Weekly Horoscope in Kannada: ವಾರ ಭವಿಷ್ಯ: ಸೆಪ್ಟೆಂಬರ್ ತಿಂಗಳ ಕೊನೆಯ ವಾರವು ಶುಭಫಲವಿರಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2024 | 12:12 AM

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವು 22 ರಿಂದ 28ರವರೆಗೆ ಇರಲಿದೆ. ಬುಧನೂ ಸ್ವಕ್ಷೇತ್ರ ಹಾಗೂ ಉಚ್ಚ ಕ್ಷೇತ್ರದಲ್ಲಿ ಇದ್ದು ಉತ್ತಮ‌ಫಲವನ್ನೇ ಕೊಡುವವನಾಗಿದ್ದಾನೆ. ಶನಿಯೂ ಸ್ವಕ್ಷೇತ್ರದಲ್ಲಿ ಇದ್ದಾನೆ. ಹೀಗೆ ನಾಲ್ಕು ಗ್ರಹಗಳು ಖಗೋಲದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಇರುವುದು ಶುಭಫಲವನ್ನೇ ಕೊಡುವವರಾಗಿದ್ದಾರೆ.

Weekly Horoscope in Kannada: ವಾರ ಭವಿಷ್ಯ: ಸೆಪ್ಟೆಂಬರ್ ತಿಂಗಳ ಕೊನೆಯ ವಾರವು ಶುಭಫಲವಿರಲಿದೆ
ವಾರಭವಿಷ್ಯ
Follow us on

ಇದು ಸಪ್ಟೆಂಬರ್ ತಿಂಗಳ ಕೊನೆಯ ವಾರ. 22 ರಿಂದ 28 ರವರೆಗೆ ಇರಲಿದೆ. ಸೂರ್ಯನು ಸ್ವಕ್ಷೇತ್ರದಿಂದ ಬುಧನ ಸ್ಥಾನಕ್ಕೆ ಹೋಗವನು. ಶುಕ್ರನು ನೀಚಸ್ಥಾನದಿಂದ ಸ್ವಕ್ಷೇತ್ರದಲ್ಲಿ ಇದ್ದಾನೆ. ಬುಧನೂ ಸ್ವಕ್ಷೇತ್ರ ಹಾಗೂ ಉಚ್ಚ ಕ್ಷೇತ್ರದಲ್ಲಿ ಇದ್ದು ಉತ್ತಮ‌ಫಲವನ್ನೇ ಕೊಡುವವನಾಗಿದ್ದಾನೆ. ಶನಿಯೂ ಸ್ವಕ್ಷೇತ್ರದಲ್ಲಿ ಇದ್ದಾನೆ. ಹೀಗೆ ನಾಲ್ಕು ಗ್ರಹಗಳು ಖಗೋಲದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಇರುವುದು ಶುಭಫಲವನ್ನೇ ಕೊಡುವವರಾಗಿದ್ದಾರೆ.

ಮೇಷ ರಾಶಿ : ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಸಪ್ಟೆಂಬರ್ ತಿಂಗಳ‌ ಕೊನೆಯ ವಾರದಲ್ಲಿ ಶುಭ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದುದು, ಶ್ರಮಕ್ಕೆ ಯೋಗ್ಯ ಫಲವು ಸಿಗುವುದು. ಸಂಗಾತಿಯ ಬಗ್ಗೆ ಕಾಳಜಿ, ಪ್ರೀತಿಯು ಹೆಚ್ಚಾಗುವುದು. ಬಂಧಗಳ ಆಗಮನವಾಗುವುದು. ಆದರೆ ಅವರ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಇರದು. ದ್ವಿತೀಯದಲ್ಲಿ ಗುರುವು ನಿಮ್ಮ ಕುಟುಂಬದಲ್ಲಿ ನಿಮ್ಮ‌ ಮಾತು ನಡೆಯುವಂತೆ ಮಾಡುವನು. ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಹೊಸ ಸ್ಥಾನವನ್ನು ಪಡೆಯುವಿರಿ. ಸುಬ್ರಹ್ಮಣ್ಯನಿಗೆ ಪ್ರಿಯವಾದ ಅಪೂಪವನ್ನು ಸಮರ್ಪಿಸಿ, ಅಭೀಷ್ಟವನ್ನು ಪ್ರಾರ್ಥಿಸಿ.

