Weekly Horoscope: ವಾರ ಭವಿಷ್ಯ: ಫೆ 09 ರಿಂದ 15 ರವರೆಗೆ ವಾರ ಭವಿಷ್ಯ
ಇದು ಫೆಬ್ರವರಿ ತಿಂಗಳ ಮೂರನೇ ವಾರವಿದಾಗಿದೆ. ೦೯-೦೨-೨೦೨೫ರಿಂದ 15-೦೨-೨೦೨೫ರವರೆಗೆ ಇರಲಿದೆ. ಶುಕ್ರನು ತನ್ನ ಉಚ್ಚರಾಶಿಯಲ್ಲಿಯೂ ಬುಧನು ಮಿತ್ರನ ಜೊತೆಯೂ ಹಾಗೂ ಸೂರ್ಯನು ಶತ್ರುವಿನ ಜೊತೆಯೂ ಇರುವನು. ತಪ್ಪು ತಿಳಿವಳಿಕೆಯಿಂದ ಅವಗಡಗಳು ಸೃಷ್ಟಿಯಾಗುವುವು. ಸಾಮಾಜಿಕ ಸಹಕಾರವನ್ನು ನೀವು ನೀಡಲಿದ್ದೀರಿ. ಸಮಾರಂಭಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ.

ಇದು ಫೆಬ್ರವರಿ ತಿಂಗಳ ಮೂರನೇ ವಾರವಿದಾಗಿದೆ. ೦೯-೦೨-೨೦೨೫ರಿಂದ 15-೦೨-೨೦೨೫ರವರೆಗೆ ಇರಲಿದೆ. ಶುಕ್ರನು ತನ್ನ ಉಚ್ಚರಾಶಿಯಲ್ಲಿಯೂ ಬುಧನು ಮಿತ್ರನ ಜೊತೆಯೂ ಹಾಗೂ ಸೂರ್ಯನು ಶತ್ರುವಿನ ಜೊತೆಯೂ ಇರುವನು. ತಪ್ಪು ತಿಳಿವಳಿಕೆಯಿಂದ ಅವಗಡಗಳು ಸೃಷ್ಟಿಯಾಗುವುವು.
ಮೇಷ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಸಹೋದರ ಬಗ್ಗೆ ಇರುವ ಭಾವನೆಗಳನ್ನು ಸರಿಮಾಡಿಸುವನು. ವೈದ್ಯರ ಸಲಹೆಯನ್ನು ಪಡೆದು ಮುಂದಿನ ಕಾರ್ಯವನ್ನು ಮಾಡುವಿರಿ. ದುರ್ಬುದ್ಧಿಯಿಂದ ನಿಮ್ಮ ವ್ಯಕ್ತಿತ್ವ ಹಾಳಾಗುವುದು. ನಿಮ್ಮ ಬಳಿಯ ಸಂಪತ್ತನ್ನು ಕೊಟ್ಟು ಬಿಡಬೇಕಾಗುವುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಶನಿದಶೆಯವರಿಗೆ ಉದ್ಯೋಗದಲ್ಲಿ ಪ್ರಗತಿ. ಉದ್ಯಮದ ಉಸ್ತುವಾರಿ ಇದ್ದರೆ, ಪ್ರಶಂಸೆ, ಭಡ್ತಿ ಸಾಧ್ಯತೆ. ಚಟುವಟಿಕೆಯಿಂದ ನೀವು ಇರುವಿರಿ. ಸಂಗಾತಿಯ ಮನೋಭಾವವು ನಿಮಗೆ ಗೊತ್ತಾಗದೇ ಹೋದೀತು. ಸಾಮಾಜಿಕ ಸಹಕಾರವನ್ನು ನೀವು ನೀಡಲಿದ್ದೀರಿ. ಸಮಾರಂಭಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ಸುಬ್ರಹ್ಮಣ್ಯನ ಸ್ತೋತ್ರ ಪಠಿಸಿ.