ. ಇದು ನಿಮಗೆ ದಿನನಿತ್ಯದ ಕೆಲಸದಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಎಲ್ಲ ಅನುಕೂಲತೆಗಳು ಇದ್ದರೂ ನೆಮ್ಮದಿಯಿಂದ ಇರಲು ಸಾಧ್ಯವಾಗದೇ ಇರಬಹುದು. ತಂದೆಯು ನಿಮ್ಮನ್ನು ಮಾತನಾಡಿಸುತ್ತಿಲ್ಲ ಎಂದನ್ನಿಸಬಹುದು. ಅವರ ಆರೋಗ್ಯದ ಬಗ್ಗೆ ಗಮನವಿರಲಿ. ಎಲ್ಲ ವಿಚಾರದಲ್ಲಿಯೂ ಅಳುಕು ಹೆಚ್ಚಾಗಿ ಇರಲಿದೆ. ದಶಮದಲ್ಲಿ ಶನಿಯು ಸ್ಥಿನಾಗಿದ್ದಾನೆ. ಕರ್ಮದಲ್ಲಿ ಆಸಕ್ತಿಯನ್ನು ಕಡಿಮೆ‌ಮಾಡಿಸುವನು.‌ ಸದಾ ಆಲಸ್ಯದ ಮನೋಭಾವವನ್ನು ನೀಡುವನು. ಅಷ್ಟಮಾಧಿಪತಿಯಾದ ಗುರುವೂ ದ್ವಾದಶದಲ್ಲಿ ಇದ್ದಾನೆ. ಗುರುಸೇವೆಯನ್ನು ಮಾಡಲೇಬೇಕಿದೆ.

ಮಿಥುನ: ಈ ವಾರವು ನಿಮಗೆ ಶುಭವಾರವೆಂದೇ ಹೇಳಬೇಕು. ಏಕಾದಶಸ್ಥಾನದಲ್ಲಿ ನಾಲ್ಕು ಗ್ರಹಗಳಿದ್ದಾವೆ. ಗುರು, ರವಿ, ಬುಧ, ರಾಹುಗಳು. ಇದು ಪೂರ್ಣಶುಭವಲ್ಲದಿದ್ದರೂ ಅಧಿಕ ಶುಭವನ್ನೇ ನಿರೀಕ್ಷಿಸಬಹುದು. ಸಪ್ತಮಾಧಿಪತಿಯಾದ ಗುರುವು ಏಕಾದಶದಲದಲಿದ್ದಾನೆ. ಪತಿಯಿಂದ ಪ್ರೀತಿಯನ್ನು, ಉಡುಗೊರೆ ಮುಂತಾದ ಸಂತೋಷದಾಯಕ ವಿಚಾರಗಳನ್ನು ನಿರೀಕ್ಷಿಸಬಹುದಿ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಸಿಗಲಿದೆ. ಷಷ್ಠಾಧಿಪತಿಯು ನಿಮ್ಮದೇ ರಾಶಿಯಲ್ಲಿ ಇದ್ದಾನೆ. ಶತ್ರುಬಾಧೆಯೂ ಇರಲಿದೆ. ಅಷ್ಟಮಾಧಿಪತಿಯೂ ನವಮಾಧಿಪತಿಯೂ ಶನಿಯೇ ಆಗಿ ನವಮದಲ್ಲಿ ಇರುವನು. ಮುಂದಡಿ ಇಡುವಾಗ ಜೋಪಾನ. ಶನಿವಾರದಂದು ರುದ್ರಾಭಿಷೇಕವನ್ನು ಮಾಡಿಸಿ.

