Weekly Horoscope in Kannada: ವಾರ ಭವಿಷ್ಯ: ನ 17 ರಿಂದ 23 ರವರೆಗೆ ವಾರ ಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 17, 2024 | 1:02 AM

ಇದು ನವೆಂಬರ್ ತಿಂಗಳ ಮೂರನೇ ವಾರವಿದಾಗಿದೆ. 17-11-2024 ರಿಂದ 23-11-2024ರವರೆಗೆ ಇರಲಿದೆ. ಗ್ರಹಗಳು ರಾಶಿಯನ್ನು ಬದಲಾಯಿಸದೇ ಇದ್ದರೂ ಇದ್ದ ಸ್ಥಾನದಲ್ಲಿ ತಮ್ಮ ಮಿತ್ರ, ಶತ್ರುಗಳ ಸ್ಥಾನದಲ್ಲಿ ಇರುವ ಕಾರಣ ಆಕಸ್ಮಿಕ ಕಷ್ಟ ನಷ್ಟ, ಸುಖ, ಸಂಪತ್ತು ಬಂದು ಹೋಗಲಿದೆ. ಯಾವುದೂ ಶಾಶ್ವತವಾಗಿ ಇರದ ಕಾರಣ ಧೈರ್ಯದಿಂದ ನಿಲ್ಲುವುದು ನಿಮ್ಮದಾಗಲಿ.

Weekly Horoscope in Kannada: ವಾರ ಭವಿಷ್ಯ: ನ 17 ರಿಂದ 23 ರವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ನ 17 ರಿಂದ 23 ರವರೆಗೆ ವಾರ ಭವಿಷ್ಯ
Follow us on

ಇದು ನವೆಂಬರ್ ತಿಂಗಳ ಮೂರನೇ ವಾರವಿದಾಗಿದೆ. 17-11-2024 ರಿಂದ 23-11-2024ರವರೆಗೆ ಇರಲಿದೆ. ಗ್ರಹಗಳು ರಾಶಿಯನ್ನು ಬದಲಾಯಿಸದೇ ಇದ್ದರೂ ಇದ್ದ ಸ್ಥಾನದಲ್ಲಿ ತಮ್ಮ ಮಿತ್ರ, ಶತ್ರುಗಳ ಸ್ಥಾನದಲ್ಲಿ ಇರುವ ಕಾರಣ ಆಕಸ್ಮಿಕ ಕಷ್ಟ ನಷ್ಟ, ಸುಖ, ಸಂಪತ್ತು ಬಂದು ಹೋಗಲಿದೆ. ಯಾವುದೂ ಶಾಶ್ವತವಾಗಿ ಇರದ ಕಾರಣ ಧೈರ್ಯದಿಂದ ನಿಲ್ಲುವುದು ನಿಮ್ಮದಾಗಲಿ.

ಮೇಷ ರಾಶಿ; ನವೆಂಬರ್ ತಿಂಗಳ ಮೂರನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ರವಿಯ ಬದಲಾವಣೆಯಿಂದ ಪೂರ್ಣ ಶುಭವಿಲ್ಲ. ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ನಿಮ್ಮನ್ನು ಬಂದು ಸೇರಲಿರುವ ಸಂಪತ್ತನ್ನು ಉತ್ತಮಕಾರ್ಯಕ್ಕೆಂದು ವಿನಿಯೋಗಿಸಿ. ಸತ್ಫಲವನ್ನು ಪಡಯಬಹುದಾಗಿದೆ. ತಂದೆಯ ಬಗ್ಗೆ ಅಪನಂಬಿಕೆ ಹೆಚರಚಾಗುವುದು. ವ್ಯಕ್ತಿತ್ವದಿಂದ ಸಕ್ಕರೆ ಇರುವೆಗಳು ಬಂದು ಮುತ್ತುವಂತೆ ನಿಮ್ಮನ್ನು ಬಂದು ಸೇರುವರು. ಅಕಾಲದಲ್ಲಿ ಆಸ್ಥಾನದಲ್ಲಿ ಉಂಟಾದ ಪ್ರೀತಿಯು ಕಂಟಕವನ್ನು ತಂದೀತು. ಒಬ್ಬರೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಹೋಗಬೇಡಿ. ಸಮಾಧನದಿಂದ ಬಂದುದನ್ನು ಎದುರಿಸಿ. ಸಹನೆಯನ್ನು ಬಿಟ್ಟು ಮನಸ್ಸು ಚಂಚಲವಾಗದಿರಲಿ. ಸುಬ್ರಹ್ಮಣ್ಯನು ಭಕ್ತರನ್ನು ಕೈ ಬಿಡಲಾರ.