ವೃಷಭ ರಾಶಿ : ಸಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಮಿಶ್ರಫಲವಿರುವುದು. ರಾಶಿಯ ಅಧಿಪತಿಯು ಷಷ್ಠದಲ್ಲಿ ಇರುವುದು ಹಿತಶತ್ರುಗಳು ಹೆಚ್ಚಾಗುವರು. ನಿಮ್ಮವರನ್ನು ನೀವೇ ಶತ್ರುಗಳನ್ನಾಗಿ ಮಾಡಿಕೊಳ್ಳುವಿರಿ. ತಾಳ್ಮೆಯು ನಿಮ್ಮಲ್ಲಿ‌ ಇದ್ದರೂ ಅದನ್ನು ಉಳಿಸಿಕೊಳ್ಳುವುದೂ ಅವಶ್ಯಕ. ‌ಸಂಗಾತಿಯ ಬಗ್ಗೆ ಸಮಾಧಾನ ಇರದು. ನಿಮ್ಮ ಆದಾಯವನ್ನು ಯಾರಾದರೂ ತಡೆಯಬಹುದು. ವಿದ್ಯಾಭ್ಯಾಸದಲ್ಲಿ ನಿಮಗೆ ದ್ವಂದ್ವವು ಬರಬಹುದು. ಉದ್ಯಮದಲ್ಲಿ ಆಸಕ್ತಿ ಕಡಿಮೆಯಾಗುವುದು. ಪರಮೇಶ್ವರಿಯನ್ನು ಪೂಜಿಸಿ.

ಮಿಥುನ ರಾಶಿ : ನಿಮಗೆ ಸಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಮಿಶ್ರಫಲವಿದೆ. ರಾಶಿಯ ಅಧಿಪತಿ ಚತುರ್ಥದಲ್ಲಿ ಇರುವನು. ಜೊತೆಗೆ ಸೂರ್ಯನೂ ಕೇತುವೂ ಇದ್ದುದು ಕೌಟುಂಬಿಕ ನೆಮ್ಮದಿಯನ್ನು ಕಾಣಲು ಸಾಧ್ಯ. ಮಕ್ಕಳ‌ ವಿಚಾರದಲ್ಲಿ ಅನಿರೀಕ್ಷಿತ ಸಂತೋಷ ಸಿಗುವುದು. ವಿದೇಶದಲ್ಲಿ ಇರುವವರಿಗೆ ಸಂತೋಷದ ಸೂಚನೆ ಬರುವುದು. ಔದ್ಯೋಗಿಕವಾದ ಆಲಸ್ಯವನ್ನು ನೀವು ದೂರಮಾಡಿಕೊಳ್ಳಬೇಕು. ಅಗ್ನಿಯ ಸಮೀಪದಲ್ಲಿ ಎಚ್ಚರಿಕೆ ಇರಲಿ. ತಂದೆಯಿಂದ ನಿಮಗೆ ಪ್ರೀತಿ ಸಿಗುವುದು. ಗುರುವಿನ ಆಶೀರ್ವಾದವನ್ನು ಪಡೆಯಿರಿ.

