AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 22: ಅಧಿಕಾರದಲ್ಲಿರುವವರು ಒತ್ತಡಕ್ಕೆ ಸಿಲುಕಿರುವರು. ಗೆಳೆಯರ ಮಾತಿಗೆ ಹೆಚ್ಚು ಬೆಲೆ ಆದರವನ್ನು ತೋರುವಿರಿ. ನಿಮಗಾಗುವ ಸಣ್ಣ ತೊಂದರೆಯನ್ನೂ ನೀವು ಸಹಿಸಲಾರಿರಿ. ಬಂಧುಗಳು ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರುವರು. ಹಾಗಾದರೆ ಸೆಪ್ಟೆಂಬರ್​ 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು
ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು
TV9 Web
| Edited By: |

Updated on: Sep 22, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯ ನಕ್ಷತ್ರ: ಕೃತ್ತಿಕಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:57 ರಿಂದ 06:28, ಯಮಘಂಡ ಕಾಲ ಮಧ್ಯಾಹ್ನ 12:25 ರಿಂದ 01:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:26 ರಿಂದ  04:57ರ ವರೆಗೆ.

ಸಿಂಹ ರಾಶಿ: ಕೆಲವನ್ನು ಪಡೆಯಲು ಕೆಲವನ್ನು ಬಿಡಬೇಕು. ಆದರೆ ನಿಮ್ಮ ವಿವೇಚನೆಯಿಂದ ಮುಖ್ಯಾಮುಖ್ಯಗಳನ್ನು ತಿಳಿದರೆ ನೆಮ್ಮದಿಯಿಂದ ಇರಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಯಥೇಚ್ಛವಾಗಿ ಆದರೂ ಲಾಭವು ಬಹಳ ಕಡಿಮೆ ಇರಲಿದೆ. ಓಡಾಟದಲ್ಲಿ ನಿಮ್ಮ‌ ವಸ್ತವು ಕಳೆದುಹೋಗಬಹುದು. ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು. ಮನೆಗೆ ಬಂದ ಅತಿಥಿಯನ್ನು ಸತ್ಕಾರದಿಂದ ಸಂತೋಷಪಡಿಸುವಿರಿ. ಸಂಗಾತಿಯ ಜೊತೆ ಪರಸ್ಥಳಗಳಿಗೆ ಹೋಗುವಿರಿ. ಕೆಲವು ಮಾತಗಳು ಪ್ರಶಾಂತವಾದ ಮನಸ್ಸನ್ನು ಹಾಳುಮಾಡುವುದು. ಅಧಿಕ ನಿರೀಕ್ಷೆಯನ್ನು ಬಂಧುಗಳ‌ ಕಡೆಯಿಂದ ಮಾಡುವಿರಿ. ತಂದೆಯ ಆರೋಗ್ಯವು ವ್ಯತ್ಯಾಸವಾಗಬಹುದು‌. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಕಲಾವಿದರಿಗೆ ಪ್ರಶಂಸೆಯು ಸಿಗಲಿದೆ. ಶತ್ರುಗಳ ಬಗ್ಗೆ ತಿಳಿವಳಿಕೆ ಇದ್ದರೂ ಸುಮ್ನಿರುವಿರಿ.

ಕನ್ಯಾ ರಾಶಿ: ಇಂದು ಎಲ್ಲರಿಂದ ನೀವು ದೂರವಾಗುವ ಸ್ಥಿತಿ ಬರುವುದು. ನಿಮ್ಮಲ್ಲಿ ಸಂತೋಷವಿದ್ದರೆ, ಹೆಚರಚು ಕಷ್ಟವಾಗುವುದು. ಇಂದು ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಬಯಸುವಿರಿ. ಹಣಕಾಸಿನ ಕೊರತೆಯು ಸಲ್ಲದ ಕೆಲಸಕ್ಕೆ ನಿಮ್ಮನ್ನು ಜೋಡಿಸುವ ಸಾಧ್ಯತೆ ಇದೆ. ಪರೋಕ್ಷವಾಗಿ ನಿಮ್ಮ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ನಿಮ್ಮ ಕಾಳಜಿಯು ಅತಿಯಾಗಿರಲಿದೆ. ಸಾಮಾಜಿಕ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಿರಿ. ನಿಮ್ಮ ಹಣದ ಅಭಾವವನ್ನು ಗೌಪ್ಯವಾಗಿ ಇಟ್ಟುಕೊಳ್ಳಿ. ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿ.‌ ಮನೆಯ ಕೆಲಸವನ್ನು ಹೆಚ್ಚು ಆನಂದದಿಂದ ಮಾಡುವಿರಿ. ಆಸ್ತಿಯ ಹಂಚಿಕೆಯಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸುವಿರಿ. ಮರ್ಯಾದೆಗೆ ಅತಿಯಾಗಿ ಅಂಜಿದರೆ ಕಷ್ಟ.