ಕಟಕ: ಈ ವಾರವು ಏಪ್ರಿಲ್ ತಿಂಗಳ ನಾಲ್ಕನೇ ವಾರವಾಗಿದೆ. ನವಮದಿಂದ ದಶಮಸ್ಥಾನಕ್ಕೆ ಸೂರ್ಯ ಹಾಗು ಗುರುವು ಬಂದಿದ್ದಾರೆ. ನಿಮಗೆ ಆನೆ ಬಲವು ಬಂದಂತಾಗಿದೆ. ಇಷ್ಟು ನಿಮಗೆ ಎಲ್ಲ ಕೆಲಸಗಳೂ ಅನಾಯಾಸವಾಗಿ ಆಗಿದ್ದು, ಇನ್ನು ಹೊಸ ಯೋಜನೆಯನ್ನು ಮಾಡಿದರೆ ನಿಮಗೆ ಅನುಕೂಲವಾಗಿ, ಅಭಿವೃದ್ಧಿಯಾಗುವುದು. ಏಕಾದಶದಲ್ಲಿರುವ ಶುಕ್ರನು ಕಲಾವಿದರಿಗೆ ಲಲಿತಕಲೆಗಳಲ್ಲಿ ಆಸಕ್ತಿ ಉಳ್ಳವರಿಗೆ ಹೆಚ್ಚು ಪ್ರೋತ್ಸಾಹವನ್ನು ಮಾಡುವನು. ಸಂಗೀತಾದಿ ವಿದ್ಯೆಗಳನ್ನು ಕಲಿಯುವ ಆಸಕ್ತಿ ಉಳ್ಳವರಿಗೆ ಉತ್ತಮಶಿಕ್ಷಕರೂ ಲಭ್ಯವಾಗುವರು. ಪ್ರತಿಕೂಲನಾದ ಶನಿಯ ಅನುಗ್ರಹಕ್ಕೆ ಮೃತ್ಯುಂಜಯನ ಜಪಮಾಡಿ.

ಸಿಂಹ: ಏಪ್ರಿಲ್ ತಿಂಗಳ ನಾಲ್ಕನೇ ವಾರ ಬದಲಾಗಬೇಕಾದ ಗ್ರಹಗಳು ಬದಲಾಗಿ ಸುಸ್ಥಿತಿಯಲ್ಲಿ ಇವೆ. ಗ್ರಹಗತಿಗಳ ಬದಲಾವಣೆಯಿಂದ ಅನುಕೂಲ ವಾತಾವರಣವು ಇರಲಿದೆ. ಅಷ್ಟಮದಿಂದ ನವಮಸ್ಥಾನಕ್ಕೆ ಗುರು ಹಾಗೂ ಸೂರ್ಯರು ಬಂದಿರುವರು. ಬುಧ ಹಾಗೂ ರಾಹುಗಳ ಜೊತೆ ಸೇರಿದ್ದಾರೆ. ಧಾರ್ಮಿಕ ಆಚರಣೆಗಳನ್ನು ಮಾಡಬೇಕು. ದೇವ ಸಂಬಂಧಿ ಕಾರ್ಯಗಳನ್ನು ಮಾಡಬೇಕು ಎಂದುಕೊಂಡಿರುವಿರಿ. ಆದರೆ ಒತ್ತಡ, ಮತ್ಯಾವುದೋ ತುರ್ತು ಕಾರ್ಯದ‌ ಕಾರಣ ಅದು ಸಾಧ್ಯವಾಗದು. ಉತ್ತಮ‌ಕಾರ್ಯವನ್ನು ಮಾಡಲು ಕಾಲವು ಬರುವುದು. ಏಕಾದಶದಲ್ಲಿ ಕುಜನಿದ್ದು ರಿಸ್ಕ್ ತೆಗೆದುಕೊಂಡು ಮಾಡುವ ಕೆಲಸಕ್ಕೆ ಪ್ರಚೋದನೆ ನೀಡುವನು. ಸಪ್ತಮದಲ್ಲಿರುವ ಶನಿಯು ಮನಸ್ಸನ್ನು ನಿರಾಸಕ್ತಿಯೆಡೆಗೆ ಒಯ್ಯುವನು.