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ರಾಶಿಯ ಅಧಿಪತಿ ಶುಕ್ರನು ಏಕಾದಶದಲ್ಲಿ ಇದ್ದು ನಿಮಗೆ ಐಶ್ವರ್ಯವನ್ನು ಹರಿಸುವನು. ಶುಕ್ರದಶೆಯವರಿಗೆ ಇದು ವಿಶೇಷ ವಾರವಾಗಲಿದೆ. ಎಲ್ಲವನ್ನೂ ಅನುಭವಿಸುವ ಸಂದರ್ಭ ಬರಲಿದೆ. ಮೃದುವಾದ ಮಾತೂ ನಿಮ್ಮಿಂದ ಬರಲಿದೆ. ನಿಮ್ಮ ಕೆಲಸಗಳ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಸಹಯೋಗವು ನೀವು ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಂದೋಲನ ಸ್ಥಿತಿಗೆ ಸರಿಯಾದ ಉತ್ತರದ ಅವಶ್ಯಕತೆ ಇರಲಿದೆ. ಉದ್ಯೋಗದಲ್ಲಿ ಯಾವ ಊರ್ಜಿತವನ್ನೂ ಕಾಣಲಾಗದು. ಸಂಬಂಧಗಳು ಇನ್ನಷ್ಟು ಹತ್ತಿರವಾಗಬಹುದು. ವಿವಾಹದಿಂದ ನೀವು ಅನೇಕ ವಸ್ತುಗಳನ್ನು ನಿರೀಕ್ಷಿಸುವಿರಿ. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗಬಹುದು. ದುರ್ಗಾಮಾತೆಗೆ ಉಡಿ ತುಂಬಿರಿ.
ಮಿಥುನ ರಾಶಿ: ಫೆಬ್ರವರಿಯ ಮೂರನೇ ವಾರದಲ್ಲಿ ನಿಮಗೆ ರಾಶಿಯ ಅಧಿಪತಿ ನವಮದಲ್ಲಿ ಇರಲಿದ್ದು ತಂದೆಯ ಪ್ರೀತಿ, ಬಂಧುಗಳ ಸಹವಾಸ ಚೆನ್ನಾಗಿ ಸಿಗುವುದು. ಆರೋಗ್ಯದ ಮೇಲೆ ಕಾಳಜಿಯು ಕಡಿಮೆ ಆಗಲಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಸವಾಲು ಬರಬಹುದು. ಹಣದ ಹೊಂದಾಣಿಯು ಸ್ವಲ್ಪ ಕಷ್ಟವಾದೀತು. ಉದ್ಯೋಗಾಧಿಪತಿ ದ್ವಾದಶಲ್ಲಿ ನಿಮಗೆ ದುಃಖ, ಮಾನಹಾನಿ ಮಾಡಿಸುವನು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನೀವು ಹೋಗಲಾಗದು. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾದೀತು. ನಿತ್ಯಕರ್ಮದಲ್ಲಿ ವ್ಯತ್ಯಾಸವುಬರಬಹುದು. ಶುದ್ಧತೆಯ ಬಗ್ಗೆ ನೀವು ಬಹಳ ಎಚ್ಚರಿಕೆಯನ್ನು ವಹಿಸುವುದು ಅವಶ್ಯಕ. ಕಿರಿಕಿರಿ ಎನಿಸಿದ ಕಾರ್ಯಗಳನ್ನು ನೀವು ಮುಂದೂಡುವಿರಿ. ಯಾವುದನ್ನೇ ಆದರೂ ಬಳಸಿಕೊಳ್ಳುವುದರ ಮೇಲಿದೆ. ಸಂಗಾತಿಯ ಮನೋಭಾವಕ್ಕೆ ತಕ್ಕಂತೆ ವರ್ತಿಸುವುದು ಕಷ್ಟವಾದೀತು. ಅತಿಥಿ ಸತ್ಕಾರವೇ ನಿಮ್ಮ ಅನೇಕ ದೋಷಗಳನ್ನು ದೂರಮಾಡುವುದು.