ಜೂನ್ 16 ರಿಂದ 22 ರವರೆಗೆ ಮೂರನೇ ವಾರವಾಗಿದ್ದು, ವಿಶೇಷವಾಗಿ ಮೂರು ಗ್ರಹರು ತಮ್ಮ ಸ್ಥಾನವನ್ನು ಬದಲಾಯಿಸುವರು. ಸೂರ್ಯ ಬುಧ ಹಾಗೂ ಶುಕ್ರರು ಮಿಥುನರಾಶಿಯನ್ನು ಪ್ರವೇಶಿಸಿದ್ದು ಮಿಥುನವು ಬುಧನ ಸ್ಥಾನವೇ ಆಗಿದೆ. ಉಳಿದ ಈರ್ವರೂ ಮಿತ್ರರೂ ಆಗಿರುವುದರಿಂದ ಆಶುಭದ ಪ್ರಮಾಣವೂ ಕಡಿಮೆ ಇರಲಿದೆ.
ಮೇಷ ರಾಶಿ : ಜೂನ್ ತಿಂಗಳ ಈ ವಾರದಲ್ಲಿ ಶುಭಫಲವು ಇರಲಿದೆ. ಗುರುವು ದ್ವಿತೀಯದಲ್ಲಿ ಇರುವುದು ನಿಮ್ಮ ಪೂರ್ವಿಕ ಸಂಪತ್ತು ಸಿಗುವುದು. ಏಕಾದಶದಲ್ಲಿ ಶನಿಯು ನಿಮಗೆ ಉತ್ತಮ ಫಲಿತಾಂಶವನ್ನು ಕೊಡುವನು. ತೃತೀಯದಲ್ಲಿ ಸೂರ್ಯ ಶುಕ್ರ ಬುಧರು ನಿಮಗೆ ಪೂರ್ಣಪ್ರಮಾಣದ ಇಷ್ಟಾರ್ಥಗಳನ್ನು ಕೊಡಲಾರರು. ಬಂಧುಗಳಿಂದ ನಿರ್ಲಕ್ಷ್ಯ ಆದೀತು. ಕುಜನು ಸ್ವರಾಶಿಯಲ್ಲಿಯೂ ಸ್ವಕ್ಷೇತ್ರದಲ್ಲಿಯೂ ಇರುವುದರಿಂದ ಹೆದರಿಕೆ ನಿಮ್ಮಿಂದ ದೂರವಾಗಲಿದೆ.
ವೃಷಭ ರಾಶಿ : ಈ ತಿಂಗಳ ಮೂರನೇಯ ವಾರದಲ್ಲಿ ಮಧ್ಯಫಲವೇ ಇರುವುದು. ಗುರುವು ಸ್ವರಾಶಿಯಲ್ಲಿ ಇರುವ ಕಾರಣ ಸ್ವಲ್ಪ ತೊಂದರೆಗಳು ದೂರವಾಗುವುದು. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸಿ. ಯಾರದೋ ಒತ್ತಾಯಕ್ಕೆ ಮಣಿಯುವುದು ಬೇಡ. ನಿಮ್ಮನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕಾಗುವುದು. ಶಾಂತಸ್ವರೂಪಿಣಿಯಾದ ದೇವಿಯನ್ನು ಆರಾಧಿಸಿ, ಮುಂದಡಿಗೆ ಸಹಾಯವಾಗಲಿದೆ.
ಮಿಥುನ ರಾಶಿ : ಜೂನ್ ತಿಂಗಳ ಮೂರನೇ ವಾರದ ರಾಶಿ ಚಕ್ರದ ಮೂರನೇ ರಾಶಿಯವರಿಗೆ ಧೈರ್ಯವನ್ನು ಸ್ಥೈರ್ಯಗಳಿದ್ದರೂ ಏನೋ ಭಯವು ಕಾಡುವುದು. ಗುರುವು ದ್ವಾದಶದಲ್ಲಿ ಇರುವ ಕಾರಣ ಎಲ್ಲ ಕಾರ್ಯಗಳಿಂದ ಹಿನ್ನಡೆ ಅನುಭವಿಸಬೇಕಾಗುವುದು. ಉದ್ಯೋಗದಲ್ಲಿ ಕಿರಿಕಿರಿ ಕಂಡು ಬಿಡುವುದು ಸೂಕ್ತ ಎನಿಸುವುದು. ಯಂತ್ರೋಪಕರಣಗಳ ಮಾರಾಟಗಾರರು ಲಾಭಗಳಿಸುವರು. ಮಹಾವಿಷ್ಣುವಿನ ಸ್ತೋತ್ರವನ್ನು ನಿರಂತರ ಮಾಡಿ.