ಕನ್ಯಾ: ಈ ರಾಶಿಯವರಿಗೆ ಏಪ್ರಿಲ್ ತಿಂಗಳ ನಾಲ್ಕನೇ ವಾರ ಕಡಿಮೆ ಶುಭವಿರುವ ವಾರವಿದಾಗಲಿದೆ. ಇಷ್ಟು ದಿನ ಸಪ್ತಮದಲ್ಲಿರುವ ಗುರುವು ಅಷ್ಟಮಕ್ಕೆ ಪ್ರವೇಶಿಸಲಿದ್ದು ಇಷ್ಟು ದಿನ ಸಂತೋಷ, ಸಂಪತ್ತು ಎಲ್ಲವೂ ಇದ್ದು, ಇನ್ನು ಕಷ್ಟಪಡಬೇಕಾದ ಸ್ಥಿತಿ ಬರಲಿದೆ. ಮಾನಸಿಕ ಕಿರಿಕಿರಿಯಾಗಬಹುದು. ಸಪ್ತಮದಿಂದ ಅಷ್ಟಮಕ್ಕೆ ಸೂರ್ಯನೂ ಬರಲಿದ್ದು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಒಳ್ಳೆಯ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸಿ. ಬುಧ ಹಾಗೂ ರಾಹುವಿನ ಸಂಚಾರವೂ ಅಷ್ಟಮದಲ್ಲಿರುವುದರಿಂದ ದೂರಪ್ರಯಾಣ ಮಾಡುವ ನಿಮಗೆ ಮರಣಭೀತಿ ಇರಬಹುದು. ಸೋದರನ ಆರೋಗ್ಯದ ಬಗ್ಗೆಯೂ ಗಮನಬೇಕು. ದ್ವಿತೀಯದಲ್ಲಿ ಕೇತುವಿದ್ದು ಮಾತಿನ ಮೇಲೆ ನಂಬಿಕೆ ಇರದು. ಗುರುಸೇವೆಯನ್ನು ಮಾಡಿ.

ತುಲಾ: ಷಷ್ಠಕ್ಕೆ ಗುರುವು ಬಂದಾಗಿನಿಂದ ನಿಮಗೆ ಒಂದಲ್ಲ‌ ಒಂದು ತೊಂದರೆಗಳು, ಇಷ್ಟಾರ್ಥವು ಸಿದ್ಧಿಯಾಗದೇ ಏನು ಮಾಡಬೇಕೆಂದು ತೋರದೆ, ನುಂಗಲೂ ಉಗುಳಲೂ ಆಗದ ಸ್ಥಿತಿ ಇತ್ತು. ಇನ್ನು ನಿಮಗೆ ಒಳ್ಳೆಯದಾಗಲಿದ್ದು ದಡ ತಪ್ಪಿದ್ಸ ಹಡಗು ದಡದತ್ತ ಸಾಗುತ್ತಿದಿರುವುದು ನಿಮ್ಮ ಅನುಭವಕ್ಕೆ ಬರಲಿದೆ. ನಿಮ್ಮ ಕನಸುಗಳು ಗರಿಗೆದರಿಕೊಂಡು ಹಾರಲು ಯತ್ನಿಸುತ್ತಿವೆ. ಅವುಗಳಿಗೆ ಸರಿಯಾದ ಆರೈಕೆ ಮಾಡಿ ಪೋಷಿಸಿ. ಗುರುಬಲವು ಇರುವ ಕಾರಣ ವಿವಾಹಾದಿ ಮಂಗಲಕಾರ್ಯಗಳನ್ನು ವಿವಾಹೆಚ್ಛುಗಳು ಮಾಡಿಕೊಳ್ಳುವುದು ಉತ್ತಮ. ಅಷ್ಟಮದಲ್ಲಿರುವ ಶುಕ್ರನು ಸ್ತ್ರೀಯರಿಂದ ಅಪಮಾನವನ್ನು ಮಾಡಿಸುವನು. ನವಮದ ಕುಜನು ಹಿರಿಯರಿಗೆ ಅಗೌರವವನ್ನು ಕೊಡುವುದು, ನಂಬಿಕೆಯಿಲ್ಲದಂತೆ ಮಾಡಿಸುವನು. ಬೇರೆಯವರನ್ನು ಹಾದಿತಪ್ಪಿಸುವನು. ಪಂಚಮದ ಶನಿಯು ಮಕ್ಕಳ ಬಗ್ಗೆ ನಿರಾಸಕ್ತಿ ತೋರಿಸುವನು.

