Weekly Horoscope: ವಾರ ಭವಿಷ್ಯ: ಜ 26 ರಿಂದ ಫೆ 02 ರವರೆಗೆ ವಾರ ಭವಿಷ್ಯ ಇಲ್ಲಿದೆ
ಇದು ಜನವರಿ ತಿಂಗಳ ನಾಲ್ಕನೇ ವಾರವಿದಾಗಿದೆ. ೨೬-೦೧-೨೦೨೫ರಿಂದ ೦೨-೦೨-೨೦೨೫ರವರೆಗೆ ಇರಲಿದೆ. ಶುಕ್ರನು ಶನಿಯ ರಾಶಿಯಿಂದ ಮುಂದೆ ಹೋಗಲಿದ್ದು ಇದು ಉಚ್ಚ ಸ್ಥಾನವಾಗಿದೆ. ಶುಕ್ರನು ಸಂಪೂರ್ಣ ಬಲವಂತನಾಗಿದ್ದು, ರಾಹುವಿನ ಜೊತೆ ಇರುವ ಕಾರಣ ಆರ್ಥಿಕತೆಯಲ್ಲಿ ವೈಷಮ್ಯ ಬರುವುದು. ಹಣದಿಂದ ತಪ್ಪು ದಾರಿಗೂ ಹೋಗಬಹುದು. ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು.
ಇದು ಜನವರಿ ತಿಂಗಳ ನಾಲ್ಕನೇ ವಾರವಿದಾಗಿದೆ. ೨೬-೦೧-೨೦೨೫ರಿಂದ ೦೨-೦೨-೨೦೨೫ರವರೆಗೆ ಇರಲಿದೆ. ಶುಕ್ರನು ಶನಿಯ ರಾಶಿಯಿಂದ ಮುಂದೆ ಹೋಗಲಿದ್ದು ಇದು ಉಚ್ಚ ಸ್ಥಾನವಾಗಿದೆ. ಶುಕ್ರನು ಸಂಪೂರ್ಣ ಬಲವಂತನಾಗಿದ್ದು, ರಾಹುವಿನ ಜೊತೆ ಇರುವ ಕಾರಣ ಆರ್ಥಿಕತೆಯಲ್ಲಿ ವೈಷಮ್ಯ ಬರುವುದು. ಹಣದಿಂದ ತಪ್ಪು ದಾರಿಗೂ ಹೋಗಬಹುದು. ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು.
ಮೇಷ ರಾಶಿ: ಜನವರಿಯ ಮೊದಲ ತಿಂಗಳಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ರಾಶಿಯ ಅಧಿಪತಿಯು ತೃತೀಯದಲ್ಲಿ ಇರುವುದು ಶುಭ. ಸಹೋದರ ಸಂಬಂಧ ಚೆನ್ನಾಗುವುದು. ಆದರೆ ಬುದ್ಧಿ ವಿಕಾರದತ್ತ ಹೋಗುವುದು. ನಕಾರಾತ್ಮಕ ತಂತ್ರಗಳನ್ನು ಮಾಡಬಹುದು. ಆರ್ಥಿಕಸ್ಥಿತಿಯು ಮಂದಗತಿಯಲ್ಲಿರಲಿದೆ. ಕೆಲಸವನ್ನು ಮಾಡಿಕೊಳ್ಳಲು ಜಾಣತನದಿಂದ ಮಾತನಾಡುವಿರಿ. ತಾಳ್ಮೆಯನ್ನು ಕಳೆದುಕೊಂಡು ಮಾತನಾಡುವುದರಿಂದ ಪ್ರಯೋಜನವಿಲ್ಲ. ಬಟ್ಟೆ ತಯಾರಕರಿಗೆ ವ್ಯವಹಾರ ವಿಸ್ತರಿಸುತ್ತದೆ. ಅಧಿಕ ಓಡಾಟ ಹೆಚ್ಚು ಆಯಾಸ ತರಬಹುದು. ಸಂಗಾತಿಯ ಆದಾಯದಲ್ಲಿ ಹೆಚ್ಚಳ ಕಾಣಬಹುದು. ನೀರಿನ ವ್ಯಾಪಾರದಲ್ಲಿ ನಷ್ಟ. ಬೇಡದ ಕಾರ್ಯಗಳಿಗೆ ಹೆಚ್ಚಿನ ಹಣವು ವ್ಯಯವಾಗುವುದು.