ವೃಷಭ ರಾಶಿ; ಈ ವಾರದಲ್ಲಿ ನಿಮಗೆ ಶುಭ. ರವಿಯು ಮಿತ್ರನ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನೇ ನೋಡುತ್ತಾನೆ. ಸಾಲ ನೀಡುವಾಗ ಪೂರ್ವಾಪರ ಆಲೋಚನೆ ಇರಲಿ. ಸಾಲವು ಮರಳಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ವಾರ ಹತ್ತಾರು ಕಷ್ಟಗಳು ಕಣ್ಮುಂದೆ ಕಂಡರೂ ಬೆಳಗಿನ ಸೂರ್ಯನ ಕಿರಣಕ್ಕೆ ಮಂಜು ಕರಗುವಂತೆ ಕರಗಿಹೋಗುತ್ತದೆ‌. ಕುಟುಂಬದವರ ಜೊತೆ ಹೆಚ್ಚು ಕಾಲವನ್ನು ಕಳೆಯಲು ಪ್ರಯತ್ನಿಸಿ. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ನಿಮ್ಮ ಒಡನಾಟ ದುಃಖದಲ್ಲಿರುವವರಿಗೆ ಸಂತೋಷವನ್ನು ನೀಡುತ್ತದೆ. ಕಾರ್ಯಸ್ಥಾನದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ಸ್ತ್ರೀಯರಿಗೆ ಅವಮಾನ ಆಗುವುದು.

ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ವಾರದಲ್ಲಿ ಅಶುಭ.‌ ಷಷ್ಠಕ್ಕೆ ಸೂರ್ಯನ ಪ್ರವೇಶವಾಗಲಿದ್ದು ಶತ್ರುಗಳ ಬಗ್ಗೆ ಅಧಿಕ ಭಯ. ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ. ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ಸಂತೋಷದ ಬೆಲೆಯನ್ನು ಅರಿತುಕೊಳ್ಳುವಿರಿ. ಸಭೆ, ಸಮಾರಂಭಗಳಿಗೆ ಭೇಟಿ ನೀಡಿ, ಮನಸ್ಸನ್ನು ನೆಮ್ಮದಿಯ ದಡಕ್ಕೆ ಸೇರುವಿರಿ. ಹಿಂದೆ ಕೂಡಿಟ್ಟ ಹಣವು ಕೈ ಸೇರುವ ಕಾಲವಾಗಿದೆ. ಕಾರ್ಯದ ಒತ್ತಡದಿಂದ ಕಛೇರಿಯಲ್ಲಿ ಹೆಚ್ಚು ಕಾಲ ಕಳೆಯಬೇಕಾಗಿಬರಬಹುದು. ಇದೇ ಕಾರಣಕ್ಕೆ ಮನೆಯಲ್ಲಿ ಉದ್ವಿಗ್ನತೆಯುಂಟಾಗುವುದು. ಹೊರಗೆ ಭೋಜನ ಮಾಡುವ ಸ್ಥಿತಿ. ಮಹಾವಿಷ್ಣುವು ಭಜಕರನ್ನು ಪೋಷಿಸುತ್ತಾನೆ.

ಕರ್ಕಾಟಕ ರಾಶಿ: ನವೆಂಬರ್ ತಿಂಗಳ ಮೂರನೇ ವಾರದಲ್ಲಿ ನಿಮಗೆ ಶುಭ.‌ ದಂಪತಿಗಳ ನಡುವೆ ಕಲಹವೆದ್ದು ಕೊನೆಗೆ ಪೂರ್ವಕೃತ್ಯವನ್ನು ಸ್ಮರಿಸಕೊಂಡಲ್ಲಿ ವಿನೋದದಲ್ಲಿ ಮುಕ್ತಾಯಗೊಳ್ಳುವುದು. ಉನ್ನತ ಶಿಕ್ಷಣಕ್ಕೆ ಸರಿಯಾದ ಚೌಕಟ್ಟು ಸಿಗಲಿದೆ. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಬೆಳಗಿನಿಂದ ಸಂಜೆಯ ತನಕ ಉಲ್ಲಾಸ, ಉತ್ಸಾಹ, ಲವಲವಿಕೆ ನಿಮ್ಮದೇ ಆಗಿರುತ್ತದೆ. ವಿನಾಕಾರಣ ಹಣದ ವ್ಯಯದ ಸಾಧ್ಯತೆ ಇದೆ. ಮುಂಜಾಗ್ರತೆಯನ್ನು ಇರಿಸಿಕೊಳ್ಳಿ. ಪ್ರತಿ ಸ್ಥಿತಿಯನ್ನು ತಗ್ಗಿಸುವ ಸಾಧ್ಯತೆ ಇದೆ.