ಕರ್ಕಾಟಕ ರಾಶಿ : ಇದು ಸಪ್ಟೆಂಬರ್ ತಿಂಗಳ‌ ಕೊನೆಯ ವಾರವಾಗಿದ್ದು ನಿಮಗೆ ಶುಭ.‌ ತೃತೀಯದಲ್ಲಿ ಸೂರ್ಯ, ಬುಧ, ಕೇತುಗಳ ಯೋಗವಿದ್ದು ಸಹೋದರರ ನಡುವೆ ಆಗಾಗ ವಿವಾದವಾಗಬಹುದು. ಅಹಂಕಾರವನ್ನು ಬಿಟ್ಟು ಮಾತುಕತೆಯಾದರೆ ಉತ್ತಮ. ಯಾವುದರಲ್ಲಿಯೇ ಹಿನ್ನಡೆಯಾದರೂ ಕೆಲಕಾಲ್ಲಿ ಮನಸ್ಸೂ ಕಾರ್ಯವೂ ಸರಿಯಾಗಲಿದೆ. ಕೌಟುಂಬಿಕವಾಗಿ ನೀವು ಬೇಕಾದರೂ ಅದರ ಕಾರಣ ಬೇರೆ ಇರುತ್ತದೆ. ವಾಹನದಿಂದ ನಿಮಗೆ ಖರ್ಚು ಬರುವುದು. ಸಂಗಾತಿಯನ್ನು ದ್ವೇಷಿಸುವುದು ಕಡಿಮೆಯಾಗುವುದು. ನಾಗಾರಾಧನೆಯಿಂದ ನಿಮ್ಮ ಮುಂದಿನ‌ ಮಾರ್ಗವು ಗೊತ್ತಾಗುವುದು.

ಸಿಂಹ ರಾಶಿ : ಈ ವಾರ ಸಪ್ಟೆಂಬರ್ ತಿಂಗಳ‌ ಕೊನೆಯ ವಾರ. ನಿಮಗೆ ಈ ವಾರದಲ್ಲಿ ಮಿಶ್ರಫಲವಿರಲಿದೆ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ತಂದೆಯ ಜೊತೆ ಸೌಹಾರ್ದತೆ ಇರುವುದು.‌ ಸಪ್ತಮದಲ್ಲಿ ಶನಿಯು ಇರುವುದು ವೈವಾಹಿಕ ಕಾರ್ಯದಲ್ಲಿ ವಿಳಂಬವಾದರೂ ನಿಶ್ಚಿತವಾದ ಸಂಗಾತಿಯ ಜೊತೆಗೇ ವಿವಾಹವಾಗಲಿದೆ. ತಾಳ್ಮೆಯಿಂದ ಬೇಸರಪಡದೇ ಇರುವುದು ಅವಶ್ಯಕ. ಉದ್ಯೋಗದಲ್ಲಿ ಆದ ಹಿನ್ನಡೆಯಿಂದ ಮುಕ್ತಿ‌ಸಿಕ್ಕಿ ಮುನ್ನಡೆ ಆರಂಭವಾಗುವುದು. ಪರಿಶ್ರಮದಿಂದ ಸಂಪತ್ತು ಬರುವುದು. ಸೂರ್ಯನಾರಾಯಣನ ಆರಾಧನೆಯಿಂದ ನಿಮಗೆ ಸಕಾರಾತ್ಮಕ ಶಕ್ತಿಯು ಬರಲಿದೆ.