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ರಾಶಿಯ ಅಧಿಪತಿ ಏಕಾದಶಕ್ಕೆ ಬರಲಿದ್ದು ಆರ್ಥಿಕವಾಗಿ ಹಿನ್ನಡೆಯಾಗಿದ್ದ ನಿಮಗೆ ಉತ್ತಮ ಹಣದ ಹರಿವು ಇರುವುದು. ಪೂರ್ವಯೋಜಿತವಾದ ಕಾರ್ಯಗಳಲ್ಲಿ ಸಫಲತೆ ಕಾಣುವಿರಿ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯನ್ನು ಕಾಣುವಿರಿ. ಬಂಗಾರ ಮುಂತಾದ ವ್ಯಾಪಾರಿಗಳಿಗೆ ಲಾಭ ಹೆಚ್ಚು. ರೈತರು ಕೃಷಿ ಕಾರ್ಯಗಳಲ್ಲಿ ಹೆಚ್ಚಿನ ಗಮನ ಕೊಡುವರು. ಸಂಗಾತಿಯ ಮನಸ್ತಾಪ ದೂರಾಗುವುದು. ಕೆಲವೊಂದು ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ದೂರವಿಡುವುದು ಒಳ್ಳೆಯದು. ಶ್ರಮ ಕಡಿಮೆ ಫಲ ಹೆಚ್ಚು. ಸಿದ್ಧಪಡಿಸಿದ ಆಹಾರವನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತರಣೆಯ ಯೋಗವಿದೆ. ಅಹಂಕಾರ ಬರಬಹುದು, ನಿಮ್ಮ ನಿಯಂತ್ರಣದಲ್ಲಿ ನೀವಿರಿ.
ಮಿಥುನ ರಾಶಿ: ಇದು ಈ ತಿಂಗಳ ಕೊನೆಯ ವಾರವಾಗಿದ್ದು ರಾಶಿಯ ಅಧಿಪತಿ ಅಷ್ಟಮದಲ್ಲಿ ಇದ್ದು ಅನಾರೋಗ್ಯಕ್ಕೆ ಕಾರಣನಾಗುವನು. ವೈದ್ಯಕೀಯ ಚಿಕಿತ್ಸೆಯಿಂದ ಗುಣವಾಗಲಿದೆ. ವೃತ್ತಿಯ ಕಡೆಯಿಂದ ತರಬೇತಿಗಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಾಗಿ, ಹೆಚ್ಚು ಜನಸಂಪರ್ಕ ಮಾಡಬೇಕಾದ ಅನಿವಾರ್ಯವಿರುತ್ತದೆ. ಹಿರಿಯರಿಂದ ತಮ್ಮ ವಂಶದ ಬಗ್ಗೆ ಹೆಚ್ಚಿನ ತಿಳಿವಳಿಕೆ ದೊರೆಯುತ್ತದೆ. ಶುಕ್ರನು ದಶಮಕ್ಕೆ ಬರುವ ಕಾರಣ ವಾಹನ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯ ಹೆಚ್ಚುತ್ತದೆ. ಸರ್ಕಾರಿ ಕಚೇರಿಗಳಿಗೆ ಹೆಚ್ಚು ಅಲೆದಾಟವಾದರೂ ಕೆಲಸಗಳಾಗುತ್ತವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ಮುಟ್ಟುವುದು.
