Weekly Horoscope: ಜುಲೈ 2 ರಿಂದ ಜುಲೈ 8 ರ ವರೆಗಿನ ವಾರ ಭವಿಷ್ಯ, ಶನಿಯು ಈ ರಾಶಿಯವರಿಗೆ ಯೋಗಕಾರಕನಾಗಿ‌ ಬಯಸಿದ್ದನ್ನು ಕೊಡುವನು

| Updated By: Digi Tech Desk

Updated on: Jul 04, 2023 | 11:20 AM

2023ರ ಜುಲೈ 2 ರಿಂದ ಜುಲೈ 8 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ಜುಲೈ 2 ರಿಂದ ಜುಲೈ 8 ರ ವರೆಗಿನ ವಾರ ಭವಿಷ್ಯ, ಶನಿಯು ಈ ರಾಶಿಯವರಿಗೆ ಯೋಗಕಾರಕನಾಗಿ‌ ಬಯಸಿದ್ದನ್ನು ಕೊಡುವನು
ಜ್ಯೋತಿಷ್ಯ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜುಲೈ 2 ರಿಂದ ಜುಲೈ 8 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ: ಜುಲೈ ತಿಂಗಳ ಮೊದಲ ವಾರವು ಅಧಿಕ ಶುಭಾಶುಭವು ಮಿಶ್ರವಾಗಲಿದೆ ಎಂದು ಹೇಳಬೇಕು. ಚತುರ್ಥದಲ್ಲಿ ಬುಧನಿದ್ದು ಬಂಧುಗಳ ಭೇಟಿಯಾಗಲಿದೆ.‌ ಪಂಚಮದಲ್ಲಿ ಶುಕ್ರ ಹಾಗೂ ಕುಜರ ಪ್ರವೇಶವಾಗಿದೆ. ಶುಕ್ರನು ನೀಚಸ್ಥಾನಕ್ಕೆ ಸಮೀಪದಲ್ಲಿ ಇದ್ದು ಕುಜನು ನೀಚತ್ವವನ್ನು ಬಿಟ್ಟು ಮುಂದಕ್ಕೆ ಸಾಗಿದ್ದಾನೆ. ಇಬ್ಬರ ಈ ಸಮಾಗಮವು ದಾಂಪತ್ಯದ ಮೇಲೆ‌ಪರಿಣಾಮ ಬೀರಲಿದೆ. ಉದ್ಯೋಗವನ್ನು ಅರಸಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಶನಿಯು ನಿಮ್ಮ ಆಸೆಗಳನ್ನು ನಿಧಾನವಾಗಿ ಈಡೇರಿಸುವನು.‌ ಬಂಧುಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ನಾಗರ ಆರಾಧನೆ ಮಾಡಿ.

ವೃಷಭ: ಈ ವಾರವು ನಿಮಗೆ ಮಧ್ಯಮಫಲ ಎಂದೇ ಹೇಳಬಹುದು. ಬುಧನು ತೃತೀಯದಲ್ಲಿ ಇದ್ದು ನಿಮ್ಮ ಬೌದ್ಧಿಕಸಾಮರ್ಥ್ಯವನ್ನು ಹೆಚ್ಚಿಸುವನು.‌ ಚತುರ್ಥದಲ್ಲಿ ಇರುವ ಕುಜ ಹಾಗೂ ಶುಕ್ರರು ಕುಟುಂಬದಲ್ಲಿ ಗೊಂದಲಮಯ ವಾತಾವರಣವನ್ನು ಸೃಷ್ಟಿಸುವರು. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಕಷ್ಟಪಡುವಿರಿ ಈ ವಾರ. ಕಬ್ಬಿಣಕ್ಕೆ ಸಂಬಂಧಿಸಿದ ವ್ಯಾಪಾರವು ಅಲ್ಪ ಲಾಭದಾಯಕವಾಗಿದೆ. ವಿವೇಕದಿಂದ ನಿಮ್ಮ ವರ್ತನೆ ಇರಲಿ.‌ ಎಲ್ಲರನ್ನೂ ನೀವೂ ಇಷ್ಟಪಡಲಿದ್ದೀರಿ. ನಿಮ್ಮನ್ನೂ ಇಷ್ಟಪಡುವರ ಜೊತೆ ಸಮಯವನ್ನು ಕಳೆಯಿರಿ. ದ್ವಾದಶದಲ್ಲಿ ಗುರುವಿದ್ದು ಅಪಮಾನವನ್ನು ಅನುಭವಿಸುವಿರಿ.