ಕನ್ಯಾ ರಾಶಿ : ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ತಿಂಗಳ ಕೊನೆಯ ವಾರದಲ್ಲಿ ಶುಭ. ರಾಶಿಯ ಅಧಿಪತಿ ಹಾಗೂ ದಶಮಾಧಿಪತಿಯಾದ ಬುಧನು ಸ್ವಕ್ಷೇತ್ರಕ್ಕೆ ಬಂದಿದ್ದು ಮೊದಲನೆಯದಾಗಿ ನಿಮ್ಮ ದೈಹಿಕ ಹಾಗೂ ಮಾನಸಿಕವಾದ ನೋವುಗಳು ನಕಾರಾತ್ಮಕ ಅಂಶಗಳು ದೂರವಾಗುತ್ತವೆ. ಅಷ್ಟೇ ಅಲ್ಲ ನಿಮ್ಮ ಇಚ್ಛೆಗಳು ಒಂದೊಂದಾಗಿಯೇ ಪೂರೈಕೆಯಾಗುವುದು ನಿಮಗೆ ಸಂತೋಷ ನೆಮ್ಮದಿ ತರುವುದು. ಇನ್ನು ಸೂರ್ಯನೂ ಇದೇ ರಾಶಿಯಲ್ಲಿ ಇರುವ ಕಾರಣ ನಿಮ್ಮ ಯೋಜನೆಗೆ ಅರ್ಥ, ಸಹಾಯ ಎಲ್ಲವೂ ಸಿಗಲಿದೆ. ಸಮ್ಮಾನಗಳನ್ನು ಗೌರವವನ್ನು ನೀವು ಈ ವಾರ ಪಡೆಯುವಿರಿ. ಧಾರ್ಮಿಕ ಆಚಾರಗಳನ್ನು ಬಿಡದೇ ಮುಂದುವರಿಸಿ.

ತುಲಾ ರಾಶಿ : ಸಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಅಶುಭ. ರಾಶಿಯ ಅಧಿಪತಿ ಸ್ವಕ್ಷೇತ್ರದಲ್ಲಿ ಇರುವುದು ನಿಮಗೆ ಮಾನಸಿಕ ಧೈರ್ಯವನ್ನು ಕೊಡುವುದು.‌ ಉಳಿದಂತೆ ನಿಮಗೆ ಹಿನ್ನಡೆ ಇರುವುದು. ಬೃಹಸ್ಪತಿಯು ಅಷ್ಟಮದಲ್ಲಿ ಇರುವುದು ಹಿರಿಯರಿಂದ ಅಪಮಾನವಾಗಲಿದೆ. ಆದರೆ ಅವರು ನಿಮ್ಮ ಹಿತವನ್ನು ಬಯಸುವವರಲ್ಲ ಎನ್ನುವುದು ಗೊತ್ತಿರಲಿ. ಬಂಧುಗಳಿಗೆ ಸಾಲವನ್ನು ಕೊಡಬೇಕಾಗುವುದು. ಆದರೆ ಅದು‌ ಮರಳಿ ಬರುತ್ತದೆ ಎನ್ನುವ ಖಾತರಿ ಇರದು. ತಂದೆಯ ಬಗ್ಗೆ ನಿಮಗೆ ಸಮಾಧಾನ ಕಷ್ಟ.‌ ನಕಾರಾತ್ಮಕ ಅಂಶಗಳೇ ಕಾಣಿಸುವುದು. ಹಿರಿಯರ ತಿಳಿವಳಿಕೆಯಿಂದ ಸರಿಯಾಗುವುದು. ಗುರುದರ್ಶನವನ್ನು ಮಾಡುವುದು ಉತ್ತಮ.

ವೃಶ್ಚಿಕ ರಾಶಿ : ಸಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭವಿದೆ. ಅಂದುಕೊಂಡಿದ್ದನ್ನು ಸಾಧಿಸಬಹುದಾಗಿದೆ. ವೈವಾಹಿಕ ಕಾರ್ಯದಲ್ಲಿ ಅಲ್ಪ ಹಿನ್ನಡೆ ಎನಿಸದರೂ ಅದು ಸರಿಯಾಗಿ ಹೋಗಲಿದೆ. ಬಂಧುಗಳ‌ ಕಡೆಯಿಂದ ಅಥವಾ ಕೃಷಿ, ಭೂವ್ಯವಹಾರದಿಂದ ಹಣವು ನಿಮ್ಮ ಕೈಸೇರುವುದು. ವಿದೇಶಕ್ಕೆ ತೆರಳುವ ಕನಸನ್ನು ನನಸುಮಾಡಿಕೊಳ್ಳಲು ಪ್ರಯತ್ನ ನಡೆಯುವುದು. ನಿಮ್ಮ ಮರಣಭೀತಿಯು ದೂರಾಗುವುದು. ತಂದೆಯಿಂದ ನಿಮಗೆ ಯಾವುದಾದರೂ ಒಂದುರೀತಿಯಲ್ಲಿ ಸಹಾಯ ಸಿಗುವುದು. ಮಕ್ಕಳ‌ ಮೇಲೆ ನಿಮ್ಮ ವಾತ್ಸಲ್ಯ ಕಡಿಮೆಯಾಗುವುದು. ಸುಬ್ರಹ್ಮಣ್ಯನ‌ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ.