ಕರ್ಕಾಟಕ ರಾಶಿ: ಜನವರಿಯ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಶುಭ. ಗುರುಬಲ ಚೆನ್ನಾಗಿ ಕಾಣಿಸಲಿದೆ. ಹಾಗೆಯೇ ಶುಕ್ರನು ನವಮದಲ್ಲಿ ಇದ್ದು ಆದಾಯಕ್ಕೆ ಇನ್ನಷ್ಟು ಪುಷ್ಟಿಕೊಡಿಸುವನು. ಕಾರ್ಯದ ಒತ್ತಡಗಳ ನಡುವೆ ಕುಟುಂಬದಲ್ಲಿನ ಆಗು ಹೋಗುಗಳತ್ತ ಗಮನಹರಿಸುವುದು ಒಳ್ಳೆಯದು. ಹಳೆಯ ಸ್ನೇಹಿತರ ಸಂಪರ್ಕ ದೊರೆತು ಸಂತೋಷಪಡುವಿರಿ. ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಹೂಡಿಕೆಯಿಂದ ನಿಮಗೆ ಲಾಭ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಬಂಧುಗಳು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು ಎಚ್ಚರದಿಂದಿರಿ. ವೃತ್ತಿಯಲ್ಲಿ ಭಡ್ತಿಯನ್ನು ಪಡೆದುಕೊಳ್ಳಲು ಸುಕಾಲವಿದು.
ಸಿಂಹ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ರಾಶಿಯ ಅಧಿಪತಿ ಷಷ್ಠದಲ್ಲಿರುವನು. ವೈದ್ಯವೃತ್ತಿಯಲ್ಲಿ ಅಪವಾದ ಸಾಧ್ಯವಾಗಲಿದೆ. ಶತ್ರುಗಳು ಹುಟ್ಟಿಕೊಳ್ಳುವರು. ಧನದ ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ವೃತ್ತಿಯಲ್ಲಿ ಬರುವ ಯಾವುದೇ ಹೊಸ ಜವಾಬ್ದಾರಿಗಳನ್ನು ಸಂಕೋಚವಿಲ್ಲದೆ ಒಪ್ಪಿಕೊಳ್ಳಿರಿ. ಸರ್ಕಾರದ ಕಾರ್ಯದಲ್ಲಿ ವಿಘ್ನಗಳು. ಇದು ನಿಮ್ಮ ಏಳಿಗೆಗೆ ಕಾರಣವಾಗಿರುತ್ತದೆ. ಪ್ರಭಾವಶಾಲಿ ವ್ಯಕ್ತಿಯೊಬ್ಬರ ಭೇಟಿಯಾಗಬಹುದು. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಮೂಡುತ್ತದೆ. ಸಂಗಾತಿಗೆ ಹಿರಿಯರ ಆಸ್ತಿ ಒದಗುವ ಸಂದರ್ಭವಿದೆ. ಆಲಸ್ಯದಿಂದ ಯಾವ ಹೊಸ ಯೋಚನೆಯನ್ನು ಮಾಡಲಾಗದು. ಸಂಗಾತಿಯ ಮೇಲೆ ಪ್ರೀತಿ ಕಡಿಮೆಯಾಗುವುದು.
ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ರಾಶಿಯ ಅಧಿಪತಿ ಸೂರ್ಯನ ಜೊತೆ ಪಂಚಮದಲ್ಲಿ ಇರುವನು. ಬೌದ್ಧಿಕ ಕಸರತ್ತಿಗೆ ನಿಮಗೆ ಜಯವಾಗಲಿದೆ. ನಿಮ್ಮ ತೂಕದ ಮಾತು ಮಾತು ನಿಮಗೆ ಗೌರವವನ್ನು ತರುತ್ತದೆ. ಸ್ನೇಹಿತರೊಡನೆ ವ್ಯವಹಾರ ಮಾಡುವಾಗ ಸಂಶಯ, ಅಪನಂಬಿಕೆ ಬಾರದಂತೆ ಸಾಕಷ್ಟು ಎಚ್ಚರವಹಿಸಿರಿ. ಸಮಯವನ್ನು ವ್ಯರ್ಥ ಮಾಡುವ ಸಂಭವವಿದೆ. ನಿಮ್ಮ ಸ್ವಂತ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಶುಕ್ರನು ಉಚ್ಚ ರಾಶಿಗೆ ಹೋಗಲಿದ್ದು ಕಲಾವಿದರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ದಾಂಪತ್ಯ ಸುಖಮಯ. ನವದಾಂಪತ್ಯಕ್ಕೆ ಶುಭಕಾಲವಿದು. ಉನ್ನತ ಅಧ್ಯಯನಕ್ಕೆ ತೊಡಗುವವರಿಗೆ ಸೂಕ್ತ ಸೌಲಭ್ಯ ದೊರೆಯುತ್ತದೆ.