ಕರ್ಕಾಟಕ ರಾಶಿ : ರಾಶಿ ಚಕ್ರದ ನಾಲ್ಕನೆಯ ರಾಶಿಯವರಿಗೆ ಮಧ್ಯಫಲವು ಇರುವುದು. ಸೂರ್ಯ ಬುಧ ಶುಕ್ರರು ದ್ವಾದಶದಲ್ಲಿ ಇರುವ ಕಾರಣ ವಾಹನದ ವಿಚಾರದಲ್ಲಿ ಬಹಳ ಎಚ್ಚರಿಕೆ ಬೇಕು. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ನಿಮ್ಮ ಮನಸ್ಸಿನ ಮಾತನ್ನು ಆಲಿಸಿ. ಸಮಸ್ಯೆಗಳನ್ನು ದೊಡ್ಡದಾಗಿಸಿಕೊಳ್ಳುವಿರಿ. ಉಗುರಿನಲ್ಲಿ ಹೋಗುವುದಕ್ಕೆ ಕತ್ತಿಯನ್ನು ಎತ್ತಬೇಕಾಗಬಹುದು. ಮಹಾದೇವಿಯ ಅನುಗ್ರಹವು ಬೇಕಾಗುವುದು.
ಸಿಂಹ ರಾಶಿ : ಜೂನ್ ತಿಂಗಳ ಮೂರನೆ ವಾರ ಈ ರಾಶಿಯವರಿಗೆ ಸರ್ಕಾರದಿಂದ ಆಗಬೇಕಾದ ಕಾರ್ಯಗಳು ಆಗಲಿವೆ. ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡುವವರಿಗೆ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಕೆಲವು ಅನಿರೀಕ್ಷಿತ ಬದಲಾವಣೆಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಇದು ಸಮಾಜದಲ್ಲಿ ನಿಮ್ಮ ಖ್ಯಾತಿ, ಗೌರವವನ್ನೂ ಹೆಚ್ಚಿಸುತ್ತದೆ. ಮಾತನ್ನು ಅಳತೆ ಮೀರಿ ಆಡುವಿರಿ. ಶಿವನಿಗೆ ರುದ್ರಾಭಿಷೇಕ ಮಾಡಿಸಿ.
ಕನ್ಯಾ ರಾಶಿ : ಈ ತಿಂಗಳ ಮೂರನೇ ವಾರ ಶುಭಫಲವು ಇರಲಿದೆ. ದಶಮದಲ್ಲಿ ಸೂರ್ಯ, ಬುಧ, ಶುಕ್ರರು ಇರುವುದು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉನ್ನತಿ ಸಿಗಲಿದೆ. ಅನ್ಯಾನ್ಯ ಸ್ಥಾನವನ್ನೂ ನಿರ್ವಹಿಸಬೇಕಾಗುವುದು. ವೈವಾಹಿಕ ಜೀವನದ ಬಗ್ಗೆ ಚಿಂತೆ ಇರಲಿದೆ. ಹಿರಿಯರಿಂದ ಬೇಕಾದ ಸಲಹೆಯನ್ನು ಪಡೆದು ಮುನ್ನಡೆಯಿರಿ. ವಿವಾಹ ಪ್ರತಿಬಂಧಕಕ್ಕೆ ಪಿತೃಗಳ ಆರಾಧನೆ ಅವಶ್ಯಕ.
ತುಲಾ ರಾಶಿ : ಜೂನ್ ತಿಂಗಳ ಮೂರನೇ ವಾರವು ಈ ರಾಶಿಯವರಿಗೆ ಮಿಶ್ರಫಲ. ಅಷ್ಟಮದಲ್ಲಿ ಗುರುವು ನಿಮ್ಮ ಬಗ್ಗೆ ನಕಾರಾತ್ಮಕ ವಾರ್ತೆಗಳು ಹೆಚ್ಚು ಬರುವಂತೆ ಮಾಡುವನು. ನಿಮ್ಮ ಪ್ರತಿ ಕೆಲಸ ಕಾರ್ಯಗಳಲ್ಲಿ ಯಶಸ್ಸಿದ್ದು ಅನುಭವಿಸುವ ಜಾಣ್ಮೆ ಇಲ್ಲ. ಬಂಧುಗಳಿಂದ ಪ್ರಶಂಸೆ ಇರುವುದು. ವಿವೇಚನೆಯನ್ನು ಬಳಸಿ ಕೆಲಸ ಮಾಡುವಿರಿ. ಕಲಾವಿದರು ಸ್ವತಂತ್ರವಾಗಿ ಬೆಳೆಯುವ ಅವಕಾಶ ಬರುವುದು. ಪಂಚಮದ ಶನಿಯಿಂದ ಕಾರ್ಯದಲ್ಲಿ ಹಿನ್ನಡೆ. ಜಗ್ಮಾತೆಯ ಆರಾಧನೆಯನ್ನು ಮಾಡಿ.
ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಶುಭಾಶುಭ ವಾರವಾಗಿದೆ. ದೃಷ್ಟಿದೋಷವು ಕಾಣಿಸಿಕೊಳ್ಳಬಹುದು. ದೇಹಪೀಡೆಯಿಂದ ಹಿಂಸೆಯಾದೀತು. ಶತ್ರುಗಳ ವಿಚಾರದಲ್ಲಿ ನೀವು ನಿಶ್ಚಿಂತರಾಗುವಿರಿ. ಆದಾಯವನ್ನು ಇಮ್ಮಡಿ ಮಾಡಿಕೊಳ್ಳುವಲ್ಲಿ ಎಡವುವಿರಿ. ದೇವಸೇನಾನಿಯ ಉಪಾಸನೆಯು ಅಧಿಕವಾಗಿ ಆಗಬೇಕು.
