Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 2) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2023 | 12:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 2 ರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ:ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:27 ರಿಂದ 07:04 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 02:13 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:50 ರಿಂದ 05:27 ರ ವರೆಗೆ.

ಧನು: ನಿಮ್ಮ ಗಾಂಭಿರ್ಯವು ಮನೆಯಲ್ಲಿ ಹೆದರಿಕೆಯನ್ನು ತರಿಸೀತು. ಹಳೆಯ ದಾಖಲೆಗಳನ್ನು ಇಂದು ಹುಡುಕುವ ಪ್ರಯತ್ನ ಮಾಡುವಿರಿ. ಹೊಸ ರೀತಿಯಲ್ಲಿ ಉದ್ಯಮವನ್ನು ಬದಲಿಸಲು ಇಚ್ಛಿಸುವಿರಿ. ಹಳೆಯ ವಾಹನಕ್ಕೆ ಹಣ ಸುರಿಯುವಿರಿ. ಅನೇಕ ವರ್ಷಗಳ ಅನಂತರ ಆದ ಸಂತಾನವು ನಿಮಗೆ ಸಂತೋಷವನ್ನು ಕೊಡಬಹುದು. ಮನೆಗೆ ಇಂದು ವಿದ್ಯುತ್ ಉಪಕರಣವನ್ನು ಖರೀದಿಸುವಿರಿ. ಸಹೋದರನ‌ ಕಾರಣದಿಂದ ಇಂದು ನಿಮ್ಮ ವಿವಾಹವು ಆಗಬಹುದು. ಸುಳ್ಳುವಾರ್ತೆಯನ್ನು ಕೇಳಿ ಮೋಸ ಹೋಗಬಹುದು. ಸರಿಯಾದ ನಿರ್ಧಾರವು ನಮಗೆ ಉತ್ತಮ ಫಲಿತಾಂಶವನ್ನು ಕೊಡಬಹುದು.

ಮಕರ: ನಿಮಗೆ ಸಂಬಂಧಿಸಿದ ಕೆಲಸವಷ್ಟನ್ನೇ ಮಾಡಿ. ಇನ್ನೊಬ್ಬರ ಬಗ್ಗೆ ನಿಮ್ಮ‌ ಮಾತುಗಳು ಬೇಡ. ಸಂದರ್ಭವನ್ನು ನೀವು ಸರಿಯಾಗಿ ನಿಭಾಯಿಸಲು ಕಷ್ಟವಾದೀತು. ನಿಮ್ಮ ಬಗ್ಗೆ ಅಸಂಬದ್ಧ ಮಾತುಗಳನ್ನು ಕೇಳಿ ಬೇಸರವಾಗುವುದು. ಅತಿಯಾದ ಕೋಪವು ನಿಮ್ಮ ಈ ದಿನವನ್ನು ಹಾಳುಮಾಡಬಹುದು. ವಾಹನದಿಂದ ಸಣ್ಣ ಅಪಘಾತವೂ ಆಗಬಹುದು. ಕೃಷಿಯು ನಿಮಗೆ ಬೇಸರವಾಗಬಹುದು. ಎಷ್ಟೋ ದಿನಗಳ ಅನಂತರ ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗುವುದು. ಬಂಧುಗಳು ನಿಮಗೆ ಕೆಲವು ಹಿತ ನುಡಿಗಳನ್ನು ಹೇಳುವರು. ಸಮಾಜದಲ್ಲಿ ಬೆರೆಯಲು ನೀವು ಇಷ್ಟಪಡುವಿರಿ.

ಕುಂಭ: ಖುಷಿಯಿಂದ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಸಮಾಧಾನದ ಚಿತ್ತವು ನಿಮ್ಮ ಇಂದಿನ ದಿನವನ್ನು ಚೆನ್ನಾಗಿ ಇಡುವುದು. ಪ್ರಾಣವನ್ನು ನೀವು ಆನಂದದಿಂದ ಮಾಡುವಿರಿ. ದಾಂಪತ್ಯವು ಸುಖವಾಗಿರಲು ಒಂದು ಕಡೆಯಿಂದ ಮಾತ್ರ ಇದ್ದರೆ ಸಾಲದು. ನೀವು ಇಂದು ಕ್ಷಮಾಗುಣದಿಂದ ದೊಡ್ಡವರಾಗುವಿರಿ. ಸಭೆ ಸಮಾರಂಭಗಳಿಗೆ ನೀವು ಹೋಗಲಿದ್ದೀರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ನಿಮ್ಮವರು ಕಷ್ಟಪಡುವರು. ನಿಮ್ಮ ನಡೆಯು ಯಾರಿಗೂ ತಿಳಿಯದಾಗಿದೆ. ಆರಾಮಿ ಇರಲು ಇಂದು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಧನಾಗಮನದಿಂದ ಸಂತೋಷವಾಗುವುದು. ನಿಮ್ಮ ಸ್ನೇಹಿತರಿಗೆ ಪ್ರತ್ಯುಪಕಾರವನ್ನು ಮಾಡಲು ಇಚ್ಛಿಸುವಿರಿ. ಶಿವಪಂಚಾಕ್ಷರವನ್ನು ಪಠಿಸಿರಿ.

ಮೀನ: ನಿಮಗೆ ಕೃತ್ರಿಮ ಮಾಡಿರುವ ಬಗ್ಗೆ ಭೀತಿ ಇರಲಿದೆ. ವಿದ್ಯಾರ್ಥಿಗಳು ಆಭ್ಯಾಸದಿಂದ ವಿಮುಖರಾಗುವಿರಿ. ಅನಿವಾರ್ಯವಾಗಿ ಸಾಲವನ್ನು ಮಾಡಬೇಕಾಗಬಹುದು. ತಾಯಿಯ ಜೊತೆ ಕಲಹ ಆಗುವ ಸಾಧ್ಯತೆ ಇದೆ. ಮನೆಯ ಕೆಲಸಗಳನ್ನು ಮಾಡಲು ನೀವು ಆಸಕ್ತಿಯ ತೊರುವುದಿಲ್ಲ. ಆಲಸ್ಯದಿಂದ ಇರುವಿರಿ ಇಂದು. ಸಂಗಾತಿಯ ಮೇಲೆ ಅನುಮಾನ ಬರಬಹುದು. ಹೆಚ್ಚು ಸುಖವಾಗಿರಲು ಇಂದು ಇಚ್ಛಿಸುವಿರಿ. ಬಂಧುಗಳ ಮನೆಗೆ ಹೋಗುವಿರಿ. ಆಂತರಿಕ ಕಲಹಕ್ಕೆ ಅವಕಾಶವನ್ನು ಕೊಡಬೇಡಿ. ಶನೈಶ್ಚರ ದೇವಾಲಯಕ್ಕೆ ಹೋಗಿ ಎಳ್ಳನ್ನು ದಾನವಾಗಿ ಕೊಡಿ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