ತುಲಾ ರಾಶಿ: ಜನವರಿಯ ಕೊನೆಯ ವಾರದಲ್ಲಿ ರಾಶಿಯ ಅಧಿಪತಿ ಉಚ್ಚನಾಗಿ ಷಷ್ಠದಲ್ಲಿ ಇದ್ದು ಮೂಗಿಗೆ ತುಪ್ಪ ಸವರಿದ ಸ್ಥಿತಿ ಇರಲಿದೆ. ಸಿಗುತ್ತದೆ ಎಂಬ ಕನಸು ಕಾಣುತ್ತಿದ್ದಂತೆ ಮಾಯವಾಗುತ್ತದೆ. ವಿದೇಶದಲ್ಲಿದ್ದು ಸಂಗಾತಿಯನ್ನು ಹುಡುಕುವಿರಿ. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೊಸ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಉದ್ಯೋಗದಲ್ಲಿ ವರ್ಚಸ್ಸನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂಗಾತಿಯು ನಿಮ್ಮ ಬೆಂಬಲಕ್ಕೆ ಇರುವರು. ಸಂಸಾರದಲ್ಲಿ ಕಲಹ ಏರ್ಪಡಬಹುದು. ಗುರು ಅಷ್ಟಮದಲ್ಲಿ ಇದ್ದು ಹಿರಿಯರಿಂದ ಅಪಮಾನವಾಗುವಂತೆ ಮಾಡುವನು. ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ತಪಸ್ವಿಗಳ ಸಹವಾಸ ಮಾಡಿಸುವನು.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಗೆ ರಾಶಿಯ ಅಧಿಪತಿ ಅಷ್ಟಮ ಆಸ್ಥಾನದಲ್ಲಿ ಇದ್ದಾನೆ. ಚಿಕಿತ್ಸೆ, ಅಥವಾ ಗಾಯಗಳು ಆಗುವುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆ ಇರುತ್ತದೆ. ಸಹೋದ್ಯೋಗಿಗಳ ಜೊತೆ ವಾದ-ವಿವಾದಗಳು ಖಂಡಿತಬೇಡ. ಪೊಲೀಸ್ ಹುದ್ದೆಯಲ್ಲಿರುವ ಕೆಲವರಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ಶುಕ್ರನು ಪಂಚಮದಲ್ಲಿ ಇರಲಿದ್ದು ವಿದ್ಯಾಭ್ಯಾಸದಲ್ಲಿ ಮುನ್ನಡೆ. ಮಕ್ಕಳಿಂದ ಸಂತೋಷದ ಸಮಾಚಾರ ಗೊತ್ತಾಗುವುದು. ಹಣದ ಹರಿವು ಸಾಮಾನ್ಯವಾಗಿದ್ದರೂ ಖರ್ಚು ನಿಭಾಯಿಸುವುದು ಬಹಳ ಉತ್ತಮ. ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಪ್ರಪಂಚದಲ್ಲಿ ಹೆಚ್ಚು ಪ್ರಗತಿ ಕಾಣುವಿರಿ. ಕಳೆದು ಹೋಗಿದ್ದ ಸರ್ಕಾರಿ ದಾಖಲೆಗಳು ಈಗ ಸಿಗುವ ಸಾಧ್ಯತೆಗಳಿವೆ. ವಿವಾಹಕ್ಕೆ ಯೋಗ್ಯ ಸಮಯವಾಗಿದೆ.