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ಉದ್ಯಮಕ್ಕೆ ಸಂಬಂಧಿಸಿದಂತೆ ನಿಮಗೆ ಕುಜ ದಶೆಯಲ್ಲಿ ಇದ್ದರೆ ತೊಂದರೆ. ಉದ್ಯೋಗವನ್ನು ಕಳೆದುಕೊಳ್ಳುವಿರಿ. ಯಂತ್ರದ ವ್ಯಾಪಾರಕ್ಕೂ ಧಕ್ಕೆ. ಆರ್ಥಿಕತೆಯ ಬಗ್ಗೆಯೇ ಹೆಚ್ಚಿನ ಒಲವು ಇಲ್ಲದ್ದರಿಂದ ಒತ್ತಡವೂ ಸಹಜವಾಗಿ ಇರಲಿದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವಿರಕ. ಹಿರಿಯ ಮಾತನ್ನು ಕೇಳದೇ ಅಸಡ್ಡೆ ಮಾಡಬಹುದು. ನೀವು ಇಡುವ ಹೆಜ್ಜೆಗಳು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಆರೋಗ್ಯವನ್ನು ಚಿಕತ್ಸೆಯ ಮೂಲಕ ಸರಿಮಾಡಿಕೊಳ್ಳಬೇಕು. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹಾರವಿರಲಿ. ಭವಿಷ್ಯದ ಗೊಂದಲವು ನಿಮಗೆ ಪರಿಹಾರವಾಗದೇ ಹೋಗಬಹುದು. ಅತಿಯಾದ ನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ಅತಿಥಿ ಸತ್ಕಾರವನ್ನು ನೀವು ಮಾಡುವಿರಿ. ಪಾರ್ವತೀಪರಮೇಶ್ವರರಿಗೆ ಅಭಿವಂದಿಸಿ.
ಸಿಂಹ ರಾಶಿ: ಈ ವಾರದಲ್ಲಿ ನಿಮಗೆ ರಾಶಿಯ ಅಧಿಪತಿಯಿಂದ ಶುಭ. ಅಧಿಕಾರದಿಂದ ಗೆಲ್ಲುವ ಪ್ರಯತ್ನ ಮಾಡುವಿರಿ. ಉದ್ಯೋಗದಲ್ಲಿ ಒತ್ತಡ ಜೀವನವು ನಿಮಗೆ ಅಭ್ಯಾಸವಾಗಿ ಹೋಗಲಿದೆ. ಬಲವಂತ ವಿಚಾರಕ್ಕೆ ನೀವು ಒಪ್ಪಲಾರಿರಿ. ಈ ವಾರ ಅಸಮಾನ ಧರ್ಮದವರ ಜೊತೆ ವಿವಾಹ ನಿಶ್ಚಯವಾಗಬಹುದು. ನಿಮ್ಮ ಕಷ್ಟಗಳಿಗೆ ದೈವದ ಮೊರೆ ಹೋಗುವುದು ಉತ್ತಮ. ಆಸ್ತಿಯನ್ನು ಉಳಿಸಿಕೊಳ್ಳ ಬಹಳ ಶ್ರಮವಹಿಸಬೇಕಾದೀತು. ಶುಕ್ರ ದಶೆಯವರಿಗೆ ಉದ್ಯಮದಲ್ಲಿ ತಡೆಗಳು ಬರಬಹುದು. ನಿಮ್ಮ ತಪ್ಪುಗಳಿಗೆ ಸಮಜಾಷಿ ನೀಡುವುದು ಸರಿಯಾಗದು. ವಿದೇಶದ ಕನಸನ್ನು ನನಸುಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ಒಂದು ತಪ್ಪಿಗೆ ನಿಮ್ಮ ವೃತ್ತಿಯ ಸಿಬ್ಬಂದಿಗಳು ಕಷ್ಟಪಡಬೇಕಾದೀತು. ಎಲ್ಲವನ್ನೂ ಸರಳವಾಗಿ ಸ್ವೀರಿಸುವ ಮನೋಭಾವ ಇರಲಿದೆ. ಶಿವನಿಗೆ ಪ್ರಿಯವಾದ ಅಭಿಷೇಕ ಮಾಡಿಸಿ.