ಧನು ರಾಶಿ : ಜೂನ್ ತಿಂಗಳ ಮೂರನೇ ವಾರದಲ್ಲಿ ಈ ರಾಶಿಯವರು ಶುಭವು ಅಧಿಕವಿದೆ. ಆದರೆ ಗುರುವು ಈ ರಾಶಿಯವರಿಗೆ ದುರ್ಬಲನಾದ ಕಾರಣ ಅಲ್ಪ ಹಿನ್ನಡೆಯೂ ಆಗುವುದು. ದೈಹಿಕವಾದ ಬಾಧೆಗಳು ಹೆಚ್ಚು ಕಾಣಿಸುವುದು. ಔಷಧೋಪಚಾರದ ಅಗತ್ಯ ಬರುವುದು. ನಿಮ್ಮ ಪರೀಕ್ಷೆಯೂ ನಡೆಯುವ ಸಂದರ್ಭವು ಬರವುದು. ಗುರುವಿನ ಆಶೀರ್ವಾದ ಅಗತ್ಯ ಬೇಕು.
ಮಕರ ರಾಶಿ : ರಾಶಿಚಕ್ರದ ಹತ್ತನೇ ರಾಶಿಯಾದ ಮಕರ ರಾಶಿಯವರು ಉದ್ಯೋಗದಲ್ಲಿ ಒತ್ತಡವನ್ನು ಕಾಣಬೇಕಾಗುವುದು. ಬರುವ ಸಂಪತ್ತು ವಿಳಂಬವಾಗಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಸಮಯ ಸಿಕ್ಕ ಅವಕಾಶಗಳನ್ನು ಬಿಡುವುದು ಬೇಡ. ಈ ವಾರ ವ್ಯಾಪಾರಸ್ಥರು ನಿಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಬಹುದು. ವಾಹನದಿಂದ ಗಾಯಗಳಾಗುವ ಅವಕಾಶವಿದೆ. ಎಚ್ಚರಿಕೆ ಬಹಳ ಅಗತ್ಯ. ಮೃತ್ಯುಂಜಯನ ಉಪಾಸನೆ ಅಗತ್ಯ.
ಕುಂಭ ರಾಶಿ : ಈ ರಾಶಿಯವರಿಗೆ ಮೂರನೇ ವಾರ ಕುಜನು ತೃತೀಯದಲ್ಲಿ ಇದ್ದು ವೃತ್ತಿ ರಂಗಕ್ಕೆ ಸಂಬಂಧಿಸಿದಂತೆ ತೊಂದರೆಗಳು ಹಂತಹಂತವಾಗಿ ಉಪಶಮನವಾಗಲಿದೆ. ನಿರೀಕ್ಷಿತ ಫಲ ಪಡೆಯಲು ಪರಿಶ್ರಮ ಅನಿವಾರ್ಯವೂ ಆಗಿದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಗುವ ತೊಂದರೆಯನ್ನು ಪರಿಹರಿಸುವುದು ಅಗತ್ಯ. ಸಿಟ್ಟನ್ನು ನಿಯಂತ್ರಿಸಬೇಕಾದ ಸಂದರ್ಭಗಳು ಬರಲಿವೆ. ಆರ್ಥಿಕತೆಯ ಬಗ್ಗೆ ಅನ್ಯ ಯೋಜನೆಯನ್ನು ತರುವಿರಿ. ಹನುಮಾನ್ ಚಾಲೀಸ್ ನ್ನು ಪಠಿಸಿ.
ಮೀನ ರಾಶಿ : ಈ ತಿಂಗಳ ಮೂರನೇ ವಾರ ಶುಭ ವಾರವಾಗಿದೆ. ಈ ವಾರದಲ್ಲಿ ಕೌಟುಂಂಬಿಕವಾಗಿ ಸಾಮರಸ್ಯವಿರುವುದು. ವಾಹನ ಖರೀದಿಗೆ ಬೇಕಾದ ತಯಾರಿಗಳನ್ನು ಆರಂಭಿಸುವಿರಿ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ತುಂಬಾ ಪ್ರಶಸ್ತ ವಾರವೂ ಹೌದು. ವ್ಯಾಪಾರದಲ್ಲಿ ವಿಶೇಷ ಲಾಭವನ್ನು ಪಡೆಯುತ್ತೀರಿ. ಸಂತಾನಕ್ಕೆ ಸಂಬಂಧಿಸಿದಿ ದೋಷಗಳು ಕಾಣಿಸಿಕೊಳ್ಳುವುದು. ನಾಗದೇವರ ಆರಾಧನೆ ಮಾಡಿ ಪರಿಹಾರ ಕಂಡುಕೊಳ್ಳಿ.
-ಲೋಹಿತ ಹೆಬ್ಬಾರ್ – 8762924271 (what’s app only)