ಮಿಥುನ: ಈ ರಾಶಿಯವರಿಗೆ ಜುಲೈ ಮೊದಲ ವಾರವು ಶುಭವೆಂದೇ ಹೇಳಬೇಕು. ಏಕಾದಶದಲ್ಲಿ ಗುರುವಿದ್ದು ಗೌರವಾದಿಗಳನ್ನು ಕೊಡಿಸುವನು. ದ್ವಿತೀಯದಲ್ಲಿ ಇರುವ ಬುಧನು ನಿಮ್ಮ ಮಾತಿಗೆ ಬೆಲೆ ಇಲ್ಲದಂತೆ ಮಾಡುವನು. ತೃತೀಯಕ್ಕೆ ಈ ವಾರ ಪ್ರವೇಶ ಮಾಡುವ ಶುಕ್ರ ಹಾಗು ಕುಜರು ನಿಮ್ಮ ಸಾಮರ್ಥ್ಯಕ್ಕೆ ಹೆಚ್ಚು ಪೂರಕವಾದ ಕೆಲಸವನ್ನು ನಿಮ್ಮಿಂದ ಮಾಡಿಸುವರು. ರವಿಯು ನಿಮ್ಮದೇ ಸ್ಥಾನದಲ್ಲಿ ಇದ್ದು ಸಣ್ಣ ಪುಟ್ಟ ರೋಗಗಳನ್ನು ತರಿಸುವನು. ನವಮದಲ್ಲಿ ಇರುವ ಶನಿಯು ನಿಮ್ಮ ಧಾರ್ಮಿಕ ಆಸಕ್ತಿಯನ್ನು ಕಡಿಮೆ‌ ಮಾಡುವನು. ಪಂಚಮ ಕೇತುವಿದ್ದು ಮಕ್ಕಳ ಬಗ್ಗೆ ಕೆಲವು ದೂರುಗಳನ್ನು ಕೇಳುವಿರಿ.

ಕರ್ಕ: ಜುಲೈ ತಿಂಗಳ ನಿಮ್ಮ ಅಲ್ಪ ಸಮೃದ್ಧಿಯನ್ನು ಕಾಣಲಿದೆ. ಕುಜ ಹಾಗೂ ಶುಕ್ರರು ಇಷ್ಟು ದಿನವಿದ್ದು ದ್ವಿತೀಯ ಸ್ಥಾನಕ್ಕೆ ಹೋಗಿದ್ದಾರೆ. ನಿಮ್ಮ‌ಮಾತುಗಳ‌ ಮೇಲೆ ಗಮನವಿರಲಿ. ಎಲ್ಲ ಸಮಯದಲ್ಲಿಯೂ ಒಂದೇ ರೀತಿ ಮಾತನಾಡಬೇಡಿ. ನಿಮ್ಮ ದುಃಖ ಮತ್ತು ಒಂಟಿತನ ಯಾರ ಬಳಿ ಹೇಳಬೇಕೆಂದು ಕಷ್ಟಪಡುವಿರಿ. ಜನರೆಯಲು ನಿಮಗೆ ಇಷ್ಟವಾಗದೇ ಹೋಗಬಹುದು. ಬುಧನು ನಿಮ್ಮ ಮನೆಗೆ ಆಗಮಿಸಿದ್ದು ದೇಹದಲ್ಲಿ ನೋವುಗಳು ಕಾಣಿಸಿಕೊಳ್ಳುವುದು. ವೈದ್ಯರ ಸಲಹೆಯನ್ನು ಪಡೆದು ಮುಂದುವರಿಯಿರಿ. ದ್ವಾದಶದಲ್ಲಿ ಸೂರ್ಯನಿದ್ದು ನಿಮ್ಮ ತಂದೆಯ ಕಾರಣದಿಂದ ನಿಮಗೆ ತೊಂದರೆಗಳು ಆಗಬಹುದು. ಹಣವೂ ಅದಕ್ಕಾಗಿ ಖರ್ಚಾಗಬಹುದು.