ಧನು ರಾಶಿ : ಇದು ರಾಶಿ ಚಕ್ರದ ಒಂಭತ್ತನೇ ರಾಶಿಯಾಗಿದ್ದು ರಾಶಿಯ ಅಧಿಪತಿ ಹಾಗೂ ಚತುರ್ಥಾದಿಪತಿಯಾದ ಗುರುವು ಷಷ್ಠದಲ್ಲಿ ಶತ್ರುವಿನ ಮನೆಯಲ್ಲಿ ಇದ್ದಾನೆ. ಕುಟುಂಬದ ಸದಸ್ಯರು ನಿಮಗೆ ಶತ್ರುಗಳಂತೆ ಕಾಣುವರು. ನಿಮ್ಮ ಮಾತಿಗೆ ಕುಟುಂಬದಲ್ಲಿ ಗೌರವ ಸಿಗದು. ನಿಮ್ಮಲ್ಲಿಯೂ ಸಹನೆ ಕಡಿಮೆಯಾಗಿ ಯಾವುದನ್ನೂ ಕಾಯುವ ಸ್ಥಿತಿ ಇರದು. ‌ಎಲ್ಲವೂ ಕ್ಷಣದಲ್ಲಿ ಆಗಬೇಕು ಎನ್ನುವ ತುಡಿತ ಇರುವುದು. ಔದ್ಯೋಗಿಕವಾಗಿ ಆರ್ಥಿಕವಾಗಿ ಉತ್ತಮ ಅವಕಾಶ, ಪ್ರಗತಿಗಳು ಇರುವುವು. ಉತ್ಪಾದನೆ ಮಾಡುವವರಿಗೆ ಒಳ್ಳೆಯ ಬೇಡಿಕೆ ಇರುವುದು. ಸಮಯವನ್ನು ಮಾಡಿಕೊಂಡು ಗುರುದರ್ಶನವನ್ನು ಮಾಡಿ, ಆಶೀರ್ವಾದವನ್ನು ಪಡೆಯಿರಿ.

ಮಕರ ರಾಶಿ : ಇದು ಸಪ್ಟೆಂಬರ್ ತಿಂಗಳ ಕೊನೆಯ ವಾರವಾಗಿದ್ದು ಬುಧನು ಸ್ವಕ್ಷೇತ್ರವನ್ನು ಪ್ರವೇಶಿಸುವನು. ಬಂಧುಗಳಿಂದ ನೀವು ಗೌರವ, ಪ್ರಶಂಸೆಗಳು ಸಿಗಲಿವೆ. ದಶಮದಲ್ಲಿ ಶುಕ್ರನು ಸ್ವಸ್ಥಾನದಲ್ಲಿ ಇರುವುದು ಕಲಾವಿದರಿಗೆ ಕುಶಲ ಕರ್ಮಗಳಿಗೆ, ವಿನ್ಯಾಸ, ಕೌಶಲ್ಯವಿರುವವರಿಗೆ ಉತ್ತಮ‌ ಅವಕಾಶವು ಬರುವುದು ಮತ್ತು ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಿರಿ. ಕುಟುಂಬದ ವ್ಯವಹಾರವನ್ನು ಬಹಳ ತಾಳ್ಮೆಯಿಂದ ನಿರ್ವಹಿಸಬೇಕಾಗುವುದು. ಶನೈಶ್ಚರನಿಗೆ ಎಳ್ಳಿನ ಪದಾರ್ಥದ ನೈವೇದ್ಯವನ್ನು ಸಮರ್ಪಿಸಿ.

ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೇ ರಾಶಿಯರಿಗೆ ಈ ತಿಂಗಳ ನಾಲ್ಕನೇ ವಾರ ಶುಭಾಶುಭ ಮಿಶ್ರಫಲವಿದೆ. ಗುರುವು ಚತುರ್ಥದಲ್ಲಿ ಇದ್ದು ನಿಮಗೆ ಕುಟುಂಬ ಸುಖವನ್ನು ಪೂರ್ಣವಾಗಿ ಕೊಡಲಾರನು.‌ ತಾಯಿಗೆ ಸಂತೋಷವನ್ನು ಕೊಡುವ ಇಚ್ಛೆ ಇದ್ದರೂ ಅದನ್ನು ಸಾಧಿಸಲಾಗದೇ ಬೇಸರವಾಗುವುದು.‌ ಇನ್ನೂ ರಾಶಿಯ ಅಧಿಪತಿ ರಾಶಿಯಲ್ಲಿಯೇ ಇರುವುದು ದೈಹಿಕ ಹಾಗೂ‌ ಮಾನಸಿಕ ಆರೋಗ್ಯಕ್ಕೆ ಉತ್ತಮ. ವಿಳಂಬವಾದರೂ ನಿಮ್ಮ ನಿರ್ಧಾರವು ದೃಢವಾಗುವುದು. ಉದ್ಯೋಗಾಧಿಪತಿಯು ಪಂಚಮದಲ್ಲಿ ಇರುವು ಅಭಿವೃದ್ಧಿಯನ್ನು ಸೂಚಿಸದು. ಯಥಾಸ್ಥಿತಿಯಲ್ಲಿ ಇರುವುದು. ಶಿವಾರಾಧನೆಯನ್ನು ಸಮಯವನ್ನು ಹೊಂದಿಸಿಕೊಂಡು ಮಾಡಿ.

ಮೀನ ರಾಶಿ : ಇದು ಸಪ್ಟೆಂಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಈ ರಾಶಿಯವರಿಗೆ ಮಿಶ್ರಫಲವಿದೆ. ರಾಶಿಯ ಅಧಿಪತಿ ತೃತೀಯದಲ್ಲಿ ಶತ್ರುವಿನ ಸ್ಥಾನದಲ್ಲಿ ಪ್ರತಿಕೂಲನಾಗಿದ್ದಾನೆ. ಸಹೋದರರ ಜೊತೆ ಸೌಹಾರ್ದತೆ ಕಾಣದು. ಚತುರ್ಥದಲ್ಲಿರುವ ಕುಜನು ನಿಮಗೆ ಸುಖದ ಮರೀಚಿಕೆ ಮಾಡುವನು. ತಾಯಿಯ ಆರೋಗ್ಯ ವಾಹನದ ಸುಖಗಳು ಇಲ್ಲದಾಂತಾಗುವುದು. ವಾರದ ಮಧ್ಯದಲ್ಲಿ ಬುಧನು ಸ್ವಕ್ಷೇತ್ರ ಮತ್ತು ಉಚ್ಚ ಸ್ಥಾನಕ್ಕೂ ಬರುವ ಕಾರಣ ದಾಂಪತ್ಯದಲ್ಲಿ ಕಲಹವಿದ್ದರೂ ಅದು ಅಲ್ಪಕಾಲದಲ್ಲಿ ಸರಿಯಾಗುವುದು. ಬಂಧುಗಳು ನಿಮಗೆ ಒಳ್ಳೆಯದನ್ನು ಹೇಳಿದರೂ ಕಿರಿಕಿರಿ ಅನಿಸುವುದು. ಮಹಾಗಣಪತಿಗೆ ದೂರ್ವಾ ಪತ್ರದಿಂದ ಅರ್ಚಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)