ಕನ್ಯಾ ರಾಶಿ: ಫೆಬ್ರವರಿಯ ಮೂರನೇ ವಾರದಲ್ಲಿ ನಿಮಗೆ ರಾಶಿಯ ಅಧಿಪತಿ ಷಷ್ಠದಲ್ಲಿ ಇರುವ ಕಾರಣ ಶುಭವಿಲ್ಲ. ಆಪ್ತರೇ ಶತ್ರುಗಳಂತೆ ಕಾಣಿಸಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು. ನಿಮಗೆ ಇಷ್ಟವಾಗದ ಕೆಲಸವನ್ನೇ ಮಾಡಬೇಕಾದ ಸ್ಥಿತಿಯು ಬರಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುವಿರಿ. ವಾತದ ಪ್ರಕೋಪದಿಂದ ಕಷ್ಟವಾಗುವುದು. ನಿಮ್ಮ ಬಳಿ ಆಗದ ಕಾರ್ಯವನ್ನು ಇನ್ನೊಬ್ಬರು ಮಾಡಿ ಮುಗಿಸುವರು. ಮಕ್ಕಳಿಂದ ನಿಮಗೆ ಉಡುಗೊರೆಯು ಸಿಗಲಿದೆ. ಬುಧ ದಶೆಯವರಿಗೆ ಉದ್ಯೋಗದಲ್ಲಿ ಹಾನಿ. ಪ್ರಾಪಂಚಿಕ ಸುಖವು ನಿಮಗೆ ಸಾಕೆನಿಸುವುದು. ಇನ್ನೊಬ್ಬರ ಸಂಕಷ್ಟಕ್ಕೆ ನೀವು ಬಲಿಯಾಗಬಹುದು. ಸಹನೆಯನ್ನು ನೀವು ರೂಢಿಸಿಕೊಳ್ಳುವಿರಿ. ವೈಷ್ಣವ ಕ್ಷೇತ್ರಗಳ ದರ್ಶನ ಮಾಡಿ. ಸೀತಾರಾಮ ಕಲ್ಯಾಣದ ಪ್ರಸಂಗ, ಅಥವಾ ಪಟ್ಟಾಭಿಷೇಕದ ಕಥೆಯನ್ನು ಶ್ರವಣ ನಾಡಿ.
ತುಲಾ ರಾಶಿ: ಇದು ರಾಶಿ ಚಕ್ರದ ಏಳನೇ ರಾಶಿಯಾಗಿದ್ದು ರಾಶಿಯ ಅಧಿಪತಿಯು ತನ್ನ ಉನ್ನತ ಸ್ಥಾನಕ್ಕೆ ಹೋಗಲಿದ್ದು ನಿಮಗೆ ಅದರಿಂದ ಪೂರ್ಣಪ್ರಮಾಣದ ಪ್ರಯೋಜನವಾಗದು. ಶುಕ್ರ ದಶೆಯವರಿಗೆ ಆರ್ಥಿಕತೆಯಲ್ಲಿ ಹಿನ್ನಡೆ, ಇದೇ ಕಾರಣಕ್ಕೆ ಶತ್ರುಗಳು ಹುಟ್ಟಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ನಿಮಗೆ ಜಯವು ಸಿಗಲಿದೆ. ಪ್ರಾಮಾಣಿಕತೆಗೆ ನಿಮಗೆ ಪ್ರಶಂಸೆಯು ಸಿಗಲಿದೆ. ಯಾರನ್ನೋ ಮೆಚ್ಚಿಸಲು ನೀವು ದೇಹವನ್ನು ದಂಡಿಸಿ ಕೆಲಸ ಮಾಡುವಿರಿ. ವಿವಾಹಾದಿಗಳಿಗೆ ಈ ವಾರ ಶುಭವಾಗಿಲ್ಲ. ಆರ್ಥಿಕತೆಯನ್ನು ಬಲ ಮಾಡಿಕೊಳ್ಳಲು ಉದ್ಯೋಗವನ್ನು ಬದಲಿಸಬೇಕಾದೀತು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿದ್ದು ಎಲ್ಲರೂ ನಗುವರು. ಹಠದ ಸ್ವಭಾವದಿಂದ ನೀವು ಪಡೆದುಕೊಳ್ಳಬಹುದಾದ ಉಪಯೋಗದಿಂದ ವಂಚಿತರಾಗುವಿರಿ. ನಿರ್ಧಾರಗಳನ್ನು ವೇಗವಾಗಿ ಪಡೆಯಲು ಆಗದು. ಕಾರ್ಯದಲ್ಲಿ ನಿರಾಸಕ್ತಿಯು ಇರಲಿದೆ. ಗುರುಸೇವೆಯನ್ನು ಮಾಡಿ.