ಸಿಂಹ: ಜುಲೈ ತಿಂಗಳ ಮೊದಲ ವಾರವು ನಿಮಗೆ ಖರ್ಚನ್ನು ಹೆಚ್ಚು ಮಾಡಿ ನಿಮ್ಮನ್ನು ಆತಂಕಕ್ಕೆ ದೂಡುವುದು. ದ್ವಾದಶದಲ್ಲಿ ಇದ್ದ ಕುಜ ಹಾಗೂ ಶುಕ್ರರು ಈ ವಾರ ನಿಮ್ಮ ಸ್ಥಾನಕ್ಕೇ ಬರಲಿದ್ದು ದೇಹ ಸೌಖ್ಯವನ್ನು ಹಾಳು ಮಾಡಿಯಾರು. ಬುಧನೂ ಸಹ ದಶಮದಿಂದ ಏಕಾದಶಕ್ಕೆ ಬರಲಿದ್ದು ಸಹೋದನ ಸಹಾಯ ಅಥವಾ ಬಂಧುಗಳ ಸಹಾಯವು ನಿಮಗೆ ದೊರೆಯಲಿದೆ. ವಾಹನ ವ್ಯಾಪಾರದಲ್ಲಿ ಈ ವಾರ ಲಾಭ ಸಾಧ್ಯತೆ. ಸ್ನೇಹಿತರ ಜೊತೆ ಆಕಸ್ಮಿಕವಾಗಿ ಘರ್ಷಣೆ ಉಂಟಾಗಬಹುದು. ದೇಹದ ನೋವನ್ನು ಕಡಿಮೆ‌ ಮಾಡಿಕೊಳ್ಳುವ ಭರದಲ್ಲಿ ನೀವು ಮತ್ತೆ ಏನನ್ನಾದರೂ ತಂದುಕೊಳ್ಳುವಿರಿ. ದಶಮದ ಸೂರ್ಯನು ನಿಮ್ಮ ವೃತ್ತಿಯಲ್ಲಿ ಶುಭ ವಾರ್ತೆಯನ್ನು ಕೊಡಿಸುವನು.

ಕನ್ಯಾ: ಈ ವಾರದಲ್ಲಿ ಹೆಚ್ಚು ಅಶುಭವನ್ನೇ ಹೇಳಬೇಕು. ಗುರು ಅಷ್ಟಮದಲ್ಲಿ, ಶುಕ್ರನು ನೀಚಗಾಮನಿಯಾಗಿ ದ್ವಾದಶದಲ್ಲಿದ್ದು ಧನವ್ಯಯ, ಅಪಮಾನ, ಅಲಂಕಾರಿಕ ವಸ್ತುಗಳ ಬಗ್ಗೆ ಅಸಡ್ಡೆ ಎಲ್ಲವೂ ಉಂಟಾಗಲಿದೆ. ಯಾರನ್ನಾದರೂ ಪ್ರೀತಿಸಿದ್ದರೆ ಅವರನ್ನು ಸರಿಯಾಗಿ ಮಾತನಾಡಿಸಿ. ಅವರಿಗೆ ನಿಮ್ಮ ಸಮಯವನ್ನು ಕೊಡಿ.‌ ದಶಮದಲ್ಲಿ ಇರುವ ಬುಧನು ಏಕಾದಶಕ್ಕೆ ಬಂದಿದ್ದು ಸಹೋದರನ ಸಹಕಾರವು ನಿಮಗೆ ಸಿಗಲಿದೆ. ಪಾಲುದಾರಿಕೆಗೆ ಪ್ರಾಮುಖ್ಯ ನೀಡಿ ಮುಂದುವರಿಯಿರಿ. ನೀವು ಒಂಟಿಯಾಗಿ ಕುಟುಂಬ ಸಮಸ್ಯೆಗಳನ್ನು ಹೊರಬೇಕಾದೀತು. ನೀವು ತೊಂದರೆಗಳನ್ನು ತೊಡೆದುಹಾಕಲು ಬಯಸುವಿರಿ. ಕಾರ್ತಿಕೇಯನ ಅನುಗ್ರಹ ಪಡೆಯಿರಿ. ಗುರುಚರಿತ್ರೆಯನ್ನು ಪಠಿಸಿ.

