AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26 ರಿಂದ ಮೇ 02 ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ

ಏಪ್ರಿಲ್ 26 ರಿಂದ ಮೇ 02 ರವರೆಗಿನ ಈ ವಾರ ಪ್ರೇಮ ಜೀವನದಲ್ಲಿ ಸೂಕ್ಷ್ಮತೆ ಮತ್ತು ಪ್ರಬುದ್ಧತೆ ಇರಲಿದೆ. ಪ್ರತಿ ರಾಶಿಯವರಿಗೆ ಪ್ರೀತಿಯಲ್ಲಿ ವಿಭಿನ್ನ ಅನುಭವಗಳು ಎದುರಾಗಬಹುದು. ಮಾತುಕತೆ, ತಾಳ್ಮೆ ಮತ್ತು ತಿಳುವಳಿಕೆಯು ಸಂಬಂಧಗಳನ್ನು ಬಲಪಡಿಸಲು ಸಹಕಾರಿ. ಸಣ್ಣ ವಿಷಯಗಳಿಗೆ ವಾಗ್ವಾದ ತಪ್ಪಿಸಿ, ಪರಸ್ಪರರ ಭಾವನೆಗಳಿಗೆ ಗೌರವ ನೀಡಿ. ನಿಮ್ಮ ಪ್ರೇಮ ಸಂಬಂಧಗಳು ಹೊಸ ಆಯಾಮ ಪಡೆಯಲು ಈ ವಾರ ಸಹಾಯಕವಾಗಿದೆ.

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26 ರಿಂದ ಮೇ 02 ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ
Love Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 24, 2026 | 6:11 PM

Share

ಏಪ್ರಿಲ್ 26ರಿಂದ ಮೇ 02ರವರೆಗಿನ ಕೊನೆಯ ವಾರವಾಗಿದ್ದು ಪ್ರೇಮ ಬಹಳ ಸೂಕ್ಷ್ಮವಾಗಬಹುದು. ಎಂದಿನಂತೆ ಎಲ್ಲ ಕಾಲದಲ್ಲಿ ಅದನ್ನು ನೋಡಲಾಗದು. ಅದಕ್ಕೆ ಕಾರಣ ಪ್ರಬುದ್ಧತೆ ಅದರಲ್ಲಿ ಇರಲಿದೆ. ಯಾಮಾರಿದರೆ ದುಃಖಿಸಬೇಕಾಗುವುದು.

​ಮೇಷ:

​ನಿಮ್ಮ ರಾಶ್ಯಾಧಿಪತಿ ಮಂಗಳನ ಪ್ರಭಾವದಿಂದ ಪ್ರೇಮ ಜೀವನದಲ್ಲಿ ತೀವ್ರತೆ ಇರಲಿದೆ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೂ ವಾಗ್ವಾದ ಉಂಟಾಗಬಹುದು, ಆದ್ದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ. ಅವಿವಾಹಿತರಿಗೆ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಹೊಸ ಆಕರ್ಷಣೆ ಉಂಟಾಗುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ ಮನಸ್ತಾಪಗಳು ತಿಳಿಯಾಗಿ ಪ್ರೀತಿ ಹೆಚ್ಚಾಗುತ್ತದೆ.

ವೃಷಭ:

​ಶುಕ್ರನ ಅನುಗ್ರಹದಿಂದ ಈ ವಾರ ಅತ್ಯಂತ ರೋಮ್ಯಾಂಟಿಕ್ ಆಗಿರಲಿದೆ. ದಂಪತಿಗಳ ನಡುವೆ ಇದ್ದ ಹಳೆಯ ಕಹಿ ಘಟನೆಗಳು ಮರೆಯಾಗಿ ಹೊಸ ಆತ್ಮೀಯತೆ ಚಿಗುರಲಿದೆ. ಪ್ರೇಮಿಗಳು ಪ್ರವಾಸಕ್ಕೆ ಯೋಜಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಶ್ರಮವನ್ನು ಗುರುತಿಸಿ ಪ್ರಶಂಸಿಸಲಿದ್ದಾರೆ. ಒಂಟಿಯಾಗಿರುವವರಿಗೆ ಅವರ ಮನಸ್ಸಿಗೆ ಒಪ್ಪುವ ವ್ಯಕ್ತಿ ಭೇಟಿಯಾಗುವ ಯೋಗವಿದೆ.