ವೃಶ್ಚಿಕ ರಾಶಿ: ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ನಿಮಗೆ ರಾಶಿಯ ಅಧಿಪತಿಯು ತನ್ನದೇ ಅಂಶದಲ್ಲಿ ಇದ್ದು ನಿಮಗೆ ಸಹೋದರರಿಂದ ಸಹಾಯ ಮಾಡಿಸುವನು. ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು. ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಈ ವಾರ ಪ್ರಯತ್ನಿಸುವಿರಿ. ಕುಜ ದಶೆಯವರಿಗೆ ದೇಹ ಬಾಧೆ ಕಾಣಿಸಿಕೊಳ್ಳುವುದು. ಆರೋಗ್ಯದ ವಿಷಯದಲ್ಲಿ ಮುಂಜಾಗ್ರತೆ ಇರಬೇಕಾಗುವುದು. ಹೊಸ ಉದ್ಯಮಕ್ಕೆ ಆಪ್ತರ ಹಾಗೂ ಅನುಭವಿಗಳ ಸಲಹೆಯನ್ನು ಪಡೆಯಿರಿ. ದಾಂಪತ್ಯದ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮಗೆ ಆಘಾತವನ್ನು ಉಂಟುಮಾಡಬಹುದು. ರವಿ ದಶೆ ಇರುವವರಿಗೆ ಉದ್ಯೋಗದಿಂದ ದೂರಪ್ರಯಾಣ, ವಿದೇಶಕ್ಕೂ ಹೋಗುವ ಸಾಧ್ಯತೆ ಇದೆ. ಅದಾಯವು ಹೆಚ್ಚಾಗಲಿದೆ. ಖುಷಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ. ಕಲಹಕ್ಕೆ ಯಾರಾದರೂ ಬಂದರೆ ಮೌನ ವಹಿಸಿ. ಪಕ್ಷಗಳಿಗೆ ಆಹಾರ ನೀಡಿ.
ಧನು ರಾಶಿ: ಇದು ರಾಶಿ ಚಕ್ರದ ಒಂಭತ್ತನೇ ರಾಶಿ. ರಾಶಿಯ ಅಧಿಪತಿ ಶತ್ರುವಿನ ಸ್ಥಾನ ಮತ್ತು ಷಷ್ಠದಲ್ಲಿ ಇರುವನು. ನಿಮ್ಮ ಕೆಲಸದಲ್ಲಿ ನಿಮಗೆ ತಪ್ಪು ಕಾಣಿಸಬಹುದು. ಸಮ್ಮಾನವನ್ನು ನೀವು ಇಷ್ಟಪಡುವುದಿಲ್ಲ. ಬುಧ ದಶೆ ನಡೆಯುತ್ತಿದ್ದರೆ, ಬೋಧಕ ವೃತ್ತಿಗೆ ಹಿನ್ನಡೆ. ಅಪಯಶಸ್ಸು, ಕಿರಿಕಿರಿ. ನಿಮ್ಮ ಬಯಕೆಗಳು ಇನ್ಮೊಬ್ಬರಿಂದ ಪ್ರೇರಣೆಯಿಂದ ಬರಲಿದೆ. ಮನಸ್ಸಿನ ನಿಯಂತ್ರಣವನ್ನು ಸಾಧಿಸಲು ನಿಮಗೆ ಆಗದು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ನೌಕರರು ಸರಿಯಾಗಿ ಕೆಲಸ ಮಾಡದೇ ಕೊನೆಗೆ ನಿಮ್ಮ ಮೇಲೇ ಭಾರವು ಬರುವುದು. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಉಂಟುಮಾಡುವಂತೆ ಇರಲಿದೆ. ಸಾಮಾಜಿಕ ಕಾರ್ಯಗಳನ್ನು ನೀವು ಸಾಮೂಹಿಕವಾಗಿ ಮಾಡವಿರಿ. ಗುರುಚರಿತ್ರಯನ್ನು ಪಠಿಸಿ.