ತುಲಾ: ಈ ವಾರವು ಜುಲೈ ತಿಂಗಳ ಮೊದಲ ವಾರವಾಗಿದ್ದು ಶುಭವನ್ನು ಹೆಚ್ಚು ಪಡೆಯಲಿದ್ದೀರಿ. ದಶಮ ಸ್ಥಾನದಲ್ಲಿದ್ದ ಶುಕ್ರ ಹಾಗು ಕುಜರು ಏಕಾದಶಕ್ಕೆ ಬರಲಿದ್ದಾರೆ. ಪತ್ನಿಯ ಕಡೆಯಿಂದ ನಿಮಗೆ ಲಾಭವಾಗಲಿದೆ. ಅಥವಾ ಆಕೆಯ ಮಾತಿನಿಂದಲೂ ಲಾಭವನ್ನು ಪಡೆಯುವಿರಿ. ಬುಧನು ದಶಮಕ್ಕೆ ಬಂದಿದ್ದು ಬೋಧಕವರ್ಗದವರಿಗೆ ಸ್ಥಾನಮಾನ, ಗೌರವ, ಮಾತಿಗೆ ಮನ್ನಣೆ ಎಲ್ಲವೂ ಸಿಗಲಿದೆ. ಬಂಧುಗಳ ಸಹಾಯದಿಂದ ಉದ್ಯೋಗದ ಪ್ರಾಪ್ತಿಯೂ ಆಗಬಹುದು. ದೇಹಕ್ಕೆ ಏನಾದರೂ ತೊಂದರೆಯನ್ನು ಕೇತುವು ಮಾಡಿಯಾನು. ಓಡಾಡುವಾಗ, ವಾಹನಚಲಾವಣೆಯಲ್ಲಿ ಎಚ್ಚರಿಕೆ ಇರಲಿ.

ವೃಶ್ಚಿಕ: ಜುಲೈ ತಿಂಗಳ ಮೊದಲ ವಾರವು ನಿಮಗೆ ಮಧ್ಯಮ ಎಂದೇ ಹೇಳಬೇಕು. ಬುಧನು ಅಷ್ಟಮದಿಂದ‌ ನವಮಸ್ಥಾನಕ್ಕೆ ಬಂದಿದ್ದು ಪಂಡಿತರಿಗೆ ಅನುಕೂಲತೆಗಳು ಆಗಲಿವೆ. ಧಾರ್ಮಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚು ಲಾಭವಿರಲಿದೆ. ದಶಮಸ್ಥಾನಕ್ಕೆ ಕು ಹಾಗೂ ಶುಕ್ರರ ಪ್ರವೇಶವು ಆಗಲಿದ್ದು ವೃತ್ತಿಯಲ್ಲಿ ಸುಧಾರಣೆ ಕಾಣಲಿದೆ. ಉನ್ನತಸ್ಥಾನವನ್ನೂ ಪಡೆಯಲು ಇಚ್ಛಿಸಿದರೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಪ್ರೇಮವು ಉಂಟಾಗಬಹುದು‌. ಪ್ರಾಮಾಣಿಕ ಕೆಲಸದಿಂದ ನೀವು ಪ್ರಗತಿ ಸಾಧಿಸುವಿರಿ. ಈ ವಾರ ವಿದ್ಯಾರ್ಥಿಗಳು ಓದನ ಬಗ್ಗೆ ಗಮನಕೊಟ್ಟರೂ ಸರಿಯಾದ ಫಲಿತಾಂಶವನ್ನು ಪಡೆಯಲಾಗದು. ಕುಟುಂಬದವರ ಜೊತೆ ಒಂದಾಗಿ ಕಾಲವನ್ನು ಕಳೆಯುವಿರಿ. ಉದ್ಯೋದ ಸ್ಥಳದಲ್ಲಿ ಇರುವವರ ಜೊತೆ ವಿವಾಹವಾಗಲಿದೆ.