​ಮಿಥುನ:

​ಬುಧನ ಚಲನೆಯಿಂದಾಗಿ ಸಂವಹನವೇ ನಿಮ್ಮ ಪ್ರೀತಿಯ ಬಲವಾಗಲಿದೆ. ಸಂಗಾತಿಯೊಂದಿಗೆ ಆಳವಾದ ವಿಚಾರಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ. ಆದರೆ, ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೇಮ ಸಂಬಂಧದಲ್ಲಿ ಗೊಂದಲ ಉಂಟಾಗದಂತೆ ಎಚ್ಚರವಹಿಸಿ. ವಾರದ ಮಧ್ಯಭಾಗದಲ್ಲಿ ಪ್ರೇಮಿಗಳ ನಡುವೆ ಸಣ್ಣಪುಟ್ಟ ಮುನಿಸು ಉಂಟಾದರೂ, ಮಾತುಕತೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳಿ.

​ಕರ್ಕಾಟಕ:

​ಚಂದ್ರನ ಪ್ರಭಾವದಿಂದಾಗಿ ನೀವು ಹೆಚ್ಚು ಭಾವನಾತ್ಮಕವಾಗಿರುತ್ತೀರಿ. ಸಂಗಾತಿಯ ಪ್ರತಿಯೊಂದು ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಅತಿಯಾದ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದ್ದು, ಅವರಿಗೆ ನಿಮ್ಮ ಬೆಂಬಲದ ಅಗತ್ಯವಿರುತ್ತದೆ. ಸಂಬಂಧದಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸುವುದು ಒಳಿತು.

ಸಿಂಹ:

​ನಿಮ್ಮ ಆತ್ಮವಿಶ್ವಾಸವು ಸಂಗಾತಿಯನ್ನು ಆಕರ್ಷಿಸಲಿದೆ. ಆದರೆ, ‘ನಾನೇ ಶ್ರೇಷ್ಠ’ ಎಂಬ ಹಠ ಪ್ರೀತಿಯಲ್ಲಿ ಅಂತರ ತರಬಹುದು. ಸಂಗಾತಿಯ ಸಲಹೆಗಳಿಗೂ ಬೆಲೆ ನೀಡಿ. ವಿವಾಹದ ಮಾತುಕತೆ ನಡೆಸಲು ಬಯಸುವವರಿಗೆ ಈ ವಾರ ಶುಭ ಫಲ ನೀಡಲಿದೆ. ಸಾಮಾಜಿಕ ಸಮಾರಂಭವೊಂದರಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಭಾಗವಹಿಸಿ ಸಂತೋಷಪಡುವಿರಿ.

​ಕನ್ಯಾ:

ಈ ವಾರ ಪ್ರೇಮ ಜೀವನವು ಹಸನಾಗಿರಲಿದೆ. ನಿಮ್ಮ ಸಂಗಾತಿಯು ನಿಮ್ಮ ಜವಾಬ್ದಾರಿಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದ್ದಾರೆ. ಅವಿವಾಹಿತರಿಗೆ ಮನೆಯವರಿಂದ ಪ್ರೇಮ ಸಂಬಂಧಕ್ಕೆ ಹಸಿರು ನಿಶಾನೆ ಸಿಗುವ ಸಾಧ್ಯತೆಯಿದೆ. ನಿಮ್ಮ ಸಂಬಂಧದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ, ಗುಪ್ತ ವಿಚಾರಗಳು ಸಂಕಷ್ಟ ತಂದೊಡ್ಡಬಹುದು.

ತುಲಾ:

​ಸಂಗಾತಿಯ ಕಡೆಯಿಂದ ಕೆಲವು ಅನಿರೀಕ್ಷಿತ ಒತ್ತಡಗಳು ಎದುರಾಗಬಹುದು. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈ ವಾರ ನಿಮಗೆ ಸವಾಲಾಗಲಿದೆ. ಸಂಗಾತಿಯನ್ನು ಸಮಾಧಾನಪಡಿಸಲು ಅವರ ಇಷ್ಟದ ಸ್ಥಳಕ್ಕೆ ಕರೆದುಕೊಂಡು ಹೋಗಿ. ವಾರಾಂತ್ಯದಲ್ಲಿ ಸಂಬಂಧದಲ್ಲಿ ಇದ್ದ ಬಿಗುವಿನ ವಾತಾವರಣ ತಿಳಿಯಾಗಲಿದೆ.