ಸಿಂಹ ರಾಶಿ: ನಿಮಗೆ ಈ ವಾರ ಹಲವು ನಿರೀಕ್ಷೆಗಳು ಈಡೇರುವುವು. ರಾಶಿ ಅಧಿಪತಿ ಸೂರ್ಯನು ನಿಮ್ಮ ಕುಟುಂಬಕ್ಕೆ ದಾರಿ ದೀಪವಾಗುವನು. ಸಿಂಹದಂತೆ ಹಿಂದ ಆಗಿಹೋದ ಮಹತ್ಕಾರ್ಯಗಳ ಅವಲೋಕನ ಮಾಡಿಕೊಳ್ಳಿ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಸಂಬಂಧಿಕರ ಹಾಗೂ ಸ್ನೇಹಿತರಿಂದ ಕೂಡಿಕೊಂಡು ಮನಬಿಚ್ಚಿ ಹರಟೆ ಹೊಡೆದು ಹೋಗುತ್ತೀರಿ. ಈ ವಾರ ಯಾರನ್ನಾದರೂ ಪ್ರೀತಿಸಿದ್ದರೆ ತನ್ನ ದೊಡ್ಡ ಹೆಜ್ಜೆಯನ್ನು ಇಟ್ಟು ತನ್ನ ಸರಿಯಾದ ರೂಪವನ್ನು ತೋರಿಸುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ವಿಶ್ವಾಸಃ ಫಲದಾಯಕಃ ಎನ್ನುವ ಮಾತನ್ನು ನಂಬಿ ನಡೆಯುವವರು. ಶಿವನನ್ನು ಅನನ್ಯ ಮನಸ್ಸಿನಿಂದ ಭಜಿಸಿ, ಶ್ರಮಕ್ಕೆ ತಕ್ಕ ಫಲವನ್ನು ಕೊಡುತ್ತಾನೆ.

ಕನ್ಯಾ ರಾಶಿ: ನವೆಂಬರ್ ತಿಂಗಳ ಮೂರನೇ ವಾರದಲ್ಲಿ ನಿಮಗೆ ರವಿಯ ರಾಶಿಯ ಬದಲಾವಣೆಯಿಂದ ಮಿಶ್ರಫಲ. ವಾರದಲ್ಲಿ ದೇಹಾಯಾಸದ ಕರ್ಮಗಳನ್ನು ಕೈಗೆತ್ತಿಕೊಳ್ಳುವುದು ಉಚಿತವಲ್ಲ. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಈ ವಾರ ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ಉಭಯ ಸಂಕಟದಲ್ಲಿ ನೋಯಬೇಕಾಗಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆ ಅನಿಸಬಹುದು. ಚೆನ್ನಾಗಿ ಮಾತನಾಡುವುದೊಂದೇ ನಿಮಗೀಗ ಬೇಕಾಗಿದ್ದು. ಹಣದ ವಿಚಾರದಲ್ಲಿ ಹಾಸಿಗೆಯಿದ್ದಷ್ಟೆ ಕಾಲು ಚಾಚುವುದು ಸುಖ. ಮಹಾವಿಷ್ಣು ಶರಣಾದವರನ್ನು ಪೊರೆಯುತ್ತಾನೆ.