ತುಲಾ ರಾಶಿ: ನೀವು ಕಾರ್ಯದಲ್ಲಿ ಎಷ್ಟೇ ಪಳಗಿದರೂ ಎಚ್ಚರಿಕೆಯಿಂದ ಇರುವುದು ಮುಖ್ಯ. ಹಳೆಯ ವಸ್ತುಗಳನ್ನೇ ಸರಿ ಮಾಡಿಕೊಳ್ಳುವಿರಿ. ನೆಮ್ಮದಿಗಾಗಿ ಬಹಳ ಹುಡುಕಾಟ ಮಾಡುವಿರಿ. ಒತ್ತಡದಿಂದ ಹೊರಗೆ ಬರುವ ಮಾರ್ಗವನ್ನು ಕಂಡುಕೊಳ್ಳುವಿರಿ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉಂಟಾದ ಪ್ರಗತಿಯಿಂದ ಸಂತೋಷವಾಗಲಿದೆ. ಹಾಕಿದ ಬಂಡವಾಳಕ್ಕೆ ತಕ್ಕ ಆದಾಯವನ್ನು ಪಡೆಯಲು ಯೋಜನೆ ಮಾಡುವಿರಿ. ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರಾಗಲಿದೆ. ಬಂಧುಗಳ ಮನೆಗೆ ಹೋಗಲಿದ್ದೀರಿ. ಗೌರವವಿಲ್ಲದ ಸ್ಥಳದಿಂದ ನೀವು ದೂರ ಸರಿಯುವಿರಿ. ಮಕ್ಕಳ ಜೊತೆ ಅಧಿಕ ಸಮಯವನ್ನು ಕಳೆಯುವಿರಿ. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ನಿಮ್ಮ ಮಾತು ಇತರರಿಗೆ ಇಷ್ಟವಾಗದು. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಹೂಡಿಕೆಯನ್ನು ಸರಿಯಾದ ಕಡೆ, ಸರಿಯಾದ ಸಮಯಕ್ಕೆ ಮಾಡುವಿರಿ.

ವೃಶ್ಚಿಕ ರಾಶಿ: ನಿಮ್ಮ ಅನುಕೂಲತೆಯನ್ನು ಗಮನಿಸಿಕೊಂಡು ಯಾವುದಾದರೂ ಕಾರ್ಯವನ್ನು ಒಪ್ಪಿಕೊಳ್ಳಿ. ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ಅಧಿಕಾರದಲ್ಲಿರುವವರು ಒತ್ತಡಕ್ಕೆ ಸಿಲುಕಿರುವರು. ಗೆಳೆಯರ ಮಾತಿಗೆ ಹೆಚ್ಚು ಬೆಲೆ ಆದರವನ್ನು ತೋರುವಿರಿ. ನಿಮಗಾಗುವ ಸಣ್ಣ ತೊಂದರೆಯನ್ನೂ ನೀವು ಸಹಿಸಲಾರಿರಿ. ಬಂಧುಗಳು ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರುವರು. ಎಲ್ಲದಕ್ಕೂ ಕೋಪ ಮಾಡಿಕೊಳ್ಳುವುದು ಸರಿಕಾಣಿಸದು. ಸರ್ಕಾರಿ ನೌಕರಿ ಸಿಕ್ಕುವ ಅವಕಾಶಗಳು ಕಡಿಮೆ‌ ಇರಲಿದೆ. ಮಾತಮಾಡುವಾಗ ತಿಳಿದು ಮಾತನಾಡಿ. ಹಣವನ್ನು ಸಂಪಾದಿಸುವ ಛಲವಿದ್ದು ಸರಿಯಾದ ಮಾರ್ಗದಲ್ಲಿ ಮುಂದುವರಿಯಿರಿ. ಮನೆಯ ಹಿರಿಯರ ಸೇವೆಯಲ್ಲಿ ಆಸಕ್ತಿ ಬರಬಹುದು. ಸೋಲನ್ನು ಒಪ್ಪಿಕೊಂಡು ಸಂತೋಷದಿಂದ‌ ಮುನ್ನಡೆಯುವಿರಿ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು. ಓಡಾಟದ ಸಮಯದಲ್ಲಿ ನಿಮ್ಮ‌ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಇಂದಿನ ಹೆಚ್ಚು ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ.

Follow Us
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