Horoscope: ದಿನಭವಿಷ್ಯ: ಇಂದು ಬಂಧುಗಳ ಜೊತೆ ಭಿನ್ನಾಭಿಪ್ರಾಯ ಉದ್ಭವಿಸುವ ಸಾಧ್ಯತೆ ಇದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.16 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ಬಂಧುಗಳ ಜೊತೆ ಭಿನ್ನಾಭಿಪ್ರಾಯ ಉದ್ಭವಿಸುವ ಸಾಧ್ಯತೆ ಇದೆ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 16, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜೂನ್. 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವ್ಯತಿಪಾತ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:25 ರಿಂದ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:48 ರಿಂದ ಸಂಜೆ 05:25ರ ವರೆಗೆ.

ಸಿಂಹ ರಾಶಿ: ಭೂಮಿಯನ್ನು ಮಾರಾಟ ಮಾಡಲು ಕಸರತ್ತು ಮಾಡಬೇಕಾಗುವುದು. ಉತ್ಸಾಹದ ದಿನವನ್ನಾಗಿ ನೀವು ಮಾಡಿಕೊಳ್ಳುವಿರಿ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ನೀವು ಮನೆಯ ಯಜಮಾನನಾಗಿದ್ದು ತಾಳ್ಮೆಯನ್ನು ಇಟ್ಟುಕೊಳ್ಳಿ. ಸುಳ್ಳುಗಳು ನಿಮ್ಮ ಕುತ್ತಿಗೆಗೇ ಉರುಳಾಗಬಹುದು. ನೀವು ಹಣಕಾಸಿನ ವ್ಯವಹಾರಗಳಲ್ಲಿ ಎಷ್ಟೇ ಜಾಗರೂಕರಾಗಿದ್ಸರೂ ಪ್ರಯೋಜನವಾಗದು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಏನೇ ಇರಲಿ, ಅವರ ಪ್ರಭಾವದ ಕ್ಷೇತ್ರವು ಹೆಚ್ಚುತ್ತಿರುವಂತೆ ತೋರುತ್ತಿದೆ ಮತ್ತು ಅವರ ಕಾರ್ಯಗಳನ್ನು ಸಹ ವಿವರಿಸಲಾಗುವುದು. ವಿದೇಶದ ಸಂಸ್ಥೆಗಳಿಂದ ಕರೆ ಬರುವ ಸಾಧ್ಯತೆ ಇದೆ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ: ಇಂದು ನಿಮ್ಮ ಬಂಧುಗಳ ಅನಿರೀಕ್ಷಿತ ಭೇಟಿ ನಿಮ್ಮ ಯೋಜನೆಯನ್ನು ತಲೆಕೆಳಗೆ ಮಾಡಲಿದೆ. ನಿಮ್ಮ ಆಸೆಯನ್ನು ಮಕ್ಕಳು ಪೂರೈಸುವರು. ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನಕ್ಕೆ ಸಿಕ್ಕಿಹಾಕಿಕೊಳ್ಳುವಿರಿ. ಇಂದು ನೀವು ಕಷ್ಟಪಟ್ಟರೂ ಸಿಗದೇ ಇರುವ ಸಂಪತ್ತಿಗೋಸ್ಕರ ವ್ಯಥೆಪಡುವ ಅವಶ್ಯಕತೆಯಿಲ್ಲ. ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರದೇಹೋದರೆ ಕಷ್ಟವಾದೀತು. ದೇವರ ಕಾರ್ಯಗಳು ನಡೆಯಲಿದ್ದು ಉತ್ಸಾಹದಿಂದ ಭಾಗವಹಿಸುವಿರಿ. ನಿಮ್ಮ ಹತ್ತಿರ ಕುಟುಂಬದವರಿಗೆ ಅಥವಾ ನಿಮ್ಮ ಸ್ನೇಹಿತರಿಗೆ ಕೊಡಲು ಸಮಯವಿಲ್ಲ. ಇಂದು ಸಹ ನಿಮ್ಮ ಮನಃಸ್ಥಿತಿಯು ಹಾಗೆಯೇ ಉಳಿದಿರಬಹುದು. ಅದನ್ನು ಬದಲಿಸಿಕೊಂಡು ಮುಂದುವರಿಯಿರಿ. ಹೂಡಿಕೆಯಲ್ಲಿ ಅಜ್ಞಾನದ ಕಾರಣದಿಂದ ನಷ್ಟವಾಗುವುದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು.

ತುಲಾ ರಾಶಿ: ಇಂದು ನಿಮ್ಮ ಬಳಿ ಯಾರದರೂ ವಿವಾಹದ ಬಗ್ಗೆಯೂ ಮಾತನಾಡಬಹುದು. ಸ್ತ್ರೀಯರು ಇಂದು ತಾಳ್ಮೆಯನ್ನು ಕಳೆದುಕೊಂಡು ದುಃಖಿಸಬೇಕಾದ ಸ್ಥಿತಿ ಬಂದೀತು. ಎಲ್ಲದಕ್ಕೂ ಮಿತಿಯಿದೆ ಎಂದು ನಿಮಗೆ ನೀವೇ ಅಂದುಕೊಂಡು ಸಮಾಧಾನವನ್ನು ಪಡೆಯುವಿರಿ. ಇಂದು ನೀವು ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಅವಕಾಶವಿದೆ. ಪ್ರತಿಯೊಂದು ಕೆಲಸವೂ ನಿಧಾನವಾಗುವುದಿದ್ದರೂ ಪರಿಶ್ರಮದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತದೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ನಿಮ್ಮ ಟೀಕೆಗಳಿಗೆ ನೀವು ತೀವ್ರವಾಗಿ ಎದುರುತ್ತರ ಕೊಡುವಿರಿ. ಎಲ್ಲ ಸಂದರ್ಭವೂ ಒಂದೇ ರೀತಿಯಲ್ಲಿ ಇರದು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ಪಡೆಯುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಸಂತೋಷಕೂಟದಲ್ಲಿ ಭಾಗಿಯಾಗುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು.

ವೃಶ್ಚಿಕ ರಾಶಿ: ನೀವು ಇಂದು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕಾಗುವುದು. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ನಿಮ್ಮ ಪ್ರಭಾವವು ಅಷ್ಟಾಗಿ‌ ನಡೆಯದು. ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬೇಡಿ. ಇಂದು ಅಸಾಧ್ಯವಾಗಬಹುದು. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಎಲ್ಲಿಗಾದರೂ ಅಪರಿಚಿತ ಸ್ಥಳಗಳಿಗೆ ಹೋಗುವಿರಿ. ಬಂಧುಗಳ ಜೊತೆ ಭಿನ್ನಾಭಿಪ್ರಾಯಗಳು ಉದ್ಭವಿಸುವ ಸಾಧ್ಯತೆ ಇದೆ. ಇಂದು ಸಹ ನಿಮ್ಮ ಮನಃಸ್ಥಿತಿ ಹಾಗೆಯೇ ಉಳಿದಿರಬಹುದು. ನಿಮ್ಮ ಸುತ್ತಲಿರುವ ಜನರು ಏನಾದರೂ ಮಾಡಿ ನಿಮ್ಮ ಜೀವನವು ಸಂಗಾತಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು. ಇಂದು ನಿಮ್ಮ ಬಾಳಸಂಗಾತಿಯಾಗುವವನು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಉಳ್ಳವನು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು‌. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.