ಧನು ರಾಶಿ: ಇದು ತಿಂಗಳ ಕೊನೆಯ ವಾರವಾಗಿದ್ದು ರಾಶಿಯ ಅಧಿಪತಿ ಷಷ್ಠದಲ್ಲಿ ಇರಲಿದ್ದಾನೆ. ಅಪಮಾನ, ದುಃಖಗಳು ಮತ್ತೆ ಮತ್ತೆ ಬರುವುದು. ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ನಿಭಾಯಿಸಬೇಕಾಗುವುದು. ಉದ್ಧಟತನದಿಂದಲೋ ಆಲಸ್ಯದಿಂದಲೋ ಕೆಲಸ ಮಾಡದೇ ಇದ್ದರೆ ಕಷ್ಟವಾಗುವುದು. ಸರ್ಕಾರದಿಂದ ಬರಬೇಕಾದ ಹಳೆ ಬಾಕಿಗಳು ಈಗ ಬಂದು ಸೇರುತ್ತವೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚೇತರಿಕೆ ಕಂಡು ಸಂತಸವಾಗುತ್ತದೆ. ಚತುರ್ಥದಲ್ಲಿ ಶುಕ್ರನು ತಾಯಿಗೆ ಸೌಖ್ಯವನ್ನು ಕೊಡುವನು. ನಿಮ್ಮ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿರಿ. ಸರ್ಕಾರದಿಂದ ಬರಬೇಕಾಗಿದ್ದ ಎಲ್ಲ ರೀತಿಯ ಸಹಾಯಧನ ಬರುತ್ತದೆ. ವಾಹನ ಖರೀದಿಗೆ ಪ್ರೋತ್ಸಾಹ ನೀಡುವ ಸಂಭ ಹೆಚ್ಚು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಅವಕಾಶ ಒದಗುತ್ತದೆ. ನಿಮ್ಮ ಕಾರ್ಯಕ್ಷಮತೆಯಿಂದ ನಿಮ್ಮ ಸಂಸ್ಥೆಗೆ ಲಾಭವಾಗುತ್ತದೆ.
ಮಕರ ರಾಶಿ; ಜನವರಿ ತಿಂಗಳ ಕೊನೆಯ ವಾರವು ನಡೆಯುತ್ತಿದ್ದು ಈ ವಾರ ರಾಶಿ ಅಧಿಪತಿ ದ್ವಿತೀಯದಲ್ಲಿ ಇದ್ದು ಮನೆಯ ಹಿರಿಯರ ಬಗ್ಗೆ ಗೌರವ ಪ್ರೀತಿ ಇರಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡುತ್ತದೆ. ನಡವಳಿಕೆಯಿಂದ ಎಲ್ಲರ ಮನಗೆದ್ದು ನಿಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಿರಿ. ತೃತೀಯದಲ್ಲಿ ಶುಕ್ರನು ಇದ್ದು ಉಚ್ಚಕ್ಷೇತ್ರದಲ್ಲಿ ಸಹೋದರರಿಂದ ನಿಮಗೆ ಲಾಭಾಂಶ ಸಿಗುವಂತೆ ಮಾಡುವನು. ವಿದೇಶಿ ಕಚೇರಿಗಳನ್ನು ನಡೆಸುತ್ತಿರುವವರು ಆ ಜಾಗವನ್ನು ಕೊಂಡು ಸ್ವಂತ ಕಚೇರಿಗಳನ್ನು ಮಾಡಿಕೊಳ್ಳುವ ಯೋಗವಿದೆ. ಆರ್ಥಿಕಸ್ಥಿತಿಯು ಸ್ವಲ್ಪ ಸುಧಾರಣೆಯತ್ತ ಹೊರಳುತ್ತದೆ. ಸೂರ್ಯ ಮತ್ತು ಬುಧರ ಯೋಗವಿರುವ ಕಾರಣ ವೈದ್ಯ ಅಥವಾ ಬೋಧಕ ವೃತ್ತಿಯವರಿಗೆ ಶುಭ. ಕೆಲವು ರಾಜಕೀಯ ವ್ಯಕ್ತಿಗಳಿಗೆ ಸಂಘ-ಸಂಸ್ಥೆಗಳಲ್ಲಿ ಉತ್ತಮ ಹುದ್ದೆ ದೊರೆಯುತ್ತದೆ. ಕಾನೂನಿನ ತೊಡಕುಗಳು ನಿವಾರಣೆಯಾಗುತ್ತವೆ.