Daily horoscope July 14, 2024: ಮಕರ ರಾಶಿಯವರಿಗೆ ಸಂಗಾತಿ ಸರಿಯಾಗಿ ಸ್ಪಂದಿಸದೆ ಬೇಸರ; ದ್ವಾದಶ ರಾಶಿ ದಿನ ಭವಿಷ್ಯ ಇಲ್ಲಿದೆ

14 ಜುಲೈ​​ 2024ರ​​ ನಿಮ್ಮ ರಾಶಿಭವಿಷ್ಯ: ಅನೇಕ ಜನರು ಮನರಂಜನೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಘಟಿಸುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ. ಭಾನುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ.

Daily horoscope July 14, 2024: ಮಕರ ರಾಶಿಯವರಿಗೆ ಸಂಗಾತಿ ಸರಿಯಾಗಿ ಸ್ಪಂದಿಸದೆ ಬೇಸರ; ದ್ವಾದಶ ರಾಶಿ ದಿನ ಭವಿಷ್ಯ ಇಲ್ಲಿದೆ
ಮಕರ ರಾಶಿಯವರಿಗೆ ಸಂಗಾತಿ ಸರಿಯಾಗಿ ಸ್ಪಂದಿಸದೆ ಬೇಸರ; ದ್ವಾದಶ ರಾಶಿ ದಿನ ಭವಿಷ್ಯ ಇಲ್ಲಿದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2024 | 5:37 PM

ಜಾತಕವು ಸಾಮಾನ್ಯವಾಗಿ ಜ್ಯೋತಿಷ್ಯದ (horoscope) ಆಧಾರದ ಮೇಲೆ ಮುನ್ಸೂಚನೆ ಅಥವಾ ಭವಿಷ್ಯವನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ಜನ್ಮ ಸಮಯ ಮತ್ತು ಸ್ಥಳಕ್ಕೆ ಸಂಬಂಧಿಸಿದಂತೆ ಗ್ರಹಗಳು ಮತ್ತು ನಕ್ಷತ್ರಗಳನ್ನು ಒಳಗೊಂಡಿರುತ್ತದೆ. ಅನೇಕ ಜನರು ಕುತೂಹಲಕ್ಕೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಸಂಭವನೀಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ. ಹಾಗಾದರೆ ಜುಲೈ 14ರ ದಿನ ಭವಿಷ್ಯ ಮತ್ತು ಪಂಚಾಂಗ ಹೀಗಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಪರಿಘ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28ರಿಂದ 19:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12 :39 ರಿಂದ 12:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:52 ರಿಂದ 05:28ರ ವರೆಗೆ.

ಮೇಷ ರಾಶಿ: ಇಂದು ಯಾವುದನ್ನೂ ಕೂಡಲೇ ಒಪ್ಪಿಕೊಳ್ಳುವ ಮನಸ್ಸು ಬಾರದು. ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ.‌ ನೀವು ಇಂದು ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಆಯ್ಕೆಗಳ ವಿಚಾರದಲ್ಲಿ ಗೊಂದಲದಲ್ಲಿ ಇರಬೇಕಾಗಬಹುದು. ಶತ್ರುಗಳ ಪರಾಜಯವನ್ನು ಕಂಡು ಸಂತಸಪಡುವಿರಿ. ಇಂದು ಹೆಚ್ಚು ಹುಡುಗಾಟದ ಮಾನಸಿಕತೆ ಇರಲಿದೆ ಶರೀರದಲ್ಲಿ ಅಸಮತೋಲನವು ಇರಲಿದೆ. ಎಲ್ಲದರಲ್ಲಿಯೂ ಗುಣಮಟ್ಟವನ್ನು ಕಾಣುವಿರಿ.‌ ಎಂತಹ ನೋವನ್ನು ಸಹಿಸುವ ಸಾಮರ್ಥ್ಯ ಇದೆ ಎಂದು ದುಸ್ಸಾಹಸಕ್ಕೆ ಹೋಗುವುದು ಬೇಡ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ಸಮಯ ವ್ಯರ್ಥವಾಯಿತೆಂದು ವ್ಯಥೆ ಪಡುವಿರಿ.

ವೃಷಭ ರಾಶಿ: ನಿಮಗೆ ಇಂದು ಯಾವುದಾದರೂ ಆಸೆ ತೋರಿಸಿ ಕಾರ್ಯವನ್ನು ಮಾಡಿಸಿಕೊಳ್ಳುವರು. ನಿಮಗೆ ಆತ್ಮವಿಶ್ವಾಸವನ್ನು ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇಂದು ನಿಮ್ಮ ವ್ಯಕ್ತಿತ್ವದ ಸ್ಪಷ್ಟ ಚಿತ್ರಣವನ್ನು ನಿಮ್ಮವರಿಗೆ ತೋರಿಸುವಿರಿ. ಸಂಗಾತಿಯಿಂದ ನೀವು ಸಾಕಷ್ಟು ಅತಿ ಹೆಚ್ಚು ಅನುರಾಗವನ್ನು ಪಡಯುವಿರಿ. ನಿಮ್ಮವರ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ಹಳೆಯ ದಿನಗಳು ನಿಮ್ಮನ್ನು ಕಾಡಬಹುದು. ವಿದೇಶ ಪ್ರಯಾಣವನ್ನು ಮಾಡುವವರು ಹೆಚ್ಚು ಸಿದ್ಧತೆಯಲ್ಲಿ ತೊಡಗುವರು. ದಿನಾಂತ್ಯವು ಬಹಳ ಆನಂದದಲ್ಲಿ ಮುಕ್ತಾಯವಾಗುವುದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಯಾರ ಸಹಾನುಭೂತಿಯನ್ನೂ ಪಡೆಯಲು ಇಚ್ಛಿಸುವುದಿಲ್ಲ. ಉತ್ತಮವಾದ ಉಡುಗೊರೆ ನಿಮ್ಮ ಕೈ ಸೇರಬಹುದು.

ಮಿಥುನ ರಾಶಿ: ಇಂದು ನೀವು ಎಲ್ಲದಕ್ಕೂ ಸರಿಯಾದ ವೇಳಾಪಟ್ಟಿ ಹೊಂದಿಸಿಕೊಂಡು ಕಾರ್ಯವನ್ನು ಮಾಡಿದರೆ ಸರಿಯಾಗಿ ಮುಗಿಯಲು ಸಾಧ್ಯ. ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ಇಂದು ನೀವು ಕುಟುಂಬದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವಿರಿ. ಬೇಡವಾದ ಸಂಗತಿಗಳೇ ನಿಮ್ಮ ಕಿವಿಗೆ ಬೀಳಬಹುದು. ನಿಮ್ಮ ಸಾಧನೆಗೆ ಗೌರವ ಸಿಗಲಿದೆ. ಸಣ್ಣ ಆದಾಯವನ್ನೂ ಕಡೆಗಣಿಸುವುದು ಬೇಡ. ಉಳಿತಾಯದ ಕಡೆಗೆ ಗಮನವಿರಲಿ. ಆಪ್ತರ ಜೊತೆ ಖುಷಿಯನ್ನು ಹಂಚಿಕೊಳ್ಳುವಿರಿ. ಅತಿಯಾದ ಮಾತನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಅಪನಂಬಿಕೆಯನ್ನು ಸರಿ‌ ಮಾಡಿಕೊಳ್ಳುವುದು ಕಷ್ಟವಾಗುವುದು. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಯಾರ ಜೊತೆಗೂ ನೇರವಾದ ಮಾತುಗಳನ್ನು ಆಡದೇ ಕುಹಕವಾಡುವಿರಿ.‌ ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು.

ಕರ್ಕಾಟಕ ರಾಶಿ: ಇಂದು ಮನೆಯ ಕಾರ್ಯವನ್ನು ನಿರ್ವಹಿಸಲು ಸಮರ್ಥರಾಗುವುದಿಲ್ಲ. ನೀವು ಇಂದು ದಿನದ ಚಟುವಟಿಕೆಗಳನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ವೃತ್ತಿಜೀವನವು ನಿಮ್ಮನ್ನು ಕೈಬೀಸಿ ಕರೆದರೂ ನಿಮ್ಮಲ್ಲಿ ನಿರಾಸಕ್ತಿ ಇರುವುದು. ಸಾಲದ ಬಗ್ಗೆ ಹೆಚ್ಚು ಚಿಂತೆ ಮಾಡುವಿರಿ. ರಾಜಕಾರಣಿಗಳು ಅತ್ಯಂತ ಸಂತೋಷದಿಂದ ಇರುವ ದಿನವಾಗಿದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಎಲ್ಲವನ್ನೂ ನಿರ್ಲಕ್ಷ್ಯ ಮಾಡುವುದು ಬೇಡ. ಬರಬೇಕಾದ ಧನಾಗಮನದ ನಿರೀಕ್ಷೆಯಲ್ಲಿ ಇಂದು ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ಬೇಕೆಂದೇ ನಿಮ್ಮನ್ನು ಕೆಣಕಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ಕಛೇರಿಯಲ್ಲಿ ನಿಮ್ಮ ಮೇಲೆ ಸಹಾನುಭೂತಿ ಇರಬಹುದು.

ಸಿಂಹ ರಾಶಿ: ಸಾಮಾಜಿಕ ಚಟುವಟಿಕೆಯಲ್ಲಿ ನಿಮ್ಮ ಪಾತ್ರ ಕಾಣಿಸುವುದು. ಇಂತಹ ವಿಷಯಗಳನ್ನು ನಿಭಾಯಿಸುವಲ್ಲಿ ನೀವು ನಿಜವಾಗಿಯೂ ಪ್ರವೀಣರಾಗಿರುತ್ತೀರಿ. ನೀವು ಇಂದು ಪ್ರಾಮಾಣಿಕತೆಯ ಫಲವನ್ನು ಕಾಣಲಿದ್ದೀರಿ. ಸಂಗಾತಿಯಿಂದ ಶುಭಸಮಾಚಾರವು ಬರಲಿದೆ. ಸಿಟ್ಟಿಂದ ಕೆಲಸವನ್ನು ಸಾಧಿಸಲಾಗದು. ತಾಳ್ಮೆ ಮತ್ತು ಕ್ರಮಬದ್ಧ ತಂತ್ರದಿಂದ ಸಾಧ್ಯವಾಗುವುದು. ಮನೋರಂಜನೆಯನ್ನು ಇಷ್ಟಪಡುವಿರಿ. ಹಿತಶತ್ರುಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು. ನಿರೀಕ್ಷೆಗಳು ಹುಸಿಯಾಗಿ ಹತಾಶ ಭಾವವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಇಂದು ನೀವು ಸುಳ್ಳು ಮಾತಿನಿಂದ ನಂಬಿಕೆಯನ್ನು ಕಳೆದುಕೊಳ್ಳಬಹುದು. ಅಪರಿಚಿತರಿಗೆ ಮಾಡಿದ ಸಹಾಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ಭದ್ರತೆಯಲ್ಲಿ‌ ಲೋಪವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಹಾಗೆಯೇ ಉಳಿದುಕೊಂಡಿದ್ದ ಮನೆಯ ಕಾರ್ಯವನ್ನು ಮಾಡಿ ಮುಗಿಸುವಿರಿ. ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಬೇಕು. ಕಷ್ಟವೇ ನಿಮಗೆ ಎತ್ತರಕ್ಕೇರುವ ಸಾಧನವಾಗಲಿದೆ. ಕೆಲಸದ ತಪ್ಪನ್ನು ಯಾರಮೇಲೂ ಹಾಕದೇ ನೀವೇ ಸರಿ ಮಾಡಿಕೊಳ್ಳುವಿರಿ. ಪ್ರೇಮವ್ಯವಹಾರದಲ್ಲಿ ಸಿಕ್ಕಿಕೊಂಡು ಒದ್ದಾಡುವಿರಿ. ಅನುಕರಣೆಯಿಂದ ನಿಮಗೆ ಅಪಾಯ ಸಾಧ್ಯತೆ ಇದೆ. ಬಂಧುಗಳ ಸಹಾಯವನ್ನು ಪಡೆದು ನೆಮ್ಮದಿಯಿಂದ ಇರಿ. ಸುಳ್ಳಾಡಿ ಸಿಕ್ಕಿಕೊಳ್ಳುವಿರಿ. ನಿಮ್ಮ‌ ಮೇಲಿನ ವಿಶ್ವಾಸವು ಕಡಿಮೆ ಆದೀತು. ಏಕಾಂತವನ್ನು ನೀವು ಇಂದು ಹೆಚ್ಚು ಬಯಸುವಿರಿ. ಯಾರ ಒತ್ತಡಕ್ಕೋ ಮಣಿದು ಸುಳ್ಳನ್ನಾಡುವ ಸನ್ನಿವೇಶ ಬರುವುದು. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ನಿಜವಾದರೂ, ಅದಕ್ಕೂ ವಿಧಾನವಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.‌

ತುಲಾ ರಾಶಿ: ಎಂತಹ ಆಪ್ತರಾದರೂ ನಡುವೆ ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಮನೆಯ ಕೆಲಸ ಕಾರ್ಯಗಳು ಪರ್ವತಾಕಾರದಲ್ಲಿ ತೋರುವುದು. ಆರಂಭದ ಗೊಂದಲೂ ಆದೀತು. ವಾಹನ ಖರೀದಿಗೆ ಪರ ಊರಿಗೆ ಹೋಗುವಿರಿ. ಶತ್ರುಗಳ ಮಸಲತ್ತು ನಿಮಗೆ ಗೊತ್ತಾಗಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುವಿರಿ. ಮನವೊಲಿಸುವ ಪ್ರಯತ್ನ ಮಾಡುವಿರಿ. ಸಾಲ ಮರುಪಾವತಿಯ ವಿಚಾರದಲ್ಲಿ ಆತಂಕವಿರಲಿದೆ. ಇಂದಿನ ನಿಮ್ಮ ಸ್ಥಿತಿಯನ್ನು ನೋಡಿ ಆಡಿಕೊಳ್ಳುವರು. ಆಪ್ತರ ಭೇಟಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಇಂದು ಹೆಚ್ಚು ನಗಲಿದ್ದೀರಿ. ಯಾವುದೇ ಗೌಪ್ಯವನ್ನು ನೀವು ಬಿಟ್ಟುಕೊಡಲಾರಿರಿ. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ. ಯಾರ ವಿರೋಧವನ್ನೂ ನೀವು ಸಹಿಸಲಾರಿರಿ. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯು ನಿಮಗೆ ಬಹಳ‌ ಮುಖ್ಯವಾದುದಾಗಿದೆ.

ವೃಶ್ಚಿಕ ರಾಶಿ: ಇಂದು ನಿಮಗೆ ಅವಶ್ಯಕವಾದ ರಾಜಕೀಯ ವ್ಯಕ್ತಿಗಳಿಂದ ಮಾಡಿಸಿಕೊಳ್ಳುವಿರಿ. ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಸ್ವಂತ ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡುವಿರಿ.‌ ಅಂದುಕೊಂಡ ಕೆಲಸವು ಪೂರ್ಣವಾಗುವುದು. ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಲು ಭಯಪಡುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರೀತು. ಬೇಕಾದ ವಸ್ತುವನ್ನು ನೀವು ಸರಿಯಾದ ಸಮಯಕ್ಕೆ ಪಡೆಯಲಾರಿರಿ. ಸಂಗಾತಿಯ ಮಾತುಗಳನ್ನು ಕೇಳುವ ತಾಳ್ಮೆ ಇರದು. ನಿಮಗೆ ಅಗೌರವ ತೋರಿಸಿಯಾರು. ಇಂತಹುದನ್ನು ನಿರ್ಲಕ್ಷಿಸುವುದು ಉತ್ತಮ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ನಿಮಗೆ ಇಷ್ಟವಾಗದ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ.

ಧನು ರಾಶಿ: ಇಂದು ನೀವು ಬಹಳ ಕಾಲದ ಅನಂತರ ಕುಟುಂಬದ ಜನರ ಜೊತೆ ಹೆಚ್ಚು ಬೆರೆಯುವ ಅವಕಾಶ ಸಿಗುವುದು. ಮನೆಯಲ್ಲಿಯೇ ಇದ್ದು ಮನೆಯಲ್ಲಿಯೇ ಆನಂದವನ್ನು ಪಡೆಯುವಿರಿ. ಯಾರದೋ ಯೋಜನೆಯನ್ನು ನೀವು ಬಳಸಿಕೊಂಡು ಪ್ರಸಿದ್ಧಿ ಪಡೆಯುವಿರಿ. ಎಲ್ಲವನ್ನೂ ಕಳೆದುಕೊಂಡೆ ಎಂಬ ನೋವು ನಿಮ್ಮನ್ನು ಅಕಾರ್ಯದಲ್ಲಿ ತೊಡಗುವಂತೆ ಮಾಡೀತು. ಆರ್ಥಿಕ ಅಸಮತೋಲನವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ನಿಮ್ಮವರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿಕ್ಕಿಲ್ಲ. ಅನಿರೀಕ್ಷಿತ ಸುದ್ದಿಗಳಿಂದ ನಂಬಿಕೆ‌ ಬರದಿದ್ದರೂ ವಾಸ್ತವವಾಗಿ ಸತ್ಯವಾಗಿರುತ್ತದೆ. ನಿಮ್ಮ ಮಾತುಗಳಿಂದ ಸ್ವಭಾವವು ಸ್ಪಷ್ಟವಾಗುವುದು.‌ ಬೇಕಾದವರ ಬಳಕೆ ಹೆಚ್ಚಾಗುವುದು. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವುದರಿಂದ‌ ಕಲಹವಾಗಬಹುದು. ಹಿರಿಯರ ಪ್ರಶಂಸೆ ಸಿಗಲಿದೆ.

ಮಕರ ರಾಶಿ: ಇಂದು ನೀವು ಹೊಸತನ್ನು ಕಲಿಯುವ ಆಸೆ ಇರುವುದು. ನಿಮ್ಮ ಕಡೆಯಿಂದ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ಸಂಗಾತಿಯು ಸ್ಪಂದಿಸುತ್ತಿಲ್ಲ ಸರಿಯಾಗಿ ಎಂಬ ವಿಚಾರದಲ್ಲಿ ಬೇಸರವಿರಲಿದೆ. ಖರ್ಚುಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಅಪರಿಚಿತರು ನಿಮ್ಮ ಸ್ನೇಹದ ನೆಪದಲ್ಲಿ ಬರಬಹುದು. ಬೇಕಾದಷ್ಟು ಅವಕಾಶವಿದ್ದರೂ ನೀವು ಬಳಸಿಕೊಳ್ಳದೇ ಸುಮ್ಮನಾಗುವಿರಿ. ಸಾಮಾಜಿಕ ಸೇವೆಯಲ್ಲಿ ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಸರಿಯಾಗಿ ನಿರ್ಧರಿಸಿಕೊಳ್ಳುವರು. ನಿಮ್ಮ ಕಲ್ಪನೆಗಳು ವಸ್ತುಸ್ಥಿತಿಗೆ ಹತ್ತಿರವಾಗಿರಲಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು.