ಮಕರ ರಾಶಿ: ಈ ವಾರದಲ್ಲಿ ಎಲ್ಲ ಗ್ರಹರೂ ಖಾಲಿಯಾಗಲಿದ್ದು ಬಹಳ ದಿನಗಳಂತ ಇಂತಹ ಸ್ಥಿತಿ ಬಂದಿದೆ. ಸಾಡೆ ಸಾಥ್ ಇದ್ದರೂ ಗುರುವಿನ ಬಲವಿರುವ ಕಾರಣ ಯಾವದೇ ಅಹಿತಕಾರ ಘಟನೆಗಳು ನಡೆಯದು. ಉದ್ಯೋಗದ ಸ್ಥಳದಲ್ಲಿ ಪಕ್ಷಪಾತವನ್ನು ಮಾಡಿ ದ್ವೇಷವನ್ನು ಬಿತ್ತುವ ಸಾಧ್ಯತೆ ಇದೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಸಾಲದ ವಿಚಾರವಾಗಿ ಕುಟುಂಬದ ಜೊತೆ ವಾಗ್ವಾದವು ಆಗಲಿದೆ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವನು. ಕುಟುಂಬದ ವಿಚಾರದಲ್ಲಿ ಸಹಮತ ಕಾಣಿಸದು. ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಯೋಚನೆಯು ನಿಮಗೆ ಸಾಧ್ಯವಾಗದು. ನಿಮ್ಮ ಗೌರವವನ್ನು ಕಂಡು ಕೆಲವು ಮಿತ್ರರೂ ಶತ್ರುಗಳಾದಾರು. ನಿಮ್ಮ ಆಲೋಚನೆಯನ್ನು ಯಾರ ಬಳಿಯೂ ಹೇಳಿಕೊಳ್ಳದೇ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಏಕಾಂತವನ್ನು ಇಂದು ಹೆಚ್ಚು ಇಷ್ಟಪಡುವಿರಿ. ದೇವರಲ್ಲಿ ಭಕ್ತಿಯು ಇರಲಿದೆ. ಶೈವಕ್ಷೇತ್ರಕ್ಕೆ ತೆರಳಿ ಪರಶಿವನನ್ನು ಅರ್ಚಿಸಿ.