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವಾರ ಶುಕ್ರನ ಬದಲಾವಣೆಯಿಂದ ಶುಭ. ದ್ವಿತೀಯದಲ್ಲಿ ಶುಕ್ರನಿದ್ದು ಸಂಪತ್ತನ್ನು ತಂದುಕೊಡುವನು. ನಿಮ್ಮದಲ್ಲದುದೂ ನಿಮ್ಮದಾಗಬಹುದು. ಸಹೋದರರು ನಿಮಗೆ ಸಾಕಷ್ಟು ವಿರೋಧವನ್ನು ಮಾಡುವರು. ಹತ್ತಾರು ವರ್ಷದ ಹಿಂದೆ ಕೂಡಿಟ್ಟ ಹಣವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸುವಿರಿ. ಖರ್ಚಿಗೆ ತಕ್ಕಂತೆ ಆದಾಯ ಬರುವುದರಿಂದ ಹಣಕಾಸಿನ ಸ್ಥಿತಿ ಸಮತೋಲನವಾಗಿರುತ್ತದೆ. ಕುಟುಂಬದಲ್ಲಿ ಸ್ತ್ರೀಯರದೇ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ವಿದ್ಯುತ್ ಉತ್ಪಾದಕರಿಗೆ ಸರ್ಕಾರದಿಂದ ಬರಬೇಕಿದ್ದ ಹಣ ಈಗ ಬರುತ್ತದೆ. ತಂದೆಯ ಆರೋಗ್ಯ ವಿಚಾರದಲ್ಲಿ ಗಂಭೀರತೆ ಕಾಣಿಸುವುದು. ವೈದ್ಯರ ಚಿಕಿತ್ಸೆ ಅವಶ್ಯವಾದೀತು. ವ್ಯಾಪಾರದಲ್ಲಿ ಮಧ್ಯವರ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭ.
ಮೀನ ರಾಶಿ: ಜನವರಿಯ ಕೊನೆಯ ವಾರ ಶುಭ. ರಾಶಿಗೆ ಶುಕ್ರನ ಪ್ರವೇಶವಾಗಲಿದ್ದು ಸಕಲ ಭೋಗಗಳನ್ನು ಅನುಭವಿಸುವಿರಿ. ವಿಕೃತವಾದ ಅಸೆಗಳನ್ನು ತೀರಿಸಿಕೊಳ್ಳುವ ಅವಕಾಶ ನಿಮಗೆ ಇರುವುದು. ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನಿಯಮ ಬದ್ಧವಾಗಿ ಮಾಡಿ ಮುಗಿಸುವುದು ಉತ್ತಮ. ರಾಶಿ ಅಧಿಪತಿ ಶುಕ್ರನ ರಾಶಿಯಲ್ಲಿ ಇರುವ ಕಾರಣ ಪ್ರತಿಕೂಲನಾಗಿದ್ದರೂ ಕೆಲವು ಅನುಕೂಲತೆಯನ್ನು ಮಾಡುವನು. ವ್ಯಾಪಾರ ವ್ಯವಹಾರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಬಹಳ ಶ್ರಮಪಡುವಿರಿ. ಕೆಲವರಿಗೆ ಸಂಸ್ಥೆಯ ಸಲಹೆಗಾರರಾಗಿ ನೇಮಕಗೊಳ್ಳುವ ಅವಕಾಶವಿದೆ. ಎಲ್ಲಾ ವಿಚಾರಗಳಲ್ಲೂ ನಿಮ್ಮದೇ ಅಭಿಪ್ರಾಯ ಹೇಳುವುದಕ್ಕಿಂತ ಇತರರ ಸಲಹೆಗೂ ಬೆಲೆ ಕೊಡಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸ ಕಾಣಿಸುವುದು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆ.
ಲೋಹಿತ ಹೆಬ್ಬಾರ್ – 8762924271 (what’s app only)