ವೃಶ್ಚಿಕ:

​ನಿಮ್ಮ ತೀವ್ರ ಭಾವನೆಗಳು ಪ್ರೇಮ ಜೀವನದಲ್ಲಿ ಹೊಸ ಆಯಾಮ ನೀಡಲಿವೆ. ಸಂಗಾತಿಯ ಮೇಲೆ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಪ್ರೀತಿಯಿಂದ ಗೆಲ್ಲಿ. ಹಳೆಯ ಪ್ರೇಮಿಗಳು ಮತ್ತೆ ಸಂಧಿಸುವ ಸಾಧ್ಯತೆ ದಟ್ಟವಾಗಿದೆ. ಪ್ರೇಮ ಜೀವನದಲ್ಲಿ ಪವಿತ್ರತೆ ಕಾಪಾಡಿಕೊಳ್ಳಿ. ವಾರದ ಕೊನೆಯಲ್ಲಿ ಸಂಗಾತಿಯಿಂದ ಸಕಾರಾತ್ಮಕ ಸುದ್ದಿ ಕೇಳುವಿರಿ.

​ಧನು:

​ಈ ವಾರ ನಿಮಗೆ ಶುಭವಾಗಿದೆ. ಸಂಗಾತಿಯೊಂದಿಗೆ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ದೂರದ ಊರಿನಲ್ಲಿರುವ ಪ್ರೇಮಿಗಳು ಭೇಟಿಯಾಗುವ ಅಥವಾ ವಿಡಿಯೋ ಕರೆಗಳ ಮೂಲಕ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ. ಪ್ರೇಮ ಜೀವನದಲ್ಲಿ ಇದ್ದ ತಡೆಗಳು ನಿವಾರಣೆಯಾಗಿ ಸಂಬಂಧವು ವಿವಾಹದ ಹಂತಕ್ಕೆ ತಲುಪಬಹುದು.

ಮಕರ:

​ಪ್ರೇಮ ಜೀವನದಲ್ಲಿ ವಾಸ್ತವಿಕವಾಗಿ ಯೋಚಿಸಿ. ಸಂಗಾತಿಯ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ಅನಗತ್ಯ ಬೇಡಿಕೆಗಳು ಸಂಬಂಧವನ್ನು ಹದಗೆಡಿಸಬಹುದು. ದಂಪತಿಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯಲಿವೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವಿಶೇಷ ದಿನವೊಂದನ್ನು ಮೀಸಲಿಡಿ.

ಕುಂಭ:

ಸಂಗಾತಿಯೊಂದಿಗೆ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಇದು ಒಳ್ಳೆಯ ಸಮಯ. ಪ್ರೇಮ ಸಂಬಂಧದಲ್ಲಿ ಹೊಸತನವನ್ನು ಬಯಸುವಿರಿ. ಒಂಟಿಯಾಗಿರುವವರಿಗೆ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಬಹುದು. ಆದರೆ, ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಂಬಿಕೆಯೇ ನಿಮ್ಮ ಸಂಬಂಧದ ಅಡಿಪಾಯವಾಗಲಿ.

ಮೀನ:

ಭಾವನಾತ್ಮಕ ಜಗತ್ತಿನಲ್ಲಿ ತೇಲುವ ನೀವು ಸಂಗಾತಿಯ ಅವಶ್ಯಕತೆಗಳನ್ನು ನಿರ್ಲಕ್ಷಿಸಬೇಡಿ. ಸಂಬಂಧದಲ್ಲಿ ಸಮರ್ಪಣಾ ಭಾವ ಹೆಚ್ಚಾಗಲಿದೆ. ದಂಪತಿಗಳ ನಡುವೆ ಆತ್ಮೀಯತೆ ವೃದ್ಧಿಯಾಗಿ ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ನಿಮ್ಮ ಸಂಗಾತಿಯು ನಿಮ್ಮಿಂದ ಹೆಚ್ಚಿನ ಸಮಯ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತಾರೆ. ವಾರಾಂತ್ಯವು ಸುಖಮಯವಾಗಿರಲಿದೆ. ​

– ಲೋಹಿತ ಹೆಬ್ಬಾರ್

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು