Weekly Horoscope July 15 to 22: ಮಿಥುನ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಆಲಸ್ಯ; ದ್ವಾದಶ ರಾಶಿ ವಾರ ಭವಿಷ್ಯ ಇಲ್ಲಿದೆ

ಜುಲೈ ತಿಂಗಳ ಮೂರನೇ ವಾರವು 15 ರಿಂದ 22 ರವರೆಗೆ ಗ್ರಹಗಳು ಪರಿವರ್ತನೆಯಾಗಲಿದೆ. ಸೂರ್ಯನು ಮಿಥುನದಿಂದ ಕರ್ಕಾಟಕ ರಾಶಿಗೂ ಬುಧನು ಕರ್ಕಾಟಕದಿಂದ ಸಿಂಹಕ್ಕೂ ಸಂಚಾರ ಮಾಡಲಿದ್ದು ಕೆಲವು ರಾಶಿಗೆ ಶುಭವೂ ಅಶುಭವೂ ಇರಲಿದೆ. ಅಧಿಕ ಅಶುಭವಿರುವವರು ದೈವಾನುಗ್ರಹವನ್ನು ಪಡೆದು ಮುಂದುವರಿಯಿರಿ.

Weekly Horoscope July 15 to 22: ಮಿಥುನ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಆಲಸ್ಯ; ದ್ವಾದಶ ರಾಶಿ ವಾರ ಭವಿಷ್ಯ ಇಲ್ಲಿದೆ
ವಾರ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2024 | 8:24 PM

ಜುಲೈ ತಿಂಗಳ ಮೂರನೇ ವಾರವು 15 ರಿಂದ 22 ರವರೆಗೆ ಗ್ರಹಗಳು ಪರಿವರ್ತನೆಯಾಗಲಿದೆ. ಸೂರ್ಯನು ಮಿಥುನದಿಂದ ಕರ್ಕಾಟಕ ರಾಶಿಗೂ ಬುಧನು ಕರ್ಕಾಟಕದಿಂದ ಸಿಂಹಕ್ಕೂ ಸಂಚಾರ ಮಾಡಲಿದ್ದು ಕೆಲವು ರಾಶಿಗೆ ಶುಭವೂ ಅಶುಭವೂ ಇರಲಿದೆ. ಅಧಿಕ ಅಶುಭವಿರುವವರು ದೈವಾನುಗ್ರಹವನ್ನು ಪಡೆದು ಮುಂದುವರಿಯಿರಿ.

ಮೇಷ ರಾಶಿ : ಇದು ಜುಲೈ ತಿಂಗಳ ಮೂರನೇ ವಾರವಾಗಿದ್ದು, ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭಫಲವಿದೆ. ರಾಶಿಯ ಅಧಿಪತಿಯಾದ ಕುಜನು ಮಿತ್ರನ‌ ಜೊತೆಗೂ ಮಿತ್ರನ ರಾಶಿಯಲ್ಲಿಯೂ ಇರುವುದು ನಿಮಗೆ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ. ಇರುವ ಸ್ಥಳದಲ್ಲಿಯೇ ಏನನ್ನಾದರೂ ಸಾಧಿಸುವ ಹಂಬಲವಿರುವುದು. ಕಲಾವಿದರು ಹೆಚ್ಚಿನ ಗಮನವನ್ನು ಕಲೆಯ ಮೇಲೆ ಕೊಡುವರು. ಶ್ರಮದಿಂದ ಉತ್ತಮ ಆದಾಯವನ್ನು ಪಡೆಯುವರು. ಧಾರ್ಮಿಕ ಕಾರ್ಯದಿಂದ ಆದಾಯವು ಸಿಗಲಿದೆ. ತಂದೆಯ ಕಡೆಯ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗುವುದು.

ವೃಷಭ ರಾಶಿ : ರಾಶಿಚಕ್ರದ ಎರಡನೇ ರಾಶಿಯವರಿಗೆ ಜುಲೈ ತಿಂಗಳ ಮೂರನೇ ವಾರ ಮಿಶ್ರಫಲ.‌ ರಾಶಿಯ ಅಧಿಪತಿಯಾದ ಶುಕ್ರನು ರವಿಯ ಸಹಿತನಾಗಿ ಇರುವನು. ಸ್ತ್ರೀಯರಿಗೆ ಶುಭಕರವಲ್ಲ. ನಿಮ್ಮನ್ನು ನೀವು ದೂಷಿಕೊಳ್ಳುವಿರಿ. ನಿಮ್ಮ ರಾಶಿಯನ್ನು ಗುರು ಹಾಗೂ ಕುಜರು ಇದ್ದು ಒತ್ತಡವನ್ನು ನಿಭಾಯಿಸಲು ನಿಮಗೆ ಸಾಮರ್ಥ್ಯ ಬರುವುದು. ವಿದೇಶದ ಪ್ರವಾಸ ಯಾರದೋ ಕಾರಣದಿಂದ ತಪ್ಪುವುದು. ಪ್ರೀತಿಯಿಂದ ಉದ್ಯೋಗವನ್ನು ಮಾಡಲಾರಿರಿ. ಬಹಳ ಶ್ರಮದಿಂದ ಸಂಪತ್ತನ್ನು ಗಳಿಸಬೇಕಾಗುವುದು. ಮಕ್ಕಳ ಬಗ್ಗೆ ನಿರಾಸಕ್ತಿ ಬರುವುದು.‌ ಸರಿಯಾಗಿ ನೋಡಿಕೊಳ್ಳುವ ಹೊಣೆಯನ್ನು ಹೊತ್ತು ಮುನ್ನಡೆಯಿರಿ. ಗೊಂದಲವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ.

ಮಿಥುನ ರಾಶಿ : ಜುಲೈ ತಿಂಗಳ ಮೂರನೇ ವಾರದಲ್ಲಿ ಅಶುಭ ಫಲವಿದೆ. ದ್ವಾದಶದಲ್ಲಿ ಗುರು ನಿಮ್ಮ ಮನೋವ್ಯಥೆಯನ್ನು ಮನಶ್ಚಾಂಚಲ್ಯವನ್ನು ಹೆಚ್ಚಿಸುವನು. ಶತ್ರುಗಳ ಭೀತಿಯಿಂದ ದೂರಾಗುವಿರಿ. ವಿದೇಶದಲ್ಲಿ ಇದ್ದವರಿಗೆ ತೊಂದರೆ ಬರುವ ಸಂಭವವಿದೆ. ಯಾವದೋ ಹಗರಣದಲ್ಲಿ ಸಿಕ್ಕಿಬೀಳುಬಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರುವುದು. ಉದ್ಯೋಗದಲ್ಲಿ ಆಲಸ್ಯ ಬಂದು ಅದನ್ನು ಬಿಡುವಿರಿ. ನಿಮ್ಮ ಶ್ರಮವು ಬೇರೆಯವರ ಪಾಲಾಗುವುದು. ಬೌದ್ಧಿಕ‌ ಕಸರತ್ತನ್ನು ಮಾಡಬೇಕಾಗುವುದು. ಯಾರನ್ನೂ ದೂಷಿಸುತ್ತ ಕಾಲವನ್ನು ಕಳೆಯಬೇಡಿ.

ಕರ್ಕಾಟಕ ರಾಶಿ : ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಜುಲೈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಶುಭಫಲವಿದೆ. ಗುರುವು ಏಕಾದಶದಲ್ಲಿದ್ದು ಒಳಿತನ್ನು ಮಾಡುವನು. ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಬಿಡುವುದು ಬೇಡ. ಜ್ವರದಿಂದ ಬಳಲಬೇಕಾಗುವುದು. ಕಫದಿಂದ ಅಥವಾ ವಾತದಿಂದ ರೋಗವು ಕಾಣಿಸಿಕೊಳ್ಳುವುದು. ಮಾತಿನಿಂದ ವೈರ ಬೆಳೆಯುವುದು. ಮಾಡಿದ್ದು ಒಂದಾದರೆ ಆಗುವುದು ಮತ್ತೊಂದಾಗುವುದು. ಸಂಗಾತಿಯ ಭಿನ್ನಾಭಿಪ್ರಾಯವು ನಿಮಗೆ ಇಷ್ಟವಾಗದು. ಕೆಟ್ಟವರ ಸಹವಾಸವು ನಿಮಗೆ ಅನಿವಾರ್ಯವಾಗಿ ಸಿಗುವುದು. ಧೈರ್ಯದಿಂದ ಮುನ್ನಡೆಯಲು ಹುಂಬುತನ ಬೇಡ. ಅಹಂಕಾರದಿಂದ ನಿಮಗೆ ಹೊಡೆತ ಕೊಡುವುದು.

ಸಿಂಹ ರಾಶಿ : ರಾಶಿ ಚಕ್ರದ ಐದನೇ ರಾಶಿಯಾದವರಿಗೆ ಈ ವಾರ ಮಿಶ್ರಫಲ. ರಾಶಿಯ ಅಧಿಪತಿಯು ದ್ವಾದಶದಲ್ಲಿ ಇರುವನು. ಕೌಟುಂಬಿಕ ಕಲಹವಾಗಬಹುದು ಅಥವಾ ಸರ್ಕಾರವು ನಿಮ್ಮಿಂದ ಹಣ ವಸೂಲಿಯನ್ನೂ ಮಾಡಬಹುದು. ಸಾಲವನ್ನು ಕಟ್ಟುವುದಕ್ಕೆ ಕಷ್ಟವಾಗುವ ಸಾಧ್ಯತೆ ಇದೆ. ಬುಧನು ನಿಮ್ಮ ಆರೋಗ್ಯವನ್ನು ಕೆಡಿಸುವುದು. ದೇಹ ಪೀಡೆಯನ್ನು ನೀವು ಔಷಧ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ವಿದೇಶ ಪ್ರವಾಸವನ್ನು ಕುಟುಂಬ ಜೊತೆ ಮಾಡುವಿರಿ. ಸಂಗಾತಿಯನ್ನು ಕಾರಣಾಂತರಗಳಿಂದ ದೂರವಿರಿಸುವಿರಿ. ಮಕ್ಕಳ ಬಗ್ಗೆ ಸದಭಿಪ್ರಾಯವು ಬರುವುದು. ಭೂಮಿಯ ವ್ಯವಹಾರದಿಂದ‌ ಉತ್ತಮ‌ಲಾಭವಿರುವುದು. ಆದಿತ್ಯ ಹೃದಯ ಸ್ತೋತ್ರವನ್ನು ನಿತ್ಯವೂ ಪಠಿಸಿ.

ಕನ್ಯಾ ರಾಶಿ : ಜುಲೈ ತಿಂಗಳ ಮೂರನೇ ವಾರ್ಷಿಕ ನಿಮಗೆ ಶುಭಪ್ರದ. ಮಾನಸಿಕ ಒತ್ತಡವನ್ನು ನೀವು ನಿಭಾಯಿಸಿಕೊಂಡು ಕಾರ್ಯವನ್ನು ನಿರ್ವಹಿಸುವ ಸವಾಲು ನಿಮಗಿದೆ. ವಿದೇಶದ ಪ್ರವಾಸವನ್ನು ನೀವು ಉದ್ಯೋಗದ ಕಾರಣದಿಂದಾಗಿ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿಯೇ ಪ್ರೇಮವಾಗಿ, ಗುರು ಹಿರಿಯರ ನಿಶ್ಚಯದ ಜೊತೆ ಉದ್ಯೋಗಿಯನ್ನೇ ಪ್ರೇಮ ವಿವಾಹವಾಗುವಿರಿ. ರಾಶಿಯ ಅಧಿಪತಿ ದ್ವಾದಶದಲ್ಲಿ ಇರುವುದು ಸ್ವಲ್ಪ ಕಿರಿಕಿರಿ ಎನಿಸೀತು. ಸರಕಾರದಿಂದ ಬರುವ ಅಥವಾ ಉದ್ಯೋಗದಿಂದ‌ ಬರುವ ಹಣವು ನಿಮ್ಮ ಕೈ ಸೇರುವುದು. ಕಲಾವಿದರು ಉತ್ತಮ ಸಾಧನೆ ಮಾಡಲು ಅವಕಾಶವನ್ನು ಮಾಡಿಕೊಳ್ಳುವರು. ಸಪರಿವಾರನಾದ ರಾಮನ ಆರಾಧನೆಯನ್ನು ಮಾಡಿ.