ಕುಂಭ ರಾಶಿ: ಇಂದು ಮನೆಯವರಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗುವುದು. ಕಾರ್ಯದ ಸ್ಥಳದಿಂದ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಇಂದು ನಿಮ್ಮ ಸ್ವಂತ ಆಲೋಚನೆಗಳಿಂದ ಮುಂದುವರಿಯಿರಿ. ಇನ್ನೊಬ್ಬರ ಮಾತಿಗೂ ಬೆಲೆ ಇರಲಿ. ಸಂಗಾತಿಯನ್ನು ದ್ವೇಷಿಸುವಿರಿ. ವ್ಯಾಪಾರದಲ್ಲಿ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ.‌ ಹೆಚ್ಚಿನ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮ ಅನುಕೂಲತೆಗೆ ತಕ್ಕಂತೆ ಇಂದಿನ ದಿನವನ್ನು ಇಟ್ಟುಕೊಳ್ಳಿ. ನಿಮಗೆ ಇನ್ನೊಬ್ಬರ ಒತ್ತಾಯವು ಕಷ್ಟಕೊಡುವುದು. ಬೇಡ ಸಂಗತಿಗಳನ್ನು ಮನಸ್ಸಿನಿಂದ ತೆಗೆಯಿರಿ. ನೀವು ಎಣಿಸಿದಂತೆ ಆಗಿದ್ದು, ನಿಮಗೂ ಅಚ್ಚರಿಯಾದೀತು. ವಿದ್ಯಾಭ್ಯಾಸವನ್ನು ಚೆನ್ನಾಗಿ ಮಾಡಬೇಕಾಗುವುದು. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ.

ಮೀನ ರಾಶಿ: ನಿಮ್ಮ ಏಕಾಂತಕ್ಕೆ ಭಂಗ ಉಂಟಾಗಬಹುದು. ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಇಂದು ನಿಮ್ಮ ನೋವನ್ನು ಯಾರ ಜೊತೆಯೂ ಹಂಚಿಕೊಳ್ಳಲು ಹೋಗುವುದಿಲ್ಲ. ಕಷ್ಟವಾದರೂ ಕೆಲಸವನ್ನು ಮಾಡಬೇಕಾದೀತು. ಹಿಂಸೆಯ ಸ್ವಭಾವವು ನಿಮಗೆ ಇಷ್ಟವಾಗದು. ಹೂಡಿಕೆಯಲ್ಲಿ ನಿಮಗೆ ಗೊದಲವಾಗಬಹುದು. ಅಪರೂಪದ ಬಂಧುಗಳ ಭೇಟಿಯಾಗಲಿದೆ. ಉದ್ಯೋಗದಲ್ಲಿ ನೀವು ಸ್ವತಂತ್ರ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಎಲ್ಲರ ಮೇಲೂ ಅನುಮಾನದ ದೃಷ್ಟಿ ಇರಲಿದೆ. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆ ಇರಲಿದೆ. ಶಿಕ್ಷಕರಾಗಿದ್ದರೆ ನಿಮ್ಮಲ್ಲಿ ಗೊಂದಲಗಳು ಬೇಡ. ಸ್ಪಷ್ಟತೆ ಇರಲಿ.‌ ಯಾರನ್ನೋ‌ ಅಪಮಾನಿಸಲು ಹೋಗುವುದು ಬೇಡ. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಬೇರೆ ಕಾರ್ಯದಿಂದಾಗಿ ನಿಮ್ಮ ಮುಖ್ಯ‌ ಕಾರ್ಯವು ಹಿಂದುಳಿಯುವುದು.

ಲೋಹಿತ ಹೆಬ್ಬಾರ್ – 8762924271 (what’s app only)

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್