ವೃಶ್ಚಿಕ: ಏಪ್ರಿಲ್ ಕೊನೆಯ ವಾರದಲ್ಲಿ ಗ್ರಹಗತಿಗಳು ವಿಶೇಷ ಬದಲಾವಣೆಯನ್ನು ಕಾಣಲಿದ್ದು ಸುಮಾರು ಒಂದು ವರ್ಷಗಳ ಕಾಲ ಪಂಚಮದಲ್ಲಿರುವ ಗುರುವು ಈಗ ಷಷ್ಠಸ್ಥಾನಕ್ಕೆ ಬಂದಿದ್ದಾನೆ. ಮಕ್ಕಳನ್ನು ಅಪೇಕ್ಷಿಸಿದ್ದರೆ ಸಿಗಲಿದೆ. ನೀವು ಮಾಡಿದ ಕೆಲಸಕ್ಕೆ ನಿಮಗೆ ಯಶಸ್ಸು ಸಿಗದೇ ಅದನ್ನು ಬೇರೆಯವರು ಪಡೆದುಕೊಳ್ಳುವರು. ನಿಮ್ಮ ಅದೃಷ್ಟವು ಒರರ ಪಾಲಾಗುವುದು. ನಿಮಗೆ ಅದು ಹೇಳಿಕೊಳ್ಳಲಾಗದ ವಿಷಯವಾಗಿ, ಹೇಳಿಕೊಳ್ಳುವುದು ಕಷ್ಟವೂ ಆದೀತು. ವಿವಾವಾಹವಾಗುವ ಯೋಚನೆ ಮಾಡಿದ್ದರೆ ನಿಮಗೆ ಉತ್ತಮಕುಲದ ಸ್ತ್ರೀಯು ಸಿಗಬಹುದು. ಅಷ್ಟಮದಲ್ಲಿರುವ ಕುಜನು ನಿಮಗೆ ಅನುಕೂಲಕರನಾಗಿರುವನು. ಅಕಾರ್ಯಕ್ಕೆ ಮನಸ್ಸು ಮಾಡುವಿರಿ. ದೇಹಕ್ಕೆ ಬಹಳ ನೋವಾಗಲಿದೆ. ಚತುರ್ಥದಲ್ಲಿರುವ ಶನಿಯಿಂದ ಕುಟುಂಬದಲ್ಲಿ ಸಣ್ಣ ಕಲಹವಾಗುವ ಸಾಧ್ಯತೆ ಇದೆ.