ಧನು: ಈ ತಿಂಗಳ ಮೊದಲ ವಾರವು ಇದಾಗಿದ್ದು ಗ್ರಹಗಳ ಸಣ್ಣ ವ್ಯತ್ಯಾಸದಿಂದ ನಿಮಗೆ ಬಹಳ ಪ್ರಯೋಜನವೂ ಸಣ್ಣ ತೊಂದರೆಗಳೂ ಆಗಲಿವೆ.‌ ಇಷ್ಟು ದಿನ ಅಷ್ಟಮದಲ್ಲಿ ಇದ್ದ ಶುಕ್ರ ಹಾಗು ಕುಜರು ಇನ್ನು ನವಮಕ್ಕೆ ಹೋಗುವರು. ಉಚ್ಚಗಾಮಿಯಾದ ಕುಜನು ಹಾಗೂ ನೀಚಗಾಮಿಯಾದ ಶುಕ್ರನು ನಿಮಗೆ ಅಲ್ಪಶ್ರೇಯಸ್ಸು ಕೊಡುವರು. ಪತ್ನಿಯ ಕಡೆಯವರು ನಿಮ್ಮನ್ನು ಗೌರವಿಸುವರು. ಅತಿಯಾದ ಬಲಪ್ರಯೋಗವನ್ನು‌ ನೀವು ಮಾಡಿ ಕೆಲಸವನ್ನು ಸಾಧಿಸುವಿರಿ. ತಂದೆಯ ವ್ಯವಹಾರವು ನಿಮಗೆ ಇಷ್ಟವಾಗದೇ ಹೋಗಬಹುದು. ನೀವು ವ್ಯಾಪಾರಕ್ಕಾಗಿ ತಂದೆಯ ಹಣವನ್ನು ಕೇಳಲಿದ್ದೀರಿ. ಬುಧನು ಸಪ್ತಮದಿಂದ ಅಷ್ಟಮಕ್ಕೆ ಚಲಿಸಲಿದ್ದು ಹತ್ತಿರದ ಬಂಧುಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ.

ಮಕರ: ಈ ವಾರವು ನಿಮಗೆ ಸ್ವಲ್ಪ ಅಶುಭವನನ್ನೇ ಇರಲಿದೆ. ಸಪ್ತಮದಲ್ಲಿ ಇರುವ ಕುಜ ಹಾಗೂ ಶುಕ್ರರು ಅಷ್ಟಮಕ್ಕೆ ಬರಲಿದ್ದಾರೆ. ಇದರಿಂದ‌ ಪತ್ನಿಯ ಮೇಲೆ‌ ಏನಾದರೂ ಪರಿಣಾಮ ಬೀರಬಹುದು. ಸ್ತ್ರೀಯರು ಆದಷ್ಟು ಜಾಗರೂಕತೆಯಿಂದ ವ್ಯವಹರಿಸಿ.‌ ಗುರಿಯನ್ನು ನೀವು ಗುರಿಯ ಸಾಧನೆಗೆ ಹೆಚ್ಚು ಶ್ರಮವನ್ನು ಹಾಕುವಿರಿ. ದೂರಸಂಪರ್ಕದ ವ್ಯವಹಾರಿಗಳಿಗೆ ನಷ್ಟವಾಗಲಿದೆ. ಬಿಸಿರಕ್ತದವರು ಸಣ್ಣ ವಿಷಯಗಳ ಮಧ್ಯದಲ್ಲಿ ಅಹಂಕಾರ ಮತ್ತು ಕೋಪವನ್ನು ವ್ಯವಸ್ಥೆಯನ್ನು ಹಾಳುಮಾಡಬೇಡಿ. ಬುಧನು ಸಪ್ತಮಕ್ಕೆ ಬರಲಿದ್ದು ತಾಯಿಯ ಕಡೆಯ ಸಂಬಂಧದಿಂದ‌ ನಿಮ್ಮ ವಿವಾಹವು ನಿಶ್ಚಯವಾಗುವುದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಂಗಲವಾರದಂದು ಮಾಡಿ.