ಕುಂಭ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ರಾಶಿಗೆ ಸೂರ್ಯ ಬುಧರ ಆಗಮನವಾಗಲಿದೆ. ಶುಕ್ರನ ಅಂಶವನ್ನು ಪಡೆದಿದ್ದು ಅಭಿನಾಯಗಳು ಅಧಿಕವಾಗವುದು. ಹೊರಗೊಂದು ಒಳಗೊಂದು ತಳಕು ಹಾಕಿಕೊಳ್ಳುವುದು. ವೃತ್ತಿಯ ಕಾರಣಕ್ಕೆ ನೀವು ವಿದೇಶಪ್ರಯಾಣವನ್ನು ಮಾಡಲಿದ್ದೀರಿ. ಬಂಧುಗಳ ನೋವಿಗೆ ಸ್ಪಂದಿಸುವಿರಿ. ಪ್ರಯಾಣದಿಂದ ನಿಮಗೆ ಆಲಸ್ಯವಿರಲಿದೆ. ಅಪಮಾನವನ್ನು ನೀವು ನುಂಗಿಕೊಳ್ಳುವಿರಿ. ಕೋಪವನ್ನು ಮಾಡಿಕೊಳ್ಳಲು ನಿಮಗೆ ಕಾರಣವೇ ಬೇಕಾಗದು. ರಾಶಿಯ ಅಧಿಪತಿ ದಶೆಯಾಗಿದ್ದರೆ, ಸೇವಾ ವೃತ್ತಿಯಲ್ಲಿ ಸಾಧನೆ ಸಾಧ್ಯವಾಗುವುದು. ನೌಕರರಿಂದ ನಿಮಗೆ ಎದುರುತ್ತರ ಸಿಗಲಿದೆ. ವಿವೇಚನೆ ಇಲ್ಲದೇ ಆಡಿದ ನಿಮ್ಮ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಇದು ಸೂಕ್ತ ಸಮಯ. ನಿಮ್ಮ ವಸ್ತುವನ್ನು ಇನ್ನೊಬ್ಬರ ಉಪಯೋಗಕ್ಕೆ ದಾನವಾಗಿ ಕೊಡುವಿರಿ. ಶಿವಜಪವನ್ನು ಪ್ರಾತಃಕಾಲ ಮತ್ತು ಸಂಜೆ ಬಿಡದೇ ಮುಂದುವರಿಸಿ.
ಮೀನ ರಾಶಿ: ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ಈ ರಾಶಿಗೆ ಅಶುಭ. ದ್ವಾದಶದಲ್ಲಿ ರವಿಯು ಇರಲಿದ್ದು, ಎಲ್ಲ ಕಾರ್ಯದಲ್ಲಿಯೂ ಭಯ. ಅನಿವಾರ್ಯ ಕಾರಣದಿಂದ ನಿಮಗೆ ಅಧಿಕಾರ ತಪ್ಪು ಸಾಧ್ಯತೆ ಹೆಚ್ಚು. ಸಾಡೆಸಾಥ್ ನಡೆಯುತ್ತಿರುವ ಕಾರಣ ಮನಸ್ತಾಪ, ದುಃಖಗಳು ಯಾವುದಾದರೂ ರೀತಿಯಲ್ಲಿ ಬರಲಿದೆ. ಉದ್ಯೋಗದಲ್ಲಿ ಒತ್ತಡದಿಂದ ಕೆಲವು ಸಮಸ್ಯೆಗಳು ಆಗಬಹುದು. ವ್ಯಾಪಾರದಲ್ಲಿ ಲಾಭದ ಅಂಶವು ಕಡಿಮೆ ಇರಬಹುದು. ನಿಶ್ಚಯವಾದ ವಿವಾಹವು ಮುಂದೆಹೋಗುವುದು. ಸಮಯವನ್ನು ನಿರ್ಧರಿಸಿಕೊಂಡು ಕೆಲಸವನ್ನು ಆರಂಭಿಸಿದರೆ ಸಕಾಲಕ್ಕೆ ಎಲ್ಲವೂ ಮುಗಿಯಲಿದೆ. ಆಸಕ್ತಿಯು ಇಲ್ಲದಿದ್ದರೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಆಪತ್ತಿನಲ್ಲಿದ್ದರೆ ಸ್ನೇಹಿತರ ಸಹಾಯ ಸಿಗಬಹುದು. ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ನಿಮ್ಮ ಕಲಹವು ನ್ಯಾಯಾಲಯಕ್ಕೆ ಹೋಗಬಹುದು. ನಿಮ್ಮ ಬಳಿ ಯಾರಾದರೂ ಕೇಳಿ ಬರಬಹುದು. ಆತುರದಿಂದ ಪ್ರೀತಿಯಲ್ಲಿ ಗೆಲ್ಲಲು ಸಾಧ್ಯವಾಗದು.
ಲೋಹಿತ ಹೆಬ್ಬಾರ್ 8762924271 (what’s app only)