ತುಲಾ ರಾಶಿ; ರಾಶಿ ಚಕ್ರದ ಏಳನೇ ರಾಶಿವರಿಗೆ ಈ ವಾರದಲ್ಲಿ ಮಿಶ್ರಫಲ. ರಾಶಿ ಅಧಿಪತಿ ತೃತೀಯದಲ್ಲಿ ಇರುವ ಕಾರಣ ಒಂದು ಮಟ್ಟಿನ ಫಲವನ್ನು ಪಡೆದರೂ ತೃಪ್ತಿ ಇರದು. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡಿಸುವಂತೆ ಪ್ರೇರಿಸಿತ್ತು. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ಈ ವಾರದಲ್ಲಿ ತೀರ್ಥಯಾತ್ರೆಯ ಸಂದರ್ಭ ಬರುವುದು. ಎದುರಾಗಬಹುದು. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ಹಳೆಯ ಘಟನೆಯನ್ನು ನೆನೆದು ಕೊರಗಬೇಡಿ. ನಿಮ್ಮ ಹರುಷಕ್ಕೆ ಹತ್ತರು ದಾರಿಗಳಿವೆ.

ವೃಶ್ಚಿಕ ರಾಶಿ: ನಿಮಗೆ ಈ ವಾರದಲ್ಲಿ ಹೊರಗಿನಿಂದ ಶುಭವಿದ್ದರೂ ಒಳಗೆ ಅಶುಭ. ದೈಹಿಕವಾಗಿ ಅನೇಕ ಬಾಧೆಗಳು ಕಾಣಿಸೀತು. ಪ್ರವಾಹದ ವಿರುದ್ಧ ಈಜುವುದು ಅಸಾಧ್ಯ. ಪ್ರವಾಹದ ದಿಕ್ಕಿನಲ್ಲೇ ಹೋದರೆ ದಡಸೇರಲು ಏನಾದರೂ ಆಧಾರ ಸಿಕ್ಕೀತು. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹಠ ಬೇಡ. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಅವರಾಡುವ ಮಾತುಗಳಿಂದ ಉದ್ವೇಗಕ್ಕೆ ಒಳಗಾಗಲು ಹೋಗಬೇಡಿ. ಈ ವಾರ ಕಛೇರಿಯಲ್ಲಿ ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿ ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದರೆ ನೀವು ಯಾರೆಂದು ತಿಳಿಯುತ್ತದೆ. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಏನು ಮಾಡುತ್ತಿದ್ದೇನೆ ಎಂದು ಸರಿಯಾಗಿ ಗ್ರಹಿಸಿ ಮುನ್ನಡಯಿರಿ.

ಧನು ರಾಶಿ: ನವೆಂಬರ್ ತಿಂಗಳ ಮೂರನೇ ವಾರ ರವಿಯ ಬದಲಾಬಣೆಯಿಂದ ಅನನುಕೂಲವಾಗಲಿದೆ. ನಿಮ್ಮ ಹಿಂದೆ ಕಹಿಯಾದ ಮಾತುಗಳು ಕೇಳಿಬರಬಹುದು. ಅಂತಹ ಮಾತುಗಳಿಗೆ ನಿರ್ಲಕ್ಷ್ಯವೇ ಉತ್ತರ. ಸಾತ್ವಜನಿಕವಾಗಿ ತೆಗೆದುಕೊಳ್ಳುವ ನಿಮ್ಮ ನಿರ್ಧಾರವು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಈ ವಾರ ಆಹಾರವನ್ನು ಮನಸೋ ಇಚ್ಛೆ ಸೇವಿಸಿ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮ ಆಹಾರವು ನಿಮ್ಮ ಮನಸ್ಸನ್ನೂ ಸರಿಯಾಗಿರಿಸಬಲ್ಲದು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಈ ವಾರದಲ್ಲಿ ಹೆಚ್ಚು ಸಮಯವನ್ನು ಸುಮ್ಮನೇ ವ್ಯರ್ಥಮಾಡುವಿರಿ. ಎಲ್ಲಿ ವ್ಯರ್ಥವಾಗುತ್ತಿದೆ ಎನ್ನುವುದನ್ನು ಗಮನಿಸಿಕೊಳ್ಳಿ. ನಿಮ್ಮನ್ನು ಇಷ್ಟಪಡುವವರೊಂದಿಗೆ ಸ್ವಲ್ಪ ಕಾಲ ಕಳೆಯಿರಿ. ಮನಸ್ಸು ಹಗುರಾದೀತು.