ಧನಸ್ಸು: ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಗ್ರಹಗತಿಗಳು ಬದಲಾಗಲಿದ್ದು ನಿಮಗೆ ಅನುಕೂಲಕರವಾಗಲಿದ್ದಾರೆ. ಚತುರ್ಥಸ್ಥಾನದಲ್ಲಿದ್ದ ಗುರುವು ಪಂಚಮಸ್ಥಾನಕ್ಕೆ ಬಂದು ನಿಮ್ಮ ಚಿಂತಿತ ಕಾರ್ಯವನ್ನು ಪೂರ್ಣ ಮಾಡಿಸುವನು. ನಿಮ್ಮ‌ನಿಜವಾದ ಸಾಮರ್ಥ್ಯವು ಬೆಳಕಿಗೆ ಬರಲಿದೆ. ತಂದೆಗೆ ನಿಮ್ಮ ಮೇಲೆ ಪ್ರೀತಿ ಇರಲಿದೆ. ಶುಕ್ರನು ಷಷ್ಠದಲ್ಲಿ ಇರುವ ಕಾರಣ ಕಫೋದ್ರೇಕದಿಂದ ಕೆಮ್ಮು, ನೆಗಡಿ, ಅತಿಯಾದ ನಿದ್ರಯು ಆಗಲಿದೆ. ಸಪ್ತಮದಲ್ಲಿರುವ ಕುಜನಿಂದ ವಿವಾಹವಿಘ್ನವು ಉಂಟಾಗಲಿದೆ. ಪತಿಯ ಜೊತೆ ಕಲಹವೂ ಆಗಬಹುದು. ಮನಸ್ಸು ಕೆಟ್ಟದ್ದನ್ನು ಆಲೋಚಿಸುವುದು. ಅದನ್ನು ಸರಿಮಾಡಿಕೊಳ್ಳಿ. ತೃತೀಯದಲ್ಲಿ ಶನಿಯು ಸಹೋದರನ ಜೊತೆ ಸ್ನೇಹವನ್ನು ಕಡಿಮೆ ಮಾಡಿಸುವನು. ಏಕಾದಶದಲ್ಲಿರುವ ಕೇತುವು ನಿಮಗೆ ಕೆಟ್ಟ ಕೆಲಸದಿಂದ ಹಣವನ್ನು ಕೊಡಿಸುವನು.

ಮಕರ: ಒಂದು ವರ್ಷಗಳ ಕಾಲ ತೃತೀಯಸ್ಥಾನದಲ್ಲಿ ಇದ್ದ ಗುರುವು ಚತುರ್ಥಸ್ಥಾನಕ್ಕೆ ಬಂದಿರುವನು. ಬಹಳ ಅನುಕೂಲವಲ್ಲದಿದ್ದರೂ ಕೊಂಚ ಒಳ್ಳೆಯದನ್ನು ಅನುಭವಿಸಿದ್ದೀರಿ. ಇನ್ನು ಮತ್ತಷ್ಟು ಶುಭವಾಗಲಿದೆ. ಬಂಧುಗಳ ಸಹಕಾರವೂ ನಿಮಗೆ ಸಿಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಪಂಚಮದಲ್ಲಿರುವ ಶುಕ್ರನು ಮಕ್ಕಳು ಇಷ್ಟಪಡುವಂತೆ ಮಾಡುವನು. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಕುಜನು ಶತ್ರುಗಳು ಇಲ್ಲದಂತೆ ಮಾಡುವನು. ದಶಮದಲ್ಲಿರುವ ಕೇತುವು ಯೋಗ್ಯತೆಗೆ ತಕ್ಕುದಾದ ಕೆಲಸವನ್ನು ಕೊಡಿಸನು. ದ್ವಿತೀಯದಲ್ಲಿರುವ ಶನಿಯು ನಿಮ್ಮ ಸಂಪತ್ತನ್ನು ಅಸ್ಥಿರವಾಗಿಸುವನು. ಸಂಪತ್ತಿನ ಬಗ್ಹೆ ನಿರಾಸಕ್ತಿ ಇರಲಿದೆ. ಸಾಡೇಸಾಥ್ ಶನಿಯ ಅಂತ್ಯಭಾಗದಲ್ಲಿ ನೀವಿದ್ದೀರಿ. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಕುಂಭ: ಈ ತಿಂಗಳ ಕೊನೆಯ ವಾರದಲ್ಲಿದ್ದು ಗ್ರಹಗತಿಗಳ ಬದಲಾವಣೆಯಿಂದ ಒಂದಿಷ್ಟು ಅನುಕೂಲ ಹಾಗೂ ಪ್ರತಿಕೂಲಗಳು ಆಗಲಿವೆ. ಸಾಡೇಸಾಥ್ ಶನಿಯ ನಿಮ್ಮದೇ ರಾಶಿಯಲ್ಲಿ ಶನಿಯು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾನೆ. ದೇಹಾಲಸ್ಯ, ಅಲೋಚನೆಯಲ್ಲಿ ಅಸ್ಥಿರತೆ, ಮಾಡುವ ಕೆಲಸದಲ್ಲಿ ಅಪ್ರೀತಿ, ಜಾಡ್ಯ ಎಲ್ಲವೂ ಕಾಣಿಸುವುದು. ದ್ವಿತೀಯದಲ್ಲಿದ್ದ ಗುರುವು ತೃತೀಯಸ್ಥಾನಕ್ಕೆ ಬಂದಿದ್ದಾನೆ. ಸಹೋದರರ ಮಧ್ಯದಲ್ಲಿ ಹೊಂದಾಣಿಕೆ ಇದ್ದರೂ ಸಣ್ಣ ವೈಮನಸ್ಯವೂ ಆಗಾಗ ಕಾಣಿಸಲಿದೆ. ತಾಯಿಯ ಕಡೆಯ ಬಂಧುಗಳಿಂದ ಸಹಾಯವು ಸಿಗಲಿದೆ. ಸದ್ಯ ನಿಮಗೆ ಗ್ರಹಗಳು ಅನನುಕೂಲರಾಗಿದ್ದರೂ ದೈವಬಲವು ನಿಮಗೆ ಸಹಾಯ ಮಾಡಲಿದೆ. ದೇವರ ಮೇಲೆ ಶ್ರದ್ಧೆ, ಭಕ್ತಿಗಳನ್ನು ಇಟ್ಟುಕೊಳ್ಳಿ. ಸಾಧ್ಯವಾದಷ್ಟು ಪರಮೇಶ್ವರನನ್ನು ಪ್ರಾರ್ಥಿಸಿ. ಕರ್ಮಾಧಿಪತಿಯು ಸತ್ಕರ್ಮದ ಫಲವನ್ನು ಕೊಡುವನು.

ಮೀನ: ಕಳೆದ ಒಂದು ವರ್ಷಗಳಿಂದ ನಿಮ್ಮ ಮನೆಯಲ್ಲಿಯೇ ಇದ್ದ ಬೃಹಸ್ಪತಿಯು ದ್ವೀತೀಯಕ್ಕೆ ಬಂದಿದ್ದಾನೆ. ರವಿಯೂ ಬುಧನೂ ರಾಹುವೂ ಇದ್ದು ಈ ವಾರವು ಶುಭಾಶುಭ ಮಿಶ್ರ ಫಲವಿರಲಿದೆ. ಗ್ರಹಗತಿಗಳು ಬದಲಾಗುವ ತನಕ ಸ್ವಲ್ಪ ದಿನಗಳು ಹೀಗೇ ಇರಲಿದೆ. ಸಾಡೇಸಾಥ್ ಶನಿಯು ಪ್ರಾರಂಭವಾಗಿದ್ದು ಪ್ರತಿಕೂಲ ವಾತಾವರಣ ಇದ್ದೇ ಇದೆ. ಅನ್ಯ ಗ್ರಹಗಳು ನಿಮಗೆ ಅಶುಭವನ್ನು ಕಡಿಮೆ ಮಾಡಲಿವೆ. ಅಷ್ಟಮದಲ್ಲಿರುವ ಕೇತುವು ನಿಮ್ಮ ಆರೋಗ್ಯವನ್ನು ಸುಧಾರಿಸುವನು. ಷಷ್ಠಾಧಿಪತಿಯಾದ ಸೂರ್ಯನು ದ್ವಿತೀಯಕ್ಕೆ ಬಂದಿದ್ದು ತಂದೆಯು ಶತ್ರುವಿಂತೆ ಭಾಸವಾಗಬಹುದು.‌ ಸರ್ಕಾರಿ ಉದ್ಯೋಗ, ಕೆಲಸವು ಸದ್ಯ ಆಗದೇ ಹೋಗುವುದು. ಶಿವನಿಗೆ ಶನಿವಾರ, ಅಮಾವಾಸ್ಯೆಯ ದಿನ, ಶಿವನ ವಾರದಂದು ರುದ್ರಾಭಿಷೇಕ ಮಾಡಿಸಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)