ತುಲಾ ರಾಶಿ : ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಮಿಶ್ರ ಫಲ. ರಾಶಿಯ ಅಧಿಪತಿಯಾದ ಶುಕ್ರನು ದಶಮದಲ್ಲಿ ಇದ್ದು ವ್ಯಾಪಾರಿಗಳಿಗೆ ಆರ್ಥಿಕ ಲಾಭವು ಹೆಚ್ಚು. ಹೂಡಿಕೆಯಲ್ಲಿ ಲಾಭವೆಂದರೆ ಗಳಿಸಿಕೊಳ್ಳುವ ಸಾಧ್ಯತೆ ಇದೆ. ಸರ್ಕಾರದ ಉದ್ಯೋಗದಲ್ಲಿ ಬಂದ ತೊಂದರೆಗಳು ನಿವಾರಣೆಯಾಗಿ ಸುಖದಿಂದ ಕಾರ್ಯವನ್ನು ಮಾಡಬಹುದು. ಏಕಾದಶದಲ್ಲಿ ಬುಧನು ಬಂಧುಗಳಿಂದ ಸಹಕಾರ ಸಿಗಲಿದೆ. ನಿಮ್ಮ ಕಾರ್ಯನ್ನು ಕೃತಜ್ಞತಾ ಪೂರ್ವಕವಾಗಿ ಮಾಡಿಕೊಡುವರು. ಇನ್ನು ಗುರುವು ಅಷ್ಟಮದಲ್ಲಿ ಇರುವುದು ಮ‌ೂರನೇ ವ್ಯಕ್ತಿಗಳಿಂದ ಅಪಮಾನವಾಗುವುದು. ಸ್ತ್ರೀಯರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಳ್ಳಲಾರರು. ವಿದೇಶದಲ್ಲಿ ವಾಸವಾಗಿದ್ದವರಿಗೆ ಸ್ಥಾನವನ್ನು ಬದಲಾಯಿಸುವ ಸಂದರ್ಭ ಬರುವುದು. ಮಹಾಕಾಳಿಯನ್ನು ಉಪಾಸನೆ ಮಾಡಿ.

ವೃಶ್ಚಿಕ ರಾಶಿ : ಈ ತಿಂಗಳ ಮೂರನೇ ವಾರವು ನಿಮಗೆ ಮಂಗಲ ಪ್ರದವಾಗಿರಲಿದೆ. ರಾಶಿಯ ಅಧಿಪತಿಯಾದ ಕುಜನು ಸಪ್ತಮದಲ್ಲಿ ಗುರುವಿನ ಜೊತೆ ಇರುವ ಕಾರಣ ಅದರಲ್ಲೂ ಶುಕ್ರನ ಸ್ಥಾನವು ಕುಜನಿಗೆ ಪ್ರಶಸ್ತವಾಗಿದೆ. ಪ್ರೇಮ ವಿವಾಹಕ್ಕೆ ಮುಂದಡಿ ಇಡಲು ಸಾಧ್ಯ. ಎಲ್ಲರಿಂದ ನಿಮಗೆ ಉತ್ತಮ‌ ಪ್ರತಿಕ್ರಿಯೆ ಸಲಹೆ, ಸಹಕಾರಗಳು ಸಿಗಲಿವೆ. ರವಿ ನಾವೂ ಶುಕ್ರರು ನವಮದಲ್ಲಿ ನಿಮಗೆ ನಾನಾ ವಿಧವಾದ ಅನುಕೂಲತೆಗಳನ್ನು ಮಾಡುವರು. ಸರ್ಕಾರ ಕೆಲಸ ಅಥವಾ ಸರ್ಕಾರಿ ಉದ್ಯೋಗಕ್ಕೆ ಸೇರುವ ಅವಕಾಶವನ್ನು ಮಾಡಿಕೊಡುವರು. ಕಲಾವಿದರಿಗೆ ಉತ್ತಮ‌ ಅವಕಾಶವು ತೆರೆದುಕೊಳ್ಳುವುದು. ಉದ್ಯೋಗದಲ್ಲಿ ನಿಶ್ಚಿಂತೆಯಿಂದ ಕಾರ್ಯವನ್ನು ಮಾಡಲು ಸಾಧ್ಯವಾಗುವುದು. ವಿದೇಶಕ್ಕೆ ಹೋಗುವ ಅವಕಾಶವನ್ನು ಬಿಡುವುದು ಬೇಡ. ಅಲ್ಲಿಯೂ ಉತ್ತಮ‌ ರೀತಿಯಲ್ಲಿ ಉದ್ಯೋಗವು ಪ್ರಾಪ್ತವಾಗಲಿದೆ.