ಮಕರ ರಾಶಿ: ನಿಮಗೆ ಈ ತಿಂಗಳ ಮೂರನೇ ವಾರದಲ್ಲಿ ಶುಭ. ರವಿಯ ರಾಶಿ ಬದಲಾವಣೆಯಿಂದ ಸರ್ಕಾರದಿಂದ ಬರುವ ಹಣವು ಬರಲಿದೆ. ಜ್ಞಾನವಂತರಾದ ನೀವು ಸದಾ ಪ್ರಯತ್ನಶೀಲರೇ. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ಆಪದ್ಧನ ಇಂದು ತನ್ನ ಅಸ್ತಿರ್ವವನ್ನು ತೋರಿಸಲಿದೆ‌. ಇದರೊಂದಿಗೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಈ ವಾರದಲ್ಲಿ ಬಂಧುಗಳ ಬೆಂಬಲ ನಿಮ್ಮ ಕಷ್ಟದ ಭಾರವನ್ನು ಕಡಿಮೆ ಮಾಡುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಶುಭವಾರ್ತೆ ಬರುವ ಸಾಧ್ಯತೆ ಇದೆ.

ಕುಂಭ ರಾಶಿ: ಈ ವಾರ ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಶುಭ. ರವಿಯು ನಿಮಗೆ ದಶಮಕ್ಕೆ ಬಂದಿದ್ದು ವೃತ್ತಿಯಲ್ಲಿ ಉತ್ತಮ ಬೆಳವಣಿಗೆಯಾಗಲಿದೆ. ಪೂರ್ವಾಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಒಳಗೇನಿದೆ ಎಂದು ತಿಳಿಯಲಾಗದ ನಿಮ್ಮ ಸ್ವಭಾವ ಇಂದು ಜಗಜ್ಜಾಹಿರಾಗಲಿದೆ. ನಿಮ್ಮ ನಂಬಿಕೆ ಇಂದು ಫಲವನ್ನು ಕೊಡುತ್ತದೆ. ವ್ಯಸನಕ್ಕೆ ಬಲಿಯಾಗುವ ಮೊದಲು ಯೋಚಿಸಿ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಈ ವಾರ ನಿಮಗೆ ಅನಾರೋಗ್ಯವೆದುರಾದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯಿರಿ. ಅಸಡ್ಡೆ ಒಳ್ಳೆಯದಲ್ಲ. ರಾಮದೂತ ಹನುಮಂತನನ್ನು ಧ್ಯಾನಿಸಿ, ಪೂಜಿಸಿ. ಬಲವನ್ನು ಕೊಟ್ಟು ನಿಮ್ಮ ಕಾರ್ಯ ಸಾಧ್ಯವಾಗುವಂತೆ ಮಾಡುವನು.

ಮೀನ ರಾಶಿ: ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಶುಭ.‌ ರವಿಯು ನವಮಕ್ಕೆ ಬರಲಿದ್ದಾನೆ. ಸರ್ಕಾರಿ‌ ಕೆಲಸಕ್ಕೆ ಪ್ರಯತ್ನಿಸಿದರೆ ಸಿಗಲಿದೆ. ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಆರ್ಥಿಕಸ್ಥಿತಿ ಸುಧಾರಿಸಲಿದೆ. ಮಾತನಾಡುವಾಗ ಸಮಯ, ಸಂದರ್ಭ, ವ್ಯಕ್ತಿಗಳನ್ನು ಗಮನಿಸಿಕೊಳ್ಳಿ. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ಈ ವಾರ ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಅಪರೂಪದ ಅತಿಥಿಗಳ ಆಗಮನ ನಿಮ್ಮ ಕಾರ್ಯಕ್ಕೆ ಅಡ್ಡಿಯುಂಟುಮಾಡಬಹುದು. ಬೇಸರಿಸದೇ ಕರ್ತವ್ಯವೆಂದು ಅವರೊಂದಿಗೆ ಮಾತನಾಡಿ. ಮಹತ್ತರವಾದ ಮಾರ್ಗವೂ ತೆರೆದುಕೊಳ್ಳಬಹುದು. ಕುಲದೇವರ ಅನುಗ್ರಹವನ್ನು, ಆರಾಧಿಸಿಪಡೆದುಕೊಳ್ಳಿ.

ಲೋಹಿತ ಹೆಬ್ಬಾರ್-8762924271 (what’s app only)