ಕುಂಭ: ಈ ತಿಂಗಳ ಮೊದಲ ವಾರವಾಗಿದ್ದು ಶುಕ್ರ ಹಾಗು ಕುಜರು ಷಷ್ಠದಿಂದ ಸಪ್ತಮಕ್ಕೆ ಚಲಿಸುವರು. ವಿವಾಹಕ್ಕೆ ಪ್ರಯತ್ನಿಸಿದರೆ ಅನುಕೂಲವಾಗಲಿದೆ. ಪ್ರೇಮವಿವಾಹವು ಸಿದ್ಧಿಯಾಗುವುದು. ಈ ವಾರ ನಿಮ್ಮ ಕೆಲಸವನ್ನು ಕೆಲಸಗಳನ್ನು ಉನ್ನತ ಅಧಿಕಾರಿಗಳು ವೀಕ್ಷಿಸಿ ಪ್ರಶಂಸಿಸುವರು. ನಿಮ್ಮ ಕಡೆಯಿಂದ ತಪ್ಪಾಗದಂತೆ ನೋಡಿಕೊಳ್ಳೋಣ. ವಿದೇಶದ ವ್ಯವಹಾರವು ನಿಮಗೆ ಹೆಚ್ಚಿನ‌ ಲಾಭವನ್ನು ತಂದುಕೊಡುವುದು. ಬಂಗಾರದ ವ್ಯಾಪಾರದಲ್ಲಿ ನಿಮಗೆ ಅಲ್ಪ ಲಾಭವಾಗಬಹುದು. ಷಷ್ಠಸ್ಥಾನಕ್ಕೆ ಬುಧನು ಬರಲಿದ್ದು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ತಂದೆ ಹಾಗು ಮಕ್ಕಳ ಸಂಬಂಧ ಚೆನ್ನಾಗಿ ಆಗಲಿದೆ.

ಮೀನ: ಇದು ಜುಲೈ ತಿಂಗಳ ಮೊದಲ ವಾರ ಇದಾಗಿದ್ದು ನೀಚನಾಗಿದ್ದ ಕುಜನು ಉಚ್ಚಸ್ಥಾನದ ಕಡೆ ಹೊರಟಿದ್ದಾನೆ. ಶುಕ್ರನೂ ಷಷ್ಠಸ್ಥಾನಕ್ಕೆ ಹೋಗಲಿದ್ದಾನೆ ಸ್ತ್ರೀಯರು ಶತ್ರುಗಳಾಗುವ ಸಾಧ್ಯತೆ ಇದೆ. ರೋಗವಿದ್ದರೆ ಇದಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾದೀತು. ಜವಾಬ್ದಾರಿಗಳು ಸಾಕಷ್ಟಿದ್ದರೂ ಸೋಮಾರಿತನವು ನಿಮ್ಮ ಕೆಲಸವಲಕ್ಕೆ ಅಡ್ಡಿಯನ್ನು ತರಬಹುದು. ಯೋಜನೆಯೊಂದಿಗೆ ನೀವು ಸೋಮಾರಿತನವನ್ನು ಬಿಟ್ಟು ಮುನ್ನಡೆದರೆ ಯಶಸ್ಸಿದೆ. ಧಾನ್ಯದ ವ್ಯಾಪಾರಿಗಳಿಗೆ ಗುಣಮಟ್ಟದ ಕಾರಣದಿಂದ‌ ಅಪವಾದ ಬರಬಹುದು. ಕುಟುಂಬದಲ್ಲಿ ಸಂಗಾತಿಯ ಬೆಂಬಲವು ನಿಮ್ಮ ಈ ವಾರದ ಕೆಲಕ್ಕೆ ಸಿಗಬಹುದು. ಸ್ವಲ್ಪ ಸಮಯದವರೆಗೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವುದರೊಂದಿಗೆ, ಆಹಾರದ ಬಗ್ಗೆ ಗಮನ ಕೊಡಿ. ಹಿರಿಯರ ಮಾರ್ಗದರ್ಶನದಿಂದ‌ ಪ್ರಗತಿ ಇರಲಿದೆ.

-ಲೋಹಿತಶರ್ಮಾ ಇಡುವಾಣಿ

Published On - 6:57 am, Sun, 2 July 23