ಧನು ರಾಶಿ : ಈ ತಿಂಗಳು ನಿಮಗೆ ಶುಭಪ್ರದವಲ್ಲ. ಗ್ರಹಗತಿಗಳ ಬದಲಾವಣೆಯು ನಿಮಗೆ ಹಿನ್ನಡೆಯನ್ನು ತರುವುದು. ಮೊದಲನೆಯದಾಗಿ ಗುರುಬಲವು ಇಲ್ಲ. ನಿಮ್ಮ ರಾಶಿಯ ಅಧಿಪತಿಯಾದ ಹಾಗೂ ಚತುರ್ಥದ ಅಧಿಪತಿಯೂ ಆಗಿರುವ ಗುರುವು ಷಷ್ಠದಲ್ಲಿ ಇದ್ದಾನೆ. ಕೌಟುಂಬಿಕ ಕಲಹವು ನಿಮ್ಮ ಮನೋವ್ಯಥೆಯನ್ನು ಹೆಚ್ಚಿಸುವುದು. ಸೂರ್ಯ ಹಾಗೂ ಶುಕ್ರರೂ ಅಷ್ಟಮದಲ್ಲಿ ಇರುವುದು ಪಿತ್ತ ಸಂಬಂಧವಾದ ಖಾಯಿಲೆಯಿಂದ ಬಳಲುವಿರಿ. ಬುಧನು ನವಮದಲ್ಲಿ ಇರುವುದು ಸ್ವಲ್ಪ ಚೇತರಿಕೆಯಿಂದ ಇರಲು ಸಾಧ್ಯವಾಗುವುದು. ಸಂಗಾತಿಯು ನಿಮ್ಮ ಬೆಂಬಲಕ್ಕೆ ಇರುವುದು ನಿಮಗೆ ಮಾನಸಿಕ ಸ್ಥೈರ್ಯವನ್ನು ಕೊಡುವುದು. ಉದ್ಯೋಗವು ನಿಮ್ಮ ಭವಿಷ್ಯದ ಗಟ್ಟಿತನಕ್ಕೆ ಪೂರಕವಾಗಿರಲಿದೆ. ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ.

ಮಕರ ರಾಶಿ : ಈ ತಿಂಗಳ ಮೂರನೇ ವಾರದಲ್ಲಿ ಗ್ರಹಗಳ ಬದಲಾವಣೆಯು ಈ ರಾಶಿಯವರಿಗೆ ಶುಭಪ್ರದವಾಗಿದೆ. ಗುರುವು ಪಂಚಮದಲ್ಲಿ ಇರುವನು. ‌ಕುಜನೂ ಜೊತೆಗಿರುವ ಕಾರಣ ರಾಜನಿಗೆ ಸಮಾನವಾದ ಗೌರವವನ್ನು ಪಡೆಯುವ ಸನ್ನಿವೇಶ ಬರುವುದು. ಈ ರಾಶಿಯು ಕುಜನ ಉಚ್ಚ ರಾಶಿಯಾಗಿದ್ದು ಆತ ತನ್ನ ಮಿತ್ರನ ಮನೆಯಲ್ಲಿ ಇರವ ಕಾರಣ ಅಂದುಕೊಂಡ ಕಾರ್ಯದಲ್ಲಿ ಯಶಸ್ಸು. ವಿದೇಶ ಪ್ರವಾಸಕ್ಕೆ ಯೋಜನೆ ಸಿದ್ಧವಾಗಿದ್ದರೆ ಈಗ ಶುಭಕಾಲ. ಸೂರ್ಯನು ಕರ್ಕಾಟಕ ರಾಶಿಗೆ ಬಂದು ದಾಂಪತ್ಯದಲ್ಲಿ ಬರುವ ಬಿರುಕನ್ನು ದೂರಮಾಡುವನು. ವಿವಾಹಕ್ಕೆ ಯೋಗ್ಯ ಸಂಗಾತಿಯನ್ನೂ ಕೊಡಿಸುವನು. ಬುಧನು ಅಷ್ಟಮದಲ್ಲಿ ಇರುವ ಕಾರಣ ಆರೋಗ್ಯವು ಹದತಪ್ಪಬಹುದು. ಅಜಾಗರೂಕರಾಗಿ ಇರುವುದು ಬೇಡ.

ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಜುಲೈ ಮೂರನೇ ವಾರವು ಶುಭಾಶುಭ ಫಲಗಳು ಪ್ರಾಪ್ತವಾಗಲಿದೆ. ರಾಶಿಯ ಅಧಿಪತಿ ಶನಿಯು ತನ್ನ ಮೂಲತ್ರಿಕೋಣದಲ್ಲಿ ಇರುವುದು ಈ ರಾಶಿಯವರಿಗೆ ಶುಭ.‌ ಎಂತಹ ಕಷ್ಟವಿದ್ದರೂ ವಿಚಲಿತರಾಗದೇ ಅದೇ ಕಾರ್ಯವನ್ನು ಮುನ್ನಡೆಸುವಿರಿ. ಷಷ್ಠದಲ್ಲಿ ರವಿಯು ಸ್ಥಿತನಾಗಿ ಸಾಂಸಾರಿಕ ಕ್ಲೇಶವನ್ನು ಹೆಚ್ಚಿಸುವನು. ಬುಧನು ಸಪ್ತಮದಲ್ಲಿ ಇರುವುದು ಶ್ರೇಯಸ್ಸಾದರೂ ರವಿಯ ಗೃಹವಾದ ಕಾರಣ ಸಾಮರಸ್ಯದ ಕೊರತೆ ಕಾಣುವುದು. ವಿವಾಹದ ನಿಶ್ಚಯವಾದರೂ ಕುಟುಂಬಗಳ ಹೊಂದಾಣಿಕೆಯಲ್ಲಿ ಐಕ್ಯಮತ್ಯ ಕಾಣದೇ ನಿಲ್ಲುದು. ವಿದೇಶ ಪ್ರವಾಸವನ್ನು ಉದ್ಯೋಗದ ನಿಮಿತ್ತ ಮಾಡುವಿರಿ. ಹನುಮಾನ್ ಚಾಲೀಸ್ ನಿಮಗೆ ಕಾರ್ಯದಲ್ಲಿ ಪ್ರಗತಿಯನ್ನು ತಂದುಕೊಡುವುದು.

ಮೀನ ರಾಶಿ : ಇದು ಜುಲೈ ತಿಂಗಳ ಮೂರನೇ ವಾರ. ಗ್ರಹಗಳ ಬದಲಾವಣೆಯು ನಿಮಗೆ ಮಿಶ್ರಫಲಪ್ರದವಾಗಿದೆ. ರಾಶಿಯ ಅಧಿಪತಿಯಾದ ಗುರು ತೃತೀಯದಲ್ಲೂ ಶತ್ರುವಿನ ರಾಶಿಯಲ್ಲಿಯೂ ಇರುವ ಕಾರಣ ಮಾನಸಿಕ ಕ್ಷೋಭೆ, ಪ್ರಯತ್ನದಲ್ಲಿ ಅಪೂರ್ಣತೆ ಕಾಣಿಸುವುದು.‌ ಬೇಸರ ಬಂದು ವಹಿಸಿಕೊಂಡ ಕಾರ್ಯವನ್ನು ಅರ್ಧಕ್ಕೇ ಬಿಡುವಿರಿ. ವಿದೇಶದಲ್ಲಿ ವಾಸಿಸುವವರಿಗೆ ಸಂಕಷ್ಟ ಬರುವುದು. ಮತ್ತೇನೋ ಉದ್ಯೋಗ ಮಾಡುವ ಆಲೋಚನೆಗಳು ಬರುವುದು. ಪಂಚಮದಲ್ಲಿ ಸೂರ್ಯ ಹಾಗೂ ಶುಕ್ರರು ಇರುವುದು ವಿದ್ಯಾಭ್ಯಾಸದ ಬಗ್ಗೆ ಏಕಾಗ್ರತೆ ಬರಲಿದೆ. ಬುಧನು ಸಿಂಹವನ್ನು ಪ್ರವೇಶಿಸುವನು. ಹಿತಶತ್ರುಗಳಿಂದ ಹಿನ್ನಡೆಯಾಗಲಿದೆ. ಗುರುಚರಿತ್ರೆಯನ್ನು ನಿತ್ಯವೂ ಮನನ ಮಾಡಿ.

-ಲೋಹಿತ ಹೆಬ್ಬಾರ್ – 8762924271 (what’s app only)